Link copied!
Sign in / Sign up
12
Shares

ಗರ್ಭಿಣಿಯರಿಗೆ ಯಾರೂ ಹೇಳದ ಸೂಪರ್ ಟ್ರಿಕ್ಸ್!

ನಿಜ ಒಪ್ಪಿಕೊಳ್ಳೋಣ - ಎಲ್ಲರಿಗೂ ಗೊತ್ತಿರುವಂತ ಮತ್ತು ಎಲ್ಲರೂ ಪದೇ ಪದೇ ಹೇಳುವಂತಹ “ಉಪಾಯಗಳು” ಆದ ತಲೆದಿಂಬುಗಳನ್ನ ಪಕ್ಕಕ್ಕೆ ಇಟ್ಟುಕೊಂಡು ಮಲಗಿ ಎನ್ನುವುದು ಅಥವಾ ಹಿಗ್ಗುತ್ತಿರುವ ಚರ್ಮಕ್ಕೆ ಪ್ರತಿದಿನ ತೆಂಗಿನ ಎಣ್ಣೆ ಹಚ್ಚಿ ಅಂತ ಹೇಳುವುದು ಒಳ್ಳೆಯದೇ ಮತ್ತು ಅದನ್ನ ಮಾಡುವುದು ಕೂಡ ಒಳ್ಳೆಯದೇ. ಆದರೆ, ಅಮ್ಮ ಆಗಲು ಹೊರಟಿರುವವರಿಗೆ ನಿಜವಾಗಲೂ ಬೇಕಿರುವುದು ಯಾರು ಹೇಳದಂತಹ ಉಪಾಯಗಳು! ಅವು ಎಂತಹ ಉಪಾಯಗಳು ಎಂದರೆ ನಮಗೆ ನಾವಾಗಿಯೇ ಅನುಭವದಿಂದ ತಿಳಿಯಲು ಆಗದಿರದಂತಹ ಉಪಾಯಗಳು ಮತ್ತು ಎಲ್ಲರೂ ಹೇಳುವ ಉಪಾಯಗಳು ಹೊರತಾಗಿನ ಉಪಾಯಗಳು. ಹಾಗಿದ್ದರೆ ಅಂತಹ ಉಪಾಯಗಳು ಏನೆಂದು ನಾವು ಹೇಳುತ್ತೀವಿ ನೋಡಿ.


೧. ಬೆಡ್ ಪಕ್ಕದಲ್ಲಿನ ಟೇಬಲ್ ಮೇಲೆ ತಿನಿಸುಗಳನ್ನ ಇಟ್ಟುಕೊಳ್ಳಿ

ಬೆಳಗಿನ ಬೇನೆ ಅಥವಾ “ಮಾರ್ನಿಂಗ್ ಸಿಕ್ನೆಸ್” ಎನ್ನುವುದು ನಿಜಕ್ಕೂ ಒಂದು ಅರ್ಥಹೀನ ಹೆಸರು. ಏಕೆಂದರೆ ಇದು ದಿನದ ಯಾವ ಸಮಯದಲ್ಲಾದರೂ ನಿಮಗೆ ಪೀಡಿಸಬಹುದು. ಆದರೆ ಬಹಳಷ್ಟು ಹೆಂಗಸರು ಇದನ್ನ ಬೆಳಗ್ಗೆ ಸಮಯದಲ್ಲಿ ಅನುಭವಿಸುತ್ತಾರೆ ಎಂಬ ಒಂದೇ ಕಾರಣಕ್ಕೆ ಇದನ್ನ ಮಾರ್ನಿಂಗ್ ಸಿಕ್ನೆಸ್ ಎಂದು ಕರೆಯುತ್ತಾರೆ. ನಿಮಗೆ ಬೆಳಗ್ಗೆ ಹೊತ್ತು ಕಾಣಿಸಿಕೊಳ್ಳುವುದಕ್ಕೆ ಮುಖ್ಯ ಕಾರಣ ನಿಮ್ಮ ಹೊಟ್ಟೆ ಆ ಸಮಯದಲ್ಲಿ ಖಾಲಿ ಇರುತ್ತದೆ ಎನ್ನುತ್ತಾರೆ ಪ್ರಸೂತಿ ತಜ್ಞರು. ಹೀಗಾಗಿ ನಿಮಗೆ ಮಧ್ಯರಾತ್ರಿ ಅಥವಾ ಮುಂಜಾನೆ ಎಚ್ಚರವಾದೊಡನೆ, ಏನಾದರು ಆರೋಗ್ಯಕರ ತಿನಿಸನ್ನು ಸೇವಿಸಿ. ಇದು ಮಾರ್ನಿಂಗ್ ಸಿಕ್ನೆಸ್ ಅನ್ನು ತಡೆಗಟ್ಟುತ್ತದೆ. ಅದು ಯಾವುದೇ ಆರೋಗ್ಯಕರ ಸ್ನ್ಯಾಕ್ ಆಗಿರಬಹುದು ಅಥವಾ ಹಣ್ಣು ಹಂಪಲು ಏನಾದರು ಆಗಿರಬಹುದು, ಅದು ನಿಮ್ಮ ಬೆಡ್ ಪಕ್ಕದಲ್ಲಿನ ಟೇಬಲ್ ಮೇಲೆಯೇ ಇರಲಿ.


೨. ಸ್ಪೋರ್ಟ್ಸ್ ಬ್ರಾ ಧರಿಸಿ

ಮೆಟರ್ನಿಟಿ ಬ್ರಾಗಳು ದುಬಾರಿ ಮತ್ತು ಅಷ್ಟೊಂದು ಅವಶ್ಯಕವೂ ಅಲ್ಲ. ಆದರೂ ಬಹಳಷ್ಟು ಜನರು ಇದನ್ನ ಖರೀದಿಸುತ್ತಾರೆ. ಆದರೆ ನೀವೇನಾದರೂ ಎದೆಹಾಲು ನೀಡುತ್ತಿದ್ದು, ಮೆಟರ್ನಿಟಿ ಬ್ರಾ ಖರೀದಿಸಬೇಕು ಎಂದುಕೊಂಡಿದ್ದರೆ, ಈ ಕೂಡಲೇ ಆ ಯೋಚನೆ ಬಿಟ್ಟು, ನಿಮಗೆ ಬೇಕಿರುವುದಕ್ಕಿಂತ ಸ್ವಲ್ಪ ಹೆಚ್ಚಿನ ಅಳತೆಯ ಸ್ಪೋರ್ಟ್ಸ್ ಬ್ರಾ ಖರೀದಿಸಿ. ನಿಮ್ಮ ಸ್ತನಗಳನ್ನ ಹಿಡಿದಿರಲು ಬೇಕಾದ ಬೆಂಬಲ ಮತ್ತು ಕಾಣಲಿಕ್ಕೆ ದೃಢತೆಯನ್ನ ಈ ಸ್ಪೋರ್ಟ್ಸ್ ಬ್ರಾ ತುಂಬಾ ಕಡಿಮೆ ವೆಚ್ಚದಲ್ಲೇ ನೀಡುತ್ತವೆ.


೩. ಎದೆಯುರಿ ಉಂಟಾದರೆ ಲಾಲಿಪಾಪ್ ಚೀಪಿರಿ

ಬಹಳಷ್ಟು ಹೆಂಗಸರು ಗರ್ಭಿಣಿ ಆಗಿರುವಾಗ ಅತಿಯಾದ ಎದೆಯುರಿ ಅನುಭವಿಸುತ್ತಾರೆ. ಅಲ್ಲದೆ ಮೊದಲ ಬಾರಿಗೆ ಗರ್ಭಧರಿಸುವ ಎಷ್ಟೊಂದು ಹೆಂಗಸರು ಅವರ ಜೀವನದಲ್ಲೇ ಮೊದಲ ಬಾರಿಗೆ ಅಂತಹ ಎದೆಯುರಿ ಕಾಣುತ್ತಾರೆ. ದೀರ್ಘಕಾಲದ ಎದೆಯುರಿ ಅನುಭವಿಸುತ್ತಿರುವ ನನ್ನ ಒಬ್ಬಳು ಸ್ನೇಹಿತೆಯ ಪ್ರಕಾರ ಲಾಲಿಪಾಪ್ ಅಥವಾ ಒಂದು ರುಪಾಯಿಗೆ ಸಿಗುವ ಯಾವುದೇ ಕ್ಯಾಂಡಿ ಚಾಕಲೇಟ್ (ಡೈರಿ ಮಿಲ್ಕ್ ಅಂತಹ ಚಾಕಲೇಟ್ ಅಲ್ಲ!) ಸೇವಿಸಿದರೆ, ತಕ್ಷಣಕ್ಕೆ ಎದೆಯುರಿ ಕಡಿಮೆ ಆಗುತ್ತದೆ. ಇದನ್ನ ನಾನು ಕೂಡ ಪ್ರಯತ್ನಿಸಿರುವ ಕಾರಣ, ಇದು ಜಾದುವಿನಂತೆ ಕೆಲಸ ಮಾಡುತ್ತದೆ ಎಂದು ನಿಮಗೆ ಭರವಸೆ ನೀಡಬಹುದು.


೪. ತಣ್ಣನೆ ಬ್ರಾ

ಸ್ತನದ ಭಾಗದಲ್ಲಿ ಬೆವರುವುದಕ್ಕಿಂತ ಹೆಚ್ಚು ಇರಿಸುಮುರಿಸು ಉಂಟುಮಾಡುವ ಮತ್ತು ಅಹಿತಕರ ಭಾವನೆ ಮತ್ತೊಂದಿಲ್ಲ. ಅದರಲ್ಲೂ ಮುಖ್ಯವಾಗಿ ನಿಮ್ಮ ಸ್ತನಗಳು ಬೆಳೆಯುತ್ತಿದ್ದರೆ, ನೋವಾಗಿದ್ದರೆ ಅಥವಾ ನೀವು ಇರುವ ಪ್ರದೇಶ ಬಿಸಿಲಿನಿಂದ ಕೂಡಿದ್ದರೆ, ನಿಮಗೆ ನಿಮ್ಮ ದೇಹದ ಉಷ್ಣಾಂಶ ಹೆಚ್ಚಾಗಿದೆ ಎಂದೆನಿಸಿ ಕಿರಿಕಿರಿ ಉಂಟಾಗಿ, ಬೇಸತ್ತು ಹೋಗುತ್ತೀರ. ಹೀಗಾಗಿ ನೀವು ನಿಮ್ಮ ಬ್ರಾ ಅನ್ನು ಫ್ರೀಜರ್/ ಫ್ರಿಡ್ಜ್ ಅಲ್ಲಿ ಇರಿಸಿ, ನಿಮಗೆ ನಿಮ್ಮ ದೇಹವು ಬಿಸಿಯಾಗುತ್ತಿದೆ ಎಂದೆನಿಸಿದಾಗ ಅಥವಾ ನೀವು ಬೆವರಲು ಶುರು ಮಾಡಿದಾಗ, ಈ ಬ್ರಾ ಹೊರತೆಗೆದು ಧರಿಸಿ. ಇದು ಕೇವಲ ತಣ್ಣಗೆ ಮಾಡುತ್ತದೆ ಅಲ್ಲದೆ, ನಿಮಗೆ ಸ್ತನಗಳಲ್ಲಿ ನೋವೇನಾದರೂ ಇದ್ದರೆ, ನಿಮ್ಮ ಬ್ರಾ ಒಂದು ಐಸ್-ಪ್ಯಾಕ್ ರೀತಿ ವರ್ತಿಸಿ, ಆ ನೋವನ್ನು ಕೂಡ ಕಡಿಮೆ  ಮಾಡುತ್ತದೆ!


೫. ವಾಂತಿ ಕಿಟ್ ಅನ್ನು ಸಿದ್ಧಮಾಡಿಕೊಂಡಿರಿ

ಯಾವುದಾದರು ಒಂದು ಹಂತದಲ್ಲಿ, “ಬೆಳಗಿನ” ಬೇನೆ ನಿಮಗೆ ದಿನದ ಯಾವ ಸಮಯದಲ್ಲಾದರೂ ನಿಮ್ಮ ಮೇಲೆ ದಾಳಿ ಮಾಡಬಹುದು. ಕೆಲವೊಮ್ಮೆ ನಿಮಗೆ ಯಾವುದರದ್ದಾದರೂ ಕಿಂಚಿತ್ತೂ ವಾಸನೆ ಬಂದರೂ ನೀವು ವಾಂತಿ ಮಾಡುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ ನೀವು ನಿಮ್ಮ ಗರ್ಭಧಾರಣೆ ಸಮಯ ಮುಗಿಯುವವರೆಗೂ ನಿಮ್ಮ ವ್ಯಾನಿಟಿ ಬ್ಯಾಗಿನಲ್ಲಿ ಬೇರೆ ವಸ್ತುಗಳ ಬದಲು ಒಂದು ಪ್ಲಾಸ್ಟಿಕ್ ಕವರ್, ಒಂದು ಸಣ್ಣ ಟೂತ್ ಬ್ರಷ್ ಮತ್ತು ಚಿಕ್ಕ ಪೇಸ್ಟ್ ಟ್ಯೂಬ್, ಟಿಶ್ಯೂ ಪೇಪರ್ ಅನ್ನು ಇಟ್ಟುಕೊಂಡೆ ಹೊರಗೆ ಹೋಗಿ ಅಥವಾ ಪ್ರಯಾಣಿಸಿ.  

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon