Link copied!
Sign in / Sign up
6
Shares

ಗಂಡಸರೇ, ನಿಮಗೆ ಗಟ್ಟಿಯಾದ ನಿಮಿರುವಿಕೆ ಬೇಕೆಂದರೆ ಇವುಗಳನ್ನ ಪಾಲಿಸಿ

ಶಿಶ್ನ ನಿಮಿರುವಿಕೆ : ಈ ಎರಡು ಪದಗಳು ಗಂಡಸರಿಗೆ ಬಹಳ ಸಂತೋಷ ಮತ್ತು ಒತ್ತಡ, ಇವೆರೆಡನ್ನೂ ತರುತ್ತದೆ. ಕೆಲವೊಮ್ಮೆ, ಈ ಶಿಶ್ನ ನಿಮಿರುವಿಕೆ ತೊಂದರೆಯು ನಿಜವಾಗಿಯೂ ನಿಮ್ಮ ತೊಂದರೆ ಆಗಿರುವುದಿಲ್ಲ. ಕೆಲವೊಂದು ಅನುವಂಶಿಕವಾಗಿ ಬರುವ ಅಸ್ವಸ್ಥತೆಗಳು ಅಥವಾ ಹೃದ್ರೋಗಗಳು ಕೂಡ ಶಿಶ್ನ ನಿಮಿರುವಿಕೆಯ ಮೇಲೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲದೆ, ಈ ನಿಮಿರುವಿಕೆಯ ತೊಂದರೆ ಅಥವಾ ನಿಮಿರುವಿಕೆಯ ಅಪಸಾಮಾನ್ಯತೆ (ಎರೆಕ್ಟಯ್ಲ್ ಡಿಸ್ಫಂಕ್ಷನ್) ಯಾವುದೇ ವಯಸ್ಸಲ್ಲಾದರೂ ಗಂಡಸರಲ್ಲಿ ಕಾಣಿಸಿಕೊಳ್ಳಬಹುದು. ನಿಮ್ಮ ನಿಮಿರುವಿಕೆಯು ಮತ್ತಷ್ಟು ಗಟ್ಟಿಯಾಗಿರಬೇಕೇ ಮತ್ತು ನೀವು ಮಂಚದ ಮೇಲೆ ನಿಮ್ಮ ಸಂಗಾತಿಗೆ ಸುಖ ನೀಡುವುದರೊಂದಿಗೆ, ನೀವೂ ಒಳ್ಳೆಯ ಕ್ಷಣಗಳನ್ನ ಕಳೆಯಬೇಕಾ? ಹಾಗಿದ್ದರೆ ಇದನ್ನು ಓದಿ :


೧. ಕಾಫಿ ಇಂದ ದಿನ ಪ್ರಾರಂಭಿಸಿ


ಯೂನಿವರ್ಸಿಟಿ ಆಫ್ ಟೆಕ್ಸಾಸ್ ಹೆಲ್ತ್ ಸೈನ್ಸ್ ಸೆಂಟರ್ ಅಲ್ಲಿ ನಡೆದ ಸಂಶೋಧನೆ ಅಲ್ಲಿ ದಿನಕ್ಕೆ 2-3 ಕಪ್ ಅಷ್ಟು ಕಾಫಿ ಸೇವಿಸುವ ಗಂಡಸರಲ್ಲಿ ನಿಮಿರುವಿಕೆಯ ಅಪಸಾಮಾನ್ಯತೆ ಕಾಣಿಸುವ ಸಾಧ್ಯತೆಗಳು ಕಡಿಮೆ ಎಂದು ತಿಳಿದು ಬಂದಿದೆ. ಕಾಫಿ ಅಲ್ಲಿ ಕಫೆನ್ ಎಂಬ ಪದಾರ್ಥವಿದ್ದು, ಇದು ವೈಯಾಗ್ರ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಕಫೆನ್ ಶಿಶ್ನದಲ್ಲಿರುವ ಅಪಧಮನಿಗಳಿಗೆ ಆರಾಮ ಒದಗಿಸಿ, ಅವುಗಳಿಗೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ.


೨. ವ್ಯಾಯಾಮ ಮಾಡಿ, ಬೆವರಿಳಿಸಿಕೊಳ್ಳಲು ಶುರು ಮಾಡಿ


ಕಾರ್ಡಿಯೋ ವ್ಯಾಯಾಮಗಳು ಮಾಡುವುದು ಕೇವಲ ನಿಮ್ಮ ಹೃದಯಕ್ಕೆ ಮಾತ್ರ ಒಳ್ಳೆಯದಲ್ಲ. ನಿಮ್ಮ ಶಿಶ್ನಕ್ಕೂ ಒಳ್ಳೆಯದು. ನಿಯಮಿತವಾಗಿ ವ್ಯಾಯಾಮ ಮಾಡುವ ಗಂಡಸರ ದೇಹದಲ್ಲಿ ರಕ್ತನಾಳಗಳು ಹೆಚ್ಚು ಆರೋಗ್ಯಕರವಾಗಿರುತ್ತವೆ. ಇದುವೇ ಗಟ್ಟಿಯಾದ ನಿಮಿರುವಿಕೆಗೆ ಬೇಕಾಗಿರುವುದು. ಇದಲ್ಲದೆ ವ್ಯಾಯಾಮವು ನಿಮ್ಮ ದೇಹದಲ್ಲಿ ನೈಟ್ರಿಕ್ ಆಕ್ಸೈಡ್ ಎಂಬ ಕಾಂಪೌಂಡ್ ಅನ್ನು ತಯಾರಿಸುತ್ತದೆ. ಈ ಕಾಂಪೌಂಡ್ ನಿಮಿರುವಿಕೆ ಉಂಟಾಗಲು ಮತ್ತು ಅದನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.


೩. ಧೂಮಪಾನ ನಿಲ್ಲಿಸಿ


ನಿಮಗೆ ಮನದಟ್ಟಾಗಬೇಕಿರುವ ಒಂದು ವಿಷಯ ಎಂದರೆ : ನಿಮ್ಮ ಹೃದಯಕ್ಕೆ ಯಾವುದೆಲ್ಲಾ ಒಳ್ಳೆಯದಲ್ಲವೋ, ಅವುಗಳು ನಿಮ್ಮ ಶಿಶ್ನಕ್ಕೂ ಒಳ್ಳೆಯದಲ್ಲ. ಹೀಗಾಗಿ ನೀವು ಧೂಮಪಾನ ನಿಲ್ಲಿಸುವುದು ಕೂಡ ಮುಖ್ಯವಾಗುತ್ತದೆ. ಇನ್ನೊಂದು ಸಂಗತಿ ಎಂದರೆ, 2800 ಜನ ಧೂಮಪಾನ ಮಾಡುವ ಗಂಡಸರ ಮೇಲೆ ನಡೆದ ಅಧ್ಯಯನದಲ್ಲಿ ಧೂಮಪಾನ ತ್ಯಜಿಸಿದ 25% ಅಷ್ಟು ಗಂಡಸರು ತಮ್ಮ ನಿಮಿರುವಿಕೆಯ ಶಕ್ತಿ ಹೆಚ್ಚಿದೆ ಎಂದು ತಿಳಿಸಿದ್ದಾರೆ. ಸಿಗರೇಟ್ ಅಲ್ಲಿರುವ ನಿಕೋಟಿನ್ ನಿಮ್ಮ ಶಿಶ್ನದ ಅಪಧಮನಿಗಳನ್ನ ಸಣ್ಣದಾಗಿಸಿ, ಅವುಗಳಿಗೆ ರಕ್ತ ಹರಿಯದಂತೆ ಮಾಡುತ್ತದೆ. ಹೀಗಾಗಿ ಧೂಮಪಾನ ಮಾಡುವವರ ನಿಮಿರುವಿಕೆಯು ಗಟ್ಟಿಯಾಗಿರುವುದಿಲ್ಲ.


೪. ಚೆನ್ನಾಗಿ ಬ್ರಷ್ ಮಾಡಿ


ನಿಮ್ಮ ಬಾಯಲ್ಲಿ ಏನಾಗುತ್ತಿದೆ ಎಂಬುದು ನಿಮ್ಮ ಬೆಲ್ಟ್ ಕೆಳಗಿನ ಭಾಗದ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಪೆರಿಯೊಡೋನ್ಟಲ್ ಕಾಯಿಲೆ  (ಅಥವಾ ಹಲ್ಲುಗಳ ಮೇಲೆ ಗಲೀಜು ಕಟ್ಟಿರುವುದು) ತುತ್ತಾಗಿರುವ ಗಂಡಸರಲ್ಲಿ ನಿಮಿರುವಿಕೆಯ ಅಪಸಾಮಾನ್ಯತೆ ಉಂಟಾಗುವ ಸಾಧ್ಯತೆಗಳು ದುಪ್ಪಟ್ಟಾಗಿರುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon