Link copied!
Sign in / Sign up
7
Shares

ಗ್ಯಾಸ್ ಇಂದ ಉಂಟಾಗುವ ಎದೆ ಮತ್ತು ಬೆನ್ನು ನೋವಿಗೆ 8 ಅತ್ಯಂತ ಪರಿಣಾಮಕಾರಿ,ಸುಲಭ ಮನೆಮದ್ದುಗಳು

ಗ್ಯಾಸ್ ಮತ್ತು ಗ್ಯಾಸ್ ಇಂದ ಉಂಟಾಗುವ ನೋವುಗಳು ಜೀರ್ಣಶಕ್ತಿ ಕಡಿಮೆ ಇರುವವರಿಗೆ ಸಾಮಾನ್ಯವಾಗಿಯೇ ಕಾಣಿಸಿಕೊಳ್ಳುವ ತೊಂದರೆಗಳು. ಇಂತಹ ತೊಂದರೆಗಳು ನಿಮ್ಮನ್ನು ಕೆಲವೊಮ್ಮೆ ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಪೇಚಿಗೆ ಸಿಲುಕಿಸುತ್ತವೆ ಎಂಬುದು ನಿಮ್ಮೆಲ್ಲರಿಗೂ ಒಂದಲ್ಲ ಒಂದು ದಿನ ಆದರೂ ಅನುಭವ ಆಗಿರುತ್ತದೆ. ಈ ಸಮಸ್ಯೆ ಗಂಭೀರ ಅಲ್ಲದಿದ್ದರೂ ತುಂಬಾನೇ ಮುಜುಗರ ಉಂಟು ಮಾಡುವಂತದ್ದು.

ಇಂಟಸ್ಟೈನಲ್ ಗ್ಯಾಸ್ ಉತ್ಪತ್ತಿ ಮಾಡುವ ಅಥವಾ ಹೊಟ್ಟೆ ಕಟ್ಟುವುದು, ಬೇಧಿ ಆಗುವಂತುವುಗಳಿಗೆ ಸಂಬಂಧಿಸಿದ ಯಾವುದೇ ಅಂಶ ಗ್ಯಾಸ್ ಇಂದ ಉಂಟಾಗುವ ನೋವಿಗೆ ಕಾರಣ ಆಗಬಹುದು. ಕರುಳಿನಲ್ಲಿ ಗ್ಯಾಸ್ ಕಟ್ಟಿಕೊಂಡು, ಅದನ್ನು ದೇಹದಿಂದ ಹೊರಹಾಕಲು ಸಾಧ್ಯವಾಗದೆ ಇದ್ದಾಗ, ಈ ನೋವುಗಳು ಕಾಣಿಸಿಕೊಳ್ಳುತ್ತವೆ. ಈ ಗ್ಯಾಸ್ ನೋವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಆಗದಿದ್ದರೂ, ಗ್ಯಾಸ್ ಅನ್ನು ಕಡಿಮೆ ಮಾಡಲಂತೂ ಕೆಲವು ದಾರಿಗಳಿವೆ. ಇದರಿಂದ ನಾವು ಅಹಿತಕರ ಅನುಭವಗಳಿಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮುಜುಗರಕ್ಕೆ ಈಡಾಗುವ ಸಾಧ್ಯತೆಗಳನ್ನ ಕಡಿಮೆ ಮಾಡಿಕೊಳ್ಳಬಹುದು.

ಗ್ಯಾಸ್ ಇಂದ ಎದೆ ಮತ್ತು ಬೆನ್ನಿನಲ್ಲಿ ಉಂಟಾಗುವ ನೋವುಗಳಿಗೆ ಪರಿಣಾಮಕಾರಿ ಮನೆಮದ್ದುಗಳು

 

೧. ಶುಂಠಿ

1) ಒಂದು ಸ್ಪೂನ್ ಅಷ್ಟು ಶುಂಠಿ ಪುಡಿ, ಅರ್ಧ ಸ್ಪೂನ್ ಅಷ್ಟು ಅಜ್ವಾನ, ಚಿಟಿಗೆಯಷ್ಟು ಉಪ್ಪನ್ನು ಚೆನ್ನಾಗಿ ಕಲಿಸಿ, ದಿನಕ್ಕೆ ಕೆಲವು ಬಾರಿಗಳಷ್ಟು ಸೇವಿಸಿ.

2) ಜೇಜ್ಜಿದ ಶುಂಠಿ, ಏಲಕ್ಕಿ, ಸೋಂಪು ಸಮನಾದ ಪ್ರಮಾಣದಲ್ಲಿ ಬೆರೆಸಿ ಕಲಿಸಿಕೊಳ್ಳಿ; ಒಂದು ಸ್ಪೂನ್ ಅಷ್ಟು ಈ ಮಿಶ್ರಣವನ್ನ ಒಂದು ಲೋಟ ನೀರಿನಿಗೆ ಬೆರೆಸಿ, ಅದಕ್ಕೆ ಒಂದು ಚಿಟಿಗೆಯಷ್ಟು ಇಂಗು ಬೆರೆಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಕುಡಿಯಿರಿ.

3) ಊಟದ ನಂತರ ಸಣ್ಣ ಶುಂಠಿಯ ತುಂಡುಗಳನ್ನ ಅಗಿಯಿರಿ ಅಥವಾ ಇಂಗಿನೊಂದಿಗೆ ಬೆರೆಸಿದ ಸ್ವಲ್ಪ ಶುಂಠಿ ರಸವನ್ನ ಕುಡಿಯಿರಿ. ಪ್ರತಿದಿನ ಜಿಂಜರ್ ಟೀ (ಶುಂಠಿ ಚಹಾ) ಮಾಡಿಕೊಂಡು ಸೇವಿಸಿ.

 

೨. ಕುಂಬಳಕಾಯಿ

ಒಂದು ಕಪ್ ತುಂಬುವಷ್ಟು ಕುಂಬಳಕಾಯಿಯನ್ನು ತುರಿದುಕೊಳ್ಳಿ. ಅದನ್ನು ಬೇಯಿಸಿ ಅಥವಾ ಕುದಿಸಿ, ನಿಮ್ಮ ಇಷ್ಟ. ಊಟದ ಜೊತೆಗೆ ಪಕ್ಕದಲ್ಲಿ, ಈ ಒಂದು ಕಪ್ ಅಷ್ಟು ಬೇಯಿಸಿದ ಅಥವಾ ಕುದಿಸಿದ ಕುಂಬಳಕಾಯಿಯನ್ನು ಇಟುಕೊಂಡು ಪ್ರತಿದಿನ ಸೇವಿಸಿ.

 

೩. ಕರಿ ಮೆಣಸು

1) ಬೆಲ್ಲದೊಂದಿಗೆ ಕರಿಮೆಣಸನ್ನು ರೆಗ್ಯುಲರ್ ಆಗಿ ಸೇವಿಸುತ್ತಾ ಇರಿ.

2) ಕರಿ ಮೆಣಸು, ಕೊತ್ತಂಬರಿ ಬೀಜಗಳನ್ನ ಚೆನ್ನಾಗಿ ಪುಡಿ ಮಾಡಿಕೊಂಡು, ಅವೆರೆಡನ್ನು ಶುಂಠಿ ಪುಡಿಗೆ ಬೆರೆಸಿ. ಇದಕ್ಕೆ ಒಣಗಿಸಿದ ಪುದಿನ ಎಲೆಗಳನ್ನ ಬೆರೆಸಿ ಎಲ್ಲವನ್ನೂ ಚೆನ್ನಾಗಿ ರುಬ್ಬಿಕೊಳ್ಳಿ. ಈ ಮಿಶ್ರಣವನ್ನ ದಿನಕ್ಕೆ ಎರಡು ಬಾರಿ ಸೇವಿಸಿ.

3) ಕರಿಮೆಣಸನ್ನು ಮಜ್ಜಿಗೆಗೆ ಬೆರೆಸಿ ಕುಡಿಯಿರಿ.

 

೪. ಬೆಳ್ಳುಳ್ಳಿ

ಬೆಳ್ಳುಳ್ಳಿ ಎಸಳುಗಳನ್ನ, ಸ್ವಲ್ಪ ಜೀರಿಗೆ ಮತ್ತು ಕರಿ ಮೆಣಸನ್ನ ನೀರಿನೊಂದಿಗೆ ಬೆರೆಸಿ, ಈ ಮಿಶ್ರಣವನ್ನ ದಿನಕ್ಕೆ 2-3 ಬಾರಿ ಸೇವಿಸಿ. ಇದರ ಬದಲಿಗೆ ನೀವು ಬೆಳ್ಳುಳ್ಳಿಯ ಸೂಪ್ ಅನ್ನು ಪ್ರತಿನಿತ್ಯ ಮಾಡಿ ಸೇವಿಸಬಹುದು.

 

೫. ಪಪಾಯ

ಪಪಾಯ ಹಣ್ಣನ್ನು ಜೀರ್ಣಕ್ರಿಯೆಗೆ ಅತ್ಯುತ್ತಮವಾದ ಹಣ್ಣು ಎಂದು ಪರಿಗಣಿಸಲಾಗಿದ್ದು, ಇದನ್ನು ಗ್ಯಾಸ್ ಸಮಸ್ಯೆಗೆ ಒಂದು ಪರಿಣಾಮಕಾರಿಯಾದ ಮನೆಮದ್ದು ಆಗಿ ಕೂಡ ಸೇವಿಸಬಹುದು. ನೀವು ನಿಮ್ಮ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪಪಾಯ ಹಣ್ಣನ್ನು ದಿನನಿತ್ಯ ಸೇವಿಸಬೇಕು.  

 

೬. ಅಡುಗೆ ಸೋಡಾ

1) ಒಂದು ಚಿಟಿಗೆಯಷ್ಟು ಅಡುಗೆ ಸೋಡಾವನ್ನು ಬೆಚ್ಚಗಿನ ನೀರಿಗೆ ಬೆರೆಸಿ ಕುಡಿಯಿರಿ.

2) ಅರ್ಧ ಚಮಚದಷ್ಟು ಅಡುಗೆ ಸೋಡಾವನ್ನು ಒಂದು ಲೋಟದಷ್ಟು ನಿಂಬೆ ರಸದೊಂದಿಗೆ ಬೆರೆಸಿ, ಅದನ್ನು ಕುಡಿದರೆ ಉತ್ತಮ ಫಲಿತಾಂಶ ಲಭಿಸುತ್ತದೆ.

 

೭. ಕೊತ್ತಂಬರಿ ಬೀಜಗಳು

ಗ್ಯಾಸ್ ಇಂದ ಉಂಟಾಗುವ ಎದೆ ಮತ್ತು ನೋವುಗಳಿಗೆ ಮನೆಮದ್ದಾಗಿ ನೀವು ನೆನಪಲ್ಲಿ ಇಡಲೇಬೇಕಾದದ್ದು ಕೊತ್ತಂಬರಿ ಬೀಜಗಳನ್ನ. ಕೊತ್ತಂಬರಿ ಬೀಜಗಳನ್ನ ಈ ಕಾರಣಕ್ಕೆ ಸೇವಿಸಬೇಕು ಎಂದಿದ್ದರೆ, ಒಂದು ಲೋಟದಷ್ಟು ಉಗುರು ಬೆಚ್ಚಗಿನ ನೀರಿಗೆ ಒಂದು ಚಮಚದಷ್ಟು ಕೊತ್ತಂಬರಿ ಬೀಜಗಳನ್ನ ಬೆರೆಸಿ ಸೇವಿಸಿ, ಪ್ರತಿದಿನ ಸೇವಿಸಬೇಕು. ಇಲ್ಲವಾದರೆ, ನೀವು ಪ್ರತಿದಿನ ಕೊತ್ತಂಬರಿ ಬೀಜಗಳನ್ನ ಒಳಗೊಂಡಿರುವ ಆಹಾರವನ್ನ ಸೇವಿಸದರೂ ಆಯಿತು.

 

೮. ಅರಿಶಿನ ಪುಡಿ

ಅರಿಷಿನ ಪುಡಿ ಗ್ಯಾಸ್ ಇಂದ ಉಂಟಾಗುವ ಎದೆ ಮತ್ತು ಬೆನ್ನು ನೋವನ್ನು ಶಮನ ಮಾಡಿರುವುದರಲ್ಲಿ ಎತ್ತಿದ ಕೈ. ಇದನ್ನು ಮದ್ದಾಗಿ  ಬಳಸುವುದು ತುಂಬಾನೇ ಸುಲಭ. ನೀವು ಮಾಡಬೇಕಿರುವುದು ಕೇವಲ ಒಂದು ಲೋಟ ನೀರಿಗೆ ಅರಿಶಿನ ಕೊಂಬನ್ನು ಬೆರೆಸಿ, ಆ ಮಿಶ್ರಣವನ್ನ ಚೆನ್ನಾಗಿ ಕುದಿಸಿ, ಕುಡಿಯುವುದು.

 

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon