Link copied!
Sign in / Sign up
4
Shares

ಗರ್ಭಿಣಿಯರ ಬಗೆಗಿನ ಈ ನಂಬಿಕೆಗಳು ನಿಮ್ಮನ್ನು ತಲೆಚಚ್ಚಿಕೊಳ್ಳುವಂತೆ ಮಾಡುತ್ತದೆ!

ನೀವು ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ನಿಮ್ಮ ಮನೆಯಲ್ಲಿ ಎಲ್ಲರಿಗು ಸಂತೋಷದ ಕ್ಷಣ, ಅಂದಿನಿಂದ ನಿಮ್ಮನ್ನು ನೋಡಿಕೊಳ್ಳುವ ಪರಿಯೇ ಬೇರೆ, ಕೆಲವರು ನಿಮಗೆ ಯಾವ ಮಗು ಇಷ್ಟ, ನಿಮ್ಮ ಪತಿಗೆ ಯಾವ ಮಗು ಇಷ್ಟ, ಯಾವ ಮಗುವನ್ನು ನೀವು ಬಯಸುತ್ತಿದ್ದೀರಾ? ಎಂದು ಕೇಳುವುದು ಸಾಮಾನ್ಯ. ಆದರೆ ಕೆಲವರು ನಿಮಗೆ ಆಗುತ್ತಿರುವ ಕೆಲವು ವ್ಯತ್ಯಾಸ ಅಥವಾ ನಿಮ್ಮ ಬಯಕೆ, ನಡವಳಿಕೆ ನೋಡಿ ನಿಮ್ಮ ಗರ್ಭದಲ್ಲಿರುವ ಮಗುವು ಯಾವುದೆಂದು ಊಹಿಸಿ ಹೇಳುತ್ತಾರೆ, ಅದು ನಿಮಗೆ ತಿಳಿದಿದೆಯೇ? ತಿಳಿಯಲು ಇದನ್ನು ಓದಿ.

ಬಯಕೆಗಳು

ನೀವು ಖಾರದ ಪದಾರ್ಥಗಳನ್ನು ಹೆಚ್ಚು ಇಷ್ಟಪಟ್ಟರೆ, ನಿಮ್ಮ ಉದರದಲ್ಲಿರುವ ಮಗು ಹೆಣ್ಣು. ಅಥವಾ ನಿಮ್ಮ ಗರ್ಭಾವಸ್ಥೆಯಲ್ಲಿ ಸಿಹಿ ತಿನಿಸುಗಳನ್ನು ಹೆಚ್ಚಾಗಿ ಬಯಸಿದರೆ ನೀವು ಶೀಘ್ರದಲ್ಲೇ ಗಂಡು ಮಗುವಿನ ತಾಯಿಯಾಗುವಿರಿ.

ತಾಯಿ ೧: ನಾನು ನನ್ನ ಗರ್ಭಾವಸ್ಥೆಯಲ್ಲಿ ಮಾತ್ರ ಸಿಹಿ ತಿನಿಸಿಗಳನ್ನು ತಿನ್ನಲು ಬಯಸಿದೆ, ನನಗೆ ತಿಳಿದಿಲ್ಲ ಏಕೆ ನಾನು ಸಿಹಿ ತಿನಿಸುಗಳನ್ನು ತಿನ್ನಲು ಬಯಸಿದೆ ಎಂದು, ಕೆಲವರು ನಿನಗೆ ಗಂಡು ಮಗು ಜನಿಸುತ್ತದೆ, ಅದಕ್ಕೆ ಈ ತರಹದ ಬಯಕೆ ಎಂದು, ಆದರೆ ಮಗು ಜನಿಸಿದ ಮೇಲೆ ನನಗೆ ಖಚಿತವಾಯಿತು ಅದು ನಾನು ಬಯಸುತ್ತಿದ್ದ ಹೆಣ್ಣು ಮಗಳು ಎಂದು, ಆದರೆ ಅವಳು ಈಗ ಸಿಹಿ ತಿನಿಸುಗಳನ್ನು ತಿನ್ನಲು ಇಷ್ಟ ಪಡುವುದಿಲ್ಲ.

ತಾಯಿ ೨: ನನಗೆ ಸಿಹಿ, ಖಾರ ಎಂದು ಬೇಧವಿಲ್ಲ, ಯಾವಾಗ ತಿನ್ನಬೇಕು ಎನಿಸುತ್ತದೆ ಅವಾಗ ಬೇಕೆನಿಸಿದ ಪದಾರ್ಥಗಳನ್ನು ಸೇವಿಸುತ್ತಿದ್ದೆ, ಆದರೆ ಗರ್ಭಾವಸ್ಥೆಯಲ್ಲಿ ನನಗೆ ಹೆಚ್ಚು ಸಿಹಿ ತಿಂಡಿಗಳು ಇಷ್ಟವಾಗುತ್ತಿದ್ದವು, ಕೆಲವರು ಹೇಳಿದಂತೆ ನನಗೆ ಗಂಡು ಮಗುವೇ ಜನಿಸಿತು, ಅವನಿಗೆ ಸಿಹಿ ಎಂದರೆ ಅಚ್ಚುಮೆಚ್ಚು.

ಬೆಳಗಿನ ಕಾಯಿಲೆ

ನಿಮಗೆ ಗರ್ಭಾವಸ್ಥೆಯ ಶುರುದಿನಗಳಲ್ಲೇ ಅಥವಾ ಬೇಗನೆ, ಬೆಳಗಿನ ಸಮಯದಲ್ಲಿ ವಾಂತಿ ಬರುವುದು, ತಲೆ ನೋವು ಬರುವುದು, ಅಥವಾ ಬೇರೆ ಯಾವುದೇ ಕಾಯಿಲೆ ಬೆಳಗ್ಗೆ ಮಾತ್ರ ಕಾಣಿಸಿಕೊಂಡರೆ, ಖಚಿತವಾಗಿ ನೀವು ಹೆಣ್ಣು ಮಗುವಿಗೆ ಜನ್ಮ ನೀಡುತ್ತೀರಾ!.

ತಾಯಿ ೧: ಬೇಗ ಎಂದರೆ ಗರ್ಭಾವಸ್ಥೆಯ ೬ ಅಥವಾ ೭ನೇ ತಿಂಗಳಲ್ಲಿ ಆದರೆ ಇದು ನಿಜ. ನಾನು ಗರ್ಭಧರಿಸಿದ ದಿನದಿಂದ ೬ನೇ ತಿಂಗಳು ವರೆಗೂ ಯಾವುದೇ ತರಹದ ಬೆಳಗ್ಗಿನ ಕಾಯಿಲೆಯನ್ನು ಅನುಭವಿಸಿಲ್ಲ, ಆಗಾಗ್ಗೆ ವಾಂತಿ, ಸುಸ್ತು ಆಗುತ್ತಿತ್ತು ಅಷ್ಟೇ. ಕೆಲವರು ಹೇಳಿಕೆಯಂತೆ ನನಗೆ ಗಂಡು ಮಗು ಎಂದು ಭಾವಿಸಿದ್ದೆ, ಅದು ಸುಳ್ಳಾಯಿತು.

ತಾಯಿ ೨: ಇದೆಲ್ಲಾ ಸುಳ್ಳು, ನನಗೆ ಗರ್ಭನಿಂತ ದಿನದಿಂದ ಬೆಳಗ್ಗೆ ಮಾತ್ರವಲ್ಲ ಎಲ್ಲಾ ಸಮಯದಲ್ಲೂ, ವಾಂತಿ, ಸುಸ್ತು, ಕೈ ಕಾಲು ಊತ ಕಾಣಿಸಿಕೊಳ್ಳುತ್ತಿತ್ತು. ಆದರೆ ನನಗೆ ಹುಟ್ಟಿದ್ದು ಮಾತ್ರ ಮುದ್ದು ಗಂಡು ಮಗು.

ಕೂದಲು ಬಣ್ಣ

ತಲೆಯ ಕೂದಲು ಗಾಢ ಕಂದು ಅಥವಾ ಕೆಂಪು ಬಣ್ಣಕ್ಕೆ ಬದಲಾದರೆ, ಶಿಶುವು ಹೆಣ್ಣು ಎಂದು ಊಹಿಸಬಹುದು.

ತಾಯಿ ೧: ಇದು ನಿಜ ಇದ್ದರು ಇರಬಹುದು. ಆದರೂ ನನಗೆ ಒಂದು ಅನುಮಾನ, ಕೂದಲು ಬಣ್ಣ ಗರ್ಭಾವಸ್ಥೆಯಲ್ಲಿ ಹೇಗೆ ಬದಲಾಗುತ್ತದೆ. ಏಕೆಂದರೆ ನನ್ನ ಎರಡು ಮಕ್ಕಳ ಗರ್ಭಾವಸ್ಥೆಯಲ್ಲೂ ನನ್ನ ಕೂದಲಿನ ಬಣ್ಣ ಬದಲಾಗಲಿಲ್ಲ.

ತಾಯಿ ೨: ಅದು ಹೇಗೆ ಕೂದಲು ಕೆಂಪು ಬಣ್ಣವನ್ನು ಹೊಂದುತ್ತದೆ. ಇದು ನನಗೆ ತಿಳಿಯದ ವಿಷಯ, ಮತ್ತು ಇದನ್ನು ನಾನು ಇದೆ ಮೊದಲ ಬಾರಿಗೆ ಕೇಳಿದ್ದು.

ಮೊಡವೆ

ನಿಮಗೆ ಮೊದಲು ಮೊಡವೆ ಇಲ್ಲದೆ, ಗರ್ಭಧರಿಸಿದಾಗ ಮೊಡವೆ ಬಂದರೆ ಅದು ಹೆಣ್ಣು ಮಗುವನ್ನು ಹೊತ್ತುಕೊಂಡಿರುವಿರಿ ಎಂದು.

ತಾಯಿ ೧: ಅಲರ್ಜಿಯಿಂದ ಮೊಡವೆಯಾದರೆ ಏನು ಅರ್ಥ? ನನಗೆ ಗೊತ್ತಿಲ್ಲ ನನಗೆ ಬಂದಿದ್ದು, ಅಲರ್ಜಿಯ ಗುಳ್ಳೆಗಳೇ ಅಥವಾ ಮೊಡವೆಯೇ ಎಂದು, ಆದರೆ ನನಗೆ ಜನಿಸಿದ್ದು ಮಾತ್ರ ಹೇಣ್ಣು ಮಗು.

ತಾಯಿ ೨: ನಾನು ನಂಬಲ್ಲ ನನಗೆ ಮೊಡವೆ ಬಂದಿರಲಿಲ್ಲ ಆದರೂ ನನಗೆ ಹೆಣ್ಣು ಮಗು ಜನಿಸಿದೆ.

ತೂಕ ಹೆಚ್ಚಳ

ನೀವು ಗರ್ಭಧರಿಸಿದಾಗ ನಿಮ್ಮ ಪತಿಯ ದೇಹದ ತೂಕದಲ್ಲಿ ಹೆಚ್ಚಳವಾದರೆ, ನಿಮ್ಮ ಪತಿ ಹೆಣ್ಣು ಮಗುವಿನ ತಂದೆಯಾಗಲು ಸಿದ್ಧರಾಗುತ್ತಿದ್ದಾರೆ ಎಂದು. ಅವರ ತೂಕದಲ್ಲಿ ಏನು ಹೆಚ್ಚಳ ಆಗದಿದ್ದರೆ, ಅಥವಾ ಕಡಿಮೆಯಾದರೆ ಗಂಡು ಮಗುವಿನ ತಂದೆ ಎನ್ನಿಸಿಕೊಳ್ಳಲು ತಯಾರುಗುತ್ತಿದ್ದಾರೆ ಎಂದು.

ತಾಯಿ ೧: ಇದನ್ನು ನಾನು ನಂಬುತ್ತೇನೆ, ನನ್ನ ಗರ್ಭದ ಸಮಯದಲ್ಲಿ ಅವರ ತೂಕ ಹೆಚ್ಚಿತು, ನಾನು ಅವರನ್ನ ರೇಗಿಸುತ್ತಿದ್ದೆ, ನಮಗೆ ಈಗ ಮುದ್ದಾದ ಹೆಣ್ಣು ಮಗುವಿದೆ. ಅವಳಿಗೆ ಅವಳ ಅಪ್ಪ ಎಂದರೆ ತುಂಬಾ ಪ್ರೀತಿ.

ತಾಯಿ ೨: ನನ್ನ ಕೈ ರುಚಿ ಚೆನ್ನಾಗಿದೆ ಎಂದು ಹೆಚ್ಚು ತಿಂದು ವ್ಯಾಯಾಮ ಮಾಡದೇ, ಬರಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ ಬಂದರೆ ತೂಕ ಹೆಚ್ಚದೆ ಕಡಿಮೆ ಯಾಗುತ್ತದೆಯೇ? ಇದು ಸುಳ್ಳು. ಇದನ್ನು ನಾನು ನಂಬುವುದಿಲ್ಲ.

ಇದನ್ನು ಓದಲು ತಮಾಷೆಯಾಗಿದೆ ಅಲ್ಲವೇ? ಹೌದು, ಇದು ಗಂಭೀರ ವಿಷಯಗಳಲ್ಲ, ಕೇವಲ ಕೆಲವು ಜನರ ನಂಬಿಕೆ. ಕೆಲವು ವಿಷಯಗಳು ಕೇವಲ ಕಾಕತಾಳೀಯ ಅಷ್ಟೇ. ಈ ಮೂಢನಂಬಿಕೆಗಳನ್ನು ನಂಬದಿರಿ, ನಿಮ್ಮ ಗರ್ಭಧಾರಣೆಯನ್ನು ಆನಂದದಿಂದ ಅನುಭವಿಸಿ ಮುದ್ದಾದ ಮಗುವನ್ನು ಪಡೆಯಿರಿ. ಮಗು ಗಂಡಾಗಲಿ ಅಥವಾ ಹೆಣ್ಣಾಗಲಿ ನಿಮ್ಮ ಪ್ರೀತಿ ಜೊತೆಗಿರಲಿ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon