Link copied!
Sign in / Sign up
28
Shares

ಗರ್ಭಿಣಿ ಆಗಿದ್ದಾಗ ನೀವು ಅತ್ತರೆ ಮಗುವಿಗೆ ಏನಾಗುತ್ತದೆ ಗೊತ್ತಾ?

ನಾವು ಏನು ತಿನ್ನುತ್ತೀವಿ, ಏನು ಕುಡಿತೀವಿ ಎಂಬುದು ನಮ್ಮ ಗರ್ಭಧಾರಣೆ ವೇಳೆ ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಕೇಳಿದ್ದೇವೆ. ಆದರೆ, ನಾವು ಏನು ಭಾವಿಸುತ್ತೀವಿ ಎಂಬುದರ ಪರಿಣಾಮ?

ರಿಸರ್ಚ್ ಫಾರ್ ಸೈಕಾಲಜಿಕಲ್ ಸೈನ್ಸ್ ಅವರು ಆರು ತಿಂಗಳ ಭ್ರೂಣದ ಮೇಲೆ ತಾಯಿಯ ಭಾವನೆಗಳು ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಇದು ಕೇವಲ ತಾತ್ಕಾಲಿಕ ಅಲ್ಲ. ನಿಮ್ಮ ಭಾವನಾತ್ಮಕ ಆರೋಗ್ಯವು ಭ್ರೂಣದ ಜೀವನದ ಬಗೆಗಿನ ಧೋರಣೆಯನ್ನೇ ತಿದ್ದಬಹುದು!

ಹಾಗಿದ್ದರೆ ತಾಯಿಯ ಭಾವನೆಗಳು ಮಗುವಿನ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ಇದನ್ನು ತಿಳಿಯಲು ನಾವು ಅಮ್ಮಂದಿರನ್ನು ಅವರ ಧೋರಣೆ, ಭಾವನೆಗಳ ಆಧಾರದ ಮೇಲೆ ಗುಂಪುಗಳಾಗಿ ವಿಂಗಡಿಸಬೇಕು.

ಒತ್ತಡ ಅನುಭವಿಸುತ್ತಿರುವ ಅಮ್ಮಂದಿರು

ಪ್ರತಿಯೊಂದು ತಾಯಿಯು ಯಾವಾಗಲಾದರೂ, ಒಮ್ಮೆ ಆದರೂ ಒತ್ತಡಕ್ಕೆ ಸಿಲುಕಿಕೊಳ್ಳುತ್ತಾಳೆ. ಹೀಗೆ ಯಾವಾಗಲೋ ಒಮ್ಮೆ ಆದರೆ, ಇದರಿಂದ ಮಗುವಿನ ಮೇಲೆ ದೀರ್ಘಕಾಲದ ಪರಿಣಾಮ ಉಂಟಾಗುವುದಿಲ್ಲ. ಆದರೆ ಇದು ದೀರ್ಘಕಾಲದ-ಆತಂಕ, ದೀರ್ಘಕಾಲದ-ಖಿನ್ನತೆ ಅಥವಾ ದೀರ್ಘಕಾಲದ ಒತ್ತಡ ಆಗಿದ್ದರೆ ಪರಿಣಾಮಗಳು ಉಂಟಾಗುತ್ತವೆ.

ಗರ್ಭಧಾರಣೆಯಲ್ಲಿ ತೀವ್ರ ಆತಂಕಕ್ಕೆ ಒಳಗಾಗಿರುವ ಅಮ್ಮಂದಿರು, ಬಹಳ ಆತಂಕವುಳ್ಳ, ಅಳುಮುಂಜಿ ಮಗುವಿಗೆ ಜನ್ಮ ನೀಡುವ ಸಾಧ್ಯತೆಗಳು ಹೆಚ್ಚಿರುತ್ತವೆ.

ನೀವು ಒತ್ತಡದಲ್ಲಿ ಇದ್ದಾಗ ನಿಮ್ಮ ದೇಹವು ಒತ್ತಡದ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ನಿಮ್ಮ ಭಾವನೆಗಳು ಗರ್ಭಕೋಶ ಸೇರದೆ ಇದ್ದರು, ನಿಮ್ಮ ಹಾರ್ಮೋನುಗಳು ಸೇರುತ್ತವೆ. ನಿಮ್ಮ ಮಗುವನ್ನು ಈ ಹಾರ್ಮೋನುಗಳು ತಲುಪಿದರೆ ನಿಮ್ಮ ಮಗುವು ಕಾಲಕಾಲದ ಆತಂಕಕ್ಕೆ ಒಗ್ಗಿಕೊಂಡು ಬಿಡುತ್ತದೆ.


ಖಿನ್ನತೆಗೆ ಒಳಗಾಗಿರುವ ಅಮ್ಮಂದಿರು

ಪ್ರಸವಪೂರ್ವದ ಖಿನ್ನತೆಗಿಂತ ಬಹಳ ವಿಭಿನ್ನ ಆದದ್ದು ಗರ್ಭಕಾಲದ ಖಿನ್ನತೆ. ಇದು ತುಂಬಾ ಸಾಮಾನ್ಯವೂ ಆಗಿಬಿಟ್ಟಿದೆ. ಸುಮಾರು 10% ಅಷ್ಟು ತಾಯಂದಿರು ಇದರಿಂದ ಬಳಲುತ್ತಾರೆ. ಖಿನ್ನತೆಗೆ ಒಳಗಾಗಿದ್ದ ಅಮ್ಮನಿಗೆ ಜನಿಸುವ ಮಕ್ಕಳು ಪ್ರಾಯಕ್ಕೆ ಕಾಲಿಡುವಷ್ಟರಲ್ಲಿ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳು ಇತರರಿಗಿಂತ 50% ಹೆಚ್ಚಿರುತ್ತದೆ. ಅಲ್ಲದೆ ಅವರು ಭಾವನಾತ್ಮಕ ತೊಡಕುಗಳಾದ ಆಕ್ರೋಶ, ಇತ್ಯಾದಿಗಳನ್ನ ಕೂಡ ಹೊಂದಬಹುದು.


ಗರ್ಭಿಣಿ ಆಗಿರುವುದೇ ಇಷ್ಟ ಇರದ ತಾಯಂದಿರು

ನಿಮ್ಮ ದೇಹದೊಳಗೆ ಪುಟ್ಟ ಮಗುವೊಂದು ಬೆಳೆಯುತ್ತಿರುವುದಕ್ಕೆ ನೀವು ತಿರಸ್ಕಾರ ಹೊಂದಿದ್ದರೆ, ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ. ಅಧ್ಯಯನಗಳು ಯಾವ ತಾಯಂದಿರಿಗೆ ತಮ್ಮ ಮಕ್ಕಳು ಹೊಟ್ಟೆಯಲ್ಲಿ ಇದ್ದಾಗ ಅದರ ಜೊತೆಗೆ ಅಷ್ಟೊಂದು ಬಾಂಧವ್ಯ ಹೊಂದಿರಲಿಲ್ಲವೋ, ಅಂತಹ ತಾಯಂದಿರ ಮಕ್ಕಳು ಮುಂದೆ ಭಾವನಾತ್ಮಕ ತೊಂದರೆಗಳನ್ನು ಅನುಭವಿಸುವ ಸಾಧ್ಯತೆಗಳು ಹೆಚ್ಚು ಎಂದು ತಿಳಿಸಿದೆ.


ಆಗೊಮ್ಮೆ - ಈಗೊಮ್ಮೆ ಬೇಸರ ಹೊಂದುವ ಅಮ್ಮಂದಿರು

ಇದು ಎಲ್ಲರಲ್ಲೂ ಆಗುವಂತದ್ದೇ. ಎಲ್ಲರಿಗೂ ಬೇಸರವಾಗುತ್ತದೆ. ಯಾವುದೋ ಒಂದು ದಿನ ನೀವು ಒತ್ತಡದಲ್ಲಿ ಸಿಲುಕಿದರೆ ಅಥವಾ ಮನ ನೊಂದುಕೊಂಡರೆ, ಅದು ನಿಮ್ಮ ಮಗು ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ.


ಏನು ಮಾಡಬೇಕು?

ನೀವು ಖುಷಿಯಾಗಿರಲು ಏನೆಲ್ಲಾ ಸಹಾಯ ಪಡೆಯಬೇಕೋ ಅವುಗಳನ್ನ ಪಡೆಯಿರಿ, ನಿಮಗೆ ಮಾಡಬೇಕೆನಿಸುವುದು ಮಾಡಿ. ಹೌದು, ನಿಮ್ಮ ಮೇಲೆ ಬಹಳಷ್ಟು ಒತ್ತಡಗಳು ಇದ್ದರೆ ಅದನ್ನು ಒಮ್ಮೆಲೇ ನಿರ್ಮೂಲನೆ ಮಾಡಲು ಆಗುವುದಿಲ್ಲ. ಆದರೆ, ಖಿನ್ನತೆಯ ಲಕ್ಷಣಗಳು ಯಾವುದೆಂದು ತಿಳಿದು, ಒಂದು ವೇಳೆ ನೀವು ಅದರಿಂದ ಬಳಲುತ್ತಿದ್ದರೆ ನಿಮ್ಮ ವೈದ್ಯರೊಡನೆ ಮಾತಾಡಿ ಔಷಧಿಗಳನ್ನು ಪಡೆದುಕೊಳ್ಳಿ.

Click here for the best in baby advice
What do you think?
0%
Wow!
100%
Like
0%
Not bad
0%
What?
scroll up icon