Link copied!
Sign in / Sign up
3
Shares

ಹಲ್ಲು ಬೆಳೆದಿರುವ, ಕಚ್ಚುತ್ತಿರುವ ಮಗುವಿಗೆ ಎದೆಹಾಲು ಕುಡಿಸುವುದು ಹೇಗೆ? ಏನು ಮಾಡಬೇಕು?

ನಿಮ್ಮ ಮಗುವಿನ ಮೊದಲ ಹಲ್ಲನ್ನು ಮಗುವಿಗೆ ಆರು ತಿಂಗಳು ತುಂಬಿದ ನಂತರ ಮೊದಲ ಬಾರಿಗೆ ನೋಡಬಹುದು. ಕೆಲವೊಂದು ಪ್ರಕರಣಗಳಲ್ಲಿ ಮಗುವಿಗೆ ಹುಟ್ಟುತ್ತಲೇ ಒಂದು ಅಥವಾ ಹಲವು ಹಲ್ಲುಗಳನ್ನ ಹೊಂದಿದ್ದರೆ, ಇನ್ನೂ ಕೆಲವು ಮಕ್ಕಳಿಗೆ ಒಂದು ವರ್ಷದವರೆಗೆ ಹಲ್ಲುಗಳು ಕಾಣಿಸಿಕೊಳ್ಳದೆ ಇರಬಹುದು. ಬಹಳಷ್ಟು ಅಮ್ಮಂದಿರು ಮಗುವಿನಲ್ಲಿ ಹಲ್ಲು ಕಾಣಿಸಿಕೊಂಡೊಡನೆ ಎದೆಹಾಲು ನೀಡುವುದನ್ನು ನಿಲ್ಲಿಸುತ್ತಾರೆ. ಇದಕ್ಕೆ ಕಾರಣ ಮಗುವು ಹಾಲು ಕುಡಿದು ಮುಗಿದ ಮೇಲೆ ಮೊಲೆತೊಟ್ಟನ್ನು ಕಚ್ಚಿರುವುದಕ್ಕೆ ಇರಬಹುದು ಅಥವಾ ಎಲ್ಲಿ ಮಗು ಕಚ್ಚುತ್ತದೋ ಎಂಬ ಭಯದಿಂದ ಇರಬಹುದು. ಆದರೆ ಬಹುತೇಕ ಮಕ್ಕಳು ಹಲ್ಲುಗಳನ್ನ ಬೆಳೆಸಿಕೊಂಡಿದ್ದರೂ, ಎದೆಹಾಲು ನೀಡುವಾಗ ಕಚ್ಚುವುದಿಲ್ಲ.

 

ಎದೆಹಾಲು ಕುದಿಸುವಾಗ ಮಗು ಕಡಿತವನ್ನ ನಿವಾರಿಸುವುದು ಹೇಗೆ?

ನಿಮ್ಮ ಮಗುವಿಗೆ ಈಗ ಹಲ್ಲು ಚಿಗುರುತ್ತಿದ್ದು, ಮಗು ಹಾಲು ಕುಡಿದೊಡನೆ ನಿಮಗೆ ಕಚ್ಚುತ್ತದೆ ಎಂಬ ಭಯ ನಿಮಗಿದ್ದರೆ :

ನಿಮ್ಮ ಒಂದು ಬೆರಳನ್ನು ಮಗುವು ಹೀರುವುತ್ತಿರುವುದರಿಂದ ಬಿಡಿಸಿಕೊಳ್ಳುವುದಕ್ಕೆ ಸಿದ್ದವಾಗಿ ಇಟ್ಟುಕೊಳ್ಳಿ. ನಿಮ್ಮ ಮಗುವು ಹೀರುತ್ತಿರುವ ತಾಳ ತಪ್ಪುತ್ತಿದ್ದಂತೆ, ನಿಮ್ಮ ಸ್ತನವನ್ನ ಬಿಡಿಸಿಕೊಳ್ಳಿ.


ಒಂದು ವೇಳೆ ಮಗು ಈಗಾಗಲೇ ಕಚ್ಚಿದ್ದರೆ :

ಧೃಡವಾಗಿ ಇಲ್ಲ ಎಂದು ಹೇಳಿ ನಿಮ್ಮ ಮಗುವನ್ನು ನಿಮ್ಮ ಸ್ತನದಿಂದ ದೂರ ತನ್ನಿ. ಇದನ್ನು ನೀವು ಎಷ್ಟು ಸಪ್ಪೆ ಮುಖದಿಂದ, ಮುಖದ ಮೇಲೆ ಯಾವುದೇ ಭಾವನೆಯಿಲ್ಲದೆ ಮಾಡುತ್ತಿರೋ, ಅಷ್ಟು ಒಳ್ಳೆಯದು. ಏಕೆಂದರೆ, ಒಂದು ವೇಳೆ ನೀವು ಸಿಟ್ಟಾಗಿರುವುದು ಅಥವಾ ಆಶ್ಚರ್ಯಪಡುವುದನ್ನು ನೋಡಿದರೆ, ಆ ಮಗುವಿಗೆ ಇದನ್ನು ಇನ್ನೊಮ್ಮೆ ಮಾಡುವಂತೆ ಅನಿಸಬಹುದು. ಕಡಿದರೆ, ಹಾಲು ಕೊಡುವುದಿಲ್ಲ ಎಂಬುದು ಒಮ್ಮೆ ಆ ಮಗುವಿಗೆ ಅರ್ಥವಾದರೆ, ಆ ಚಟವನ್ನ ತಾನಾಗಿಯೇ ಬಿಡುತ್ತದೆ.


ಮಗುವಿನ ಹಲ್ಲುಗಳ ಅರೋಗ್ಯ ಮೊದಲಿನಿಂದಲೇ ಕಾಪಾಡಲು ಸಲಹೆಗಳು

೧. ಉತ್ತಮ ವಸಡು ಮತ್ತು ಉತ್ತಮ ಮೌಖಿಕ ನೈರ್ಮಲ್ಯತೆ ಕಾಪಾಡಿಕೊಳ್ಳಲು : ಮಗುವಿನ ಒಸಡನ್ನು ದಿನಕ್ಕೆ ಒಮ್ಮೆ ಆದರೂ ಚೆನ್ನಾಗಿ ಒರೆಸಿ. ಇದನ್ನು ಮಗುವಿಗೆ ಹಲ್ಲು ಬರುವ ಮುಂಚಿನಿಂದಲೂ, ಅಂದರೆ ಮಗು ಹುಟ್ಟಿದಾಗಿನಿಂದಲೇ ಶುರು ಮಾಡಿ.

೨. ಹಲ್ಲು ಬೆಳೆದ ಮೇಲೆ : ಒಂದು ಹಸಿ ಬಟ್ಟೆಯಿಂದ ಮಗುವಿನ ವಸಡು ಮಾತು ಹಲ್ಲುಗಳನ್ನ ಉಣಿಸಿದ ನಂತರ ಅಥವಾ ಮಲಗುವ ಮುನ್ನ ಒರೆಸಿದರೆ, ಉತ್ತಮ ಮೌಖಿಕ ನೈರ್ಮಲ್ಯತೆ ನಿಮ್ಮದಾಗುತ್ತದೆ.

೩. ಬ್ರಷ್ ಮಾಡಬಹುದು ಎಂದಾದಾಗ : ನಿಮ್ಮ ಮಗುವಿನ ಹಲ್ಲನ್ನು ಈಗ ನೀವು ಬ್ರಷ್ ಮಾಡಬಹುದು ಎಂದಾದಲ್ಲಿ, ಒಂದು ಅಕ್ಕಿ ಕಾಳಷ್ಟು ಟೂತ್ಪೇಸ್ಟ್ , ಮಕ್ಕಳ ಟೂತ್ ಬ್ರಷ್ ಅನ್ನು ಬಳಸಿ ದಿನಕ್ಕೆ ಎರಡು ಬಾರಿ ಮಗುವಿನ ಹಲ್ಲುಗಳನ್ನ ಬ್ರಷ್ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon