Link copied!
Sign in / Sign up
8
Shares

ನೀವು ಏಕೆ ಗರ್ಭಿಣಿ ಆಗುತ್ತಿಲ್ಲ? ಕಾರಣ ಮತ್ತು ಪರಿಹಾರ

ನೀವು ಹಲವು ದಿನಗಳಿಂದ ಗರ್ಭಧರಿಸಲು ಪ್ರಯತ್ನಿಸುತ್ತಿರುವಿರಾ? ಆದರೂ ನೀವು ಗರ್ಭಿಣಿ ಆಗುತ್ತಿಲ್ಲ ಎಂದರೆ, ಅದಕ್ಕೆ ಏನು ಕಾರಣ ಮತ್ತು ಗರ್ಭಧರಿಸಲು ನೀವು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಇದು ಸೂಕ್ತ ಸಮಯ. ಕಾರಣ ತಿಳಿದರೆ ಅದಕ್ಕೆ ಪರಿಹಾರವನ್ನು ಬೇಗನೆ ತಿಳಿದುಕೊಳ್ಳಬಹುದು, ನೀವು ಗರ್ಭಧರಿಸಲು ವಿಫಲವಾಗುತ್ತಿದ್ದಿರಿ ಎಂದರೆ ಇದನ್ನು ನೀವು ತಿಳಿದಿರಲೇಬೇಕು

ಗರ್ಭತಾಳಲು ಬರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದು ಮಾತ್ರ ಮಾರ್ಗವಲ್ಲ. ನಿಮ್ಮ ದೇಹದಲ್ಲಿರುವ ಒಂದು ಅಥವಾ ಹಲವು ಅಂಶಗಳು ಇದಕ್ಕೆ ಕಾರಣವಾಗಿರಬಹುದು. ಚಿಂತಿಸಬೇಡಿ, ನೀವು ಆರೋಗ್ಯವಾಗಿದ್ದರು, ಗರ್ಭತಾಳಲು ತೊಂದರೆ ಅನುಭವಿಸುತ್ತಿದ್ದರೆ ಈ ಲೇಖನ ನಿಮಗೆ ಖಂಡಿತ ಸಹಾಯವಾಗುತ್ತದೆ.

ಗರ್ಭಿಣಿ ಆಗದಿರಲು ಕೆಲವು ಪ್ರಮುಖ ಮತ್ತು ಸಾಮಾನ್ಯ ಕಾರಣಗಳು

ನಿಮ್ಮ ಪಿರಿಯಡ್ ನಿಯಮಿತವಾಗಿದ್ದರೆ, ಹಲವು ಅಂಶಗಳು ನೀವು ಗರ್ಭಧರಿಸದಿರಲು ಕಾರಣವಾಗಿರುತ್ತವೆ, ಅವು ಯಾವುವು ಎಂಬುದನ್ನು ಇಲ್ಲಿ ತಿಳಿಯೋಣ.

೧.ಅಧಿಕ ಒತ್ತಡ

ಒತ್ತಡ ನಿಮ್ಮ ಜೀವನದ ಮೇಲೆ ಸುಂಕವನ್ನು ಹೇರುತ್ತದೆ, ಅದು ದೈಹಿಕ ಮತ್ತು ಮಾನಸಿಕವಾಗಿಯೂ ನಿಮಗೆ ಸಮಸ್ಯೆಯಾಗಿ ಕಾಡುತ್ತದೆ, ಮತ್ತು ನೀವು ಗರ್ಭಧರಿಸುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಖಿನ್ನತೆ ಮತ್ತು ಆತಂಕದಂತಹ ಭಾವನಾತ್ಮಕ ಅಡಚಣೆಗಳು ನಿಮ್ಮ ಪಲವತ್ತತೆ ಮಟ್ಟವನ್ನು ಕಡಿಮೆ ಮಾಡುತ್ತವೆ. ನೀವು ಗರ್ಭಧರಿಸಲು ಶಾಂತವಾಗಿ ಮತ್ತು ಸಮತೋಲನದ ಸ್ಥಿಯಲ್ಲಿರುವುದು ಒಳ್ಳೆಯದು.

ನೀವು ಏನು ಮಾಡಬಹುದು?

ಒತ್ತಡದಿಂದ ಹೊರಬರಲು ನೀವು ನಿಮಗಾಗಿ ಸ್ವಲ್ಪ ಸಮಯವನ್ನು ಪಡೆಯಿರಿ. ನಿಮ್ಮ ಪ್ರೀತಿ ಪಾತ್ರರ ಜೊತೆ ಹೆಚ್ಚು ಸಮಯ ಕಳೆಯಿರಿ. ಧ್ಯಾನ ಮಾಡಿ.

೨.ಪುರುಷನ ಸಮಸ್ಯೆ

ಒಂದು ಪ್ರಧಾನ ಮತ್ತು ಮುಖ್ಯವಾದ ಕಾರಣವೆಂದರೆ, ಕಳಪೆ ಗುಣಮಟ್ಟದ ವೀರ್ಯ ಮತ್ತು ಕಡಿಮೆ ವೀರ್ಯ ಹೊಂದಿರುವುದು. ಇದು ಶೇಕಡಾ ೩೦ ರಿಂದ ೪೦ ಪ್ರತಿಶತದಷ್ಟು ಜೋಡಿಗಳಲ್ಲಿ ಸಾಮಾನ್ಯವಾಗಿ ಕಂಡು ಬರುತ್ತದೆ.

ನೀವು ಏನು ಮಾಡಬಹುದು?

ತಕ್ಷಣದ ಪರಿಹಾರಕ್ಕಾಗಿ ನೀವು ವೈದ್ಯರನ್ನು ಭೇಟಿ ಮಾಡುವುದು ಉತ್ತಮ. ನೀವು ವೀರ್ಯ ಗುಣ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು ಅಥವಾ IVF ಮೂಲಕ ನೀವು ಬೇಗನೆ ಗರ್ಭತಾಳುವಂತೆ ಮಾಡಬಹುದು, ಇದು ವೀರ್ಯ ಮತ್ತು ಮೊಟ್ಟೆಯನ್ನು ದೇಹದ ಹೊರಗಡೆ ಸೇರುವಂತೆ ಮಾಡುವರು. ಇನ್ನೊಂದು ಮಾರ್ಗವೆಂದರೆ, ICSI, ಇದರಲ್ಲಿ ಒಂದು ವೀರ್ಯವನ್ನು ತೆಗೆದುಕೊಂಡು ನೇರವಾಗಿ ಮೊಟ್ಟೆ ಒಳಗೆ ಸೇರಿಸುವರು.

೩.ಲೈಂಗಿಕ ಕ್ರಿಯೆ ನಂತರ ಶುಚಿಕೋಣೆಗೆ ಓಡುವುದು

ಹಲವು ಮಹಿಳೆಯರು ಸಂಭೋಗದ ನಂತರ ತೊಳೆದುಕೊಳ್ಳಲು ಬಾತ್ ರೂಮ್ ಗೆ ಓಡುವರು, ಆದರೆ ನೀವು ಸಂಭೋಗದ ನಂತರ ಕೆಲವು ಸಮಯ ಹಾಸಿಗೆ ಮೇಲೆ ಇರುವುದು ವೀರ್ಯವು ಮೊಟ್ಟೆಯನ್ನು ಸೇರಿ ಪಲವತ್ತತೆ ಮಾಡಲು ಸಹಾಯವಾಗುವುದು. ನೀವು ಸಂಭೋಗದ ನಂತರ ತಕ್ಷಣವೇ ಎದ್ದು ಹೋಗುವುದರಿಂದ ಗುರುತ್ವಾಕರ್ಷಣೆ ಶಕ್ತಿ ಇಂದ ವೀರ್ಯವು ಹಿಮ್ಮುಖವಾಗಿ ಮೊಟ್ಟೆಯನ್ನು ತಲುಪಲು ಸಾಧ್ಯವಾಗದೆ ಇರಬಹುದು.

ನೀವು ಏನು ಮಾಡಬಹುದು?

ನಿಮ್ಮ ಲೈಂಗಿಕ ಕ್ರಿಯೆಯ ನಂತರ ನೀವು ಹಾಸಿಗೆ ಮೇಲೆ ವಿಶ್ರಾಂತಿ ಪಡೆಯುವುದು ನೀವು ಗರ್ಭತಾಳಲು ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಡುತ್ತದೆ.

೪.ಬಿಗಿಯಾಗಿರುವ ಒಳಉಡುಪನ್ನು ಧರಿಸುವುದು

ಮಹಿಳೆಯರು ಸರಿಯಾದ ಅಕಾರ ಮತ್ತು ಅವರ ದೇಹ ಆಕೃತಿ ಎದ್ದುಕಾಣಿಸಲು ಬಿಗಿಯಾದ ಒಳಉಡುಪಗಳನ್ನು ಧರಿಸುವರು. ಆದರೆ ನೀವು ನಿಮ್ಮ ಸಂತಾನೋತ್ಪತ್ತಿಯ ಪ್ರಕ್ರಿಯೆಯನ್ನು ಅಡ್ಡಿಪಡಿಸುತ್ತಿದ್ದೀರಿ. ಪುರುಷರ ವೀರ್ಯ ಒಳಗೆ ನಂತರ, ಮಹಿಳೆಯರಲ್ಲಿ, ಅದು ಗಾಳಿ ಪಸರಣ ಕಡಿಮೆಯಾಗಿ ಅಸ್ವಸ್ಥತೆಗೆ ಒಳಗಾಗುವಂತೆ ಮಾಡುತ್ತದೆ.


ನೀವು ಏನು ಮಾಡಬಹುದು?

ನಿಮಗೆ ಸೂಕ್ತವಾದ, ಹತ್ತಿ ಇಂದ ಮಾಡಿರುವ ಒಳಉಡುಪನ್ನು ಧರಿಸುವುದು ಸೋಂಕನ್ನು ತಡೆಯುದರಲ್ಲೂ ಸಹಾಯ ಮಾಡುತ್ತದೆ. ಇದು ನಿಮ್ಮ ಖಾಸಗಿ ಅಂಗ ಬೆವರು ವಾಸನೆ ಬರದಂತೆ, ತೇವಾಂಶ ಕಾಪಾಡಲು ಮತ್ತು ಕಿರಿಕಿರಿ ಆಗದಂತೆ ನೋಡಿಕೊಳ್ಳುವ ಜೊತೆಗೆ ಅದು ಆರಾಮದಾಯಕವಾಗಿರುವಂತೆ ನೋಡಿಕೊಳ್ಳುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon