Link copied!
Sign in / Sign up
21
Shares

ಗರ್ಭಾವಸ್ಥೆಯಲ್ಲಿ ತಪಾಸಣೆ(ಸ್ಕ್ಯಾನ್ ಗಳು)

ಒಂದು ಅಲ್ಟ್ರಾಸೌಂಡ್(ಶ್ರಾವಣಾತೀತಾ) ಸ್ಕ್ಯಾನ್ ಹೊಟ್ಟೆಯ ಮೂಲಕ ಗರ್ಭಾಶಯದೊಳಗೆ ಹೆಚ್ಚು ಆವರ್ತನದ ಧ್ವನಿ ತರಂಗಗಳನ್ನು ಕಳುಹಿಸುತ್ತದೆ. ಈ ತರಂಗಗಳು ಮಗುವಿನಿಂದ ಪುಟಿಯುವ ಧ್ವನಿಗಳನ್ನು ಹಿಡಿದು ಅದರ ಪ್ರತಿಧ್ವನಿಗಳನ್ನು ಚಿತ್ರಕ್ಕೆ ಅನುವಾದಿಸಿ ಗಣಕಯಂತ್ರದ ಮೂಲಕ ನಾವು ನೋಡುವಂತೆ ಮಾಡುತ್ತದೆ. ಆ ಚಿತ್ರದ ಮೂಲಕ ಮಗುವಿನ ಸ್ಥಿತಿ ಮತ್ತು ಚಲನಗಳನ್ನು ಗಮನಿಸಬಹುದು. ಮೂಳೆಗಳಂತಹ ಗಟ್ಟಿ ಅಂಗಾಂಶಗಳು ಚಿತ್ರದ ಮೇಲೆ ಬಿಳಿ ಪ್ರದೇಶಗಳಾಗಿ ಕಾಣುತ್ತವೆ ಮತ್ತು ಮೃದುವಾದ ಅಂಗಾಂಶಗಳು ಬೂದು ಮತ್ತು ಕಲೆಗಳಂತೆ ಕಾಣಿಸುತ್ತವೆ. ದ್ರವ ಪದಾರ್ಥಗಳು (ಮಗುವಿನ ಸುತ್ತು ಇರುವ ಆಮ್ನಿಯೋಟಿಕ್ ದ್ರವವು) ಯಾವುದೇ ಪ್ರತಿಧ್ವನಿಗಳನ್ನು ಪ್ರತಿಬಿಂಬಿಸುವುದಿಲ್ಲ, ಆದ್ದರಿಂದ ಇದು ಕಪ್ಪು ಬಣ್ಣದಲ್ಲಿ ಕಾಣುತ್ತದೆ. ಇದು ಬಿಳಿ, ಬೂದು ಮತ್ತು ಕಪ್ಪು ಈ ವಿಭಿನ್ನ ಛಾಯೆಗಳ ನಡುವಿನ ವ್ಯತಿರಿಕ್ತವಾಗಿದೆ, ಇದು ವೈದ್ಯರು ಚಿತ್ರಗಳನ್ನು ವ್ಯಾಖ್ಯಾನಿಸಲು ಅನುವು ಮಾಡಿಕೊಡುತ್ತದೆ.

ಗರ್ಭಾವಸ್ಥೆಯು ಯಾವ ಹಂತದಲ್ಲಿದೆ, ಅದರ ಆಧಾರದಲ್ಲಿ ಸ್ಕ್ಯಾನ್ ಗಳನ್ನು ಮಾಡಲಾಗುತ್ತದೆ, ಅಲ್ಟ್ರಾಸೌಂಡ್ ಸ್ಕ್ಯಾನ್ ಇದನ್ನು ಮಾಡಬಹುದು:

೧.ಫಲವತ್ತಾದ ಮೊಟ್ಟೆ(ಫರ್ಟಿಲೆಜೆಡ್ ಎಗ್ಗ್) ತನ್ನನ್ನು ತಾನು ಎಲ್ಲಿ ಹುದುಗಿಸಿಕೊಂಡಿದೆ ಎಂಬುದನ್ನು ತೋರಿಸುತ್ತದೆ. ಇದು ನಿಮ್ಮ ಜರಾಯು(ಪ್ಲಾಸೆಂಟ) ಬೆಳೆಯುವ ಸ್ಥಳವಾಗಿದೆ.

೨.ನಿಮ್ಮ ಮಗುವಿನ ಹೃದಯ ಬಡಿತ ಸರಿ ಇದೆಯಾ ಎಂಬುದನ್ನು ಪರೀಕ್ಷಿಸುತ್ತದೆ.

೩.ನಿಮ್ಮ ಗರ್ಭದಲ್ಲಿ ಎಷ್ಟು ಮಗುವಿದೆ ಎಂಬುದನ್ನು ತಿಳಿಸುತ್ತದೆ.

೪.ಗರ್ಭಾಶಯದ ಹೊರಭಾಗದಲ್ಲಿ ಭ್ರೂಣವು ಕಸಿದುಕೊಳ್ಳುವ ಅಪಸ್ಥಾನೀಯ ಗರ್ಭಧಾರಣೆಯನ್ನು ಪತ್ತೆಹಚ್ಚುತ್ತದೆ, ಸಾಮಾನ್ಯವಾಗಿ ಫಾಲೋಪಿಯನ್ ಟ್ಯೂಬ್ನಲ್ಲಿ ಇದನ್ನು ಕಾಣಬಹುದು.

೫.ನಿಮಗೆ ರಕ್ತಸ್ರಾವವಿದ್ದರೆ ಅದಕ್ಕೆ ಕಾರಣ ಏನೆಂಬುದನ್ನು ತಿಳಿಯಬಹುದು.

೬.ನಿಮ್ಮ ಮಗುವಿನ ದಿನವನ್ನು ನಿಖರವಾಗಿ ಅಳೆಯುತ್ತದೆ(ನಿಮ್ಮ ಪ್ರಸವ ದಿನವನ್ನು ತಿಳಿಯಬಹುದು).

೭.೧೧ ರಿಂದ ೧೩ನೇ ವಾರಗಳಲ್ಲಿ ನಿಮ್ಮ ಮಗುವಿನ ಕುತ್ತಿಗೆಯ ಹಿಂಭಾಗದಲ್ಲಿರುವ ದ್ರವವನ್ನು ಅಳೆಯುವ ಮೂಲಕ ಡೌನ್ ಸಿಂಡ್ರೋಮ್ ನ ಅಪಾಯವನ್ನು ನಿರ್ಣಯಿಸುತ್ತದೆ. (nuchal translucency scan).

೮.ರಕ್ತ ಪರೀಕ್ಷೆಯಲ್ಲಿನ ಅಸಹಜತೆಗೆ ಕಾರಣವನ್ನು ತಿಳಿದುಕೊಳ್ಳಬಹುದು.

೯.ಮಗು ಮತ್ತು ಜರಾಯುವಿನ(ಪ್ಲಾಸೆಂಟ) ಸ್ಥಿತಿಯನ್ನು ತೋರಿಸುವ ಮೂಲಕ ಸಿವಿಎಸ್ ಅಥವಾ ಆಮ್ನಿಯೋಸೆನ್ಟೆಸಿಸ್ ನಂತಹ ರೋಗನಿರ್ಣಯದ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ.

೧೦.ಮಗುವಿನ ಎಲ್ಲಾ ಅಂಗಗಳು ಸರಿಯಾಗಿ ಬೆಳವಣಿಗೆಯಾಗುತ್ತಿದೆಯಾ ಎಂದು ಪರೀಕ್ಷಿಸುತ್ತದೆ.

೧೧.ಸ್ಪಿನಾ ಬೈಫಿಡಾದಂತಹ ಕೆಲವು ಜನ್ಮಜಾತ ಅಸಹಜತೆಗಳನ್ನು ಪತ್ತೆಹಚ್ಚುವುದು.

೧೨.ಆಮ್ನಿಯೋಟಿಕ್ ದ್ರವದ ಪ್ರಮಾಣವನ್ನು ಅಳೆಯುತ್ತದೆ ಮತ್ತು ಜರಾಯುವಿನ(ಪ್ಲಾಸೆಂಟ) ಸ್ಥಿತಿಯನ್ನು ಪರಿಶೀಲಿಸುತ್ತದೆ.

೧೩.ನಿಮ್ಮ ಮಗುವಿನ ನಿರಂತರ ಬೆಳವಣಿಗೆಯನ್ನು ಹಲವು ಬಾರಿ ಸ್ಕ್ಯಾನ್ ಮಾಡಿಸುವ ಮೂಲಕ ತಿಳಿದುಕೊಳ್ಳಬಹುದು.

೧೪.ನಿಮ್ಮ ಜರಾಯು(ಪ್ಲಾಸೆಂಟ) ಮತ್ತು ಮಗುವಿನ ನಡುವೆ ರಕ್ತವು ಹೇಗೆ ಹರಿಯುತ್ತದೆ ಎಂಬುದನ್ನು ಪರಿಶೀಲಿಸಿಕೊಳ್ಳಿ.

ಪ್ರಮುಖವಾಗಿ ವಾಡಿಕೆಯಂತೆ ಮಾಡಿಸುವ ಸ್ಕ್ಯಾನ್ ಗಳೆಂದರೆ:

೧. ಹೆರಿಗೆ ದಿನ ಮತ್ತು ಕಾರ್ಯ ಸಾದ್ಯತೆ ಸ್ಕ್ಯಾನ್(ಡೇಟ್ ಮತ್ತು ವಿಯಬಿಲಿಟಿ ಸ್ಕ್ಯಾನ್)

ಇದನ್ನು ಸಾಮಾನ್ಯವಾಗಿ ೬ ​​ರಿಂದ ೯ ನೇ ವಾರದ ಅವಧಿಯ ಮೊದಲ ತ್ರೈಮಾಸಿಕದಲ್ಲಿ ಮಾಡಲಾಗುತ್ತದೆ. ಗರ್ಭಧಾರಣೆಯನ್ನು ದೃಢೀಕರಿಸಲು ನಿಮಗೆ ಸ್ಕ್ಯಾನ್ ಅಗತ್ಯವಿಲ್ಲದಿದ್ದರು, ಈ ಸ್ಕ್ಯಾನ್ ಮಾಡಿಸುವುದರಿಂದ:

೧.ಗರ್ಭಾಶಯದೊಳಗೆ ನಿಮ್ಮ ಮಗು ಸರಿಯಾದ ಸ್ಥಾನದಲ್ಲಿದೆಯೇ ಎಂದು ಪರಿಶೀಲಿಸಿಕೊಳ್ಳಲು.

೨.ನಿಮ್ಮ ಮಗುವಿನ ಹೃದಯ ಬಡಿತವನ್ನು ಕೇಳಿಸಿಕೊಳ್ಳಿ, ಇದು ಗರ್ಭಧಾರಣೆಯು ಕಾರ್ಯಸಾಧ್ಯವಾದ ಚಿಹ್ನೆಗಳಲ್ಲಿ ಒಂದಾಗಿದೆ. ಹೃದಯವು ಸಾಮಾನ್ಯವಾಗಿ ಸುಮಾರು ಆರು ವಾರಗಳಲ್ಲಿ ತನ್ನ ಬಡಿತವನ್ನು ಪ್ರಾರಂಭಿಸುತ್ತದೆ.

೩.ನಿಮ್ಮ ಹೆರಿಗೆಯ ದಿನವನ್ನು ನಿಖರವಾಗಿ ತಿಳಿದುಕೊಳ್ಳಿ. ನಿಮ್ಮ ಮುಟ್ಟಿನ ಚಕ್ರದ ಕೊನೆಯ ಅವಧಿಯನ್ನು ಮರೆತ್ತಿದ್ದರೆ, ಅಥವಾ ಋತುಚಕ್ರ ಅನಿಯಮಿತವಾಗಿದ್ದರೆ, ಅಲ್ಟ್ರಾಸೌಂಡ್ ಸ್ಕ್ಯಾನ್ ಮೂಲಕ ಹೆರಿಗೆಗೆ ಇನ್ನು ಎಷ್ಟು ಸಮಯವಿದೆ ಎಂಬುದನ್ನು ನಿಖರವಾಗಿ ತಿಳಿದುಕೊಳ್ಳಬಹುದು.

೪.ನಿಮಗೆ ಇರುವ ರಕ್ತಸ್ರಾವಕ್ಕೆ ಕಾರಣವನ್ನು ತಿಳಿದುಕೊಳ್ಳಬಹುದು.

೫.ನಿಮ್ಮ ಗರ್ಭದಲ್ಲಿ ಎಷ್ಟು ಮಗು ಇದೆ ಎಂಬುದನ್ನು ಹೇಳುತ್ತದೆ.

೨. ನುಚಲ್ ಟ್ರಾನ್ಸ್ಲುಸೆನ್ಸಿ ಸ್ಕ್ಯಾನ್(ಎನ್.ಟಿ ಸ್ಕ್ಯಾನ್)

ಎನ್.ಟಿ ಎಂದರೆ ಮಗುವಿನ ಕತ್ತಿನ ಹಿಂಭಾಗದಲ್ಲಿ ಚರ್ಮದ ಅಡಿಯಲ್ಲಿ ಸಂಗ್ರಹವಾಗಿರುವ ದ್ರವ. ಎನ್.ಟಿ ಸ್ಕ್ಯಾನ್ ಈ ದ್ರವದ ದಪ್ಪವನ್ನು ಅಳೆಯುವ ಮೂಲಕ ಡೌನ್ ಸಿಂಡ್ರೋಮ್ ಮತ್ತು ದುರ್ಬಲ ಹೃದಯರಕ್ತನಾಳದ ಬೆಳವಣಿಗೆಗಳ ಅಪಾಯವನ್ನು ನಿರ್ಣಯಿಸಲು ಸಹಕರಿಸುತ್ತದೆ. ಅಲ್ಟ್ರಾಸೌಂಡ್ ನ ಸಹಾಯದಿಂದ ಇದನ್ನು ಅಳೆಯಬಹುದು. ಪರೀಕ್ಷೆಯಲ್ಲಿ ಹೆಚ್ಚಿನ ದ್ರವ ಇರುವುದು ಪತ್ತೆಯಾದರೆ, ಅದು ಡೌನ್ ಸಿಂಡ್ರೋಮ್ ಇರುವುದರ ಸಂಕೇತವಾಗುತ್ತದೆ.

ನಿಮ್ಮ ಗರ್ಭಾವಸ್ಥೆಯ ನಿರ್ದಿಷ್ಠ ಸಮಯದಲ್ಲಿ ಎನ್.ಟಿ. ಸ್ಕ್ಯಾನ್ ಅನ್ನು ಮಾಡಿಸಿಕೊಳ್ಳಬೇಕು. ನಿಮ್ಮ ಮಗುವಿನ ಕ್ರೌನ್-ರಂಪ್ ಉದ್ದ(ಸಿ.ಆರ್.ಎಲ್.)ವು ೪೫ಎಮ್.ಎಮ್.-೮೪ಎಮ್.ಎಮ್. ಇರುವಾಗ, ೧೧ ವಾರ ೨ದಿನ ಮತ್ತು ೧೩ ವಾರ ೬ ದಿನ ಇದ್ದಾಗ ಇದನ್ನು ಮಾಡುತ್ತಾರೆ. ೧೧ ವಾರಗಳಿಗೂ ಮೊದಲು, ಸ್ಕ್ಯಾನ್ ಮಾಡುವುದು ತಾಂತ್ರಿಕವಾಗಿ ಕಷ್ಟ ಏಕೆಂದರೆ ಭ್ರೂಣವು ಚಿಕ್ಕದಾಗಿರುತ್ತದೆ, ಏನು ಸ್ಪಷ್ಟವಾಗಿ ಅರ್ಥವಾಗುವುದಿಲ್ಲ. ೧೪ ವಾರಗಳ ನಂತರ, ನಿಮ್ಮ ಮಗುವಿನ ಬೆಳವಣಿಗೆಯಲ್ಲಿ ದುಗ್ಧನಾಳದ ವ್ಯವಸ್ಥೆಯಿಂದ ಯಾವುದೇ ಅಧಿಕ ಪ್ರಮಾಣದ ದ್ರವವನ್ನು ಗಮನಿಸಿದರೆ, ಅದು ಪರೀಕ್ಷೆಯನ್ನು ಸರಿಯಾಗಿ ಮಾಡಿಲ್ಲ ಎಂದು.

೩. ಅಸಂಗತ(ಅನೋಮಲಿ) ಸ್ಕ್ಯಾನ್

ಅಸಂಗತ ಸ್ಕ್ಯಾನ್ ಎರಡನೇ ತ್ರೈಮಾಸಿಕದಲ್ಲಿ ಅತ್ಯಂತ ಸಾಮಾನ್ಯವಾಗಿ ಮಾಡುವ ಸ್ಕ್ಯಾನ್ ಆಗಿದೆ. ಇದನ್ನು ೧೮-೨೦ ವಾರಗಳ ಅಂತರದಲ್ಲಿ ಮಾಡುತ್ತಾರೆ. ಇದು,

೧.ನಿಮ್ಮ ಮಗುವಿನ ಬೆಳವಣಿಗೆಯನ್ನು ತೋರಿಸುತ್ತದೆ ಮತ್ತು ಭ್ರೂಣದ ಚಲನೆಗಳನ್ನು ಪರೀಕ್ಷಿಸುತ್ತದೆ.

೨.ನಿಮ್ಮ ಮಗುವಿನ ಆಂತರಿಕ ಅಂಗಗಳು ಚೆನ್ನಾಗಿ ಬೆಳೆಯುತ್ತಿದೆಯೆ ಎಂದು ಖಚಿತಪಡಿಸಿಕೊಳ್ಳಿ.

೩.ನಿಮ್ಮ ಮಗುವಿನಲ್ಲಿರುವ ಕೆಲವು ಜನ್ಮ ದೋಷಗಳನ್ನು ಪತ್ತೆ ಮಾಡುತ್ತದೆ.

೪.ಆಮ್ನಿಯೋಟಿಕ್ ದ್ರವದ ಪ್ರಮಾಣವನ್ನು ಅಂದಾಜು ಮಾಡುತ್ತದೆ.

೫.ಹೊಕ್ಕುಳಬಳ್ಳಿ ಮತ್ತು ಜರಾಯುವಿನ(ಪ್ಲಾಸೆಂಟ) ಸ್ಥಾನವನ್ನು ಪರೀಕ್ಷಿಸುತ್ತದೆ.

೬.ಕ್ರೋಮೋಸೋಮಲ್ ಅಸಹಜತೆಯ ಗುರುತುಗಳಿಗಾಗಿ ಪರಿಶೀಲಿಸುತ್ತದೆ

೭.ನಿಮ್ಮ ಗರ್ಭಚಿಲವನ್ನು ಪರಿಶೀಲಿಸುತ್ತದೆ ಮತ್ತು ಜನ್ಮ ಕಾಲುವೆಯನ್ನು ಅಳೆಯುತ್ತದೆ.

ನಿಮ್ಮ ಗರ್ಭಾವಸ್ಥೆಯ ಅರ್ಧ ಅವದಿಯನ್ನು ಮುಗಿಸುವಷ್ಟರಲ್ಲಿ, ನಿಮ್ಮ ಶಿಶುವಿನ ಪ್ರಮುಖ ಭಾಗಗಳನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ. ಎಲ್ಲಾ ಗರ್ಭಿಣಿಯರು ಈ ಸಮಯದಲ್ಲಿ ಸ್ಕ್ಯಾನ್ ಮಾಡಿಸಿಕೊಳ್ಳಬೇಕು, ಮತ್ತು ತೊಂದರೆಗಳು ಕಂಡುಬಂದರೆ, ಅದಕ್ಕೆ ಬೇಕಾಗಿರುವ ಮುನ್ನೆಚೆರಿಕೆಗಳನ್ನು ತೆಗೆದುಕೊಳ್ಳಿ.

೪. ಬೆಳವಣಿಗೆ (ಗ್ರೋತ್) ಸ್ಕ್ಯಾನ್

ಬೆಳವಣಿಗೆ ಸ್ಕ್ಯಾನ್ ಅನ್ನು ಸಾಮಾನ್ಯವಾಗಿ ಮೂರನೇ ತ್ರೈಮಾಸಿಕದಲ್ಲಿ ಮಾಡಿಸುವುದು, ಇದು ನಿಮ್ಮ ಮಗುವಿನ ಬೆಳೆವಣಿಗೆಯ ಬಗ್ಗೆ ತಿಳಿದುಕೊಳ್ಳಲು ಸಹಾಯ ಮಾಡುತ್ತದೆ. ವೈದ್ಯರು ಅದನ್ನು ಅಳತೆ ಮಾಡುವ ಮೂಲಕ ನಿಮ್ಮ ಬಾವು(ಬಂಪ್)ನ ಗಾತ್ರವನ್ನು ಪರಿಶೀಲಿಸುತ್ತಾರೆ. ವೈದ್ಯರು ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಮಗುವಿನ ಗಾತ್ರವನ್ನು ಪರಿಶಿಲಿಸುತ್ತಾರೆ, ಇದನ್ನು ಅಳೆಯುವ ಮೂಲಕ

೧.ನಿಮ್ಮ ಮಗುವಿನ ತಲೆಯ ಸುತ್ತಳತೆ.

೨.ನಿಮ್ಮ ಮಗುವಿನ ಹೊಟ್ಟೆಯ ಸುತ್ತಳತೆ.

೩.ನಿಮ್ಮ ಮಗುವಿನ ತೊಡೆಯ ಮೂಳೆಯ ಉದ್ದ (ಎಲುಬು).

೪.ನಿಮ್ಮ ಮಗುವಿನ ಸುತ್ತಲೂ ಇರುವ ಆಮ್ನಿಯೋಟಿಕ್ ದ್ರವದ ಆಳ.

ಈ ಸ್ಕ್ಯಾನ್ ಅನ್ನು ಸಾಮಾನ್ಯವಾಗಿ ಮೂರನೆಯ ತ್ರೈಮಾಸಿಕದಲ್ಲಿ ೨೫-೩೨ ವಾರಗಳ ನಡುವೆ ಮಾಡಲಾಗುತ್ತದೆ.

೫.ಡಾಪ್ಲಾರ್ ಸ್ಕ್ಯಾನ್

ಇದು ನಿಮ್ಮ ಮಗುವಿನ ಆರೋಗ್ಯವನ್ನು ಅಳೆಯಲು ಸಹಾಯ ಮಾಡುವ ಅಲ್ಟ್ರಾಸೌಂಡ್ ಸ್ಕ್ಯಾನ್ ನ ಒಂದು ರೂಪ. ಇದು ನಿಮ್ಮ ಮಗುವಿನ ದೇಹದ ವಿವಿಧ ಭಾಗಗಳಲ್ಲಿ ಅಂದರೆ, ಅವನ / ಅವಳ ಹೊಕ್ಕುಳಬಳ್ಳಿ, ಮಿದುಳು ಮತ್ತು ಹೃದಯಗಳಲ್ಲಿ ರಕ್ತದ ಹರಿವನ್ನು ಅಳೆಯುತ್ತದೆ. ನಿಮ್ಮ ಮಗುವಿಗೆ ಬೇಕಾದ ಆಮ್ಲಜನಕ ಮತ್ತು ಪೌಷ್ಟಿಕಾಂಶಗಳನ್ನು ಅವನು / ಅವಳು ಜರಾಯುವಿನ(ಪ್ಲಾಸೆಂಟ) ಮೂಲಕ ಪಡೆಯುತ್ತಿದೆಯೇ ಎಂಬುದನ್ನು ತೋರಿಸುತ್ತದೆ.

ನಿಮ್ಮ ಗರ್ಭಾವಸ್ಥೆಯಲ್ಲಿ ನಿಮಗೆ ಹೆಚ್ಚು ಕಾಳಜಿಯ ಅಗತ್ಯವಿದ್ದರೆ ವೈದ್ಯರು ಡಾಪ್ಲರ್ ಸ್ಕ್ಯಾನ್ ಅನ್ನು ಶಿಫಾರಸು ಮಾಡಬಹುದು.ನಿಮಗೆ ಅಗತ್ಯವಿರುವ ಕೆಲವು ಕಾರಣಗಳು ಹೀಗಿವೆ:

೧.ನೀವು ಅವಳಿ ಅಥವಾ ಅದಕ್ಕಿಂತ ಹೆಚ್ಚಿನ ಮಗುವನ್ನು ಹೊದಿರುವಿರ

೨.ಬೇಬಿ ರೆಸಸ್ ಪ್ರತಿಕಾಯಗಳಿಂದ ಪ್ರಭಾವಿತವಾಗಿದೆಯೇ

೩.ಮಗುವು ಕುತ್ತಿಗೆ ಕಾಯಿಲೆಯಿಂದ ಬಳಲುತ್ತಿದೆಯೇ

೪.ಮಗುವಿನ ಬೆಳವಣಿಗೆ ಆರೋಗ್ಯವಾಗಿದೆಯೇ

೫.ನೀವು ಕಡಿಮೆ ಶಿಶು ಚಲನೆಗಳನ್ನು ಅನುಭವಿಸುತ್ತಿದ್ದಿರಾ

೬.ಇ ಹಿಂದೆ ಚಿಕ್ಕ ಮಗುವನ್ನು ಹೊಂದಿದ್ದಿರಾ

೭.ನೀವು ಹಿಂದೆ ಗರ್ಭಪಾತದ ಅನುಭವವನ್ನು ಅನುಭವಿಸಿದ್ದೀರಿ ಅಥವಾ ಜನ್ಮದಲ್ಲಿ ನಿಮ್ಮ ಮಗುವಿನ ನಷ್ಟವನ್ನು ಅನುಭವಿಸಿದ್ದೀರಿ

೮.ನೀವು ಮಧುಮೇಹ ಅಥವಾ ಅಧಿಕ ರಕ್ತದೊತ್ತಡದಂತಹ ಅಸ್ತಿತ್ವದಲ್ಲಿರುವ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದೀರಿ

೯.ನಿಮಗೆ ಕಡಿಮೆ ಅಥವಾ ಹೆಚ್ಚಿನ ಭೌತಿಕ ದ್ರವ್ಯರಾಶಿ ಸೂಚಿ(BMI-Body Mass Index) ಇದೆ

೧೦.ನೀವು ಧೂಮಪಾನ ಮಾಡುತ್ತೀರಿ

ಎಂಬುದನ್ನು ಸ್ಪಷ್ಟ ಪಡಿಸಿಕೊಳ್ಳಲು ಇದನ್ನು ಮಾಡುತ್ತಾರೆ.

ಇದನ್ನು ಸಾಮಾನ್ಯವಾಗಿ ಮೂರನೆಯ ತ್ರೈಮಾಸಿಕದ ೨೮-೩೨ನೇ ವಾರಗಳ ಅಂತರದಲ್ಲಿ ಮಾಡಲಾಗುತ್ತದೆ.

ಮೇಲಿನ ಸ್ಕ್ಯಾನ್ ಗಳು ಗರ್ಭಾವಸ್ಥೆಯಲ್ಲಿ 'ಕಡಿಮೆ-ಅಪಾಯದ' ತಾಯಿಯಂದಿರಿಗೆ ಶಿಫಾರಸು ಮಾಡಲ್ಪಡುವ ಕನಿಷ್ಠ ಸ್ಕ್ಯಾನ್ ಗಳಾಗಿರುತ್ತವೆ. ಮತ್ತಷ್ಟು ಸ್ಕ್ಯಾನ್ ಗಳು, ಹೆರಿಗೆ ನಡುವೆ ಅಥವಾ ನಂತರದಲ್ಲಿ, ಹಿಂದಿನ ಗರ್ಭಧಾರಣೆಯ ಅಥವಾ ಪ್ರಸ್ತುತದಲ್ಲಿರುವ ಯಾವುದೇ ಇತರ ಸಮಸ್ಯೆಗಳ ಉಪಸ್ಥಿತಿಯನ್ನು ಅವಲಂಬಿಸಿರುತ್ತದೆ. ನಿಮ್ಮ ಗರ್ಭಾವಸ್ಥೆಯಲ್ಲಿನ ಸ್ಥಿತಿಯನ್ನು ಅವಲಂಬಿಸಿ ಸ್ಕ್ಯಾನ್ ಗಳನ್ನು ಮಾಡಲಾಗುತ್ತದೆ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon