Link copied!
Sign in / Sign up
26
Shares

ಈ 7 ಆಹಾರಗಳು ಗರ್ಭಿಣಿಯರ ಗ್ಯಾಸ್ ಸಮಸ್ಯೆ ಶಮನ ಮಾಡುತ್ತವೆ

ನೀವು ಗರ್ಭಿಣಿಯಾಗಿದ್ದಾಗ ನಿಮ್ಮ ವೃತ್ತಿಜೀವನದಲ್ಲಿ, ನಿಮ್ಮ ಆರೋಗ್ಯದಲ್ಲಿ  ಅಥವಾ ನಿಮ್ಮ ಸಂಬಂಧಗಳಲ್ಲಿ ನೀವು ಬಹಳಷ್ಟು ವ್ಯತ್ಯಾಸಗಳನ್ನು ಕಾಣುತ್ತೀರಿ.

ಗರ್ಭಾವಸ್ಥೆಯಲ್ಲಿ ನೀವು ಎದುರಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಊದಿಕೊಳ್ಳುವುದು ಕೂಡ  ಒಂದು. ನಿಮ್ಮ ದೇಹದಲ್ಲಿನ ಅತಿಯಾದ ಗ್ಯಾಸ್ ಇರುಸುಮುರುಸಿನ ಭಾವನೆಯನ್ನು ನೀಡುತ್ತದೆ. ಇದು ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಆಗಾಗ್ಗೆ ಪರಿಣಮಿಸಬಹುದು,ಆದರೆ ದಿನಕಳೆದಂತೆ ಪ್ರಸವದ ಸಮಯ ಸಮೀಪಿಸಿದಂತೆ  ಇದು ಕಡಿಮೆಯಾಗುತ್ತದೆ. 

ಫೈಬರ್ ಯುಕ್ತ ಆಹಾರವನ್ನು ತೆಗೆದುಕೊಳ್ಳಲು ಯಾವಾಗಲೂ ಸಲಹೆ ನೀಡಲಾಗುತ್ತದೆ, ಇದು ನಿಮ್ಮ ಕರುಳಿನ ಚಲನೆಯನ್ನು ನಿಯಮಿತವಾಗಿರಿಸುತ್ತದೆ ಮತ್ತು ಊತದಿಂದ ನಿಮಗೆ ಶಮನ ನೀಡುತ್ತದೆ. ಇಲ್ಲಿ ಗ್ಯಾಸ್ ನಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುವ ಕೆಲವು ಆಹಾರ ಪದಾರ್ಥಗಳನ್ನು ನಾವು ಪಟ್ಟಿ ಮಾಡಿದ್ದೇವೆ .

1. ಸಂಪೂರ್ಣ ಗೋಧಿಯ  ಟೋಸ್ಟ್

ಸಂಸ್ಕರಿಸಿದ ಬಿಳಿ ಬ್ರೆಡ್ಡಿನಿಂದ ದೂರವಿರಿ. ಬ್ರೆಡ್ಡಿನಲ್ಲಿರುವ ಸಕ್ಕರೆ ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಬಹಳ ಕಡಿಮೆ ಅವಧಿಯಲ್ಲಿ ನಿಮಗೆ ಹಸಿವಾಗುವುದು,ಪರಿಣಾಮವಾಗಿ ಉದರದಲ್ಲಿ ಗ್ಯಾಸ್ ಕೂಡಿಕೊಳ್ಳುವುದು. ಮತ್ತೊಂದೆಡೆ ಧಾನ್ಯದ ಬ್ರೆಡ್, ಫೈಬರ್ ಯುಕ್ತವಾಗಿರುತ್ತದೆ. ಇದು ನಿಮ್ಮ ದೇಹದ ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಟ್ಟುಕೊಂಡು ಬಹಳ ಸಮಯದವರೆಗೆ ನಿಮ್ಮ ಹೊಟ್ಟೆ ತುಂಬಿದಂತೆ ಇಟ್ಟುಕೊಂಡು ಗ್ಯಾಸ್ ಕೂಡಿಕೊಳ್ಳುವುದನ್ನು  ತಡೆಗಟ್ಟುತ್ತದೆ.

2. ಹಸಿರು ಸೊಪ್ಪುಗಳು

ಹಸಿರು ಸೊಪ್ಪುಗಳು ಕಡಿಮೆ ಕ್ಯಾಲೋರಿ ಹೊಂದಿದ್ದು ಫೈಬರ್ ಯುಕ್ತವಾಗಿರುತ್ತದೆ. ಇದು ನಿಮ್ಮ ದೇಹದಲ್ಲಿ ನೀರನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಉಬ್ಬುವುದನ್ನು ತಡೆಯುತ್ತದೆ. ನಿಮ್ಮ ಆಹಾರದಲ್ಲಿ ಪಾಲಕ್, ಲೆಟಿಸ್ ಮತ್ತು ಇತರ ಹಸಿರು ಸೊಪ್ಪುಗಳನ್ನು ಸೇರಿಸುವುದು ಯಾವಾಗಲೂ ಉತ್ತಮ.

3. ಲೆಂಟಿಲ್ಗಳು

ನಿಮ್ಮ ಆಹಾರಕ್ರಮದಲ್ಲಿ ನೀವು ಸೇರಿಸಬಹುದಾದ ಉತ್ತಮ ಆಹಾರಗಳಲ್ಲಿ ಲೆಂಟಿಲ್ಗಳು ಸೇರಿವೆ. ಇವು ಪ್ರೋಟೀನ್, ಫೈಬರ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ಗಳ  ಅತ್ಯುತ್ತಮ ಮೂಲವಾಗಿವೆ. ತೂಕವನ್ನು ಇಳಿಸುವ ವಿಷಯಕ್ಕೆ ಬಂದಾಗ ಅವು ತುಂಬಾ ಪ್ರಯೋಜನಕಾರಿಯಾಗಿವೆ.

4. ಓಟ್‌ಮೀಲ್

ಓಟ್ಸ್ ಫೈಬರ್ ನ ಅತ್ಯುತ್ತಮ ಮೂಲವಾಗಿದೆ. ಇದು ನಿಮ್ಮ ಹೊಟ್ಟೆಯನ್ನು ತುಂಬಿದಂತೆ ಇಡುತ್ತದೆ, ಆರೋಗ್ಯಕರವಾಗಿರಿಸುತ್ತದೆ.  ಕಡಿಮೆ ಕ್ಯಾಲೋರಿಯನ್ನು ಹೊಂದಿದ್ದರಿಂದ  ಗರ್ಭಾವಸ್ಥೆಯಲ್ಲಿ ಇದು  ಪರಿಪೂರ್ಣ ಆಹಾರವಾಗಿದೆ. ಈ ಆಹಾರ ವಿವಿಧ ರುಚಿಗಳಲ್ಲಿ ದೊರೆಯುತ್ತದೆ ಆದುದರಿಂದ ನೀವು ಇದರ ರುಚಿಯ ಕುರಿತು ಚಿಂತಿಸಬೇಕೆಂದಿಲ್ಲ.

5. ಹಣ್ಣುಗಳು

ಬಾಳೆಹಣ್ಣು, ಸೇಬು, ಪೇರಳೆ, ಆವಕಾಡೊ  ಮತ್ತು ಕಲ್ಲಂಗಡಿಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಬಾಳೆಹಣ್ಣು ನೀರಿನಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಸೇಬು ಅತಿ ಹೆಚ್ಚು  ಫೈಬರ್ ಅಂಶದಿಂದ ಕೂಡಿದ್ದು ನಿಮ್ಮ ಆಹಾರದ ಸಾಂದ್ರತೆಯನ್ನು ಕಡಿಮೆಗೊಳಿಸುತ್ತದೆ. ಕಲ್ಲಂಗಡಿಗಳು ಹೆಚ್ಚಾಗಿ ನೀರಿನಿಂದ ತುಂಬಿರುತ್ತವೆ ಮತ್ತು ನಿಮ್ಮನ್ನು  ಉಲ್ಲಾಸಕರವಾಗಿರಿಸುತ್ತದೆ.

6. ಕಂದು ಅಕ್ಕಿ

ಕಂದುಬಣ್ಣದ ಅಕ್ಕಿ ಸಂಕೀರ್ಣ ಕಾರ್ಬೋಹೈಡ್ರೇಟ್ಗಳನ್ನು ಹೊಂದಿದ್ದು ಜೀರ್ಣವಾಗಲು ಧೀರ್ಘಕಾಲ ತೆಗೆದುಕೊಳ್ಳುವುದರಿಂದ ಬಹಳ ಕಾಲದವರೆಗೂ ನಿಮ್ಮ ಹಸಿವನ್ನು ದೂರವಿರಿಸುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಗ್ಯಾಸ್ ನಿಂದ ಶಮನಹೊಂದಲು  ನೀವು ಸಾಮಾನ್ಯವಾಗಿ ಬಳಸುವ ಬಿಳಿಯ ಅಕ್ಕಿಯೊಂದಿಗೆ ಇದನ್ನು ಬದಲಾಯಿಸಬಹುದು.

7. ಡಾರ್ಕ್ ಚಾಕಲೇಟುಗಳು

ಚಾಕಲೇಟುಗಳು ಸಹ ಗ್ಯಾಸನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಇದು ಚಾಕಲೇಟ್ ಪ್ರಿಯರಿಗೆ ಸಂತೋಷದ ಸುದ್ದಿಯಾಗಿದೆ. ಖಾತರಿಪಡಿಸಿಕೊಳ್ಳಬೇಕಾದ ಒಂದು ವಿಷಯವೆಂದರೆ ನೀವು ತಿನ್ನುವ ಬಾರ್ ಕನಿಷ್ಠ 70% ಕೋಕೋ ಬೀಜವನ್ನು ಹೊಂದಿರಬೇಕು. ಇದು ಫೈಬರ್ ಮತ್ತು ಪಾಲಿಫೀನಾಲ್ಗಳಿಂದ ತುಂಬಿರುವುದಲ್ಲದೆ ನಿಮ್ಮ ಹೊಟ್ಟೆ ಕರಗಿಸಲು ಸಹಾಯ ಮಾಡುತ್ತದೆ. ಹೆಚ್ಚು ಚಾಕಲೇಟುಗಳು ಹಾನಿಕಾರಕವಾಗಬಹುದು. ಆದುದರಿಂದ ಸಣ್ಣ ತುಂಡು ಅಥವಾ ಪ್ರಮಾಣವನ್ನು ಸೇವಿಸಿ.

ನಿಂಬೆ ರಸವನ್ನು  ಕುಡಿಯುವುದು ಸಹ ನಿಮ್ಮ ಜೀರ್ಣಕ್ರಿಯೆಗೆ  ಸಹಾಯ ಮಾಡುತ್ತದೆ ಮತ್ತು ಊತವನ್ನು ತಡೆಯುತ್ತದೆ. ಬಾದಾಮಿ ಮತ್ತು ಟೊಮೆಟೊಗಳು ಗರ್ಭಾವಸ್ಥೆಯಲ್ಲಿ ಗ್ಯಾಸ್ ನಿಂದ ಪರಿಹಾರ ನೀಡುತ್ತವೆ.

ನೀವು ಕಾರ್ಬೊನೇಟೆಡ್ ಪಾನೀಯಗಳಿಂದ ದೂರವಿರುವುದನ್ನು ಖಚಿತಪಡಿಸಿಕೊಳ್ಳಿ. ಚೂಯಿಂಗ್ ಗಮ್, ಮದ್ಯ, ಕಾಫಿ, ಡೈರಿ ಉತ್ಪನ್ನಗಳು ಮತ್ತು ಕೃತಕ ಸಿಹಿಕಾರಕಗಳು ಊತಕ್ಕೆ   ಕಾರಣವಾಗುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon