Link copied!
Sign in / Sign up
3
Shares

ಮಕ್ಕಳಲ್ಲಿನ ಗ್ಯಾಸ್ ಸಮಸ್ಯೆಗೆ ಮನೆಯಲ್ಲೇ ಔಷಧಿ !

ಆಹಾರ ಸೇವಿಸಿದ ಬಳಿಕವೂ ಮಗುವು ಅತ್ತು ಕರೆಯುವುದನ್ನು ಗಮನಿಸಿದ್ದೀರಾ...? ಮಗುವು ಅಸ್ವಸ್ಥರಾಗಿರುವಂತೆ, ಅಸಹಜವಾಗಿ ವರ್ತಿಸುತ್ತಿದ್ದರೆ, ಆಗಾಗ ತೇಗುತ್ತಿದ್ದರೆ ಕೆಲವೊಮ್ಮೆ ಗ್ಯಾಸ್ ನಿಂದ ಅಸಮಾಧಾನಗೊಂಡಿರಬಹುದು. ಮಗುವು ಸಂಕಟಪಡುವುದನ್ನು ಯಾವ ತಾಯಿಯೂ ಸಹಿಸಲಾರಳು. ಉದರದ ಶತ್ರು ಗ್ಯಾಸ್ ನಿಂದ, ನೀವು ಮನಸ್ಸು ಮಾಡಿದರೆ,ಮಗುವಿಗೆ ಆರಾಮ ನೀಡಬಹುದು.

೧.ತಿನ್ನಿಸಿದ ಬಳಿಕ ತೇಗಿಸುವ ನಿಯಮ

ಮಗುವಿನ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಿಲ್ಲವೆಂದು ಖಚಿತ ಪಡಿಸಿ ಕೊಳ್ಳಲಿರುವ ಅತ್ಯಂತ ಪರಿಣಾಮಕಾರಿ ಮಾರ್ಗವಿದು.ಮೊಲೆಯೂಡಿಸುವಾಗ ಅಥವಾ ಮಗುವಿಗೆ ಆಹಾರವನ್ನುಣಿಸುವಾಗ, ಅದರಿಂದ ವಿರಾಮ ತೆಗೆದುಕೊಂಡು ಬೆನ್ನು ತಟ್ಟಿ ಮಗುವನ್ನು ತೇಗಿಸಿರಿ. ಇದರಿಂದ ಮಗುವು ತಾನಾಗಿಯೇ ತೇಗುವುದು. ಇದನ್ನು ಪ್ರತಿ ಐದು ಮಿನಿಟುಗಳಿಗೆ ಆವರ್ತಿಸಿರಿ. ಈ ರೀತಿ ಮಾಡುವುದು ಮಗುವಿನ ಗ್ಯಾಸ್ ಹೊರ ಹಾಕಲು ಅತ್ಯಂತ ಸುಲಭ ವಿಧಾನ.

೨.ಕುಳಿತು ಮೊಲೆಯೂಡಿಸುವಿಕೆ

ನಿಮಗೆ ತುಸು ತ್ರಾಸದಾಯಕವಾದರೂ, ಗ್ಯಾಸ್ ತುಂಬಲಿರುವ ಸಾಧ್ಯತೆಯನ್ನು ತೀರಾ ಕಡಿಮೆಗೊಳಿಸುವ ವಿಧಾನವಿದು. ನೇರವಾಗಿ ಕುಳಿತುಕೊಂಡು ನಿಮ್ಮ ತೊಡೆಯ ಮೇಲೊಂದು ತಲೆದಿಂಬನ್ನು ಇಟ್ಟುಕೊಳ್ಳಿ. ಮಗುವಿನ ತಲೆಯನ್ನು ತುಸು ಮೇಲಕ್ಕೆತ್ತಿಕೊಂಡು, ತಲೆದಿಂಬಿನ ಮೇಲೆ ಮಲಗಿಸಿ,ಮೊಲೆಯೂಡಿಸುವುದರಿಂದ ಗ್ಯಾಸ್ ತುಂಬುವುದನ್ನು ಕಡಿಮೆಗೊಳಿಸಬಹುದು.

೩.ಸ್ಪರ್ಶ

ಮಗುವನ್ನು ಸ್ಪರ್ಶಿಸಿಕೊಂಡಿರುವುದು ಮಗುವಿಗೆ ಸಮಾಧಾನವನ್ನು ನೀಡುವುದು. ಮಗುವನ್ನು ನಿಮ್ಮ ಪ್ರೀತಿಯ ಕರಗಳಲ್ಲಿ ಎತ್ತಿ ಕೊಂಡು, ಅಪ್ಯಾಯಮಾನವಾಗಿ ಅದರ ಹೊಟ್ಟೆ ಮತ್ತು ಬೆನ್ನನ್ನು ಸವರುವುದರಿಂದ, ಹೊಟ್ಟೆಯಲ್ಲಿ ತುಂಬಿಕೊಂಡಿರುವ ಗ್ಯಾಸ್ ತೇಗಿನ ಮೂಲಕ ಅಥವಾ ಹೂಸಿನ ಮೂಲಕ ಹೊರ ಹೋಗುವುದು. ಮಗುವಿನ ಹೊಟ್ಟೆಯಲ್ಲಿ ಅಳಿದುಳಿದ ಗ್ಯಾಸನ್ನು ಹೊರದಬ್ಬುವಂತೆ, ಮಗುವನ್ನು ಬೆನ್ನು ತಟ್ಟಿ ಮಲಗಿಸುವುದರಿಂದ ರಾತ್ರಿಯಲ್ಲಿ ಸುಖ ನಿದ್ರೆಯನ್ನು ಆನಂದಿಸುವವರು.

೪.ಬೆನ್ನ ಮೇಲೆತ್ತಿಕೊಳ್ಳಿ

ಗ್ಯಾಸ್ ನ ತೊಂದರೆಯಿಂದ ನರಳುವ ಮಗುವಿನ ಬೆನ್ನನ್ನು ನೇವರಿಸಲು ಅನುಕೂಲವಾಗುವಂತೆ, ಅದನ್ನು ನಿಮ್ಮ ತೋಳಿನ ಮೇಲೆ ಎತ್ತಿಕೊಳ್ಳಿ.ಮಗುವು ಮಲಗಿದ್ದರೂ ಕೂಡ ನವಿರಾಗಿ ಹೊಟ್ಟೆಯಲ್ಲಿರುವ ವಾಯು ಹೋಗುವ ತನಕ ಬೆನ್ನನ್ನು ತಟ್ಟುತ್ತಲಿರಿ.

೫.ಅಳುವುದನ್ನು ತಡೆಯಿರಿ

ಅಳುತ್ತಿರುವ ಮಗು ಬಾಯಿಯ ಮೂಲಕವಾಗಿ ಧಾರಾಳವಾಗಿ ವಾಯುವನ್ನು ಒಳಗೆಳೆದುಕೊಳ್ಳುವುದರಿಂದ, ಮಗುವು ಕೂಡಲೇ ಅಳು ನಿಲ್ಲಿಸುವಂತೆ ಅವರ ಮನಸ್ಸನ್ನು ಬೇರೆಡೆಗೆ ತಿರುಗಿಸಿ. ಜೋಗುಳವನ್ನು ಹಾಡಿ ಬೆನ್ನನ್ನು ತಟ್ಟಿರಿ. ಮಗುವಿನ ಹೊಟ್ಟೆಯ ಮೇಲೆ ವೃತ್ತಾಕಾರದಲ್ಲಿ ಮಾಲೀಸು ಮಾಡಿರಿ.

೬.‘ಗ್ಯಾಸ್’ಗೆ ಕಾರಣವಾಗುವ ಆಹಾರಗಳನ್ನು ಸೇವಿಸದಿರಿ

ಮೊಲೆಯೂಡಿಸುವ ತಾಯಿಯರು ಸೇವಿಸುವ ಪ್ರತಿಯೊಂದು ಆಹಾರವೂ ಮಕ್ಕಳ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಎಲೆಕೋಸು, ಬ್ರೊಕೋಲಿಗಳಂತಹ, ಗ್ಯಾಸ್ ಗೆ ಕಾರಣವಾದ ತರಕಾರಿಗಳನ್ನು ಸೇವಿಸಿದರೆ ಮಗುವಿಗೂ ಗ್ಯಾಸ್ ತುಂಬಬಹುದು.

ಮಗುವು ಹೆಚ್ಚಿನ ಗ್ಯಾಸ್ ಸಮಸ್ಯೆಯಿಂದ ಬಳಲುತ್ತಿದ್ದರೆ, ದಯವಿಟ್ಟು ವೈದ್ಯರನ್ನು ಭೇಟಿ ಮಾಡಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon