Link copied!
Sign in / Sign up
15
Shares

ನಾನು ಗರ್ಭಿಣಿ ಎಂದು ನನ್ನ ಪತಿಗೆ ಹೇಳಿದ್ದು ಹೇಗೆ ಗೊತ್ತ?

ನನ್ನ ಮೊದಲ ಮಗಳ ಎರಡನೇ ಹುಟ್ಟುಹಬ್ಬ ಆಗಿ ಎರಡು ವಾರ ಆಗಿತ್ತು. ನನಗೆ ನಾನು ಗರ್ಭಿಣಿ ಆಗಿದ್ದೇನೆಂಬ ಒಂದು ಸಂಶಯ ಇತ್ತು, ಇದನ್ನ ಪಟ್ಟೇ ಹಚ್ಚಲೆಂದು ನಾನು ನನ್ನ ವೈದ್ಯರ ಬಳಿ ಹೋದೆ. ಅವರು ನನ್ನ ಸಂಶಯವನ್ನ ದೃಢಪಡಿಸಿದರು!

ನನಗೆ ಮೋಡದ ಮೇಲೆ ತೇಲುತ್ತಿರುವಂತೆ ಅನಿಸುವಷ್ಟು ಖುಷಿ ಆಯಿತು. ಈ ವಿಷಯವನ್ನ ನನ್ನ ಪತಿಗೆ ತಿಳಿಸಲು ಒಂದು ವಿನೋದಮಯ ದಾರಿ ಹುಡುಕುತ್ತಿದ್ದೆ. ನಾನು ವೈದ್ಯರ ಕ್ಲಿನಿಕ್ ಇಂದ ಮನೆಗೆ ಬರುವ ದಾರಿಯೆಲ್ಲಾ ಹೇಗೆ ತಿಳಿಸಬೇಕು ಎಂದು ಯೋಚಿಸುತ್ತಲೇ ಸಾಗಿದೆ. ಆಗ ನನಗೆ ನೆನಪಾಯಿತು ನಮ್ಮ ಮನೆಯಲ್ಲಿ ಹಾಲು ಖಾಲಿ ಆಗಿದೆ ಅಂತ. ಅದಕ್ಕೆ ನಾನು ಅಲ್ಲೇ ಇದ್ದ ಒಂದು ಸೂಪರ್ ಮಾರ್ಕೆಟ್ ಗೆ ಹೋದೆ.

ನಾನು ಹಾಲಿನ ಪದಾರ್ಥಗಳಿದ್ದ ಸೆಕ್ಷನ್ ಗೆ ಹೋದೆ, ಅಲ್ಲೇ ಬದಿಯಲ್ಲಿ ಇದ್ದ ಒಂದು ಚಾಕಲೇಟ್ ಬಾರ್ ನನಗೆ ನೋಡಿ ನನಗೆ ಒಂದು ಉಪಾಯ ಹೊಳೆಯಿತು. ನಾನು ಒಂದು ಲೀಟರ್ ಹಾಲು ತೆಗೆದುಕೊಂಡೆ. ಅದರೊಂದಿಗೆ ಇನ್ನೂ ಕೆಲವು ಐಟಂಗಳನ್ನ ನನ್ನ ಬುಟ್ಟಿಯಲ್ಲಿ ಹಾಕಿಕೊಂಡೆ. ನಂತರ ಬಿಲ್ ಕಟ್ಟಿ ಮನೆಗೆ ಬಂದೆ.

ಮನೆಗೆ ಬಂದವಳೇ, ಹಾಲನ್ನ ಅಡುಗೆ ಮನೆಯೊಳಗೇ ಇಟ್ಟೆ. ನಾನು ತಂದಿದ್ದ ಉಳಿದ ಐಟಂಗಳನ್ನ ಆ ಬುಟ್ಟಿಯಲ್ಲೇ ಚೆಂದವಾಗಿ ಜೋಡಿಸಿ, ಆ ಬುಟ್ಟಿಯನ್ನ ನಮ್ಮ ಊಟದ ಟೇಬಲ್ ಮೇಲೆ ಇಟ್ಟೆ.

ನನ್ನ ಪತಿ ಮನೆಗೆ ಬಂದೊಡನೆ, ಆ ಬುಟ್ಟಿಯನ್ನ ನೋಡಿ, ಯಾರಿಗಾಗಿ ಇವೆಲ್ಲಾ ಎಂದು ಕೇಳಿದರು. ಅದಕ್ಕೆ ನಾನು “ಇವೆಲ್ಲವಿಕ್ಕೂ ಒಂದು ಕನೆಕ್ಷನ್ ಇದೆ, ಏನು ಹೇಳಿ” ಎಂದು ಉತ್ತರಿಸಿದೆ. ಅವರು ಅವುಗಳನ್ನೆಲ್ಲಾ ನೋಡಿ, ಏನು ತಿಳಿಯದೆ ಮುಖ ಮುಖ ನೋಡಿದರು.

ಆಗ ನಾನು ಅವುಗಳನ್ನ ಒಂದೊಂದೇ ಹೊರಗೆ ತೆಗೆದು ಅವುಗಳ ಹೆಸರುಗಳನ್ನ ಜೋರಾಗಿ ಓದಿ ಎಂದೆ. ಅವರು ಶುರು ಮಾಡಿದರು : “ಬೇಬಿ ಪೌಡರ್, ಬೇಬಿ ಸೋಪ್, ಬೇಬಿ ಕ್ಯಾರಟ್...” , ಅಷ್ಟಕ್ಕೇ ನಿಲ್ಲಿಸಿ ಅವರು, ಕಣ್ಣುಗಳನ್ನ ದೊಡ್ಡದು ಮಾಡಿ “ನೀನು ಪ್ರೆಗ್ನೆಂಟ್ ಆಗಿದ್ಯಾ?!! ನಿಜವಾಗ್ಲೂ?! ” ಎಂದು ಕೇಳಿದರು. ಆದರೆ ನಾನು ಏನು ಹೇಳುವ ಮುನ್ನವೇ, ಖುಷಿಯಿಂದ ಅರಳಿದ ನನ್ನ ಮುಖವನ್ನ ನೋಡಿ ಅವರಿಗೆ ಗೊತ್ತಾಯಿತು. ಅವರ ಮುಖದಲ್ಲಿ ಅವತ್ತು ನಾನು ನೋಡಿದ ಅಚ್ಚರಿಯ ನೋಟವನ್ನ ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರಿಗೂ ಕೂಡ ಖುಷಿಯನ್ನ ತಡೆಯಲು ಆಗಲೇ ಇಲ್ಲ. ಹೀಗೆ ನಾನು ಗರ್ಭಿಣಿ ಆಗಿದ್ದೇನೆಂದು ತಿಳಿಸಿದ ರೀತಿಯ ಕಥೆಯು ನಾನು ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಹೇಳಬಹುದು! 

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon