Link copied!
Sign in / Sign up
14
Shares

ಪತಿಯರಿಗೆ ನೀವು ಗರ್ಭಿಣಿ ಆಗಿದ್ದಾಗ ಮುಂಚೆಗಿಂತ ಹೆಚ್ಚು ಸುಂದರವಾಗಿ ಕಾಣುವಿರಂತೆ : 7 ಕಾರಣಗಳು!

ಗರ್ಭವಾಸ್ಥೆಯು ಒಂದು ಸುಂದರ ಪ್ರಯಾಣವಾಗಿದ್ದು,ಮಹಿಳೆಯೊಬ್ಬಳು ಮಾತ್ರ ಅನುಭವಿಸಲು ಶಕ್ತಳಾಗಿದ್ದಾಳೆ .ಈ ಸಂದರ್ಭಕ್ಕೆ ನೀವು ನೀವು ಬೆಲೆ ತೆರಬೇಕಾಗಿದೆ ಎಂದು ನಿಮಗೆ ಆಗಾಗ ಅನ್ನಿಸಿದರೂ ಒಮ್ಮೆ ಸಂತೋಷದ ಚಿಲುಮೆಯಾದ ಮಗುವು ನಿಮ್ಮ ತೋಳುಗಳಲ್ಲಿದ್ದಾಗ ಈ ಸಂದರ್ಭವು  ಗರ್ಭಧಾರಣೆ ಮತ್ತು ತಾಯ್ತನದ ಸುಂದರ ಪ್ರಯಾಣಕ್ಕೆ ಜೀವಂತ ಪುರಾವೆಯಾಗಿದೆ.ಇದು ತಪ್ಪಾಗಿದ್ದರೆ ನೀವು ಖಂಡಿತ ನಮ್ಮನ್ನು ವಿರೋಧಿಸಬಹುದು ಆದ್ರೆ ಮಹಿಳೆಯಾದ ನೀವು ಈ ವಿಚಾರವನ್ನು ಖಂಡಿತವಾಗಿ ಒಪ್ಪುತ್ತೀರಿ ಎಂಬುವುದು ನಮಗೆ ತಿಳಿದಿರುವ  ವಿಚಾರವಾಗಿದೆ .

ಆದಾಗ್ಯೂ ,ಗರ್ಭವಾಸ್ಥೆಯು ನೀವು ನೋಡಲು ಸುಂದರವಾಗಿ ಕಾಣುವಂತೆ ಮಾಡಲು ಹಾಗೂ ಸ್ವತಃ ಪರಿಗಣಿಸಲು  ಮಾಡುವಂತೆ   ತನ್ನದೇ ಆದ ರೀತಿಗಳನ್ನು ಹೊಂದಿದೆ .ಮಹಿಳೆಯಲ್ಲಿ ಗರ್ಭಧಾರಣೆಯ ಮೂಲಕ ಸೌಂದರ್ಯವನ್ನು ಹೊರತಂದ ಅನನ್ಯ ವಿಧಾನಗಳನ್ನು ಇಲ್ಲಿ ನಾವು ನೀಡಿದ್ದೇವೆ .

೧.ಮುಖದ ಕಾಂತಿ

ನಿಮ್ಮ ಎರಡನೇ ತ್ರೈಮಾಸಿಕ ಅವಧಿಯಲ್ಲಿ, ನಿಮ್ಮ ಮುಖದ ಮೇಲೆ ಬೇರೆ ರೀತಿಯ  ಹೊಳಪನ್ನು ನೀವು ಗಮನಿಸಬಹುದು, ಇದು ನಿಮಗೆ ಸಾಕಷ್ಟು ಅಭಿನಂದನೆಯನ್ನು ತರುತ್ತದೆ.   ಇದು ನಿಮ್ಮ ಉತ್ಕಟ ಸ್ಥಿತಿಯ ಹಾರ್ಮೋನ್ ಗಳ ಅದ್ಭುತ ಪರಿಣಾಮ.ಬದಲಾವಣೆಯ ಸಮಯದಲ್ಲಿ ಇದು ನಿಮ್ಮ ಪರವಾಗಿ ಕಾರ್ಯನಿರ್ವಹಿಸುತ್ತಿದೆ.

 ೨.ತುಂಬಿದ ಸ್ತನಗಳು

ನಿಮ್ಮ ಸ್ತನಗಳು ಹಾಲುಣಿಸುವಿಕೆಯನ್ನು ಪ್ರಾರಂಭಿಸಿದಾಗ ತುಂಬಿಕೊಂಡು ಮತ್ತು ಗುಂಡುಗುಂಡಾಗಿ ಬೆಳೆದು  ನಿಮ್ಮ ಸೌಂದರ್ಯಕ್ಕೆ ಉನ್ನತ ಸೇರ್ಪಡೆಯಾಗುತ್ತದೆ.ನಿಮ್ಮ ಹೊಸ ಬಟ್ಟೆಗಳನ್ನು ನೀವು ಕಲ್ಪಿಸಿಕೊಂಡಿರುವುದಕ್ಕಿಂತ ಹೆಚ್ಚು ಸೌಂದರ್ಯವನ್ನಾಗಿಸಲು ಆಕರ್ಷಕವಾದ ರೀತಿಯಲ್ಲಿ ಕಾಣಿಸುವಂತೆ ಮಾಡಲು ಈ ನಿಮ್ಮ ಹೊಸ ರೂಪವು ಸಹಕರಿಸುತ್ತದೆ ಎಂದು ನಾವು ಖಚಿತವಾಗಿ ಹೇಳಬಲ್ಲೆವು .

೩.ಗಾಢಬಣ್ಣದ , ದಪ್ಪ ಕೂದಲು

ನೀವು ಗರ್ಭವತಿಯಾದಾಗ  ನಿಮ್ಮ ದೇಹದ ಈಸ್ಟ್ರೊಜೆನ್ ಮಟ್ಟದಲ್ಲಿನ ಹೆಚ್ಚಳವು ಕೂದಲು ಕುಸಿತವನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸುತ್ತದೆ, ಅದು ಈಗ ಪ್ರಾಯೋಗಿಕವಾಗಿ ನಗಣ್ಯವಾಗಿದೆ.ನಿಮ್ಮ ಕೂದಲಿನ ವಿನ್ಯಾಸ ಮತ್ತು ದಪ್ಪದಲ್ಲಿ ಹಠಾತ್ ಬದಲಾವಣೆಯನ್ನು ನೀವು ಗಮನಿಸಿದರೆ ಅದರ  ಹಿಂದಿನ ಕಾರಣವೂ ಇದಾಗಿದೆ  .

೪.ಉದ್ದವಾದ ಉಗುರುಗಳು

ನಿಮ್ಮ ಎರಡನೇ ತ್ರೈಮಾಸಿಕದಲ್ಲಿ ನಿಮ್ಮ ಉಗುರುಗಳು ವೇಗವಾಗಿ ಬೆಳೆಯುತ್ತಿವೆ ಮತ್ತು ನೀವು ಗರ್ಭಧಾರಣೆಯ ಹಂತವನ್ನು ತಲುಪಿದಲ್ಲಿ, ನಾವು ಏನು ಮಾತನಾಡುತ್ತೇವೆ ಎಂದು ನಿಮಗೆ ತಿಳಿದಿದೆ.ನೀವು ಉಗುರಿನ  ಕಲಾವಿನ್ಯಾಸಗಳ  ಬೃಹತ್ ಪ್ರೇಮಿಯಾಗಿದ್ದರೆ, ಈಗ ನೀವು ಬೇಕಾದಷ್ಟು ವಿಭಿನ್ನ ವಿನ್ಯಾಸಗಳನ್ನು ಪ್ರಯೋಗಿಸಲು ನಿಮ್ಮ ಸಮಯವನ್ನು ಉಪಯೋಗಿಸಿ  ಆನಂದಿಸಿ!

೫.ಉಬ್ಬಿದ ಕೆನ್ನೆಗಳು ,ಕೆಂಪಾದ ತುಟಿಗಳು

ನೀವು ನಿಮ್ಮ ಜೀವನದಲ್ಲಿ ಸಣ್ಣದಿದ್ದಲ್ಲಿ  ಈಗ ಎಲ್ಲಾ ಕಡೆಗಳಲ್ಲಿ ವಕ್ರಾಕೃತಿಗಳನ್ನು ರಚಿಸಲು ನಿಮಗೆ ಅವಕಾಶವಿದ್ದು ಸುಂದರವಾಗಿ ಕಾಣುವ ಸಮಯ ಸನ್ನಿಹಿತವಾಗಿದೆ .ಈಗ ಹೆಚ್ಚುತ್ತಿರುವ ನಿಮ್ಮ ತೂಕದ ಬಗ್ಗೆ ನೀವು ತುಂಬಾ ಚಿಂತೆ ಮಾಡುತ್ತಿದ್ದೀರಿ ಎಂದು ನಾವು ತಿಳಿದಿದ್ದೇವೆ, ಆದರೆ ಈಗ  ಪ್ರಸವದ ನಂತರ ನೀವು ಬಯಸುವ ವ್ಯಾಯಾಮವನ್ನು ಆಯ್ಕೆ ಮಾಡಬಹುದು,ಮತ್ತು ನೀವು ಬಯಸುವ ವಕ್ರಾಕೃತಿಗಳನ್ನು ಇಟ್ಟುಕೊಂಡು ಬೇಡವಾದುವುಗಳನ್ನು ಅಲ್ಲದೆ, ಈ ಹೊಸ ವಕ್ರಾಕೃತಿಗಳು ನಿಮ್ಮ ಲೈಂಗಿಕ ಜೀವನವನ್ನು ಹೆಚ್ಚಿಸುತ್ತದೆ ಎಂಬ ಸಾಧ್ಯತೆಗಳಿವೆ.

೬.ಸಾಂದ್ರತೆಯುಳ್ಳ ಸ್ನಾಯುಗಳು

ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ  ಹೊಂದುವಂತಹ  ಸೌಮ್ಯವಾದ ವ್ಯಾಯಾಮವನ್ನು ನೀವು ಆಯ್ಕೆ ಮಾಡಿಕೊಂಡಲ್ಲಿ  ಉರುಟಾಗಿರುವ ನಿಮ್ಮ ಹೊಟ್ಟೆಯನ್ನು ಹೊರತು ಪಡಿಸಿ ನೀವು ಸಾಂದ್ರತೆಯುಳ್ಳ ಸ್ನಾಯುಗಳನ್ನು ಪಡೆಯುವಿರಿ .ಇದು ನಿಜವಾಗಿಯೂ ನೀವು ಪುಟಿದೇಳಲು ಮತ್ತು ಜೀವನ್ಮುಖಿಯಾಗಲು ಕಾರಣವಾಗುತ್ತವೆ .ನಿಮ್ಮ ದೇಹವು ಸರಿಯಾದ ಪ್ರಮಾಣ ಬದ್ಧತೆಯನ್ನು ಹೊಂದಿದೆ ಎಂದು ನಿಮಗೆ ತಿಳಿದರೆ ಇದನ್ನು ಹೊರತು ಪಡಿಸಿ ನಿಮಗೆ ಇನ್ನೇನು ಬೇಕು ?

೭.ಮೃದು ಚರ್ಮ

ನಿಮ್ಮ ಎರಡನೇ ತ್ರೈಮಾಸಿಕದಲ್ಲಿ, ನಿಮ್ಮ ಚರ್ಮವು ತುಂಬಾ ಮೃದುವಾಗಿದೆಎಂದು ನಿಮಗೆ ಅನಿಸಬಹುದು  .ಇದು ಸಲಹೆಗಳಂತೆ ನೀವು ನೀರು ಜಾಸ್ತಿ ಕುಡಿದಿದ್ದರಿಂದಲೂ  ,ಹಾರ್ಮೋನ್ ಗಳ ವ್ಯತ್ಯಾಸದಿಂದಲೂ ಇದು ಸಾಧ್ಯ ನೆನಪಿಡಿ, ನಿಮ್ಮ ಸ್ವಂತ ಚರ್ಮದಲ್ಲಿ ನೀವು ಯಾವಾಗಲೂ ಸುಂದರವಾಗಿದ್ದೀರಿ.  ಗರ್ಭವಾಸ್ಥೆಯು ಅದರ ಬಗ್ಗೆ ನಿಮಗೆ ನೆನಪಿಸಲು ತನ್ನದೇ ಆದ ವಿಶಿಷ್ಟ ಮಾರ್ಗಗಳನ್ನು ಹೊಂದಿದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon