ಗರ್ಭವೇ ಮೊದಲ ಪಾಠಶಾಲೆ : ಗರ್ಭದಲ್ಲಿ ಮಗುವು ಇವುಗಳನ್ನು ಕಲಿಯುತ್ತದೆ
ಗರ್ಭಾವಸ್ಥೆಯು ಮಹಿಳೆಯ ಜೀವನದ ಅತ್ಯಂತ ಖುಷಿಯ ಕ್ಷಣ. ಆಕೆಯು ಗರ್ಭಾವಸ್ಥೆಯ ದಿನಗಳನ್ನು ಆನಂದದಿಂದ ಅನುಭವಿಸುತ್ತಾಳೆ. ಆದರೆ, ಪ್ರತಿ ತಾಯಿಯ ಮನದಲ್ಲಿ ಕಾಡುವ ಪ್ರಶ್ನೆ ಮಗು ಈಗ ಹೊಟ್ಟೆಯೊಳಗೆ ಏನು ಮಾಡುತ್ತಿರಬಹುದು? ನಿದ್ರಿಸುತ್ತಿದೆಯೇ? ಆಟವಾಡುತ್ತಿದೆಯೇ? ಎಂದು. ಇದರ ಜೊತೆಗೆ ಮಗುವು ನಿಮ್ಮ ಹೊಟ್ಟೆಯೊಳಗೆ ಅನೇಕ ವಿಷಯಗಳನ್ನು ಕಲಿಯುತ್ತದೆ ಎಂದು ನಿಮಗೆ ಗೊತ್ತೇ? ಹೌದು ನಿಮ್ಮ ಮಗು ಉದರದೊಳಗೆ ಏನೆಲ್ಲಾ ಕಲಿಯುತ್ತದೆ ಎಂಬುದನ್ನು ತಿಳಿಯಲು ಈ ಲೇಖನ ಓದಿ.
೧.ಉಸಿರಾಡುವುದನ್ನು ಅಭ್ಯಾಸ ಮಾಡುತ್ತದೆ
ನಿಜವಾಗಿಯೂ ಮಗುವು ಉದರದಲ್ಲಿ ಉಸಿರಾಟ ನಡೆಸದಿದ್ದರೂ, ತನ್ನ ಮೊದಲ ಉಸಿರಾಟ ನಡೆಸಲು ಉದರದೊಳಗೆ ಕಲಿಯಲು ಪ್ರಾರಂಭಿಸುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿಯು ತನ್ನ ಮಗುವಿಗಾಗಿ ಉಸಿರಾಟ ನಡೆಸುವರು, ಹೊಕ್ಕುಳ ಬಳ್ಳಿಯ ಮೂಲಕ ಆಮ್ಲಜನಕ ಮಗುವನ್ನು ಸೇರುವುದು ಮತ್ತು ಜರಾಯುವಿನ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನ್ನು ಹೊರಗೆ ಕಳುಹಿಸುವುದು. ಆದರೆ ೯ ವಾರಗಳ ಗರ್ಭವಾಸ್ಥೆಯ ನಂತರ, ನಿಮ್ಮ ಮಗು ಈಗಾಗಲೇ ಉಸಿರಾಟದ ರೀತಿಯ ಚಲನೆಯನ್ನು ಅಭ್ಯಾಸ ಮಾಡುತ್ತಿದೆ. ಮತ್ತು ಗರ್ಭಾವಸ್ಥೆಯ ಕೊನೆಯ ಅವಧಿಯಲ್ಲಿ, ಮಗುವು ಆಮ್ನಿಯೋಟಿಕ್ ದ್ರವವನ್ನು ಸಾಂದರ್ಭಿಕವಾಗಿ ತೆಗೆದುಕೊಂಡು ಹೊರಗೆ ಬಿಡುತ್ತದೆ. ಮತ್ತು ಶ್ವಾಸ ನಾಳಗಳ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯನ್ನು ಮಾಡುತ್ತದೆ, ಇದು ಮಗುವು ಜನಿಸಿದ ಕೂಡಲೇ ತನ್ನ ಉಸಿರಾಟವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದನ್ನು ತೋರಿಸುತ್ತದೆ.
೨.ಏನು ಶಬ್ದ ಅದು
ರಾತ್ರಿಯಂತೆ ನೆಮ್ಮದಿಯ ವಿಶ್ರಾಂತಿ ಪಡೆಯಲು ಗರ್ಭವು ಸರಿಯಾದ ಸ್ಥಳವಲ್ಲ. ಮಗುವು ನಿಮ್ಮ ಹೃದಯ ಬಡಿತ, ರಕ್ತದ ಸಂಚಾರ, ಜಠರದ ಶಬ್ದ, ಮತ್ತು ನಿಮ್ಮ ಧ್ವನಿಯು ಮಗುವು ಶಬ್ದದ ಅಲೆಯಲ್ಲಿ ಮುಳುಗುವಂತೆ ಮಾಡುತ್ತದೆ. ಇದೆಲ್ಲದರ ನಡುವೆ ಮಗುವು ನಿಮ್ಮ ಧ್ವನಿಯನ್ನು, ನೀವು ಕೇಳುತ್ತಿರುವ ಸಂಗೀತ, ಸಿನಿಮಾ, ನಾಯಿಯ ಶಬ್ದ ಎಲ್ಲವನ್ನು ಆಲಿಸುತ್ತದೆ. ಖಂಡಿತವಾಗಿ, ನೀವು ಏನನ್ನು ಕೇಳುತ್ತೀರಾ ಅದನ್ನು ನಿಮ್ಮ ಮೂಲಕ ಮಗುವು ಕೇಳಿಸಿಕೊಳ್ಳುತ್ತದೆ.
ನಿಮ್ಮ ಗರ್ಭವಾಸ್ಥೆಯ ೨೦ ವಾರಗಳು ತುಂಬುತ್ತಿದ್ದಂತೆ, ಮಗುವಿನಲ್ಲಿ ಆಲಿಸುವ ಶಕ್ತಿಯನ್ನು ಬೆಳೆಸಲು ಪ್ರಾರಂಭ ಮಾಡಿ, ೨೭ನೇ ವಾರಕ್ಕೆ ಶಬ್ದಗಳಿಗೆ ಪ್ರತಿಕ್ರಿಯಿಸುತ್ತದೆ.
೩.ತಾಯಿ ಜೊತೆ ಬಾಂಧವ್ಯ
ನಿಮ್ಮ ಮಗುವು ಪ್ರಪಂಚದ ಶಬ್ದಗಳನ್ನು ಕೇಳಿಸಿಕೊಳ್ಳುತ್ತಿದೆ ಎಂದರೆ ಆದಷ್ಟು ಬೇಗ ನಿಮ್ಮನ್ನು ಭೇಟಿಮಾಡಲು ಬರುತ್ತಿದೆ ಎಂದು, ಅದರಲ್ಲೂ ಮಗುವು ತಾಯಿಯ ಧ್ವನಿಯನ್ನು ಗಮನವಿಟ್ಟು ಕೇಳುತ್ತದೆ. ಮಗುವಿನ ಬಾಂಧವ್ಯದ ಮೊದಲ ಹಂತ ನಿಮ್ಮ ಧ್ವನಿಯ ಮೂಲಕ, ನೀವೇ ತನ್ನ ತಾಯಿ ಎಂದು ಅದು ನಿರ್ಧರಿಸಿಕೊಳ್ಳುತ್ತದೆ. ಮತ್ತು ಮಗು ಜನಿಸಿದ ನಂತರ ನಿಮ್ಮ ಧ್ವನಿಯನ್ನು ಗುರುತಿಸುತ್ತದೆ.
೪.ಭಾಷೆಯನ್ನು ಕಲಿಯುತ್ತದೆ
ಅಧ್ಯಯನದ ಪ್ರಕಾರ, ಮಗುವು ತನ್ನ ತಾಯಿಯ ಧ್ವನಿಯನ್ನು ಮಾತ್ರ ಗುರುತಿಸುವುದಿಲ್ಲ, ಬದಲು ಮಗುವು ಗರ್ಭದಲ್ಲೇ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತದೆ. ಜೋರು ಶಬ್ದ ಅಥವಾ ಶಬ್ದ ಇಲ್ಲದಿರಲಿ, ಮಗುವು ಭಾಷೆಯನ್ನು ಪ್ರತ್ಯೇಕಿಸಿ ಮಾತೃಭಾಷೆಯನ್ನು ಕಲಿಯಲು ಶುರುಮಾಡುತ್ತದೆ.
೫.ಒತ್ತಡಕ್ಕೆ ಪ್ರತಿಕ್ರಿಯಿಸುತ್ತದೆ
ನಮಗೆಲ್ಲಾ ಗೊತ್ತು ಗರ್ಭಿಣಿ ಮಹಿಳೆಯರಲ್ಲಿ ಒತ್ತಡ ಬರದಂತೆ ನೋಡಿಕೊಳ್ಳಬೇಕು ಅದರಲ್ಲೂ ಅವರ ಪತಿಯು ಇದರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು. ಅಧ್ಯಯನಗಳ ಪ್ರಕಾರ ತಾಯಿಯರ ಜೀವನಶೈಲಿ, ಮತ್ತು ಒತ್ತಡ ಅವರ ಮಗುವಿನ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎಂದು ಹೇಳಿವೆ.
ಕೆಲವು ಅಧ್ಯಯನಗಳು ಗರ್ಭಾವಸ್ಥೆಯಲ್ಲಿ ಹೆಚ್ಚಿನ ಒತ್ತಡವು ಮಗುವಿನ ಮನೋಧರ್ಮ ಮತ್ತು ನರರೋಗ ಬೆಳವಣಿಗೆಗೆ ಕಾರಣವಾಗಬಹುದು ಎಂದು ಸೂಚಿಸುತ್ತವೆ.