Link copied!
Sign in / Sign up
16
Shares

ಗರ್ಭಿಣಿಯರ ಸ್ತನಗಳ ಬಗ್ಗೆ ನಿಮಗೆ ಯಾರು ಹೇಳದ 7 ಚಿತ್ತಾಕರ್ಷಕ ಸಂಗತಿಗಳು

ಒಹ್ ನೀವು ಮಗುವನ್ನು ಅಪೇಕ್ಷಿಸುತ್ತಿದ್ದೀರಾ? ಬಹಳ ಸಂತೋಷ. ನಿಮ್ಮ ಖುಷಿಗೆ ಪಾರವೇ ಇಲ್ಲ, ಇದೊಂದು ಪವಾಡವೇ ಅಂತೆ ಭಾಸವಗಿರಬಹುದು. ಆದರೆ ವಿಷಯ ಏನಪ್ಪಾ ಅಂದರೆ, ನಿಮ್ಮ ದೇಹ ತುಂಬಾ ಕಮ್ಮಿ ಅವಧಿಯಲ್ಲಿ ತುಂಬಾನೇ ಬದಲಾವಣೆ ಕಾಣುತ್ತದೆ. ಅದರಲ್ಲಿ ಎಷ್ಟೊಂದು ಬದಲಾವಣೆಗಳು, ನಿಮಗೆ ಘಾಸಿಗೊಲ್ಲುವಂತೆ ಮಾಡುತ್ತವೆ. ಇಂತವುಗಳಲ್ಲಿ ಕೆಲವೊಂದು ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ತುಂಬಾನೇ ಕಷ್ಟ, ಅದರಲ್ಲೂ ನಿಮ್ಮ ಗುಪ್ತ ಅಂಗಗಳಲ್ಲಿ ಆಗುವ ಬದಲಾವಣೆ. ಹೌದು, ನಾವು ಹೇಳುತ್ತಿರುವುದು ನಿಮ್ಮ ಸ್ತನಗಳ ಬಗ್ಗೆ. ನಿಮ್ಮ ಸ್ತನಗಳು ನೀವು ಗರ್ಬಿಣಿ ಇದ್ದಾಗ, ಕ್ಷಿಪ್ರ ವೇಗದಲ್ಲಿ ಬದಲಾವಣೆಗಳನ್ನು ಕಾಣುತ್ತವೆ.

ನಿಮ್ಮನ್ನು ಇರಿಸುಮುರಿಸಿಗೆ ಈಡು ಮಾಡುವ ಅಂತಹ ೭ ಅಂಶಗಳ ಪಟ್ಟಿ ಇಲ್ಲಿದೆ, ಓದಿ :

೧. ದೊಡ್ಡದು ಅಂದ ಮಾತ್ರಕ್ಕೆ ಅದು ಒಳ್ಳೆಯದು ಅಂತಲ್ಲ  

ನಿಮ್ಮ ಸ್ತನಗಳ ಗಾತ್ರ ಹೆಚ್ಚುತ್ತದೆ, ಸರಿಯಾಗಿ ಹೇಳಬೇಕೆಂದರೆ ತುಂಬಾನೇ ಹೆಚ್ಚುತ್ತದೆ. ಒಂದೆರೆಡು ಅಳತೆಯಷ್ಟು ದೊಡ್ಡದಾಗಬಹುದು. ಈ ಬದಲಾವಣೆಯನ್ನು ನೀವು ಗರ್ಭಧಾರಣೆಯ ಆರನೇ ತಿಂಗಳಿನಿಂದ ಕಾಣಬಹುದು. ಆದರೆ ಇದರಲ್ಲಿ ಹಿಗ್ಗುವಂತ ವಿಷಯವೇನಿಲ್ಲ.ಹೆಚ್ಚಿದ ಸ್ತನಗಳ ಗಾತ್ರ ನಿಮ್ಮ ಬೆನ್ನು ನೋವಿಗೆ ಕಾರಣವಾಗಬಹುದು. ಎಷ್ಟು ಅಂದರೆ, ನೀವು ಅದನ್ನ ಬೈದುಕೊಂಡು, ಮೊದಲಿನಂತೆ ಆಗಲಿ ಎಂದು ಆಶಿಸುತ್ತೀರ. ಆಮೇಲೆ ಇನ್ನೇನು ಅಂದಿರಾ? ಗಾತ್ರ ಹೆಚ್ಚಿದರಿಂದ ಸ್ತನಗಳ ಮೇಲಿನ ಚರ್ಮ ಹಿಗ್ಗಿ, ನಿಮಗೆ ಕೆರೆತ ಉಂಟು ಮಾಡುಬಹುದು. ಒಹ್ ಹಾಗಂತ ಮತ್ತೆ ನೀವು ಕೆರೆದುಕೊಂಡರೆ ಮುಗಿದೇ ಹೋಯಿತು, ಅಲ್ಲಿ ಹಿಗ್ಗಿದ ಗುರುತುಗಳು ಹಾಗೆಯೇ ಉಳಿದುಬಿಡುತ್ತವೆ.

೨. ಗಾಢವಾದಷ್ಟು ಪರಕೀಯ  

ನಿಮ್ಮ ತೊಟ್ಟುಗಳೂ ಕೂಡ ಗಾತ್ರದಲ್ಲಿ ಹೆಚ್ಚುತ್ತದೆ ಹಾಗು ಅವುಗಳ ಬಣ್ಣ ಗಾಢವಾಗುತ್ತ ಹೋಗುತ್ತದೆ. ಗಾಢವಾದ ಬಣ್ಣ ಮಗುವಿಗೆ ಗುರುತಿಸಲು ಸಹಾಯ ಮಾಡುತ್ತದೆ. ಆದರೆ, ತಾಯಂದಿರಿಗೆ ಇದೇನು ಉಪಕಾರಿ ಅಲ್ಲ. ನಿಮಗೆ ಅದನ್ನು ನೋಡಿದಷ್ಟು ಅನ್ಯತಾಭಾವ ಆವರಿಸುತ್ತದೆ. ಇಷ್ಟೇ ಸಾಲದೆಂದು ನಿಮ್ಮನ್ನು ಇನ್ನಷ್ಟು ಗಾಬರಿಗೊಳಿಸಲು ನಿಮ್ಮ ಸ್ತನಗಳ ಕೆಳಗಿರುವ ನರಗಳು ಕೂಡ ಗೋಚರವಾಗಬಹುದು. ನಿಮ್ಮ ಮುದ್ದು ಕಂದಮ್ಮನಿಗಾಗಿ ನೀವು ಇದನ್ನೆಲ್ಲಾ ಸಹಿಸಿಕೊಲ್ಲಲೇ ಬೇಕು.

೩. ಇದು ಉಬ್ಬು ತಗ್ಗಿನ ಸವಾರಿ ! 

ನಿಮ್ಮ ತೊಟ್ಟುಗಳ ಸುತ್ತ ಇರುವ ಗಾಢ ಬಣ್ಣದ ಪ್ರದೇಶ - ಅಂದರೆ ಕಿರುಗುಂಡಿ. ಈ ಕಿರುಗುಂಡಿಯಲ್ಲಿ ಹಲವು ಉಬ್ಬುಗಳ ಬೆಳವಣಿಗೆಯಾಗುತ್ತವೆ. ಇವು ನೋಡಲಿಕ್ಕೆ  ಕಾಣಿಸದಿರುವಷ್ಟು ಚಿಕ್ಕವಿರುತ್ತವೆ. ಆದರೆ ಅದನ್ನು ನೀವು ನೋಡಿಯೇ ನೋಡುತ್ತೀರಾ ! ಇವುಗಳ ಕೆಲಸ ಏನೆಂದು ಹೇಳಿದರೆ, ಎಣ್ಣೆಯನ್ನು ಹೊರಸೂಸುವುದು. ಕೇಳೋದಕ್ಕೆ ಅಹಿತಕರವಾಗಿ ಅನ್ನುತ್ತೀರಾ? ಹೌದು. ಆದರೆ ಇವುಗಳು ಯಾವಾಗಲು ಹೊರಸೂಸುವುದಿಲ್ಲ, ಆದರೂ ನಿಮಗೆ ಇವು ಇರಿಸುಮುರಿಸು ಉಂಟು ಮಾಡುತ್ತವೆ.

೪. ಸೋರಿಕೆಯನ್ನು ಯಾರು ಇಚ್ಚಿಸುವುದಿಲ್ಲ  

ನಿಮ್ಮ ಗರ್ಭಧಾರಣೆಯ ಮೂರನೇ ತಿಂಗಳಿನಲ್ಲಿ, ನಿಮ್ಮ ಸ್ತನಗಳು, ಹಳದಿ ಅಂಟು ಪದಾರ್ಥ ಉತ್ಪಾದಿಸುತ್ತವೆ. ಅದುವೇ ಕಾಲೋಸ್ತ್ರುಂ. ಇದೆಲ್ಲ ಆಗುವುದು ನಿಮ್ಮ ಒಳ್ಳೆಯದಕ್ಕೆ ಹಾಗು ನಿಮ್ಮ ಕಂದಮ್ಮನ ಒಳಿತಿಗಾಗಿ. ಆದರೆ, ಇದು ಹೊರಸೂಸಿದಾಗ ನಿಮ್ಮ ಒಳರವಿಕೆಗೆ ಅಂಟಬಹುದು ಹಾಗು ಇದರಿಂದ ನೀವು ಮುಜುಗರಕ್ಕೆ ಈಡಾಗಬಹುದು. ಅದಕ್ಕೆ ಹೇಳುವುದು ಜನ್ಮ ನೀಡುವುದು ಸುಲಭದ ಮಾತಲ್ಲ ಅಂತ.

೫. ನನ್ನ ಕೋಮಲವಾಗಿ ಪ್ರೀತಿಸು

 ನಿಮ್ಮ ಸ್ತನಗಳು ತಂಬಾ ಕೋಮಲವಾದಂತೆ ಹಾಗು ಯಾವಾಗಲು ನೋಯುತ್ತಿರುವಂತೆ ನಿಮಗೆ ಭಾಸವಾಗಬಹುದು. ಇದು ನಿಮ್ಮ ಗರ್ಭಧಾರಣೆಯ ಬಹುತೇಕ ಹಂತಗಳಿಂದ ಹಿಡಿದು ಎದೆಹಾಲು ನೀಡುವ ಹಂತದವರೆಗೂ ಕಾಣಿಸಿಕೊಳ್ಳುತ್ತದೆ. ಜನ್ಮ ನೀಡುತ್ತಿರುವುದಕ್ಕೆ ನಿಮಗೆ ಶಿಕ್ಷೆಯನ್ನು ಉಡುಗೊರೆಯಾಗಿ ನೀಡಿದನ ದೇವರು ಎಂದು ನಿಮಗೆ ಅನಿಸಿಬಿಡಬಹುದು. ಆದರೆ, ಇದು ಎಲ್ಲರಲ್ಲೂ ಸಾಮಾನ್ಯ ಎಂಬುದನ್ನು ಯಾವಾಗಲು ನೆನಪಿಡಿ.

 ೬. ಏರುಪೇರು ನಿಮಗೆ ನಿಲುಕುವುದಿಲ್ಲ

ಹೌದು, ಎರಡು ಸ್ತನಗಳು ಯಾವಾಗಲೂ ಗಾತ್ರದಲ್ಲಿ ಸಮತೆ ಹೊಂದಿರಬೇಕು ಎಂದೇನಿಲ್ಲ. ಆದರೆ, ಗರ್ಭಿಣಿ ಆದಾಗ ಒಂದು ಸ್ತನದ ಗಾತ್ರ ಮತ್ತೊಂದರ ಗಾತ್ರಕ್ಕಿಂತ ತುಂಬಾನೇ ಹೆಚ್ಚು ಕಮ್ಮಿ ಆಗಬಹುದು. ನಿಮ್ಮ ಮಗು ಒಂದು ಸ್ತನಕ್ಕೆ ಮಾತ್ರ ಮುಗಿಬೀಳಬಹುದು, ಇದಕ್ಕೆ ಕಾರಣ ಕಿವಿಯ ಸೋಂಕು ಕೂಡಾ ಆಗಿರಬಹುದು. ಆದರೆ, ಇದು ಹಾಲಿನ ಉತ್ಪಾದನೆಯಲ್ಲಿ ಏರುಪೇರನ್ನು ಉಂಟು ಮಾಡಬಹುದು. ಇದಕ್ಕೆ ಪರಿಹಾರ ಅಂದರೆ, ನಿಮ್ಮ ಸಣ್ಣ ಸ್ತನದಿಂದ ಹಾಲುಣಿಸುವುದನ್ನು ಮಗುವಿಗೆ ಅಭ್ಯಾಸ ಮಾಡಿಸಿ. ಕೇಳಲಿಕ್ಕೆ ಇದು ಭಯ ಹುಟ್ಟಿಸಬಹುದು, ಆದರೆ ಸುಲಭ ಉಪಾಯವೇ ಇದು !

೭. ಗಂಟುಗಳನ್ನು ಬಿಚ್ಚಿ

ಗಂಟುಗಳು ನಿಮ್ಮ ಸ್ತನಗಳ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು. ಇನ್ನು ಕಠಿಣ ಶಿಕ್ಷೆಯಂತೆ, ಮಗು ಹಾಲು ಕುಡಿಯುವುದಕ್ಕೆ ನಿರಾಕರಿಸಿದರೆ, ಈ ಸಮಸ್ಯೆ ಉಲ್ಬಣವಾಗಬಹುದು. ಇದನ್ನು ಸರಿಪಡಿಸಲು ನಿಮ್ಮ ಮಗು ಅದರ ಪಾಲಿನ ಅಷ್ಟೂ ಹಾಲು ಸೇವಿಸುವಂತೆ ಮಾಡಿ, ಉಳಿದ ಹಾಲನ್ನು ನೀವಾಗಿಯೇ ಹಿಸುಕಿ ಹೊರತೆಗಿಯುವುದು.

 ಹೌದು ಇದು ಕಷ್ಟವೇ ಇರಬಹುದು. ನೋಡಲಿಕ್ಕೆ ಕ್ರೂರ, ಕಠಿಣ ಎನಿಸಬಹುದು. ಆದರೆ ಅಮ್ಮ, ನೀನು ಒಂದು ಅಮೂಲ್ಯ ಜೀವಕ್ಕೆ ಜನ್ಮ ನೀಡುತ್ತಿದ್ದೀಯ. ನಿನ್ನ ಮಗುವಿನ ಬೆಲೆ ಕಟ್ಟಲಾಗದ ಒಂದು ಸಣ್ಣ ನಗು, ಇವೆಲ್ಲವೂ ಏನು ಇಲ್ಲ ಅನಿಸುವಂತೆ ಮರೆಸಿಬಿಡುತ್ತದೆ!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon