ಗೋಡಂಬಿ ಮತ್ತು ಬಾದಾಮ್ ಗಳಂತಹ ಬೀಜಗಳು ಗರ್ಭಾವಸ್ಥೆಯಲ್ಲಿ ಸುರಕ್ಷಿತವೇ? (Is It Safe To Eat Nuts During Pregnancy? in Kannada)
ಸಮತೋಲಿತ ಆಹಾರದ ಸೇವನೆ ನಮ್ಮ ಹುಟ್ಟಿನಿಂದ ಸಾವಿನವರೆಗೆ ಪಾಲಿಸಬೇಕಾದ ಪ್ರಮುಖ ಜೀವನಶೈಲಿಯಲ್ಲಿ ಒಂದು. ಗರ್ಭಾವಸ್ಥೆಯಲ್ಲಿ ಸಹ ಈ ರೀತಿಯ ಪೌಷ್ಟಿಕ ಸಮತೋಲಿತ ಆಹಾರದ ಸೇವನೆ ಅತ್ಯಗತ್ಯ. ನೀವು ಗರ್ಭಾವಸ್ಥೆಯಲ್ಲಿ ಏನು ಸೇವಿಸುತ್ತಿರೋ ಅದೇ ಆಹಾರವನ್ನು ನಿಮ್ಮ ಮಗು ಪಡೆಯುತ್ತದೆ. ಇದು ನಿಮ್ಮ ಮಗುವಿನ ಬೆಳವಣಿಗೆ ಸ್ಥಿರವಾಗಿ ಆಗುವಂತೆ ಮಾಡುತ್ತದೆ. ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಸೇವಿಸಲೇಬೇಕಾದ ಆಹಾರಗಳು ಕೆಲವಿದ್ದರೇ, ನೀವು ಸೇವಿಸಬಾರದ ಆಹಾರವು ಕೆಲವು. ನಿಮ್ಮ ಆಹಾರ ಪದ್ಧತಿಯಲ್ಲಿ ಗೋಡಂಬಿಯಂತಹ ಬೀಜಗಳನ್ನು ಸೇರಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ಅಗತ್ಯವಾಗಿ ಮಾಡಿ. ಅದರಿಂದ ನಿಮಗೆ ಹಾಗೂ ನಿಮ್ಮ ಮಗುವಿಗೆ ಆಗುವ ಲಾಭಗಳು ಹಲವಾರು.
ಪರಿವಿಡಿ:
೧. ಗರ್ಭಾವಸ್ಥೆಯಲ್ಲಿ ಬೀಜಗಳ ಸೇವನೆ ಸುರಕ್ಷಿತವೇ? (Is It Safe To Have Nuts During Pregnancy? in Kannada)
೫. ಗರ್ಭಿಣಿಯರಿಗೆ ಆರೋಗ್ಯಕರ ಪ್ರಮುಖ ೪ ಬೀಜಗಳು (Top 4 Nuts For An Expecting Mother in Kannada)
೧. ಗರ್ಭಾವಸ್ಥೆಯಲ್ಲಿ ಬೀಜಗಳ ಸೇವನೆ ಸುರಕ್ಷಿತವೇ? (Is It Safe To Have Nuts During Pregnancy? in Kannada)
ಪ್ರತಿಯೊಬ್ಬರಿಗೂ ಕಾಡುವ ಪ್ರಶ್ನೆ ಎಂದರೆ ಗರ್ಭಾವಸ್ಥೆಯಲ್ಲಿ ಬೀಜಗಳ ಸೇವನೆ ಮಗುವಿನಲ್ಲಿ ಅಲರ್ಜಿ ಉಂಟುಮಾಡಬಹುದೇ? ಅಥವಾ ಪ್ರಸವಪೂರ್ವ ಅಥವಾ ಪ್ರಸವದ ನಂತರದ ದಿನಗಳಲ್ಲಿ ಮಗುವಿಗೆ ಯಾವುದೇ ಬಗೆಯ ಅಲರ್ಜಿಗಳು ಇದರಿಂದ ಉಂಟಾಗಬಹುದೇ? ಆದರೆ ಇದರಿಂದಾಗಬಹುದಾದ ಸಂಭವನೀಯ ತೊಂದರೆಗಳ ಬಗ್ಗೆ ಯಾವುದೇ ಪುರಾವೆಗಳಿಲ್ಲ. ಗಮನಿಸಬೇಕಾದ ಸಂಗತಿ ಎಂದರೆ ನೀವು ಬೀಜಗಳ ಈಗಾಗಲೇ ಅಲರ್ಜಿಗಳನ್ನು ಹೊಂದಿದ್ದಾರೆ, ಸಹಜವಾಗಿಯೇ ಗರ್ಭಾವಸ್ಥೆಯಲ್ಲಿ ಇವುಗಳನ್ನು ಸೇವಿಸದೇ ಇರುವುದು ಒಳಿತು.
೨. ಗರ್ಭಾವಸ್ಥೆಯಲ್ಲಿ ಬೀಜಗಳ ಸೇವನೆಯಿಂದ ಪೌಷ್ಟಿಕ ಲಾಭಗಳಿವೆಯೇ? (Does Eating Nuts During Pregnancy Add Any Nutritional Benefit? in Kannada)
ಬೀಜಗಳು ನೈಸರ್ಗಿಕವಾಗಿ ಸಮೃದ್ಧವಾಗಿ ಲಭ್ಯವಿರುವ ಪೌಷ್ಟಿಕ ಆಹಾರಗಳಲ್ಲಿ ಒಂದು. ಇದರ ಈ ಪೌಷ್ಟಿಕ ಗುಣದಿಂದಾಗಿ ಇವುಗಳನ್ನು ಯಾರು ಬೇಕಾದರೂ ಸೇವಿಸಬಹುದು ಮತ್ತು ಇದೆ ಕಾರಣದಿಂದ ಗರ್ಭಿಣಿಯರು ಸಹ ಇವುಗಳನ್ನು ಸೇವಿಸಬೇಕು. ಸಂಶೋಧಕರ ಅನುಸಾರ ಈ ಬೀಜಗಳು ಆರೋಗ್ಯಕರ ಅಷ್ಟೇ ಅಲ್ಲದೆ, ಗರ್ಭಿಣಿಯರಿಗೆ ಇದನ್ನು ಶಿಫಾರಸ್ಸು ಸಹ ಮಾಡುತ್ತಾರೆ.
ಗರ್ಭಿಣಿಯರ ದೈನಂದಿನ ಸಮತೋಲಿತ ಆಹಾರದಲ್ಲಿ ೫ ಔನ್ಸ್ ಪ್ರೋಟೀನ್ ಗಳನ್ನು ಒಳಗೊಂಡಿರಬೇಕು. USDA ಅನುಸಾರ, ಪ್ರತಿ ಒಂದು ಔನ್ಸ್ ಬೀಜಗಳಲ್ಲಿ ೨ ಔನ್ಸ್ ಪ್ರೋಟೀನ್ ಗಳಿರುತ್ತವೆ.
* ವಿಟಮಿನ್ ಎ ಮತ್ತು ಬಿ ಯ ಸಮೃದ್ಧ ಮೂಲವಾಗಿದೆ.
* ಮಗುವಿನ ಬೆಳವಣಿಗೆಗೆ ಅಗತ್ಯವಿರುವ ಮಿನರಲ್ಸ್ ಗಳು, ಉದಾಹರಣೆಗೆ ಫೋಸ್ಫೋರೌಸ್, ಪೊಟ್ಯಾಸಿಯಂ, ಜಿಂಕ್, ಸೆಲೆನಿಯಮ್ ಅಥವಾ ಕಾಪರ್, ಎಲ್ಲವೂ ಬೀಜಗಳಲ್ಲಿ ಸಮೃದ್ಧವಾಗಿವೆ.

* ಬ್ರೌನ್ ಫ್ಯಾಟ್ ಅತ್ಯಮೂಲ್ಯ ಮೂಲ.
* ಗರ್ಭಾವಸ್ಥೆಯಲ್ಲಿ ಎಂತಹ ಬೀಜಗಳನ್ನಿ ಸೇವಿಸಬೇಕು ಎಂದು ನೀವು ಯೋಚಿಸುತ್ತಿದ್ದರೆ, ಕಡಲೇಕಾಯಿ, ಬಾದಾಮಿ, ಗೋಡಂಬಿ ಮತ್ತು ವಾಲ್ ನಟ್ಸ್ ಗಳನ್ನೂ ನಿಮ್ಮ ಆಹಾರಗಳಲ್ಲಿ ಸೇರಿಸಬಹುದು.
* ನೀವು ಸೇವಿಸುವ ಬೀಜಗಳು ತಾಜಾವಾಗಿರಬೇಕು.
* ಬೀಜಗಳನ್ನು ಹುರಿದಿದ್ದರೆ ಅಥವಾ ಎಣ್ಣೆಯಲ್ಲಿ ಖರಿದಿದ್ದರೆ, ನಿಮ್ಮ ಮಗು ಬೀಜಗಳಿಂದ ಅನುಭವಿಸಬಹುದಾದ ಪ್ರಯೋಜನಗಳು ನಾಶವಾಗಬಹುದು.
* ಗರ್ಭಾವಸ್ಥೆಯಲ್ಲಿ ಲಘು ಉಪಾಹಾರವಾಗಿ ಸೇವಿಸಲು ಬೀಜಗಳು ಸೂಕ್ತ.
೩. ನಿಮ್ಮ ದೈನಂದಿನ ಆಹಾರದಲ್ಲಿ ಬೀಜಗಳನ್ನು ಹೇಗೆ ಸೇರಿಸಬೇಕು? (How Should Nuts Be Included In Your Daily Diet? in Kannada)
ಬೀಜಗಳನ್ನು, ಉದಾಹರೆಣೆಗೆ ಅಪ್ರಿಕೋಟ್ಸ್ ಮತ್ತು ಒಣ ದ್ರಾಕ್ಷಿಯನ್ನು, ಮನೆಯಲ್ಲಿಯೇ ತಯಾರಿಸಿದ ಮೋಸಂಬಿ ರಸದೊಂದಿಗೆ ಸೇವಿಸಿದ್ರೆ, ಅದು ನಿಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲಾ ನಾರಿನಂಶವನ್ನು ನೀಡುತ್ತದೆ. ಗೋಡಂಬಿಗಳನ್ನು ಸ್ವಲ್ಪ ಉಪ್ಪಿನೊಂದಿಗೆ ಹುರಿದು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಮತ್ತು ನಿಮ್ಮ ಮಗುವಿನ ದೇಹಕ್ಕೆ ಅಗತ್ಯವಿರುವ ಐರನ್ ಅಂಶವನ್ನು ನೀಡುತ್ತದೆ. ಬ್ರೊಕೋಲಿ ಅಥವಾ ಕ್ಯಾಪ್ಸಿಕಂ ತರಹದ ವಿಟಮಿನ್ ಸಿ ಸಮೃದ್ಧ ತರಕಾರಿಗಳನ್ನು ಸೇವಿಸುವುದರಿಂದ ನಿಮ್ಮ ದೇಹದ ವಿಟಮಿನ್ ಹೇರುವಿಕೆ ಹೆಚ್ಚುತ್ತದೆ.
ನೀವು ವಾಲ್ ನಟ್ಸ್ ಗಾಲ ಕೆಲವು ತುಂಡುಗಳನ್ನು ಅರೆದ ನಾರಗಸೆಯ ಬೀಜಗಳೊಂದಿಗೆ ನಿಮ್ಮ ಬೆಳಗಿನ ಉಪಾಹಾರದಲ್ಲಿ ಅಥವಾ ಸ್ವಲ್ಪ ಮೊಸರಿನೊಂದಿಗೆ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಒಮೇಗಾ-೩ ಫಾಟ್ಸ್ ಗಳ ಅರೋಗ್ಯ ಲಾಭಗಳನ್ನು ನೀಡುತ್ತದೆ. ನಿಮ್ಮ ದೇಹಕ್ಕೆ ಮತ್ತು ನಿಮ್ಮ ಮಗುವಿನ ದೇಹಕ್ಕೆ ಈ ಬೀಜಗಳ ಪ್ರಯೋಜನಗಳನ್ನು ಒದಗಿಸಲು, ಈ ಬೀಜಗಳನ್ನು ಬೆರ್ರೀಸ್, ಯೋಗರ್ಟ್, ಫೋಲೇಟ್ ಸಮೃದ್ಧ ತರಕಾರಿಗಳು (ಉದಾಹರೆಣೆಗೆ ಕುಂಬಳಕಾಯಿ) ಸೇರಿಸಿ ಸೇವಿಸಿರಿ.
೪. ಗರ್ಭಾವಸ್ಥೆಯ್ಲಲ್ಲಿ ಬೀಜಗಳನ್ನು ಸೇವಿಸುವ ಮುನ್ನ ವಹಿಸಬೇಕಾದ ಮುನ್ನೆಚ್ಚರಿಕೆ (Precautions For Eating Nuts During Pregnancy in Kannada):

ಬೀಜಗಳಿಂದ ಹಲವಾರು ಅರೋಗ್ಯ ಪ್ರಯೋಜನಗಳಿದ್ದು, ಅವುಗಳು ಕೊಲೆಸ್ಟರಾಲ್ ಮತ್ತು ಫ್ಯಾಟ್ ಅಂಶವನ್ನು ಸಮೃದ್ಧವಾಗಿ ಹೊಂದಿದೆ. ಅವುಗಳನ್ನು ಕಚ್ಚಾ ರೂಪದಲ್ಲಿ ಸೇವಿಸುವುದು ಅತ್ಯುತ್ತಮ. ಬೀಜಗಳನ್ನು ಅತಿ ಕಡಿಮೆ ಮಟ್ಟದಲ್ಲಿ ಹುರಿದು ಅಥವಾ ಎಣ್ಣೆಯಲ್ಲಿ ಖರಿದು ಸೇವಿಸುವುದು ಒಳಿತು. ಮತ್ತು ಇದೆ ಕಾರಣದಿಂದಾಗಿ ಅದನ್ನು ಮಿತವಾಗಿ ಸೇವಿಸುವುದು ಒಳಿತು. ಹಲಾವಾರು ಬಗೆಯ ಬೀಜಗಳನ್ನು ಸೇವಿಸುವುದರಿಂದ ಅದು ನಿಮ್ಮ ಮಗುವಿನ ಸರ್ವತೋಮುಖ ಬಳವಣಿಗೆಗೆ ಸಹಾಯ ಮಾಡುತ್ತದೆ.
ಹಾಗೆಯೆ, ಪ್ಯಾಕ್ ಮಾಡಿರುವ ಬೀಜಗಳು, ಉಪ್ಪುಭರಿತ ಬೀಜಗಳು, ಹುರಿದ ಅಥವಾ ಎಣ್ಣೆಯಲ್ಲಿ ಖರೀದ ಬೀಜಗಳನ್ನು ಸೇವಿಸದೇ ಇರುವುದು ಉತ್ತಮ. ಅದಕ್ಕೆ ಕಾರಣ ಅದರಲ್ಲಿರುವ ಕುಂದಿದ ಪೌಷ್ಟಿಕಾಂಶ ಮತ್ತು ಅದರಲ್ಲಿರುವ ಸಂರಕ್ಷಕಗಳು. ಅದರ ಬದಲಿಗೆ, ಸಾವಯವ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸಿ. ಇವುಗಳು ಯಾವುದೇ ಬಗೆಯ ಹಾನಿಕಾರಕ ಅಂಶಗಳಿಂದ ಮುಕ್ತಿಹೊಂದಿರುತ್ತವೆ. ಅದರೊಂದಿಗೆ, ಇವುಗಳು ನೈಸರ್ಗಿಕ ಅರೋಗ್ಯ ಲಾಭಗಳನ್ನು ನೀಡುತ್ತವೆ.
೫. ಗರ್ಭಿಣಿಯರಿಗೆ ಆರೋಗ್ಯಕರ ಪ್ರಮುಖ ೪ ಬೀಜಗಳು (Top 4 Nuts For An Expecting Mother in Kannada)
೧. ವಾಲ್-ನಟ್ಸ್:

ವಾಲ್-ನಟ್ಸ್ ಒಮೇಗಾ-೩ ಫಾಟ್ಸ್ ಗಳನ್ನು ಸಮೃದ್ಧವಾಗಿ ಹೊಂದಿದೆ. ಇದನ್ನು ಅಗತ್ಯ ಮಟ್ಟದಲ್ಲಿ ಸೇವಿಸುವುದರಿಂದ ಅದು ಮಗುವಿನ ಸೂಕ್ತ ಬಳವಣಿಗೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಇದು ನಿಮ್ಮ ದೇಹಕ್ಕೆ ಮತ್ತು ನಿಮ್ಮ ದೇಹದ ಸ್ನಾಯುಗಳಿಗೆ ಲಾಭದಾಯಕ. ಹಾಗಾಗಿ, ಒಮೇಗಾ-೩ ಅಲ್ಫಾ-ಲಿನೊಲೆನಿಕ್ ಆಸಿಡ್ ನಲ್ಲಿ ಇದ್ದು, ಈ ಅಂಶ ನಿಮ್ಮ ಆಹಾರದಲ್ಲಿ ಸಾಮಾನ್ಯವಾಗಿ ಲಭ್ಯವಿರುವ ಅಂಶವಲ್ಲ. ಆದರೆ ಈ ಅಂಶ ವಾಲ್ಹಾ-ನಟ್ಸ್ ಗಳಲ್ಲಿ ಸಮೃದ್ಧವಾಗಿ ಲಭ್ಯವಿದೆ. ಹಾಗಾಗಿ, ವಾಲ್-ನಟ್ಸ್ ನೀವು ಗರ್ಭಾವಸ್ಥೆಯಲ್ಲಿ ಏಕೆ ಸೇವಿಸಬೇಕು ಎನ್ನುವುದಕ್ಕೆ ಸಮಗ್ರ ಉತ್ತರವನ್ನು ಹೊಂದಿದೆ. ಇದೇ ಕಾರಣದಿಂದಾಗಿ ವಾಲ್-ನಟ್ಸ್ ಗರ್ಭಿಣಿಯರ ದೇಹಕ್ಕೆ ಮತ್ತು ಮಗುವಿನ ದೇಹಕ್ಕೆ ಅಗತ್ಯವಿರುವ ಪೌಷ್ಟಿಕಾಂಶಗಳನ್ನು ನೀಡುತ್ತದೆ.
೨. ಹ್ಯಾಝೆಲ್-ನಟ್ಸ್:

ನಿಮ್ಮ ಆಹಾರದಲ್ಲಿ ಅಗತ್ಯವಿರುವ ಪ್ರಮಾಣದಷ್ಟು ಫೋಲೇಟ್ ಅನ್ನು ಸೇವಿಸಬೇಕು. ಈ ಪೌಷ್ಟಿಕತೆ ಕೇವಲ ನಿಮ್ಮ ದೇಹಕ್ಕಷ್ಟೇ ಅಲ್ಲದೇ ನಿಮ್ಮ ಮಗುವಿನ ಒಳಿತಿಗಾಗಿಯೂ ಉಪಯುಕ್ತ. ಫೋಲೇಟ್ ನಿಮ್ಮ ದೇಹಕ್ಕೆ ಮತ್ತು ನಿಮ್ಮ ಮಗುವಿನ ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಮತ್ತು ನಿಮ್ಮ ಮಗುವಿನಲ್ಲಿ ಹುಟ್ಟಿನಿಂದಲೇ ಕಾಡಬಹುದಾದ ಅರೋಗ್ಯ ತೊಂದರೆಗಳನ್ನು ತಡೆಗಟ್ಟುತ್ತದೆ. ೩ ಔನ್ಸ್ ನಷ್ಟು ಹ್ಯಾಝೆಲ್-ನಟ್ಸ್ ಗರ್ಭಿಣಿಯರಿಗ ಆಹಾರದ ಮೂಲಕ ದೊರೆಯಬೇಕಾದ ಫೋಲೇಟ್ ಅಂಶವನ್ನು ನೀಡುತ್ತದೆ. ಹಾಗಾಗಿ, ಗರ್ಭಾವಸ್ಥೆಯಲ್ಲಿ ಅಗತ್ಯವಿರುವ ಆರೋಗ್ಯಕರ ಆಹಾರದಲ್ಲಿ ಹ್ಯಾಝೆಲ್-ನಟ್ಸ್ ಸಹ ಒಂದು. ಅದರಲ್ಲಿರುವ ಅಗತ್ಯವಿರುವ ಮಟ್ಟದ ಫೈಬರ್, ಪ್ರೋಟೀನ್ ಮತ್ತು ವಿಟಮಿನ್ ಇ ನೀಡುತ್ತದೆ.

೩ ಔನ್ಸಸ್ ಗಳಷ್ಟು ಗೋಡಂಬಿ ನಿಮ್ಮ ದೇಹಕ್ಕೆ ಪ್ರತಿದಿನ ಅಗತ್ಯವಿರುವ ಜಿಂಕ್ ನ ಅರ್ಧದಷ್ಟನ್ನು ನೀಡುತ್ತದೆ. ಜಿಂಕ್ ನಿಮ್ಮ ಮಗುವಿನ ಬೆಳವಣಿಗೆ ಅಗತ್ಯವಿದೆ. ಗರ್ಭಿಣಿಯರು ಪ್ರತಿದಿನ ತಮ್ಮ ಆಹಾರದಲ್ಲಿ ೧೧ ಮಿಲಿಗ್ರಾಮ್ ನಷ್ಟು ಜಿಂಕ್ ಅನ್ನು ಮಗುವಿನ ಬೆಳವಣಿಗಾಗಿ ಸೇವಿಸಬಹುದು.
೪. ಬಾದಾಮಿ:

ಬಾದಾಮಿ ಯಲ್ಲಿ ಉತ್ತಮ ಮಟ್ಟದ ಪಾಲಿಸ್ಯಾಚುರೇಟೆಡ್ ಮತ್ತು ಮೋನೊಸ್ಯಾಚುರೇಟೆದೆ ಫಾಟ್ಸ್ ಗಳಿದ್ದು ಇದು ಆರೋಗ್ಯಕರ ರಾಮಾಯಣದಲ್ಲಿ ಉತ್ತಮ ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಈ ಫಾಟ್ಸ್ ಗಳು ನಿಮ್ಮ ಹೃದಯದ ಆರೋಗ್ಯಕ್ಕೂ ಒಳ್ಳೆಯದು. ನೀವು ಬಯಸುವ ಅರೋಗ್ಯ ಪ್ರಯೋಜನಗಳನ್ನು ಬಾದಾಮಿಯನ್ನು ಮಿತವಾಗಿ ಸೇವಿಸುವುದರಿಂದಲೂ ಅನುಭವಿಸಬಹುದು. ಬಾದಾಮಿಯನ್ನು ಕಚ್ಚಾ ರೂಪದಲ್ಲಿ ಸೇವಿಸಬಹುದು, ಅಥವಾ ಒಂದು ಬಟ್ಟಲು ಮೊಸರಿನಲ್ಲಿ ಸೇವಿಸಬಹುದು, ಅಥವಾ ಅದನ್ನು ಪುಡಿಮಾಡಿ ನಿಮ್ಮ ಬಳಗಿನ ಉಪಹಾರದೊಂದಿಗೆ ಸೇವಿಸಬಹುದು.
ಹಾಗಾಗಿ, ಯಾವುದೇ ತೊಂದರೆ ಮುಕ್ತ ಗರ್ಭಾವಸ್ಥೆಯನ್ನು ಅನುಭವಿಸಲು ಮತ್ತು ಆರೋಗ್ಯಕರ ಮಗುವನ್ನು ಪಡೆಯಲು, ನಿಮ್ಮ ಆಹಾರ ಶೈಲಿಯನ್ನು ಆರೋಗ್ಯಕರವಾಗಿರಿಸಿ, ನಿಮ್ಮ ಆಹಾರದಲ್ಲಿ ಈ ಬಗೆಯ ಬೀಜಗಳನ್ನು ಸೇರಿಸಿ, ಗರ್ಭಾವಸ್ಥೆಯಲ್ಲಿ ಪ್ರತಿನಿತ್ಯ ಸೇವಿಸಿ.