Link copied!
Sign in / Sign up
2
Shares

ಗರ್ಭಿಣಿ ಆಗಿದ್ದಾಗಲೇ ನೀವು ಗರ್ಭಿಣಿ ಆಗಬಹುದ? ಹೌದು ಮತ್ತು ಇಲ್ಲ !

ಯಾವುದೇ ಜನನ ನಿಯಂತ್ರಣ ವಿಧಾನವು 100% ಸುರಕ್ಷಿತವಲ್ಲ ಎಂದು ಎಲ್ಲರು ಹೇಳುತ್ತಾರೆ, ಆದರೆ ಇಲ್ಲಿಯವರೆಗೂ ನಾವು ನಮ್ಮ ಇಂದ್ರಿಯನಿಗ್ರಹದಿಂದ ಸೆಕ್ಸ್ ಇಂದ ದೂರ ಉಳಿಯುವುದೊಂದೇ ಮಾತ್ರ ಅತ್ಯಂತ ಪರಿಣಾಮಕಾರಿ ವಿಧಾನ ಎಂದು ನಂಬಿದ್ದೆವು. ಆದರೆ ನೀವು ಈಗಾಗಲೇ ಗರ್ಭವತಿ ಆಗಿದ್ದರೆ? ನೀವು ಈಗ ಗರ್ಭಿಣಿ ಆಗಿದ್ದರೂ ಮತ್ತೊಮ್ಮೆ ಗರ್ಭಿಣಿ ಆಗಬಹುದೇ?

ಇದಕ್ಕೆ ಬಹುತೇಕ ಎಲ್ಲರ ಉತ್ತರ “ಇಲ್ಲ” ಎಂಬುದಾಗಿರುತ್ತದೆ. ನೀವು ಒಮ್ಮೆ ಗರ್ಭಿಣಿ ಆಗಿದ್ದಾಗಲೇ ಮತ್ತೆ ಗರ್ಭಿಣಿ ಆಗುವುದಿಲ್ಲ. ಹಾಗಿದ್ದೂ ಒಂದು ತುಂಬಾ ವಿರಳವಾದ ವಿದ್ಯಮಾನ ಇದೆ - ಅದುವೇ ಸೂಪರ್ ಫೆಟೇಷನ್, ಅಂದರೆ ಇಲ್ಲಿ ಎರಡನೇ ಅಂಡಾಣು ಬಿಡುಗಡೆ ಆಗಿ ಫಲೀಕರಣ ಹೊಂದುತ್ತದೆ. ಆದರೆ ಇದು ಮೊದಲೇ ಹೇಳಿದಂತೆ ತುಂಬಾನೇ ವಿರಳ. ವೈದ್ಯಕೀಯ ಇತಿಹಾಸದಲ್ಲಿ ಇಂತಹ ಪ್ರಕರಣಗಳು ವಿರಳವಾಗಿದ್ದರು, ದಾಖಾಲಂತೂ ಆಗಿವೆ.

ಬಹುತೇಕ ಎಲ್ಲಾ ಹೆಂಗಸರಲ್ಲಿ, ಅವರು ಒಮ್ಮೆ ಗರ್ಭತಾಳಿದೊಡನೆ, ಅವರ ದೇಹವು ಅಂಡೋತ್ಪತ್ತಿ ಮಾಡದಂತೆ ತಡೆಯಲು ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಗರ್ಭಕಂಠವನ್ನು ಲೋಳೆಯ ಪ್ಲಗ್ ಇಂದ ಮುಚ್ಚ್ಚಿ, ಗರ್ಭಕೋಶಕ್ಕೆ ಯಾವುದೇ ವೀರ್ಯ ಸೇರದಂತೆ ಮಾಡುತ್ತದೆ.

ಅಮೆರಿಕಾದ ಜೂಲಿಯಾ ಗ್ರೋವೆಂಬುರ್ಗ್ ಎಂಬುವಳ ಪ್ರಕರಣದಲ್ಲೂ ಆದದ್ದು ಹೀಗೆ. ಜೂಲಿಯಾ ತಾನು ಗರ್ಭಿಣಿ ಆಗಿದ್ದೇನೆ ಎಂದು ತಿಳಿದೊಡನೆ ವೈದ್ಯರ ಬಳಿ ತಪಾಸಣೆಗೆ ತೆರೆಳಿದಳು. ಆಗ ವೈದ್ಯರು ಆಕೆಗೆ ಅಲ್ಟ್ರಾಸೌಂಡ್ ತಪಾಸಣೆ ಮಾಡಿ ಆಕೆಯ ಹೊಟ್ಟೆಯೊಳಗೆ ಒಂದು ಭ್ರೂಣದ ಚೀಲವನ್ನು ಗುರುತಿಸಿ ಆಕೆ ಈಗ ಎಷ್ಟು ತಿಂಗಳ ಗರ್ಭಿಣಿ ಎಂದು ಊಹಿಸಿ ಹೇಳಿದರು. ಆದರೆ, ಅವರು ಆಕೆಯ ಹೊಟ್ಟೆಯಿಂದ ಎರಡನೇ ಹೃದಯಬಡಿತ ಕೇಳಿಸಿಕೊಂಡರು. ಅದು ಏನು ಎಂದು ಹುಡುಕಿದರೆ, ಅಲ್ಲಿ ಇನ್ನೊಂದು ಮಗುವಿತ್ತು. ಆದರೆ ಆ ಮಗುವಿಗು ಮತ್ತು ಮೊದಲನೆಯ ಮಗುವಿಗೂ ವಯಸ್ಸಿನಲ್ಲಿ ಮತ್ತು ಗಾತ್ರದಲ್ಲಿ ಬಹಳ ವ್ಯತ್ಯಾಸ ಇತ್ತು!

ಅವಳಿ ಜವಳಿ ಮಕ್ಕಳು ಹೆರಿಗೆ ಸಮಯದಲ್ಲಿ ಬೇರೆ ಬೇರೆ ತೂಕ, ಗಾತ್ರ ಹೊಂದಿರಬಹುದು. ಆದರೆ ಗರ್ಭಧಾರಣೆಯ ಮೊದಲ ಹಂತಗಳಲ್ಲಿ ಎರಡೂ ಭ್ರೂಣಗಳು ಒಂದೇ ಗಾತ್ರ ಹೊಂದಿರುತ್ತವೆ. ಆದರೆ ಈಕೆಯ ಪ್ರಕರಣದಲ್ಲಿ ಇದು ಸುಳ್ಳಾಗಿತ್ತು. ಆಗ ಪರಿಶೀಲನೆ ನಡೆಸಿದೆ ವೈದ್ಯರು ಇದು ಸೂಪರ್ ಫೆಟೇಷನ್ ಅಲ್ಲದೆ ಬೇರೇನೂ ಅಲ್ಲ ಎಂದು ಹೇಳಿದರು.

ಈ ಸೂಪರ್ ಫೆಟೇಷನ್ ಆಗಲು ಇರುವ ಒಂದೇ ಕಾರಣ ಎಂದರೆ ಅದು ಹೆಣ್ಣಿನ ದೇಹವು ಸರಿಯಾಗಿ ಕಾರ್ಯನಿರ್ವಹಣೆ ಮಾಡದೇ ಇರುವುದು. ಗರ್ಭಿಣಿ ಆಗಿದ್ದಾಗಲೇ ಆಕೆಯ ದೇಹವು ಪುನಃ ಅಂಡೋತ್ಪತ್ತಿ ಮಾಡಿದರೆ ಮಾತ್ರ ಈ ರೀತಿ ಆಗಲು ಸಾಧ್ಯ. ಸಾಮಾನ್ಯವಾಗಿ ಗರ್ಭಧಾರಣೆಯ ಸಮಯದಲ್ಲಿ ದೇಹವು ಉತ್ಪತ್ತಿ ಮಾಡುವ ಹಾರ್ಮೋನುಗಳ ವಾತಾವರಣವು ಅಂಡೋತ್ಪತ್ತಿಗೆ ಸೂಕ್ತವಾಗಿರುವುದಿಲ್ಲ.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon