Link copied!
Sign in / Sign up
54
Shares

ಗರ್ಭಿಣಿಯಾಗಲು ಯಾವ ಸಮಯದಲ್ಲಿ ಸಂಭೋಗ ನಡೆಸಬೇಕು?

ನಾನು ಗರ್ಭತಾಳಲು ಪ್ರಯತ್ನಿಸುತ್ತಿದ್ದರೆ ಲೈಂಗಿಕ ಕ್ರಿಯೆ ನಡೆಸಲು ಸೂಕ್ತ ಸಮಯ ಯಾವುದು?

ನೀವು ನಿಮ್ಮ ಅಂಡೋತ್ಪತ್ತಿಯ ದಿನದ ಎರಡು ದಿನಗಳ ಮುಂಚೆ ಅಥವಾ ಅಂಡೋತ್ಪತ್ತಿಯ ದಿನದಂದು ಸಂಭೋಗ ನಡೆಸಿದರೆ ನೀವು ಗರ್ಭತಾಳುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ರೀತಿ ಮಾಡಿದ್ದಲ್ಲಿ ನಿಮ್ಮ ಡಿಂಬನಾಳ(fallopian tubes) ಒಳಗೆ ಬಿಡುಗಡೆ ಹೊಂದಿದ ಅಂಡು(egg)ಗೆ ಸಾಕಾದಷ್ಟು ವೀರ್ಯಗಳು ಲಭ್ಯವಾಗುತ್ತವೆ.

ನಾನು ಯಾವ ದಿನಗಳಲ್ಲಿ ಅಂಡೋತ್ಪತ್ತಿ ಮಾಡುವೆನೆಂದು ನನಗೆ ಹೇಗೆ ತಿಳಿಯುವುದು?

ನಿಮ್ಮ ಋತುಚಕ್ರ ನಿಯತವಾಗಿದ್ದರೆ ನಿಮ್ಮ ಮುಂದಿನ ಋತುಚಕ್ರದ ಶುರುವಿಗೆ 10-14 ದಿನಗಳು ಇರುವಾಗ ನಿಮ್ಮ ದೇಹ ಅಂಡೋತ್ಪತ್ತಿ ಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ದೇಹವು ಅತ್ಯಂತ ಫಲವತ್ತಾಗಿ ಇರುತ್ತದೆ. ಉದಾಹರಣೆಗೆ, ನಿಮ್ಮ ಕಳೆದ ಋತುಚಕ್ರ ಜುಲೈ 26ಕ್ಕೆ ಕೊನೆಯಾಗಿದ್ದರೆ ಹಾಗು ನಿಮ್ಮ ಋತುಚಕ್ರದ ಅವಧಿ 28 ದಿನಗಳಾದರೆ, ನೀವು ಆಗಸ್ಟ್ 4-ಆಗಸ್ಟ್ 9 ವರೆಗೆ ಅಂಡೋತ್ಪತ್ತಿ ಮಾಡುತ್ತೀರಿ ಹಾಗು ಇದೇ ಸಮಯದಲ್ಲಿ ನೀವು ತುಂಬಾ ಫಲವತ್ತಾಗಿರುತ್ತೀರಿ.

ನಿಮ್ಮ ಋತುಚಕ್ರ ಅನಿಯಮಿತವಾಗಿ ಇದ್ದರೆ, ನೀವು ಅಂಡೋತ್ಪತ್ತಿ ಮಾಡುವ ದಿನಗಳನ್ನು ಕಂಡುಹಿಡಿಯಲು ಈ ಮೇಲಿನ ವಿಧಾನ ಸೂಕ್ತವಲ್ಲ.

ನನ್ನ ಋತುಚಕ್ರ ನಿಯತವಾಗಿ ಇರದಿದ್ದರೆ ನಾನು ಗರ್ಭತಾಳುವುದು ಕಷ್ಟ ಆಗುವುದೇ?

ಆಗಬಹುದು. ನಿಮ್ಮ ಋತುಚಕ್ರ ಎಷ್ಟು ದಿನಗಳವರೆಗೆ ಇರುತ್ತದೆ ಎಂದು ನಿಮಗೆ ತಿಳಿಯದೆ ಇದ್ದರೆ, ನೀವು ಅಂಡೋತ್ಪತ್ತಿ ಮಾಡುವ ದಿನ ನಿಖರವಾಗಿ ತಿಳಿಯಲು ಸಾಧ್ಯವಾಗುವುದಿಲ್ಲ.

ಯಾವಾಗಲೋ ಒಂದೆರೆಡು ಬಾರಿ ಅನಿಯಮಿತ ಋತುಚಕ್ರ ಆದರೆ ಅದು ಸಹಜ. ಆದರೆ ಇದು ಪ್ರತಿ ಬಾರಿಯೂ ಆಗುತ್ತಿದ್ದಲ್ಲಿ ಅಥವ 3-6 ತಿಂಗಳುಗಳಾದರೂ ರಕ್ತಸ್ರಾವ ಆಗದೆ ಇದ್ದರೆ, ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ.

ನಿಮ್ಮನ್ನು ಅವರು ಫಲವತ್ತತೆ ತಜ್ಞ(fertility specialist) ಬಳಿ ಹೋಗಲು ಸೂಚಿಸಬಹುದು. ಅವರು ನಿಮ್ಮ ಅನಿಯತ ಋತುಚಕ್ರದ ಹಿಂದಿನ ಕಾರಣಗಳಾದ PCOS, ಅಂಡಾಶಯದ ಅಪಸಾಮನ್ಯತೆ, ಥೈರಾಯಿಡ್ ಅಸ್ವಸ್ತತೆ ಅಥವಾ ಮಿತಿಮೀರಿದ ಪ್ರೊಲಾಕ್ಟಿನ್ ಗತಿ ಯಾವುದಿದ್ದಾರು ಪರೀಕ್ಷೆ ನಡೆಸಿ ನಿಮಗೆ ತಿಳಿಸುವರು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon