Link copied!
Sign in / Sign up
1
Shares

ಗರ್ಭಧಾರಣೆ ಮತ್ತು ಸೆಕ್ಸ್ ಡ್ರೈವ್

ಹೆಂಗಸರು ಗರ್ಭಧಾರಣೆ ಸಮಯದಲ್ಲಿ ತಮ್ಮ ಲೈಂಗಿಕ ಆಸಕ್ತಿಯಲ್ಲಿ ಬದಲಾವಣೆ ಕಾಣುತ್ತಾರೆ. ಇದು ಸಂಪೂರ್ಣವಾಗಿ ಸಹಜ ಮತ್ತು ಒಂದು ನೈಸರ್ಗಿಕ ವಿದ್ಯಮಾನ ಆಗಿದೆ. ಲೈಂಗಿಕ ಆಸಕ್ತಿಯು ಹಾರ್ಮೋನ್ ಬಿಡುಗಡೆಯ ಮೇಲೆ ಅವಲಂಬಿತ ಆಗಿರುತ್ತದೆ. ಗರ್ಭಧಾರಣೆ ವೇಳೆ ಹೆಣ್ಣಿನ ಹಾರ್ಮೋನ್ ಗತಿಗಳಲ್ಲಿ ಏರುಪೇರು ಆಗುವುದರಿಂದ, ಅವಳ ಲೈಂಗಿಕ ಆಸಕ್ತಿಯಲ್ಲೂ ಏರುಪೇರು ಆಗುತ್ತದೆ. ಹಾಗಾಗಿ ನಿಮ್ಮ ಗರ್ಭಧಾರಣೆ ಸಮಯದಲ್ಲಿ ನಿಮಗೆ ಲೈಂಗಿಕ ಕ್ರಿಯೆ ಮಾಡಲು ಆಸೆ ಉಂಟಾದರೆ ಅದರಲ್ಲಿ ತಪ್ಪೇನಿಲ್ಲ. ನಿಮಗೆ ಬೇಕೆನಿಸಿದರೆ, ಯೋಚಿಸದೆ ಮುಂದುವರೆಯಿರಿ!

ಗರ್ಭಧಾರಣೆಯ ಮೂರು ತ್ರೈಮಾಸಿಕಗಳಲ್ಲಿ ಆಗುವ ಲೈಂಗಿಕ ಆಸಕ್ತಿಯಲ್ಲಿ ಆಗುವ ಬದಲಾವಣೆಗಳ ಬಗ್ಗೆ ಇಲ್ಲಿ ಬರೆದಿದ್ದೇವೆ ಓದಿ :

೧. ಮೊದಲ ತ್ರೈಮಾಸಿಕ

ಈ ಸಮಯದಲ್ಲಿ ಸಾಮಾನ್ಯವಾಗಿ ಹೆಂಗಸರಲ್ಲಿ ಬೆಳಗಿನ ಬೇನೆ, ತೇಗು, ಪದೇ ಪದೇ ಮೂತ್ರವಿಸರ್ಜನೆ ಮಾಡಬೇಕು ಅನಿಸುವ ಕಾರಣ ಹೆಂಗಸರಲ್ಲಿ ಲೈಂಗಿಕ ಆಸಕ್ತಿ ಅಷ್ಟಾಗಿ ಕಾಣಿಸಿಕೊಳ್ಳುವುದಿಲ್ಲ. ನೀವು ಈ ಸಮಯದಲ್ಲಿ ವಾಕರಿಕೆ ಹಾಗು ಆಯಾಸ ಕೂಡ ಅನುಭವಿಸುವ ಸಾಧ್ಯತೆಗಳು ಇದ್ದು, ಇದರಿಂದ ಲೈಂಗಿಕ ಆಸಕ್ತಿ ಮತ್ತಷ್ಟು ಕ್ಷೀಣಿಸುತ್ತದೆ. ಅಲ್ಲದೆ ಹೆಂಗಸರು ದೈಹಿಕವಾಗಿ ಹಾಗು ಮಾನಸಿಕವಾಗಿ ಆಯಾಸಗೊಳ್ಳುವುದರಿಂದ, ಅವರಿಗೆ ಆ ಮೂಡ್ ಬರುವುದಿಲ್ಲ. ಆದರೆ ನಿಮ್ಮ ಮೊದಲ ತ್ರೈಮಾಸಿಕದ ಕೊನೆಯಲ್ಲಿ ನಿಮ್ಮ ಹಾರ್ಮೋನ್ ಗಳ ಗತಿಯಲ್ಲಿ ಏರಿಕೆ ಆಗುವುದರಿಂದ ನಿಮ್ಮ ಲೈಂಗಿಕ ಆಸಕ್ತಿಯು ಹೆಚ್ಚುತ್ತದೆ.

೨. ಎರಡನೇ ತ್ರೈಮಾಸಿಕ

ಎರಡನೇ ತ್ರೈಮಾಸಿಕವು ನಿಮ್ಮ ಲೈಂಗಿಕ ಇಚ್ಚೆಗಳನ್ನ ಪೂರೈಸಿಕೊಳ್ಳಲು ಸೂಕ್ತ ಸಮಯ. ನಿಮ್ಮ ಯೋನಿಯ ಭಾಗದಲ್ಲಿ ಹಾಗು ಸ್ತನಗಳಲ್ಲಿ ಹೆಚ್ಚಿನ ರಕ್ತ ಸಂಚಾರ ಉಂಟಾಗುವ ಕಾರಣದಿಂದ ನೀವು ಬೇಗನೆ ಪ್ರಚೋದನೆಗೆ ಒಳಗಾಗಬಹುದು. ಅಲ್ಲದೆ ಈ ಸಮಯದಲ್ಲಿ ಹೆಂಗಸರು ಮುಂಚೆಗಿಂತ ಹೆಚ್ಚು ತಮ್ಮ ದೇಹದ ಬಗ್ಗೆ ವಿಶ್ವಾಸ ಹೊಂದಿರುತ್ತಾರೆ. ಅಷ್ಟೇ ಅಲ್ಲದೆ, ನೀವು ಜನನ ನಿಯಂತ್ರಣದ ಬಗ್ಗೆ ಏನು ತಲೆ ಕೆಡಿಸಿಕೊಳ್ಳುವ ಹಾಗೆ ಇಲ್ಲ! ಹೀಗಾಗಿ ನಿಮಗೆ ಮಾಡಬೇಕು ಅನಿಸಿದರೆ, ಮುನ್ನುಗ್ಗಿ!

೩. ಮೂರನೇ ತ್ರೈಮಾಸಿಕ

ಈ ಸಮಯದಲ್ಲಿ ಪುನಃ ಹೆಣ್ಣಿನ ಲೈಂಗಿಕ ಆಸಕ್ತಿಯಲ್ಲಿ ಇಳಿಕೆ ಆಗುತ್ತದೆ. ಬೆಳೆಯುತ್ತಿರುವ ಉದರ, ಹೆಚ್ಚಿತ್ತಿರುವ ತೂಕ ಹಾಗು ಬೆನ್ನು ನೋವಿನ ಕಾರಣ ಹೆಂಗಸರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಮನಸಾಗುವುದಿಲ್ಲ. ಅಲ್ಲದೆ ಈ ಸಮಯದಲ್ಲಿ ಹೆಂಗಸರು ವಾಕರಿಕೆ ಕೂಡ ಅನುಭವಿಸಬಹುದು. ದೇಹವು ಈ ಸಮಯದಲ್ಲಿ ಹೆರಿಗೆಗೆ ತಯಾರಾಗುತ್ತಿರುವ ಕಾರಣ, ಲೈಂಗಿಕ ಆಸಕ್ತಿಯ ಗಣನೀಯವಾಗಿ ಇಳಿಕೆ ಆಗುತ್ತದೆ.

ಲೈಂಗಿಕ ಆಸಕ್ತಿಯು ಹೆಣ್ಣಿನಿಂದ ಹೆಣ್ಣಿಗೆ ಹಾಗು ಗರ್ಭಧಾರಣೆ ಇಂದ ಗರ್ಭಧಾರಣೆಗೆ ಬದಲಾಗುತ್ತದೆ. ನಿಮ್ಮ ಲೈಂಗಿಕ ಆಸಕ್ತಿಯು ನಾವು ಮೇಲೆ ಹೇಳಿರುವುದಕ್ಕೆ ಹೊಂದದೆ ಇರಬಹುದು. ನಿಮ್ಮ ಪ್ರಕರಣದಲ್ಲಿ ಹೀಗೆ ಆಗಿದ್ದರೆ, ಚಿಂತಿಸಬೇಡಿ. ನಿಮ್ಮ ಬೇಕುಗಳನ್ನ, ನಿಮ್ಮ ಬೇಡಿಕೆಗಳನ್ನ ನಿಮ್ಮ ಸಂಗಾತಿಯ ಜೊತೆ ನಿಯಮಿತವಾಗಿ ಹಾಗು ಮುಕ್ತವಾಗಿ ಮಾತಾಡುವುದು ಅವಶ್ಯಕ. ಪರಸ್ಪರ ಒಬ್ಬರು ಇನ್ನೊಬ್ಬರ ಬೇಡಿಕೆಗಳನ್ನ ಅರಿಯುವುದು ತುಂಬಾನೇ ಮುಖ್ಯ. ನಿಮಗೆ ಮತ್ತೆ ಏನಾದರು ಗೊಂದಲಗಳು ಕಾಡಿದರೆ, ನಿಮ್ಮ ಹೆರಿಗೆ ತಜ್ಞರೊಂದಿಗೆ ಚರ್ಚಿಸಿ ಸಲಹೆಗಳನ್ನ ಪಡೆಯಿರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon