Link copied!
Sign in / Sign up
17
Shares

ಶಕ್ತಿ ಕೊಟ್ಟರೆ,ಜನರು ನಿಮ್ಮ ಯಾವ ಗುಣವನ್ನು ಬದಲಿಸಲು ಇಷ್ಟಪಡುವರು ಎಂದು ನಿಮ್ಮ ರಾಶಿ ಹೇಳುತ್ತದೆ!

ಪ್ರತಿಯೊಂದು ವ್ಯಕ್ತಿಯ ಸ್ವಭಾವ, ನಡವಳಿಕೆ ಎಲ್ಲವೂ ವಿಭಿನ್ನ. ಒಂದೇ ರೀತಿ ಯೋಚಿಸುವ, ಒಂದೇ ರೀತಿ ನಡೆದುಕೊಳ್ಳುವ ಎರಡು ವ್ಯಕ್ತಿಗಳನ್ನು ನೋಡಲು ಎಲ್ಲಿಯೂ ಸಾಧ್ಯವಿಲ್ಲ. ಹೀಗೆ ಪ್ರತಿಯೊಬ್ಬರ ಆದ್ಯತೆಗಳು ಕೂಡ ಬೇರೆ ಆಗಿರುತ್ತವೆ. ಒಬ್ಬರಿಗೆ ಒಂದು ಸರಿ ಅನಿಸಿದರೆ, ಎಲ್ಲರಿಗೂ ಅದು ಸರಿ ಅನಿಸಬೇಕು ಎಂದೇನಿಲ್ಲ. ನೀವು ಮಾಡುವ ಕೆಲವೊಂದು ವಿಷಯಗಳು ನಿಮಗೆ ಸರಿ ಅನಿಸಬಹುದು ಅಥವಾ ನಿಮಗೆ ಗೊತ್ತಿರದೆ ನೀವು ಅವುಗಳನ್ನು ಮಾಡುತ್ತಿರಬಹುದು. ಆದರೆ ಅವುಗಳು ಬೇರೆಯವರಿಗೂ ಸರಿ ಅನಿಸಬೇಕೆಂದಿಲ್ಲ. ಕೆಲವು ತಪ್ಪುಗಳು ನಿಮ್ಮಲ್ಲಿಯೂ ಇರಬಹುದು ಅಲ್ಲವಾ? ಜನರು ನಿಮ್ಮ ಯಾವ ಸ್ವಭಾವವನ್ನು ಬದಲಿಸಬೇಕು ಎಂದುಕೊಳ್ಳುವರು ಎಂಬುದನ್ನು ನಿಮ್ಮ ರಾಶಿ ತಿಳಿಸುತ್ತದೆ ನೋಡಿ.

ಮೇಷ

ನಿಮ್ಮ ನಿರೀಕ್ಷೆಗಳು : ನೀವು ಬಹಳ ಗಟ್ಟಿಯಾಗಿದ್ದು, ಮಹತ್ವಾಕಾಂಕ್ಷಿ ಮತ್ತು ದೃಢಸಂಕಲ್ಪ ಹೊಂದಿರುವವರು ಆಗಿದ್ದೀರಿ. ಈ ಕಾರಣಕ್ಕೆ ನೀವು ಬೇರೆಯವರಿಗೂ ದೊಡ್ಡ ಮಟ್ಟವನ್ನು ಸೆಟ್ ಮಾಡುತ್ತೀರಿ, ಆದರೆ ಅದನ್ನು ಬಹುತೇಕ ಜನರು ತಲುಪಲು ಆಗುವುದಿಲ್ಲ. ಎಲ್ಲರು ನಿಮ್ಮ ರೀತಿ ಪ್ರತಿಯೊಂದರಲ್ಲೂ ಪರಿಪೂರ್ಣತೆ ಹೊಂದಿರಲು ಸಾಧ್ಯವಿಲ್ಲ. ಹೀಗಾಗಿ ಕೆಲವೊಮ್ಮೆ ಅವರಿಗೆ ನಿಮ್ಮ ನಡವಳಿಕೆ ತರವಲ್ಲ ಅನಿಸುತ್ತದೆ.

ವೃಷಭ

ನಿಮಮ್ ಭಂಡತನ : ನೀವು ಒಮ್ಮೆ ಯಾವುದರ ಬಗ್ಗೆ ನಿರ್ಧಾರ ತೆಗೆದುಕೊಂಡರೆ, ನೀವು ಯಾರ ಮಾತನ್ನೂ ಕೇಳುವುದಿಲ್ಲ. ನಿಮ್ಮ ಸ್ನೇಹಿತರು ಮತ್ತು ಮನೆಯವರು ನೀವು ಕೆಲವೊಮ್ಮೆ ಸ್ವಲ್ಪ ಬೇರೆಯವರ ಮಾತನ್ನೂ ಒಮ್ಮೆ ಕೇಳಬೇಕು ಮತ್ತು ಅವರ ಮಾತಿಗೂ ನಿಮ್ಮ ಬದುಕಲ್ಲಿ ಬೆಲೆಯಿದೆ ಅಂತ ತೋರಿಸಬೇಕು ಎಂದುಕೊಳ್ಳುವರು.

ಮಿಥುನ

ನಿಮ್ಮ ಅತಿಯಾದ ಆತ್ಮೀಯತೆ : ನೀವು ಯಾರನ್ನಾದರೂ ಆಗಲಿ ಅಥವಾ ಎಲ್ಲರನ್ನೂ ಗೆಳೆಯರನ್ನಾಗಿ ಮಾಡಿಕೊಂಡು ಬಿಡುತ್ತೀರಾ. ಹೀಗೆ ಮಾಡಿದಾಗ ನೀವು ಅವರಿಗೆ ಸಮಯ ಕೊಟ್ಟು, ನಿಮ್ಮ ಜೊತೆ ಮುಂಚೆ ಇಂದಲೂ ಇರುವ ನಿಮ್ಮ ಹಳೆಯ ಸ್ನೇಹಿತರ ಕಡೆ ಹೆಚ್ಚು ಗಮನ ಕೊಡುವುದಿಲ್ಲ. ಇದು ನಿಮ್ಮ ಸ್ನೇಹಿತರ ಮನಸ್ಸಿಗೆ ನೋವು ಉಂಟು ಮಾಡುತ್ತದೆ.

ಕಟಕ

ನಿಮ್ಮ ಮೌನ : ಎಲ್ಲರಿಗು ನೀವು ಎಂತಹ ಭಾವನಾತ್ಮಕ ಮತ್ತು ಸೂಕ್ಷ್ಮ ಜೀವಿ ಆಗಿದ್ದರೂ, ಒಂದು ದಿನವೂ ನೀವು ಬಾಯಿ ಬಿಟ್ಟು ಏನು ಹಂಚಿಕೊಳ್ಳುವುದಿಲ್ಲ ಎಂಬುದು ಗೊತ್ತು. ನೀವು ನಿಮ್ಮ ಭಾವನೆಗಳನ್ನು ಎಷ್ಟೊಂದು ಮುಚ್ಚಿಡುತ್ತೀರಾ ಎಂದರೆ, ನಿಮ್ಮೊಂದಿಗೆ ಪ್ರತಿದಿನ ಇರುವವರಿಗೂ ನಿಮ್ಮ ಆಲೋಚನೆಗಳು ಏನು ಎಂದು ತಿಳಿಯುವುದಿಲ್ಲ.

ಸಿಂಹ

ನಿಮ್ಮ ಅಧಿಕಾರಶಾಹಿ ಮನೋಭಾವ : ನಿಮಗೆ ನಾಯಕತ್ವದ ಗುಣಗಳು ಇದ್ದು, ನೀವು ಇತರರಿಗಿಂತ ಚೆನ್ನಾಗಿ ಎಲ್ಲರನ್ನು ಮುನ್ನಡೆಸಬಹುದು. ಆದರೆ, ಕೆಲವೊಮ್ಮೆ ನಿಮ್ಮ ಈ ಗುಣವೇ ಬೇರೆಯವರು ಅಸಮರ್ಪಕರು ಅನ್ನುವಂತೆ ಬಿಂಬಿಸುತ್ತದೆ. ಆದರೆ ಎಲ್ಲರಿಗು ನಿಮ್ಮಷ್ಟೇ ಆತ್ಮವಿಶ್ವಾಸ ಮತ್ತು ಖಚಿತತೆ ಇರುವುದಿಲ್ಲ, ಹೀಗಾಗಿ ನಿಮ್ಮ ಸ್ನೇಹಿತರು ನೀವು ಅವರೊಂದಿಗೆ ಅವರ ವೇಗದಲ್ಲೇ ಹೆಜ್ಜೆ ಇಡುತ್ತಾ ಹೋಗಬೇಕು ಎಂದುಕೊಳ್ಳುವರು.

ಕನ್ಯಾ

ನಿಮ್ಮ ಉದಾಸೀನತೆ : ನೀವು ಕೆಲವೊಮ್ಮೆ ತೋರುವ ಉದಾಸೀನತೆಯು, ನಿಮ್ಮ ಮನಸ್ಸು ಕಲ್ಲಿನಿಂದ ಮಾಡಿರಬೇಕು ಎಂದು ಅನಿಸುವಂತೆ ಮಾಡುತ್ತದೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಿಮ್ಮ ಸ್ವಭಾವವು, ನಿಮ್ಮ ಸ್ನೇಹಿತರಿಗೆ ಅವರು ನಿಮ್ಮ ಲೆಕ್ಕಕ್ಕೆ ಇಲ್ಲವೇನೋ ಅನಿಸುವಂತೆ ಮಾಡುತ್ತದೆ. ನೀವು ಮೇಲ್ನೋಟಕ್ಕೆ ಮಾತ್ರ ಆ ರೀತಿ ಕಾಣುತ್ತಿದ್ದು, ನಿಮ್ಮ ಮನಸಿನಲ್ಲಿ ಸ್ನೇಹಿತರಿಗೆ ಒಳ್ಳೆ ಬೆಲೆ ನೀಡುತ್ತಿದ್ದರು, ನೀವು ನಡೆದುಕೊಳ್ಳುವ ರೀತಿ ನಿಮ್ಮ ಸುತ್ತಲಿನ ಜನರಿಗೆ ಈ ರೀತಿಯ ಅಭಿಪ್ರಾಯ ಮೂಡಿಸಬಹುದು.

ತುಲಾ

ನಿಮ್ಮ ರಾಜತಾಂತ್ರಿಕತೆ : ನೀವು ಎಲ್ಲರಿಗು ಖುಷಿಪಡಿಸಲು ಅವರಿಗೆ ಖುಷಿಯಾಗುವಂತೆ ಮಾತಾಡುತ್ತೀರಾ. ಕೆಲವೊಮ್ಮೆ ನೀವು ಎಲ್ಲರ ಮುಂದೆ ಒಳ್ಳೆಯವರಾಗಲು ತುಂಬಾ ನಾಜೂಕಿನ ನಿಲುವನ್ನು ತಾಳುತ್ತೀರ , ಇದು ನಿಮ್ಮ ನೈಜ್ಯತೆಯ ಬಗ್ಗೆ ಪ್ರಶ್ನೆ ಮೂಡಿಸುತ್ತದೆ. ನೀವು ಆ ಸಮಯಕ್ಕೆ ಏನು ಬೇಕೋ, ಏನು ಸರಿ ಅನಿಸುತ್ತೋ ಅದನ್ನೇ ಹೇಳಿ ಒಳ್ಳೆಯವರಾಗಲು ಪ್ರಯತ್ನಿಸುತ್ತೀರಾ. ಇದು ಜನರಿಗೆ ನೀವು ತಪ್ಪೇ ಮಾಡಿಲ್ಲವೇನೋ ಇಲ್ಲಯವರೆಗೂ ಅನಿಸುವಂತೆ ಮಾಡುತ್ತದೆ.

ವೃಶ್ಚಿಕ

ನಿಮ್ಮ ಅಹಂಕಾರ : ನೀವು ಬಹಳ ಬುದ್ದಿವಂತರು ಮತ್ತು ಜನರನ್ನು ಮೋಡಿಗೆ ಒಳಮಾಡುವ ಶಕ್ತಿ ಹೊಂದಿರುವವರು. ಈ ವಿಷಯ ನಿಮಗೂ ಗೊತ್ತು. ಆದರೆ ಈ ವಿಷಯವನ್ನು ನೀವು ಎಲ್ಲರ ಮುಂದೆ ತೋರಿಸಿಕೊಳ್ಳಲು ಹೋಗುತ್ತೀರಾ. ಇದು ಬೇರೆಯವರಿಗೆ ನಿಮಗೆ ನೀವೇ ಎಲ್ಲರಗಿಂತ ದೊಡ್ಡವರು ಅನ್ನುವ ಭಾವನೆ ಇದೆ ಅಂದುಕೊಳ್ಳುವಂತೆ ಮಾಡುತ್ತದೆ. ಸರಿಯಾಗಿ ಹೇಳಬೇಕೆಂದರೆ  ನಿಮ್ಮದು ಅಹಂಕಾರ ಅನ್ನುವುದಕ್ಕಿಂತ ಅದು ನಿಮ್ಮ ಗಟ್ಟಿಯಾದ ಆತ್ಮವಿಶ್ವಾಸ. ಆದರೆ ಕೆಲವೊಮ್ಮೆ ಯಾವಾಗಲು ನಿಮ್ಮ ಬಗ್ಗೆಯೇ ಮಾತಾಡುವುದು, ಮಾಡುವುದು ಬಿಟ್ಟು, ಬೇರೆಯವರ ಮಾತನ್ನೂ ಆಲಿಸಬೇಕು.

ಧನು

ನಿಮ್ಮ ಅಜಾಗೂರುಕತೆ : ನೀವು ಜನರನ್ನು ತುಂಬಾ ಬೇಗ ನಂಬುತ್ತೀರಾ. ಸರಿಯಾಗಿ ಹೇಳಬೇಕೆಂದರೆ, ನೀವು ಗೊತ್ತು-ಪರಿಚಯ ಇಲ್ಲದವರನ್ನು ತುಂಬಾ ಬೇಗ ನಂಬುತ್ತೀರಾ. ನೀವು ಈಗಷ್ಟೇ ಭೇಟಿ ಆದ ವ್ಯಕ್ತಿಯೊಂದಿಗೂ ನಿಮ್ಮ ಗುಟ್ಟುಗಳನೆಲ್ಲಾ ಹೇಳಿಬಿಡುತ್ತೀರಿ. ನೀವು ಇದು ನಿಮ್ಮಿಬ್ಬರನ್ನು ಇನ್ನಷ್ಟು ಆತ್ಮೀಯರನ್ನಾಗಿ ಮಾಡುತ್ತದೆ ಎಂದುಕೊಂಡು ಮಾಡುತ್ತೀರಾ. ಆದರೆ ನಿಮ್ಮ ಹಳೆಯ ಸ್ನೇಹಿತರಿಗೆ ಇದು ಇರಿಸುಮುರಿಸು ಉಂಟು ಮಾಡುತ್ತದೆ. ಏಕೆಂದರೆ, ಕೆಲವೊಮ್ಮೆ ನೀವು ಹೀಗೆ ಮಾಡಲು ಹೋಗಿಯೇ ಕೆಟ್ಟ ಜನರನ್ನು ನಂಬಿ ಹಳ್ಳಕ್ಕೆ ಬೀಳುವುದು.

ಮಕರ

ನಿಮ್ಮ ಸ್ವಾರ್ಥ : ನಿಮಗೆ ಏನು ಬೇಕು ಎನ್ನುವುದು ನಿಮಗೆ ಗೊತ್ತು, ಅದನ್ನು ಹೇಗೆ ಪಡೆಯಬೇಕು ಎಂಬುದೂ ನಿಮಗೆ ಗೊತ್ತು ಮತ್ತು ನಿಮಗೆ ನೀವು ಹೇಗೆ ಮೊದಲ ಆದ್ಯತೆ ಕೊಟ್ಟುಕೊಳ್ಳಬೇಕು ಎಂಬುದೂ ನಿಮಗೆ ಗೊತ್ತು. ಇದು ಕೆಟ್ಟ ವಿಷಯವೇನಲ್ಲ. ಆದರೆ, ಕೆಲವೊಮ್ಮೆ ನಿಮ್ಮ ಸ್ನೇಹಿತರು ನೀವು ಕೆಲವೊಂದು ವಿಷಯಗಳಲ್ಲಿ ರಾಜಿ ಮಾಡಿಕೊಂಡು, ಹೊಂದಿಕೊಂಡು ಹೋಗಬೇಕು ಎಂದು ಬಯಸುವರು.

ಕುಂಭ

ನಿಮ್ಮ ಚಿತ್ತಸ್ಥಿತಿ : ನೀವು ಒಂದು ಕ್ಷಣ ನಗುತ್ತಿದ್ದರೆ, ಮರುಕ್ಷಣವೇ ಮುಖ ಗಂಟಿಕ್ಕಿಕೊಂಡು ಕೂರುತ್ತೀರಾ. ಇದು ನಿಮ್ಮ ಸುತ್ತಲಿನ ಜನರನ್ನು ತಾವು ಏನು ತಪ್ಪು ಮಾಡಿದೆವು ಎಂದು ತಿಳಿಯದಂತಹ ಸ್ಥಿತಿಗೆ ಒಳಗಾಗುವಂತೆ ಮಾಡಿ ಗೊಂದಲಕ್ಕೆ ಒಳಮಾಡುತ್ತದೆ. ನಿಮ್ಮ ತಲೆ, ಮನಸ್ಸು ಯಾವಾಗಲೂ ಕೆಲಸ ಮಾಡುತ್ತಲೇ ಇರುತ್ತವೆ. ನಿಮ್ಮ ತಲೆಯಲ್ಲಿ ಯೋಚನೆಗಳು ಹರಿದಾಡುತ್ತಲೇ ಇರುತ್ತವೆ. ನಿಮ್ಮ ಈ ಯೋಚನೆಗಳು ಕೆಲವೊಮ್ಮೆ ನಿಮ್ಮ ಭಾವನೆಗಳು, ಮುಖಭಾವಗಳು ಮತ್ತು ಕಾರ್ಯಗಳ ಮೇಲೆ ನಿಯಂತ್ರಣ ಪಡೆಯಬಹುದು.

ಮೀನಾ

ನಿಮ್ಮ ಚಂಚಲತೆ : ನೀವು ಎಲ್ಲಿಗಾದರೂ ಹೋಗೋಣ ಅಥವಾ ಏನಾದರು ಮಾಡೋಣ ಎಂದು ನಿಮ್ಮ ಸ್ನೇಹಿತರಿಗೆ ಮಾತು ಕೊಟ್ಟರೆ, ಆ ಮಾತನ್ನು ನಿಮ್ಮ ಸ್ನೇಹಿತರು ನಂಬಿಕೊಳ್ಳುವಂತಿಲ್ಲ. ನೀವು ಪದೇ ಪದೇ ಈ ರೀತಿ ಹೇಳಿ, ಕೊನೆ ಕ್ಷಣದಲ್ಲಿ “ನನಗೆ ಆಗುವುದಿಲ್ಲ” ಎಂದು ಹೇಳುವುದನ್ನು ಕೇಳಿ ನಿಮ್ಮ ಸ್ನೇಹಿತರಿಗೂ ಅಭ್ಯಾಸ ಆಗಿಬಿಟ್ಟಿದೆ. ನೀವು ನಿಮಗೆ ಮಾಡಲು ಆಗದಂತಹ ಕೆಲಸಗಳನ್ನು ಒಪ್ಪಿ, ಕೊನೆಯಲ್ಲಿ ಕೈ ಕೊಡುತ್ತೀರಾ. ಇದು ನಿಮ್ಮ ಜೊತೆಗಿರುವ ಜನರಿಗೆ ನಿಮ್ಮ ಜೊತೆ ಯಾವುದೇ ರೀತಿಯ ದೃಢವಾದ ಪ್ಲಾನ್ ಮಾಡಲು ಹೆದರಿಕೆ ಹುಟ್ಟುವಂತೆ ಮಾಡುತ್ತದೆ.

Tinystep Baby-Safe Natural Toxin-Free Floor Cleaner

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon