Link copied!
Sign in / Sign up
3
Shares

ನೀವು ಗರ್ಭಿಣಿಯಾದಾಗ ನಿಮ್ಮ ಸ್ತನಗಳಿಗೆ ಆಗುವ ಕೆಲವು ವಿಲಕ್ಷಣ ಸಂಗತಿಗಳು

ನೀವು ಗರ್ಭಿಣಿಯಾದಾಗ ನಿಮ್ಮ ದೇಹದಲ್ಲಿ ಹಲವು ಬದಲಾವಣೆಗಳು ಆಗುತ್ತದೆ ಇದು ನಿಮಗೂ ತಿಳಿದಿರುವ ವಿಷಯ, ಆದರೆ ನಿಮ್ಮ ದೇಹದಲ್ಲಿ ಆಗುವ ಎಲ್ಲಾ ಬದಲಾವಣೆಗಳಿಗೂ ನೀವು ತಯಾರಾಗುವುದು ಕಷ್ಟ, ಅದರಲ್ಲೂ ವಿಶೇಷವಾಗಿ ನಿಮ್ಮ ಸ್ತನಗಳ ವಿಷಯಕ್ಕೆ ಬಂದಾಗ.

ಗರ್ಭವಾಸ್ಥೆಯಲ್ಲಿ ನಿಮ್ಮ ಸ್ತನವು ಹಲವು ಬದಲಾವಣೆಯನ್ನು ಕಾಣುತ್ತದೆ, ಈ ಒಂಬತ್ತು ತಿಂಗಳಲ್ಲಿ ನೀವು ಅನುಭವಿಸುವ ಕೆಲವು ಸ್ತನ ಬದಲಾವಣೆಯನ್ನು ವಿವರಿಸಲಾಗಿದೆ.

೧.ಅವು ದಪ್ಪವಾಗುತ್ತವೆ

ಬಹುಶಃ ಇದಕ್ಕಾಗಿ ನೀವು ಹೆಚ್ಚು ತಯಾರಾಗಬೇಕು. ಡಾಕ್ಟರ್ ಮೇರಿ ಜೇನ್ ಮಿನಿಕಿನ್ ಪ್ರಕಾರ ಹೆಚ್ಚಿನ ಮಹಿಳೆಯರಲ್ಲಿ ಸ್ತನದ ಗಾತ್ರವು ಮೊದಲಿಗಿಂತ ದೊಡ್ಡದಾಗುತ್ತದೆ. ಅವರ ಸಲಹೆ ಏನೆಂದರೆ, ಯಾವುದೇ ಸಮಯದಲ್ಲಿ ಒಟ್ಟಿಗೆ ಹೆಚ್ಚು ಬ್ರಾಗಳನ್ನು ತೆಗೆದುಕೊಳ್ಳಬೇಡಿ, ನಿಮ್ಮ ಗರ್ಭವಾಸ್ಥೆಯಲ್ಲಿ ಸ್ತನದ ಗಾತ್ರ ದೊಡ್ಡದಾಗುತ್ತ ಇರುತ್ತದೆ. ಅದು ನೀವು ಗರ್ಭಧರಿಸಿದ ಒಂದು ವಾರದ ನಂತರವೇ ದೊಡ್ಡದಾಗಲು ಪ್ರಾರಂಭಿಸಬಹುದು. ಸ್ತನದ ಗಾತ್ರವು ನಿಮ್ಮ ಮೊದಲಿನ ಗಾತ್ರಕ್ಕಿಂತ ಮೂರರಷ್ಟು ಗರ್ಭಾವಸ್ಥೆಯಲ್ಲಿ ಮತ್ತು ನಾಲ್ಕರಿಂದ ಐದರಷ್ಟು ಮೊಲೆಹಾಲುಣಿಸುವ ಸಮಯದಲ್ಲಿ ಹಿಗ್ಗುತ್ತದೆ.

೨.ಸ್ತನದ ತೂಕವನ್ನು ಪಡೆಯುವಿರಿ

ಸತ್ಯ ಏನೆಂದರೆ, ವೈದ್ಯ ರೋಸ್ ರ ಪ್ರಕಾರ ನಿಮ್ಮ ಗರ್ಭಾವಸ್ಥೆಯ ಒಟ್ಟಾರೆ ತೂಕದಲ್ಲಿ ೯೦೦ ಗ್ರಾಂ. ನಿಂದ ಒಂದು ಕೆ.ಜಿ ಯವರೆಗಿನ ತೂಕವನ್ನು ನಿಮ್ಮ ಸ್ತನವು ನೀಡುತ್ತದೆ.

೩.ನಿಮ್ಮ ತೊಟ್ಟು ಬೆಳೆಯುತ್ತದೆ ಮತ್ತು ಗಾಢ ಬಣ್ಣ ಬರುತ್ತದೆ

ಗರ್ಭಾವಸ್ಥೆಯಲ್ಲಿ ಮತ್ತು ಮೊಲೆಹಾಲುಣಿಸುವ ಸಮಯದಲ್ಲಿ, ನಿಮ್ಮ ದೇಹದಲ್ಲಿ ಆಗುವ ಹಾರ್ಮೋನುಗಳ ಬದಲಾವಣೆಯಿಂದ ನಿಮ್ಮ ಸ್ತನದ ತೊಟ್ಟು ಮತ್ತು ತೊಟ್ಟಿನ ಸುತ್ತ ಇರುವ ಜಾಗ ದಪ್ಪವಾಗುತ್ತದೆ ಮತ್ತು ಬಣ್ಣದಲ್ಲಿ ಕೂಡ ವ್ಯತ್ಯಾಸ ಕಾಣಬಹುದು(ಗಾಢ ಬಣ್ಣ ಹೊಂದಬಹುದು). ದೇಹದಲ್ಲಿ ಈಸ್ಟ್ರೋಜೆನ್ ಮತ್ತು ಪ್ರೊಜೆಸ್ಟೊರಾನ್ ಹೆಚ್ಚಾಗುವುದರಿಂದ ಬಣ್ಣವು ಬದಲಾಗುತ್ತದೆ. ನಿಮ್ಮ ಎರಡನೇ ತ್ರೈಮಾಸಿಕದಲ್ಲಿ ಬಣ್ಣ ಬದಲಾಗುತ್ತಿರುವುದನ್ನು ನೀವು ಕಾಣಬಹುದು.

೪.ಅದು ನವಿರಾಗಬಹುದು

ಹಲವು ಮಹಿಳೆಯರ ಅನುಭವದ ಪ್ರಕಾರ(ಅಥವಾ ಹೇಳಿಕೆಯ ಪ್ರಕಾರ), ಅವರ ಗರ್ಭಾವಸ್ಥೆಯ ಮೊದಲನೇ ತ್ರೈಮಾಸಿಕದಲ್ಲಿ ಅವರ ಸ್ತನದ ತೊಟ್ಟು ಮೊದಲಿಗಿಂತ ತುಂಬಾ ಸೂಕ್ಹ್ಮವಾಗುತ್ತಾ ಹೋಗುತ್ತದಂತೆ. ನಿಮ್ಮ ಬ್ರಾ ಬಿಗಿಯಾದರೆ ತೊಟ್ಟು ನೋವನ್ನು ನೋಡಬಹುದು ಅಷ್ಟರ ಮಟ್ಟಿಗೆ ಸೂಕ್ಹ್ಮವಾಗುವ ಸಾಧ್ಯತೆ ಇದೆ ಎಂದು ಡಾಕ್ಟರ್ ರೋಸ್ ಹೇಳುತ್ತಾರೆ.

೫.ನಿಮ್ಮ ದೇಹದ ಎಲ್ಲಾ ಭಾಗಗಳು ಸೂಕ್ಹ್ಮವಾಗಬಹುದು

ಸ್ತನ ಸೂಕ್ಷ್ಮವಾಗುವುದು ಗರ್ಭವಾಸ್ಥೆಯಲ್ಲಿ ಸಾಮಾನ್ಯ, ಸ್ತನದ ಎಲ್ಲಾ ಭಾಗಗಳು ಸೂಕ್ಷವಾಗುವುದು ನಿಮ್ಮ ಗರ್ಭಾವಸ್ಥೆಯ ಮೊದಲನೇ ತ್ರೈಮಾಸಿಕದಿಂದ ಶುರುವಾಗಿ ನಿಮ್ಮ ಎದೆಹಾಲುಣಿಸುವುದು ನಿಲ್ಲಿಸುವ ತನಕ ಸೂಕ್ಷ್ಮವಾಗಿಯೇ ಇರುತ್ತದೆ.

೬.ಅಲ್ಲಿ ಕಡಿತ ಬರಬಹುದು

ಗರ್ಭಾವಸ್ಥೆಯ ಮೂರನೇ ತ್ರೈಮಾಸಿಕದಲ್ಲಿ, ನೀವು ತೊಟ್ಟಿನ ಕರಪಾನಿಯನ್ನು ಬೆಳೆಸಿಕೊಳ್ಳಬಹುದು, ಇದು ನಿಮ್ಮ ತೊಟ್ಟನ್ನು ಒಣಗುವಂತೆ, ಗುಳ್ಳೆಬರುವಂತೆ, ಕೆಂಪಾಗುವಂತೆ ಮತ್ತು ನವೆ ಅಥವಾ ಕಡಿತ ಬರುವಂತೆ ಮಾಡಬಹುದು. ನೈಸರ್ಗಿಕ ಪದಾರ್ಥಗಳಾದ ಕೊಬ್ಬರಿ ಎಣ್ಣೆ, ಲೋಗಸರದ ಲೋಳೆಯನ್ನು ಹಚ್ಚುವುದು ಒಣಗಿದ ತೊಟ್ಟನ್ನು ಮತ್ತು ಕಡಿತವನ್ನು ನಿವಾರಿಸಲು ಸಹಾಯ ಮಾಡುತ್ತದೆ.

೭.ಅವು ವಿಭಿನ್ನವಾಗಿ ಕಾಣಿಸಬಹುದು

ನೀವು ಗಮನಿಸಿರಬಹುದು, ಎರಡನೇ ತ್ರೈಮಾಸಿಕದಲ್ಲಿ, ಮಾಂಟ್ಗೊಮೆರಿ ಎಂಬ ಗ್ರಂಥಿ ಪ್ರಮುಖವಾಗಿ ಸ್ತನ ದಪ್ಪವಾಗಿರುವುದನ್ನು ಕಾಣಬಹುದು. ಸ್ತನದಲ್ಲಿ ಅಥವಾ ಸ್ತನದ ಕೆಳಗಡೆ ಈಗ ನರಗಳನ್ನು ಕಾಣುವುದು ಸಾಮಾನ್ಯ. ಇವು ಎದೆಹಾಲುಣಿಸುವುದನ್ನು ನಿಲ್ಲಿಸಿದ ಒಂದು ತಿಂಗಳಲ್ಲಿ ಹೋಗುತ್ತದೆ ಎಂದು ನಿರೀಕ್ಷಿಸಬಹುದು.

೮.ತೊಟ್ಟಿನಲ್ಲಿ ದ್ರವ

ಬಹುಶಃ ನೀವು ಇದನ್ನು ಹೆರಿಗೆಯ ನಂತರ ನಿರೀಕ್ಷಿಸಬಹುದು, ಆದರೆ, ನಿಮಗೆ ಆಶ್ಚರ್ಯ ಆಯಿತಲ್ಲವೇ! ನಿಮ್ಮ ಎರಡನೇ ತ್ರೈಮಾಸಿಕದಲ್ಲಿ, ೧೬ನೇ ವಾರದ ನಂತರ ಬೇಗನೆ ನಿಮ್ಮ ಮೊಲೆಯ ತೊಟ್ಟಿನಲ್ಲಿ ಕೊಲೆಸ್ಟ್ರಮ್ ಬರುವುದನ್ನು ನೀವು ಗಮನಿಸಬಹುದು. ಕೆಲವು ಮಹಿಳೆಯರು ತಮ್ಮ ತೊಟ್ಟಿನಲ್ಲಿ ಹಳದಿ ಬಣ್ಣದಲ್ಲಿ ಸ್ವಲ್ಪ ಮಂದವಾಗಿ ದ್ರವ ಬರುವುದನ್ನು ನೋಡಿರುವರು ಅದು ಕೊಲೆಸ್ಟ್ರಮ್. ಇದು ಸಾಮಾನ್ಯ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon