Link copied!
Sign in / Sign up
5
Shares

ಗರ್ಭಿಣಿಯರಿಗೆ ಅಗತ್ಯವಾಗಿರುವ ೬ ಮುಂಜಾಗರೂಕತಾ ಸಲಹೆಗಳು

ಗರ್ಭಕಾಲವೆನ್ನುವುದು ನಮಗೆ ಬಹಳ ಸಂತೋಷ ಹಾಗೂ ಆಹ್ಲಾದಕರ ಸಮಯ. (ಬೆಳಗಿನ ಸಂಕಟ ನರಗಳ ಸೆಳೆತ ಹಾಗೂ ಬೆವರುಗಳನ್ನು ಹೊರತುಪಡಿಸಿ) ಮಾತ್ರವಲ್ಲದೆ ಅತೀವ ಜಾಗರೂಕರಾಗಿರಬೇಕಾದ ಸಮಯವೂ ಹೌದು !!

ಗರ್ಭಿಣಿಯರು ಗಮನಿಸಬೇಕಾದ ಕೆಲವು ವಿಷಯಗಳ ಬಗ್ಗೆ ಚರ್ಚಿಸೋಣ

೧.ಕೇವಲ ಶರೀರದ ಹೊಸ ಉಬ್ಬುಗಳ ಬಗ್ಗೆ ಮಾತ್ರ ಗಮನಿಸಿ

ಪ್ರಯಾಣಿಸುವಾಗ ಮಾರ್ಗದಲ್ಲಿರುವ ಉಬ್ಬುಗಳನ್ನು ದೂರವಿಡಿ. ದಾರಿಯಲ್ಲಿರುವ ಹೊಂಡಗಳು ಹಾಗೂ ಸ್ಪೀಡ್ ಬ್ರೇಕುಗಳು ನಿಮ್ಮ ಪ್ರಯಾಣವನ್ನು ಸುಗಮವಾಗಿಸದು. ಇವುಗಳ ಮೇಲೆ ಪ್ರಯಾಣಿಸುವಾಗ ನಿಮ್ಮ ಶರೀರವು ಘರ್ಷಣೆಗೊಳಗಾಗುವುದು. ಈ ಘರ್ಷಣೆಯು ಮಗುವು ಉದರದಲ್ಲಿರುವ ಪುಟಾಣಿಗೂ ಹಾನಿಕರವಾಗಬಹುದು. ಇಂತಹ ದಾರಿಗಳ ಮೇಲಿನ ಪ್ರಯಾಣವನ್ನು ತಡೆಯಲಾಗದಿದ್ದರೆ ,ಬಹಳ ಮೆಲ್ಲನೆ ವಾಹನಗಳನ್ನು ಓಡಿಸುವುದು ಒಳ್ಳೆಯದು

೨.ಉತ್ಸಾಹ ಹಾಗೂ ಚೈತನ್ಯವನ್ನು ಸಂರಕ್ಷಿಸಿ

ಗರ್ಭಿಣಿಯರಿಗೆ ಆಯಾಸವೆನಿಸುವುದು ಸಾಮಾನ್ಯ. ಆದಕಾರಣ ಸಾಧ್ಯವಾದಷ್ಟು ಮೆಟ್ಟಿಲು ಹತ್ತುವುದನ್ನು ಕಡಿಮೆಗೊಳಿಸಿ ಎಲಿವೇಟರ್ ಅನ್ನು ಉಪಯೋಗಿಸಿ, ತುಂಬಾ ದೂರ ನಡೆಯಬೇಡಿ. ನಿಮ್ಮನ್ನು ಆಯಾಸಕ್ಕೊಳಪಡಿಸುವಂತಹ ತ್ರಾಸಬದ್ಧವಾದ ಕೆಲಸಗಳನ್ನು ಮಾಡದಿರಿ. ನಿಮ್ಮ ಚೈತನ್ಯವನ್ನು ಸಂರಕ್ಷಿಸಲು ಪ್ರಯತ್ನಿಸಿ.

೩.ಚಿಕ್ಕ ವಿರಾಮಗಳನ್ನು ತೆಗೆದುಕೊಳ್ಳಿ 

ಉದ್ಯೋಗಸ್ಥ ಮಹಿಳೆಯರಾಗಿದ್ದರೆ, ಪ್ರತಿ ಗಂಟೆಗಳಿಗೊಂದಾವರ್ತಿ, ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಸಹೋದ್ಯೋಗಿಗಳೊಂದಿಗೆ ಹರಟೆ ಹೊಡೆಯುವುದು ಅಥವಾ ಸಣ್ಣ ನಡೆಯುವಿಕೆಗಳಂತಹ, ಮನಸ್ಸು ಹಾಗೂ ಶರೀರಕ್ಕೆ ಮುದ ನೀಡುವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಹಾಗೆ ನಡೆಯುವಾಗ ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸರಿಯಾಗಿ ವೀಕ್ಷಿಸಿ. ನೀವು ಎಡವಿ ಬೀಳದಂತೆ ಜಾಗ್ರತೆ ವಹಿಸಿ.

೪.ನೀರು ಹಾಗೂ ಆಹಾರವನ್ನು ಜತೆಯಲ್ಲಿ ತೆಗೆದುಕೊಳ್ಳಲು ಮರೆಯದಿರಿ

ಮನೆಯಿಂದ ಹೊರಬೀಳುವಾಗ ನೀರಿನ ಬಾಟಲಿ ಮತ್ತು ಮನೆಯಲ್ಲಿ ತಯಾರಿಸಿದ ಕುರುಕು ತಿಂಡಿಗಳನ್ನು ಜತೆಗೆ ಒಯ್ದುಕೊಳ್ಳಿ. ಬಾಯಿ ಚಪಲ ತೋರಿದಾಗ, ಹೊರಗಿನ ಆಹಾರಗಳನ್ನು ಸೇವಿಸಿ ಅಜೀರ್ಣ ಅಥವಾ ಸೋಂಕು ಮೊದಲಾದ ತೊಂದರೆಗೊಳಗಾಗುವುದಕ್ಕಿಂತ, ಮನೆಯಿಂದ ತಯಾರಿಸಿದ ರುಚಿಯಾದ ಖಾದ್ಯಗಳ ಸೇವನೆ ಆರೋಗ್ಯಕ್ಕೆ ಉತ್ತಮ.

೫.ನೀರನ್ನು ಕುಡಿಯದಿರಬೇಡಿ

ನೀವು ಗರ್ಭಿಣಿಯಾಗುವ ಮೊದಲು ನೀರು ಕುಡಿಯುವ ಕುಡಿಯದೇ ಇರುವ ವ್ಯಕ್ತಿಯಾಗಿದ್ದರೆ, ನಿಮ್ಮ ಅಭ್ಯಾಸಕ್ಕೆ ಇತಿಶ್ರೀ ಹಾಡಬೇಕಾದ ಸಮಯವಿದು. ಧಾರಾಳ ನೀರು ಅಥವಾ ಹಣ್ಣಿನ ರಸದಂತಹ ದ್ರವಾಹಾರಗಳನ್ನು ಸೇವಿಸುವುದು ನಿಮ್ಮ ಶರೀರವು ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಯುವುದು ಮಾತ್ರವಲ್ಲದೇ, ಸೆಳೆತ, ಅಪಾನವಾಯು ಹಾಗೂ ಓಕರಿಕೆಗಳಂತಹ ತೊಂದರೆಗಳಿಂದಲೂ ರಕ್ಷಿಸುತ್ತದೆ. 

೬.ಸೇವಿಸುವ ಆಹಾರದ ಬಗ್ಗೆ ನಿಗಾವಹಿಸಿ 

ಮರ್ಕುರಿಯ ಪ್ರಮಾಣವು ಅಧಿಕವಾಗಿರುವ, ಪಾಶ್ಚರೀಕರಿಸದ ಹಾಲುಗಳು, ಪಪಾಯಗಳಂತಹ ಗರ್ಭಿಣಿಯರಿಗೆ ನಿಷೇಧಿಸಲಾದ ಕೆಲವು ಆಹಾರಗಳಿವೆ. ತಾಜಾ ಹಣ್ಣುಗಳು ಅಥವಾ ತರಕಾರಿಗಳನ್ನು ಸರಿಯಾಗಿ ತೊಳೆದುಕೊಂಡ ಬಳಿಕವಷ್ಟೇ ಸೇವಿಸಿರಿ.ತರಕಾರಿಗಳು ಅಗತ್ಯಕ್ಕೆ ತಕ್ಕಷ್ಟು ಬೇಯಿಸಲ್ಪಟ್ಟಿವೆಯೆಂಬುದನ್ನು ಖಚಿತಪಡಿಸಿಕೊಳ್ಳಿ. ಎಕ್ಸ್ಪೈರಿ ಡೇಟ್ ಕಳೆದ ಆಹಾರ ಪದಾರ್ಥಗಳು, ಅದು ಕೇವಲ ಒಂದು ದಿನವಾಗಿದ್ದರು ಕೂಡಾ ಖರೀದಿಸಬೇಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon