Link copied!
Sign in / Sign up
4
Shares

ಗರ್ಭಧರಿಸಿದ ದಿನದಿಂದ ಮಹಿಳೆಯರ ಜೀವನ ಶೈಲಿ ಹೀಗಿರಲಿ!

ಗರ್ಭನಿಂತ ಬಳಿಕ ಮಹಿಳೆಯ ದೇಹದಲ್ಲಿ ಹಲವಾರು ಬದಲಾವಣೆಗಳಾಗುತ್ತವೆ. ಕೆಲವು ರಸದೂತಗಳ ಸ್ರವಿಕೆಯ ಕಾರಣ, ವಿಶೇಷವಾಗಿ ಈಸ್ಟ್ರೋಜೆನ್ ಹಾಗೂ ಪ್ರೊಜೆಸ್ಟರಾನ್ ಎಂಬ ರಸದೂತಗಳು ದೈಹಿಕ ಹಾಗೂ ಮಾನಸಿಕ ಬದಲಾವಣೆಗಳಿಗೆ ಕಾರಣವಾಗುತ್ತವೆ. ಗರ್ಭಾವಸ್ಥೆಯ ವಿವಿಧ ಹಂತಗಳಲ್ಲಿ ಗರ್ಭವತಿಯ ಮನೋಭಾವ ಬದಲಾಗುತ್ತಾ ಹೋಗುತ್ತದೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ತಮ್ಮ ದೇಹದಲ್ಲಿ ಮತ್ತು ಮಾನಸಿಕವಾಗಿ ಹಲವಾರು ಸವಾಲುಗಳನ್ನು ಎದುರಿಸಬೇಕು. ಇಲ್ಲಿರುವ ಕೆಲವು ಸಲಹೆಗಳನ್ನು ಪಾಲಿಸುವುದರಿಂದ ಗರ್ಭಾವಸ್ಥೆಯನ್ನು ಆರಾಮದಾಯಕವಾಗಿ ಮುಗಿಸಬಹುದು.

೧.ಆಹಾರ

ಗರ್ಭಾವಸ್ಥೆಯ ದಿನದಿಂದ ಮಹಿಳೆಯ ದೇಹದಲ್ಲಿ ಹಾರ್ಮೋನುಗಳ ಬದಲಾವಣೆ, ರಸದೂತಗಳ ಸ್ರವಿಕೆ ಮುಂತಾದ ಬದಲಾವಣೆಗಳು ಕಂಡು ಬರುವುದು ನಿಮಗೆ ತಿಳಿದಿರುವ ವಿಷಯ. ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಅರೋಗ್ಯ ಕಾಪಾಡಿಕೊಳ್ಳಲು, ಮಗುವಿನ ಸರಿಯಾದ ಪೋಷಣೆಗಾಗಿ ಆರೋಗ್ಯಕರ ಆಹಾರ ಸೇವನೆ ಬಹಳ ಮುಖ್ಯ.

೨.ನೆಮ್ಮದಿ

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾಗಿ ಮಹಿಳೆಯರಲ್ಲಿ ಒತ್ತಡ ಕಂಡು ಬರುತ್ತದೆ. ಇದು ಅವರ ದೇಹದಲ್ಲಾಗುವ ಬದಲಾವಣೆ ಅಥವಾ ದುರ್ಬಲ ಮನಸ್ಥಿತಿಯ ಪರಿಣಾಮವಿರಬಹುದು. ಇಂತಹ ಸಮಯದಲ್ಲಿ ಸುಲಭವಾಗಿರುವ ವ್ಯಾಯಾಮ ಮತ್ತು ದಿನಕ್ಕೆ ಎರಡು ಬಾರಿ ಧ್ಯಾನ ಮಾಡುವುದು ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ದೈಹಿಕ ಸ್ಥಿತಿಗೂ ಸಹಾಯ ಮಾಡುತ್ತದೆ.

೩.ವಿಶ್ರಾಂತಿ

ಈ ಸಮಯದಲ್ಲಿ ನಿಮ್ಮ ದೇಹದೊಳಗಡೆ ಮಗುವಿನ ಪೋಷಣೆ ಮತ್ತು ಬೆಳವೆಣಿಗೆಗೆ ಸಹಾಯವಾಗಲು ಹಲವು ಕಾರ್ಯಗಳು ನಿರಂತರವಾಗಿ ನಡೆಯುತ್ತಿರುತ್ತವೆ. ನೀವು ಹೆಚ್ಚು ಕೆಲಸ ಮಾಡಿದಷ್ಟು ದೇಹದ ಒಳಗಡೆ ನಡೆಯುವ ಕೆಲವು ಕ್ರಿಯೆಗಳಿಗೆ ಕಷ್ಟವಾಗುತ್ತದೆ. ಮತ್ತು ಬಿಡುವಿಲ್ಲದ ಕೆಲಸ ಮಗುವಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಈ ಸಮಯದಲ್ಲಿ ಆದಷ್ಟು ಹೆಚ್ಚು ವಿಶ್ರಾಂತಿ ಪಡೆದು ಸುಲಭ ಕೆಲಸ ಮಾಡುವುದು ಒಳ್ಳೆಯದು.

೪.ವ್ಯಾಯಾಮ

ಹೆರಿಗೆ ಸಮಯ ಸುಲಭವಾಗಲು ಮತ್ತು ನಿಮ್ಮ ಮತ್ತು ಮಗುವಿನ ಅರೋಗ್ಯ ವೃದ್ಧಿಯಾಗಲು ವ್ಯಾಯಾಮ ಸಹಾಯ ಮಾಡುತ್ತದೆ. ನೆನಪಿರಲಿ ಈ ಸಮಯದಲ್ಲಿ ಕಠಿಣ ವ್ಯಾಯಾಮ ನಿಮ್ಮ ಮಗುವಿಗೆ ತೊಂದರೆಯನ್ನು ಮಾಡಬಹುದು ಅಥವಾ ಗರ್ಭಪಾತಕ್ಕೆ ದಾರಿಯಾಗಬಹುದು. ವ್ಯಾಯಾಮ ಈ ಸಮಯದಲ್ಲಿ ನಿಮಗೆ ಆರಾಮದಾಯಕವಾಗಿದ್ದು ದೇಹಕ್ಕೆ ವಿಶ್ರಾಂತಿ ಸಿಗುವಂತಿರಬೇಕು.

೫.ಒಳ್ಳೆಯ ಹವ್ಯಾಸ

ನೆನಪಿರಲಿ ನೀವು ಈ ಸಮಯದಲ್ಲಿ ಮಾಡುತ್ತಿರುವ ಕೆಲಸ ಮತ್ತು ನಡವಳಿಕೆಯನ್ನು ನಿಮ್ಮ ಮಗು ಗರ್ಭದಿಂದಲೇ ಗಮನಿಸುತ್ತಿರುತ್ತದೆ. ಈ ಸಮಯದಲ್ಲಿ ಸುಮಧುರ ಸಂಗೀತ ಕೇಳುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು ಮಗುವಿನಲ್ಲಿ ಈಗಿನಿಂದಲೇ ಒಳ್ಳೆಯ ಹವ್ಯಾಸಗಳನ್ನು ಬೆಳೆಸಲು ಸಹಾಯವಾಗುತ್ತದೆ.

೬.ಮುನ್ನೆಚ್ಚರಿಕೆ

ಈ ಸಮಯದಲ್ಲಿ, ಪ್ರತಿರಕ್ಷಣಾ ವ್ಯವಸ್ಥೆ ನಿಮ್ಮ ದೇಹದಲ್ಲಿ ಕಡಿಮೆ ಇರುವುದರಿಂದ ಸೋಂಕುಗಳಿಗೆ ಬೇಗನೆ ಗುರಿಯಾಗಬಹುದು. ಮತ್ತು ಹೊರಗಿನ ಬದಲಾಗುತ್ತಿರುವ ವಾತಾವರಣವು ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು. ಆದ್ದರಿಂದ ಆದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಹೆಚ್ಚು ಪೌಷ್ಟಿಕಾಂಶಗಳನ್ನು ಸೇವಿಸುವುದು ಪ್ರತಿ ರಕ್ಷಣಾ ವ್ಯವಸ್ಥೆಯನ್ನು ನಿಮ್ಮ ದೇಹದಲ್ಲಿ ಹೆಚ್ಚುಸುವಲ್ಲಿ ಸಹಾಯಕಾರಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon