Link copied!
Sign in / Sign up
2
Shares

ಹಲ್ಲು ನೋವೇ? ಮನೆಯಲ್ಲೇ ಸಿಗುವ ವಸ್ತುಗಳ ಅಗ್ಗದ ಮನೆಮದ್ದುಗಳು ಇಲ್ಲಿವೆ ನೋಡಿ !

ದೇಹದ ಯಾವುದೇ ಭಾಗದಲ್ಲಿ ನೋವು ಉಂಟಾದರೂ,ಅದು ದೇಹದ ಮೇಲೆ ಪರಿಣಾಮ ಬೀರುವುದು. ಆ ನೋವು ಅನುಭವಿಸಿದವರಿಗೆ ಮಾತ್ರ ಅದರ ತೀವ್ರತೆ ಗೊತ್ತಾಗುವುದು. ಅದೇ ಹಲ್ಲು ನೋವು ಬಂದರೆ ಅದನ್ನು ತಡೆದುಕೊಳ್ಳುವುದು ಅಸಾಧ್ಯವಾಗುವುದು.


ಹಲ್ಲು ನೋವಿನಿಂದ ವಸಡು ಮತ್ತು ತಲೆ ನೋವು ಕೂಡ ಆರಂಭವಾಗುವುದು. ಹಲ್ಲಿನ ಸ್ವಚ್ಛತೆಯನ್ನು ಕಾಪಡಿಕೊಳ್ಳದೆ ಇರುವುದೇ ನೋವಿಗೆ ಪ್ರಮುಖ ಕಾರಣ. ಇತರ ಕೆಲವು ಕಾರಣಗಳೆಂದರೆ ಪಲ್ಬಿಟಿಸ್ ಮತ್ತು ಅವಧಿರೋಗ, ಹಲ್ಲಿನ ಹುಳುಕು ಇತ್ಯಾದಿ. ಹೆಚ್ಚಿನವರು ಹಲ್ಲು ನೋವು ಶುರುವಾದ ಕೂಡಲೇ ಹಲ್ಲಿನ ವೈದ್ಯರಲ್ಲಿಗೆ ಹೋಗುತ್ತಾರೆ. ಹಲ್ಲು ನೋವು ಬರುವುದಕ್ಕೆ ಮುನ್ನ ಅದನ್ನು ಬರದಂತೆ ತಡೆಯುವುದು ಒಳ್ಳೆಯದು, ಒಂದು ವೇಳೆ ನಿಮಗೆ ಅಥವಾ ನಿಮ್ಮ ಮಗುವಿಗೆ ಹಲ್ಲು ನೋವು ಇದ್ದರೆ ಈ ಸರಳ ಮನೆ ಮದ್ದುಗಳನ್ನು ಬಳಸಿ ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮ ಜೀವಿಗಳನ್ನು ತೊಲಗಿಸಿ ಮತ್ತು ನೋವಿನಿಂದ ಮುಕ್ತಿ ಪಡೆಯಿರಿ.


೧.ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎನ್ನುವ ಅಂಶವಿದ್ದು, ಇದು ತುಂಬಾ ಪ್ರಬಲ ನಂಜುನಿರೋಧಕ. ಬ್ಯಾಕ್ಟೀರಿಯಾದಿಂದ ಉಂಟಾಗುವ ಸಮಸ್ಯೆ ನಿವಾರಣೆ ಮಾಡಿ ಉರಿಯೂತ ತಗ್ಗಿಸುವುದು ಮತ್ತು ನೋವಿನಿಂದ ತಕ್ಷಣ ಪರಿಹಾರ ನೀಡುವುದು. ದಿನನಿತ್ಯ ಸೇವಿಸಿದರೆ ಇದು ಬಾಯಿಯ ಸ್ವಚ್ಛತೆಯನ್ನು ಸುಧಾರಿಸುವುದು. ಒಂದು ಬೆಳ್ಳುಳ್ಳಿ ಎಸಳನ್ನು ಜಜ್ಜಿಕೊಂಡು ಅದಕ್ಕೆ ಸ್ವಲ್ಪ ಕಲ್ಲುಪ್ಪು ಬೆರೆಸಿ ನೋವಿರುವ ಜಾಗಕ್ಕೆ ಇಟ್ಟುಬಿಡಿ. ಪ್ರತಿನಿತ್ಯ ಹೀಗೆ ಮಾಡಿದರೆ ನೋವು ಕಡಿಮೆಯಾಗುವುದು.


೨.ನಿಂಬೆಹಣ್ಣು

ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ಹಲ್ಲು ಮತ್ತು ಒಸಡನ್ನು ತುಂಬಾ ಬಲಗೊಳಿಸಿ ಪದರಗಳು ನಿರ್ಮಾಣವಾಗದಂತೆ ತಡೆಯುವುದು. ನಿಂಬೆಯನ್ನು ಬಳಸಿದರೆ ಉಸಿರಿನ ದುರ್ವಾಸನೆ ತಡೆಯಬಹುದು. ಸ್ವಲ್ಪ ನಿಂಬೆರಸ ತೆಗೆದುಕೊಂಡು ಅದನ್ನು ನೋವಿರುವ ಹಲ್ಲಿನ ಮೇಲೆ ಮಸಾಜ್ ಮಾಡಿ. ದಿನದಲ್ಲಿ ಎರಡು ಸಲ ಹೀಗೆ ಮಾಡಿ.


೩.ಸೀಬೆ ಎಲೆಗಳು

ಸೀಬೆ ಹಣ್ಣಿನ ಎಲೆಗಳಲ್ಲಿ ನೋವು ನಿವಾರಕ ಗುಣಗಳು ಇದ್ದು, ಇದು ನೋವು ನಿವಾರಿಸಲು ನೆರವಾಗುವುದು. ಇದರಲ್ಲಿ ಇರುವಂತಹ ಫ್ಲಾವನಾಯ್ಡ್ ಬ್ಯಾಕ್ಟೀರಿಯಾ ಚಟುವಟಿಕೆ ಮತ್ತು ಉರಿಯೂತ ಹಾಗು ನೋವನ್ನು ತಗ್ಗಿಸುವುದು. ಸೀಬೆ ಹಣ್ಣಿನ ಎಲೆಗಳನ್ನು ನೀರಿಗೆ ಹಾಕಿ ಕುದಿಸಿ, ಈ ನೀರನ್ನು ಸೋಸಿಕೊಂಡು ಅದರಿಂದ ಬಾಯಿ ಮುಕ್ಕಳಿಸಿಕೊಳ್ಳಿ. ನೋವು ಕಡಿಮೆಯಾಗುವ ತನಕ ಹೀಗೆ ಪ್ರತಿನಿತ್ಯ ಮಾಡಿ.


೪.ಉಪ್ಪು ನೀರು

ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿಕೊಂಡರೆ ಹಲ್ಲಿನ ಮಧ್ಯದಲ್ಲಿ ಇರುವಂತಹ ಕಲ್ಮಷವನ್ನು ನಿವಾರಣೆ ಮಾಡುವುದು. ಇದು ಊತ ಕಡಿಮೆ ಮಾಡಿ ಕುಳಿಗಳ ಅಪಾಯ ತಪ್ಪಿಸುವುದು. ಒಂದು ಲೋಟ ಬಿಸಿ ನೀರಿನಲ್ಲಿ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಕಲಸಿಕೊಳ್ಳಿ. ಇದರಿಂದ ಬಾಯಿ ಮುಕ್ಕಳಿಸಿಕೊಳ್ಳಿ. ದಿನದಲ್ಲಿ ಮೂರು ಸಲ ಹೀಗೆ ಮಾಡಿದರೆ ನೋವು ನಿವಾರಣೆಯಾಗುವುದು. ಹಲ್ಲಿನ ಯಾವುದೇ ಸಮಸ್ಯೆ ಇಲ್ಲದಿದ್ದರೂ, ಇದನ್ನು ದಿನ ಒಂದು ಬಾರಿ ಮಾಡುವುದರಿಂದ ಹಲ್ಲು ಹುಳುಕಾಗುವುದನ್ನು ತಪ್ಪಿಸಬಹುದು, ಮತ್ತು ಹಲ್ಲಿನ ಶುಚಿತ್ವ ಕಾಪಾಡುವುದರ ಜೊತೆಗೆ ಹಲ್ಲನ್ನು ಬೆಳ್ಳಗೆ ಕಾಣುವಂತೆ ಮಾಡಬಹುದು.


೫.ಹಿಂಗು

ಹಿಂಗಿನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ವಿರೋಧಿ ಗುಣಗಳು ಇವೆ. ಹಲ್ಲು ಹಾಗೂ ಒಸಡಿನಲ್ಲಿರುವ ಉರಿಯೂತವನ್ನು ಇದು ತಗ್ಗಿಸುವುದು ಮತ್ತು ಊತ ಕಡಿಮೆ ಮಾಡುವುದು. ಒಂದು ತುಂಡು ಹಿಂಗನ್ನು ಅಥವಾ ಹಿಂಗಿನ ಪುಡಿಯನ್ನು ನೇರವಾಗಿ ನೋವಿರುವ ಹಲ್ಲಿನ ಮೇಲಿಡಿ. ನೋವು ಕಡಿಮೆಯಾಗುವ ತನಕ ಹೀಗೆ ಮಾಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon