Link copied!
Sign in / Sign up
0
Shares

ನೀವು ಗರ್ಭಿಣಿಯಾಗದಿರಲು ೫ ಕಾರಣಗಳು

ಎಲ್ಲಾ ಸ್ತ್ರೀಯರು ಬಹಳವಾಗಿ ಆಗ್ರಹಿಸುವ ಮಹತ್ತರ ಘಟ್ಟವೇ ಗರ್ಭಧಾರಣೆ. ಸ್ತ್ರೀಯರು ಮಾತ್ರವಲ್ಲ, ತನ್ನದೊಂದು ಪುಟ್ಟ ಮಗುವಿನ ಬಯಕೆಯು ಪುರುಷರಲ್ಲೂ ಇರುತ್ತದೆ. ಆದಕಾರಣ ಜೀವನದ ಒಂದು ಘಟ್ಟದಲ್ಲಿ ಪ್ರತೀ ಸ್ತ್ರೀಯರು ತಾಯಿಯಾಗಲು ಹಂಬಲಿಸುತ್ತಾರೆ ಹಾಗೂ ಪ್ರಯತ್ನಿಸುತ್ತಾರೆ. ಆದರೂ ಈ ಯಾತ್ರೆಯಲ್ಲಿ ಪ್ರಿಯರು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ತಿಳಿಯೋಣ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೊದಲು, ಅದಕ್ಕೆ ಕಾರಣವೇನೆಂದು ತಿಳಿದುಕೊಳ್ಳೋಣ ಬನ್ನಿ.

ನಿಮ್ಮ ಗರ್ಭಧಾರಣೆಗೆ ಅಡ್ಡಿಪಡಿಸುವ ಐದು ಕಾರಣಗಳನ್ನು ತಿಳಿದುಕೊಳ್ಳೋಣ.
೧.ಒತ್ತಡ

ಪತಿ ಪತ್ನಿಯರಿಬ್ಬರು ಒತ್ತಡಕ್ಕೊಳಗಾದಾಗ, ಗರ್ಭಧರಿಸುವ ಸಾಧ್ಯತೆಯ ಪ್ರಮಾಣ ತೀರಾ ಕಡಿಮೆಯಾಗುವುದು. ಇಂದಿನ ವೇಗದ ಯುಗದಲ್ಲಿ ಗೆಲ್ಲಲು ಓಡಾಡುವ ದಂಪತಿಗಳು ಶಾರೀರಿಕವಾಗಿ ತುಂಬಾ ಬಳಲಿರುವುದು ಕೂಡಾ ಫಲವತ್ತತೆಯ ಮೇಲೆ ದುಷ್ಪರಿಣಾಮ ಬೀರುವುದು.

೨.ಶರೀರ ಭಾರ

ಸ್ತ್ರೀಯರ ಗರ್ಭಧಾರಣೆಗೆ ತೊಡಕಾಗುವ ಇನ್ನೊಂದು ಕಾರಣ ಅವರ ಶರೀರ ತೂಕ ಹೆಚ್ಚಳ. ದಢೂತಿ ಸ್ತ್ರೀಯರಲ್ಲಿ ಗರ್ಭದಾರಣೆಗೆ ಹೆಚ್ಚಿನ ತೊಡಕುಗಳು ಕಾಣಬರುತ್ತವೆ. ಹೆಚ್ಚಾದ ಶರೀರ ತೂಕವು,ಗರ್ಭ ಪಾತ್ರಕ್ಕೆ ಬೀಜದ ಪ್ರವೇಶವನ್ನು ತಡೆಯುವುದು ಮಾತ್ರವಲ್ಲದೇ ಅಂಡದ ಪೂರ್ಣಪ್ರಮಾಣದ ಬಿಡುಗಡೆಗೂ ಶತ್ರುವಾಗುವುದು. ಚರ್ಮದ ಸಡಿಲತೆಯನ್ನು ಎದುರಿಸುವ ಶರೀರದ ರಕ್ಷಣಾತ್ಮಕ ಪ್ರವೃತ್ತಿಗಳಿಂದಾಗಿ ಈ ರೀತಿ ಆಗುವುದು.

೩.ವಿಷ ಪದಾರ್ಥಗಳು

ಮನುಷ್ಯನ ಶರೀರವು ಗೊಂಚಲುಗಳಷ್ಟು ವಿಷವನ್ನು ಪ್ರತಿದಿನವೂ ಉತ್ಪಾದಿಸುವುದು. ಈ ವಿಷಗಳು ಶರೀರದ ಚಟುವಟಿಕೆಗಳಿಗೆ ಕಾರಣವಾಗಿರುವುದರಿಂದ ಮನುಕುಲದ ನೆಲೆಗೊಳ್ಳುವಿಕೆಗೆ ಅಗತ್ಯವಾದ ಘಟಕವಾಗಿದೆ ಆದರೆ ಹೆಚ್ಚಿನ ಪ್ರಮಾಣದ ವಿಷಗಳ ಸ್ರಾವವು ಶರೀರಕ್ಕೆ ಹಾನಿಯನ್ನುಂಟು ಮಾಡುವುದು. ಈ ರೀತಿಯಲ್ಲಿ ಹೆಚ್ಚಾದ ವಿಷಾಂಶಗಳು ಗರ್ಭಧಾರಣೆಗೆ ಅಡ್ಡಿಪಡಿಸುತ್ತದೆ. ಉದಾ: ಯೂರಿಯ

೪.ಥೈರೋಯ್ಡ್ ತೊಂದರೆಗಳು

ಬದಲಾದ ಆಹಾರ ಪದ್ಧತಿಗಳಿಂದ ಇಂದಿನ ಜನಾಂಗದಲ್ಲಿ ಥೈರೋಯ್ಡ್ ಸಮಸ್ಯೆಯು ಬಹಳ ಸಾಮಾನ್ಯವಾಗಿಬಿಟ್ಟಿದೆ. ಹೈಪೋ ಅಥವಾ ಹೈಪರ್ ಥೈರೋಡಿನಿಂದ ಸ್ತ್ರೀಗಳಲ್ಲಿ ಮಾಸಿಕ ಮುಟ್ಟಿನ ಏರು ಪೇರುಗಳು ಉಂಟಾಗುವುದರಿಂದ, ಅವರ ಪ್ರತ್ಯುತ್ಪಾದನಾ ಸಾಮರ್ಥ್ಯಕ್ಕೆ ತೀವ್ರವಾಗಿ ಏಟು ಬೀಳುವುದು ಆದ ಕಾರಣ ಈ ತೊಂದರೆಯ ಬಗ್ಗೆ ಜಾಗರೂಕರಾಗಿರುವುದು ಒಳ್ಳೆಯದು. ಗರ್ಭಧಾರಣೆಯ ಸಮಯದಲ್ಲೂ ಥೈರೋಯ್ಡಿನಿಂದ ತೊಂದರೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಅದರ ಚಿಕಿತ್ಸೆಗೊಳಗಾಗುವುದು ಉತ್ತಮ.

೫.ವಿಟಾಮಿನ್ ಡಿ ಯ ಅಭಾವ

ಇಂದಿನ ಯುವ ಪೀಳಿಗೆಯು ವಿಟಾಮಿನ್ ಡಿ ಯ ಕೊರತೆಯಿಂದ ಬಳಲುತ್ತಿದೆ. ಚಳಿಗಾಲದಲ್ಲಂತೂ ವಿಟಮಿನ್ ಡಿ ಯ ಪ್ರಮಾಣವು ತುಂಬಾ ಕಡಿಮೆಯಾಗಿ ಕಾಣಲ್ಪಡುವುದು.ಮಾಸಿಕ ಋತು ಚಕ್ರದಲ್ಲಿ ಪ್ರಧಾನ ಪಾತ್ರವಹಿಸುವ ವಿಟಾಮಿನ್ ಡಿಯು ಗರ್ಭಧಾರಣೆಯ ಹಂತದಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ.ವಿಟಾಮಿನ್ ಡಿ ಯ ಅಭಾವದಿಂದ ಬಳಲುವ ಶರೀರದಲ್ಲಿ ಒಮ್ಮೆಯೂ ಬಸಿರು ನಿಲ್ಲದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon