Link copied!
Sign in / Sign up
5
Shares

ರಕ್ತದಲ್ಲಿ ಹೀಮೋಗ್ಲೋಬಿನ್ನನ್ನು ಹೆಚ್ಚಿಸುವುದು ಹೇಗೆ? ಇಲ್ಲಿವೆ 5 ದಾರಿಗಳು

ನಮ್ಮ ನಿಮ್ಮೆಲರ ದೇಹದಲ್ಲಿ ಹರಿದಾಡುವ ರಕ್ತ ಕಣವು ಹಿಮೋಗ್ಲೋಬಿನ್ ಎಂಬ ಒಂದು ರೀತಿಯ ಪ್ರೋಟೀನ್ ಆಗಿದ್ದು, ಕಬ್ಬಿಣಾ೦ಶದಿಂದ ಹೇರಳವಾಗಿದೆ. ಇದೇ ಹೀಮೋಗ್ಲೋಬಿನ್,  ನಮ್ಮ ಶರೀರದ ಸರ್ವಾಂಗಗಳಿಗೂ ಆಮ್ಲಜನಕವನ್ನು ಪೂರೈಸಿ ಜೀವಕೋಶಗಳನ್ನು ಕ್ರಿಯಾತ್ಮಕವಾಗಿಡುತ್ತದೆ. ನಮ್ಮ ದೇಹದ  ಶ್ವಾಸಕೋಶದಿಂದ ಹೊರಬರುವ ಪರಿಶುಧ್ಧವಾದ ಆಮ್ಲಜನಕವನ್ನು ,ದೇಹದ ಬೇರೆ ಬೇರೆ ಅಂಗಗಳಿಗೆ ರವಾನೆ ಮಾಡುವಲ್ಲಿ ಹಿಮೋಗ್ಲೋಬಿನ್ನ ಪಾತ್ರ ಪ್ರಧಾನವಾಗಿದೆ ಹಾಗೂ  ಜೀವಕೋಶಗಳಿಂದ ಹೊರಬರುವ ಅಶುದ್ಧಇಂಗಾಲದ ಡೈಆಕ್ಸೈಡ್'ಅನ್ನು ಶುದ್ಧಿಗೊಳಿಸಲು ಶಾಸಕೋಶಕ್ಕೆ ಕರೆದೊಯ್ಯುವ,ಕೆಲಸವನ್ನು ಹಿಮೋಗ್ಲೋಬಿನ್ ಮಾಡುತ್ತದೆ. ಹೀಗಾಗಿ ಆರೋಗ್ಯಕರ ಜೀವನ ನಡೆಸಲು ನಮ್ಮ ರಕ್ತ ಕಣಗಳಲ್ಲಿ ಸರಿಯಾದ ಪ್ರಮಾಣದ ಹೆಮೊಗ್ಲೋಬಿನ್ನ್ ಅಗತ್ಯವಿರುತ್ತದೆ. 

ನೀವು  ರಕ್ತಹೀನರಾಗಿದ್ದಲ್ಲಿ, ಹೀಮೊಗ್ಲೋಬಿನ್ನನ್ನು ಹೆಚ್ಚಿಸಲು ಕೆಳಗಿರುವ ವಿಧಾನಗಳನ್ನು ಅನುಸರಿಸಿ.


೧.ಕಬ್ಬಿಣಾಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದು:

ಕಬ್ಬಿಣಾಂಶವು ರಕ್ತ ಕಣಗಳ ಪ್ರಮುಖ ಭಾಗವಾಗಿರುವುದರಿಂದ, ಹಸಿರು ತರಕಾರಿ, ಸೋಪ್ಪುಗಳಾದ ಬಸಳೆ, ಮೆಂತ್ಯ ಸೊಪ್ಪು, ಸಬ್ಬಸಿಗೆ ಹಾಗೂ ಕೊತ್ತಂಬರಿ ಸೊಪ್ಪನ್ನು  ದಿನ ನಿತ್ಯದ ಆಹಾರದಲ್ಲಿ ಬಳಕೆ ಮಾಡಬೇಕು. ಹೀಗೆ ಬಳಸಿದ್ದಲ್ಲಿ ಕ್ರಮೇಣ ರಕ್ತಹೀನತೆಯನ್ನು ಹತೋಟಿಗೆ ತರಬಹುದು. ಬೀಟ್ರೂಟ್, ಮೊಟ್ಟೆ, ಕೋಳಿಯ ಮಾಂಸ, ದಾಳಿಂಬೆ ಹಣ್ಣು, ಸೇಬಿನ ಹಣ್ಣು ಹಾಗೂ ಶತವರಿಯನ್ನು ಸಹ ಉಪಯೋಗಿಸಬಹುದು.  ನೆಲ್ಲಿಕಾಯಿ, ಬೆಲ್ಲ, ಬಾದಾಮಿ ಹಾಗೂ ಒಣ ದ್ರಾಕ್ಷಿಯನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಕಬ್ಬಿಣಾ೦ಶದ ಕೊರತೆಯಿಂದ ದೂರಾಗಬಹುದು.

 

೨.ವಿಟಮಿನ್ ಸಿ:

ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳನ್ನು ಪ್ರತಿನಿತ್ಯ ಸೀವೆಸುವುದರಿಂದ , ದೇಹದಲ್ಲಿರುವ ರಕ್ತ ಕಣಗಳು ಕಬ್ಬಿಣಾಂಶವನ್ನು ಸುಲಭ ರೀತಿಯಲ್ಲಿ ಹೀರೆಕೊಳ್ಳತ್ತದೆ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಹಣ್ಣು, ಪಪಾಯ,  ಟೊಮೇಟೊ,ಕೋಸುಗಡ್ಡೆ ಮುಂತಾದ ತರಕಾರಿ, ಹಣ್ಣುಗಳನ್ನು ತಿನ್ನುವದರಿಂದ ರಕ್ತಹೀನತೆಯನ್ನು ತಡೆಯಬಹುದು.


೩.ಫೋಲಿಕ್ ಆಮ್ಲ:

ಫೋಲಿಕ್ ಆಮ್ಲವು  ಕೆಂಪು ರಕ್ತ ಕಣಗಳಿಂದ ಮಾಡಲ್ಪಟ್ಟ , ಬಿ ಸಂಕೀರ್ಣ ವಿಟಮಿನ್. ನಮ್ಮ ದೇಹದಲ್ಲಿ ಫೋಲಿಕ್ ಆಮ್ಲದ ಕೊರತೆಯಾದರೆ, ಅದು ಕ್ರಮೇಣ ಹೀಮೋಗ್ಲೋಬಿನ್ ಪ್ರಮಾಣವನ್ನು ಕುಂದಿಸುತ್ತದೆ. ಇದನ್ನು ತಡೆಯಬೇಕಾದಲ್ಲಿ  ನಾವು ಮೊಳಕೆ ಕಟ್ಟಿದ ಧಾನ್ಯಗಳು, ಬಟಾಣಿ, ಬಾಳೆಹಣ್ಣು, ಹಸಿರು ಸೊಪ್ಪಿನ ತರಕಾರಿ ಹಾಗೂ ಕೋಳಿಯ ಯಕೃತ್ತಿನ ಮಾಂಸವನ್ನು ಆಹಾರದಲ್ಲಿ ಬಳಸಬೇಕು.


೪.ಕಾಕಂಬಿ/ನೀರುಬೆಲ್ಲ:

ಪುರಾತನ ಕಾಲದಿಂದ ಔಷಧಿಯ ಗುಣವಿರುವ ಈ ನೀರುಬೇಲ್ಲವನ್ನು ಪ್ರತಿ ನಿತ್ಯ ಬಳಸಿದಲ್ಲಿ ರಕ್ತಹೀನತೆಯನ್ನು ಹೋಗಲಾಡಿಸಬಹುದು ಹಾಗೂ ಹಿಮೋಗ್ಲೋಬಿನ್ನ ಪ್ರಮಾಣವನ್ನು ಸರಿದೂಗಿಸಬಹುದು. ಕಾಕಂಬಿಯಲ್ಲಿರುವ  ಕಬ್ಬಿಣಾಂಶ ಹಾಗೂ ಫೋಲಿಕ್ ಆಮ್ಲವು, ನಮ್ಮ ದೇಹದೊಳಗೆ ಸೃಷ್ಟಿಯಾಗುವ  ಕೆಂಪು ರಕ್ತ ಕಣಗಳನ್ನು ವೃದ್ಧಿಸುತ್ತದೆ.

ಕಾಕಂಬಿಯ ಪಾನಕವನ್ನು ತಯಾರು ಮಾಡುವ ವಿಧಾನ:

೨ ಚಮಚ ಕಾಕಂಬಿ ಹಾಗೂ ೨ ಚಮಚ ಆಪಲ್ ಸೈಡರ್ ವಿನೆಗರ್ ರನ್ನು ೧ ಲೋಟ ನೀರಿಗೆ ಬೆರೆಸಿ ಪ್ರತಿನಿತ್ಯ ಬೆಳೆಗ್ಗೆ ಸೇವಿಸಬೇಕು.

 

೫. ರಕ್ತ ಕಣಗಳಿಗೆ, ಕಬ್ಬಿಣಾ೦ಶದ  ಪೂರೈಕೆಯನ್ನು ತಡೆಹಿಡಿಯುವ ಆಹಾರವನ್ನು ಬಳಸದಿರಿ:

ಕೃತಕ ಸಕ್ಕರೆಯ ಪೇಯಗಳಾದ ಕಾಫಿ , ಟೀ, ಸೋಡಾ, ಬಿಯರ್ ಮುಂತಾದ ಆಹಾರಗಳನ್ನು ಸೇವಿಸಿದ್ದಲ್ಲಿ ರಕ್ತದ ಕಣಗಳು ಕಬ್ಬಿಣಾ೦ಶವನ್ನು ಹೀರೆಕೊಳ್ಳುವಲ್ಲಿ ವಿಫಲವಾಗಿ, ರಕ್ತಹೀನತೆಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon