Link copied!
Sign in / Sign up
2
Shares

ನೀವು ಕೂಡ ದಿನವೂ ಗ್ರೀನ್ ಟೀ ಕುಡಿಯುವುದನ್ನ ಅಭ್ಯಾಸ ಮಾಡಿಕೊಳ್ಳಿ.

ಗ್ರೀನ್ ಟೀ ಯನ್ನು ನಮ್ಮ ದೇಶ ಹಾಗು ಚೀನಾ ದೇಶದಲ್ಲಿ ಪುರಾತನ ಕಾಲದಿಂದಲು ಸೇವಿಸುತ್ತಿದ್ದಾರೆ, ಏಕೆಂದರೆ ಇದರ ಆರೋಗ್ಯಕರ ಲಾಭಗಳು. ಚೀನಾ ಮತ್ತು ಭಾರತಕ್ಕೆ ಸೇರಿದ ಗ್ರೀನ್ ಟೀ ಕುಡಿಯುವ ಸಂಸ್ಕೃತಿ ಹೆಚ್ಚಾಗಿತ್ತು ಆದರೆ  ಈಗ ಕೇವಲ ಏಷ್ಯಾ ವಲ್ಲದೆ ವಿಶ್ವದ ಆದರೆ ಇತ್ತೀಚೆಗೆ ಅಮೆರಿಕದಲ್ಲಂತೂ ಅತೀ ಜನಪ್ರೀಯತೆಯನ್ನು ಗಳಿಸಿದೆ.

ಈ ಕೆಳಗಿನ ವಿವರಣೆಯಲ್ಲಿ ಗ್ರೀನ್ ಟೀ ಕುಡಿಯುವುದರಿಂದಾಗುವ ಲಾಭಗಳನ್ನು ತಿಳಿಸಲಾಗಿದೆ.

ಕ್ಯಾನ್ಸರ್ ತಡೆಗಟ್ಟುತ್ತದೆ.

ಕ್ಯಾನ್ಸರ್ ಇನ್ಸ್ಟಿಟ್ಯುಟ್ಸ್ ಪ್ರಕಾರ ಗ್ರೀನ್ ಟೀ ನಲ್ಲಿರುವ ಅಂಶಗಳು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಗಟ್ಟುತ್ತದೆಂದು ಪ್ರಾಣಿಗಳಮೇಲೆ ಮಡಿದ ಪ್ರಯೋಗದಿಂದ ತಿಳಿದುಬಂದಿದೆ.

ಗ್ರೀನ್ ಟೀನಲ್ಲಿರುವ ಪೊಲಿಫೆನೋಲ್ಸ್ ಅಂಶವು ಕ್ಯಾನ್ಸರ್ ಸೆಲ್ ಬೆಳ್ವಣಿಗೆಗೆ ತಡೆಯೊಡ್ಡುತ್ತದೆ ಎಂದು ತಿಳಿದುಬಂದಿದೆ ಆದರೆ ಖಚಿತವಾಗಿ ಏನನ್ನು ಹೇಳ್ಲಗುವುದಿಲ್ಲ.

ದೇಹದ ಕೊಲೆಸ್ಟಾಲ್ ಕಡಿಮೆ ಮಾಡುತ್ತದೆ

2011 ರ  ಅನಾಲಿಸಿಸ್ ಪ್ರಕಾರ ಗ್ರೀನ್ ಟೀಯನ್ನು ಕುಡಿಯುತ್ತಿದ್ದರೆ ಅಂತವರಲ್ಲಿ ಕೆಟ್ಟ  ಕೊಲೆಸ್ಟ್ರಾಲ್ ಪ್ರಮಾಣವು ಗಣನೀಯ ರೀತಿಯಲ್ಲಿ ಬದಲಾವಣೆಯಾಗಿರುವುದು ಕಂಡುಬಂದಿದೆ.

ಸ್ಟ್ರೋಕ್ ಅನ್ನು ತಡೆಗಟ್ಟಬಹುದು

 

ಗ್ರೀನ್ ಟೀ ಕುಡಿಯುವುದರಿಂದ ಸ್ಟ್ರೋಕ್ ಆಗುವ ಸಂಭವ ಕಡಿಮೆಯಾಗುತ್ತದೆ ಎಂದು ಅಮೆರಿಕಾದ ಹಾರ್ಟ್ ಅಸೋಸಿಯೇಷನ್ ಮಾಡಿದ ಪ್ರಯೋಗದಿಂದ  ತಿಳಿದುಬಂದಿದೆ. ಅಧ್ಯಯನದ ಪ್ರಮುಖ ಲೇಖಕಿ ಡಾ. ಯೋಶಿಹಿರೋ ಕೊಕುಬೊ, ಪಿಹೆಚ್.ಡಿ., "ಇದು ಸ್ಟ್ರೋಕ್ ಅಪಾಯಗಳ ಮೇಲೆ ಹಸಿರು ಚಹಾ ಮತ್ತು ಕಾಫಿ ಎರಡೂ ಸಂಯೋಜಿತ ಪರಿಣಾಮಗಳನ್ನು ಪರೀಕ್ಷಿಸಲು ಮಾಡಿದ  ಮೊದಲ ದೊಡ್ಡ ಪ್ರಮಾಣದ ಅಧ್ಯಯನವಾಗಿದೆ. ನಿಮ್ಮ ಆಹಾರಕ್ರಮಕ್ಕೆ ದೈನಂದಿನ ಹಸಿರು ಚಹಾವನ್ನು ಸೇರಿಸುವ ಮೂಲಕ ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ.

ಬ್ಲಡ್ ಪ್ರೆಷರ್ ನಿಯಂತ್ರಣದಲ್ಲಿರುತ್ತದೆ

ಗ್ರೀನ್ ಟೀ ಯ ದೀರ್ಘಕಾಲೀನ ಸೇವನೆಯು ಸುಧಾರಿತ ರಕ್ತದೊತ್ತಡದ ಮಟ್ಟಗಳೊಂದಿಗೆ ಸಂಬಂಧ ಹೊಂದಿದೆ. ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಆಗಾಗ್ಗೆ ಚಹಾದ 3 ರಿಂದ 4 ಕಪ್ಗಳಷ್ಟು ಕುಡಿಯುವುದರಿಂದ ನಿಯಂತ್ರಣದಲ್ಲಿರುತ್ತದೆ ಎಂದು ತಿಳಿದುಬಂದಿದೆ.

ಜೀರ್ಣಕ್ರಿಯೆಗೆ ಉತ್ತಮ

ಅಂಟ್ ಒಕ್ಸಿಡಾಂಟ್ಸ್ ಇನ್ ಗ್ರೀನ್ ಟೀ ಹಜೀರ್ಣ ಕ್ರಿಯೆಗೆ ಉಪಯೋಗಕಾರಿಯಾಗಿದೆ. ಇದರಲ್ಲಿರುವ ಅಂಶಗಳು ಇಂಟೆಸ್ಟಿನ್ ಗೆ ಜೀರ್ಣಕ್ರಿಯೆಯವೇಳೆ ಸಹಾಯ ಮಾಡುತ್ತವೆ ಇದರಿಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ.Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon