Link copied!
Sign in / Sign up
4
Shares

ಗರ್ಭಾವಸ್ಥೆಯಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳು

ಒಂಬತ್ತು ತಿಂಗಳ ಗರ್ಭಾವಸ್ಥೆಯು ನಿಮಗೆ ಮತ್ತು ಮಗುವಿಗೆ ಬಹಳ ಮುಖ್ಯವಾದ ನಿರ್ಣಾಯಕ ದಿನಗಳಾಗಿವೆ. ಈ ಹಂತದಲ್ಲಿ ನಿಮ್ಮ ಕೆಲವು ಕ್ರಮಗಳು ನಿಮ್ಮ ಮಗುವಿನ ಜೀವಮಾನ ಕಾಲದಲ್ಲಿ ಪರಿಣಾಮ ಬೀರಬಹುದು. ಗರ್ಭಾವಸ್ಥೆಯಲ್ಲಿ ಏನನ್ನು ಮಾಡಬೇಕು ಮತ್ತು ಏನನ್ನು ಮಾಡಬಾರದು ಎಂಬುದರ ಮೇಲೆ ಹಲವಾರು ಪುರಾಣಗಳಿವೆ. ಆದ್ದರಿಂದ ಗರ್ಭಧಾರಣೆಯಲ್ಲಿ ಗಮನಿಸಬೇಕಾದ ಕೆಲವು ಮುಖ್ಯ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ.

೧.ಮಧ್ಯಪಾನ ಮತ್ತು ಧೂಮಪಾನವನ್ನು ನಿಷೇಧಿಸಿ

ನೀವು ಮಧ್ಯಪಾನ ಮತ್ತು ಧೂಮಪಾನ ಮಾಡುವುದರಿಂದ ಆಗುವ ಅಡ್ಡಪರಿಣಾಮಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ(ಅಥವಾ ಅದರಿಂದಾಗುವ ಅಡ್ಡಪರಿಣಾಮಗಳನ್ನು ನಿಮ್ಮ ಮಗುವಿನಲ್ಲಿ ಕಾಣಬೇಕಾದೀತು). ಅದು ಕಡಿಮೆ ಜನ್ಮ ತೂಕ, ಕಲಿಕೆಯಲ್ಲಿ ಅಸಮರ್ಥತೆ, ಮತ್ತು ಬೆಳವಣಿಗೆಯಲ್ಲಿ ನಿಧಾನ ಇವುಗಳ ರೂಪದಲ್ಲಿ ಕಾಣಿಸಿಕೊಳ್ಳಬಹುದು, ಇವೆಲ್ಲವೂ ಭ್ರೂಣ ಮಧ್ಯಪಾನ ಲಕ್ಷಣಗಳ(fetal alchohal syndrome-FAS) ವರ್ಗದಲ್ಲಿ ಬರುತ್ತವೆ. ಧೂಮಪಾನದಿಂದಲೂ ಇದೆ ಅಡ್ಡಪರಿಣಾಮಗಳು ಉಂಟಾಗುತ್ತವೆ.

೨.ಎಷ್ಟು ಸಾಧ್ಯವೋ ಅಷ್ಟು ನಿದ್ರೆಯನ್ನು ಮಾಡಿ

ಕೆಲವೊಮ್ಮೆ ಆರಾಮದಾಯಕವಾಗಿ ನಿದ್ರೆ ಮಾಡಲು ತುಂಬಾ ಕಷ್ಟವಾದರೂ, ನಿಮಗೆ ಅಗತ್ಯವಿರುವ ನಿದ್ರೆ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಒತ್ತಡ, ಆಯಾಸ, ಮತ್ತು ಬೆಳಗಿನ ಕಾಯಿಲೆಗಳಿಂದ ದೂರವಿರಲು ನಿದ್ರೆಯು ಸಹಾಯ ಮಾಡುತ್ತದೆ. ನಿಮಗಾಗಿ ನೀವು ನಿದ್ರಾ ವೇಳಾಪಟ್ಟಿ ಮಾಡಿಕೊಂಡು ದಿನಕ್ಕೆ ಕನಿಷ್ಠ ೭ ಗಂಟೆ ನಿದ್ರೆ ಮಾಡುವುದರಿಂದ ನಿಮಗೆ ತುಂಬಾ ಒಳ್ಳೆಯದು. ನೀವು ನಿರ್ದಿಷ್ಟ ನಿದ್ರಾ ಚಕ್ರವನ್ನು ಮಾಡಿಕೊಂಡರೆ ನಿದ್ರಿಸುವುದು ಸುಲಭ.

೩.ಹೆಚ್ಚು ವಿವಿಧ ವಿಟಮಿನ್ ಗಳನ್ನು ಸೇವಿಸಿ

ಗರ್ಭಾವಸ್ಥೆಯಲ್ಲಿ ಹಲವು ಮಹಿಳೆಯರು ಮಾತ್ರೆಗಳನ್ನು ತೆಗೆದುಕೊಳ್ಳಲು ವಿರೋಧ ವ್ಯಕ್ತಪಡಿಸಿದರು, ಇದು ನಿಮಗೆ ಅವಶ್ಯಕವಾಗಿ ಬೇಕಾಗಿದೆ. ಆರೋಗ್ಯಕರ, ಸಮತೋಲಿತ ಆಹಾರ ಕ್ರಮ ನಿಮಗೆ ಪೌಷ್ಟಿಕಾಂಶಗಳನ್ನು ನೀಡುತ್ತದೆ, ಆದರೆ ಅದು ನಿಮಗೆ ಸಾಕಾಗುವುದಿಲ್ಲ. ಈ ಪೌಷ್ಟಿಕಗಳು ನಿಮ್ಮ ದೇಹದಲ್ಲಿ ಕಡಿಮೆ ಇರಬಹುದು. ಆದ್ದರಿಂದ ಪರ್ಯಾಯ ಮಾಡಿಕೊಳ್ಳುವುದು ಒಳ್ಳೆಯದು. ಬಹು ವಿಟಮಿನ್ (ಮಲ್ಟಿ ವಿಟಮಿನ್), ಕಬ್ಬಿಣಾಂಶ, ಕ್ಯಾಲ್ಸಿಯಂ, ಇತರೆ ವಿಟಮಿನ್ ಮತ್ತು ಖನಿಜಾಂಶಗಳನ್ನು ಹೊಂದಿದ್ದು ಇದು ತಾಯಿಯಂದಿರಿಗೆ ಅಗತ್ಯವಾಗಿದೆ. ನೀವು ಬಹು ವಿಟಮಿನ್ ಗಳನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ವೈದ್ಯರನ್ನು ಭೇಟಿ ಮಾಡಿ.

೪.ವ್ಯಾಯಾಮ ಮಾಡಿ

ನಿಮಗೆ ಆರಾಮದಾಯಕ ಎನ್ನಿಸುವ ವ್ಯಾಯಾಮವನ್ನು ಮಾಡಿ, ನಿಮಗೆ ಆಗದೆ ಇದ್ದಲ್ಲಿ ಯಾವ ಕೆಲಸಗಳನ್ನು ಮಾಡಲು ಹೋಗಬೇಡಿ ಇದರಿಂದ ಮಗುವಿಗೆ ನಿಮಗೆ ಇಬ್ಬರಿಗೂ ಅಪಾಯ. ವ್ಯಾಯಾಮ ಮಾಡುವುದು ತಾಯಿ ಮತ್ತು ಮಗು ಇಬ್ಬರಿಗೂ ತುಂಬಾ ಸಹಾಯಕಾರಿ. ಇದು ನಿದ್ರಾಹೀನತೆ, ಮನಃ ಸ್ಥಿತಿ ಬದಲಾವಣೆ ಮತ್ತು ಸ್ನಾಯು ಸೆಳೆತದಿಂದ ಮುಕ್ತಿಯೊಂದಲು ಸಹಾಯಮಾಡುತ್ತದೆ. ಒಬ್ಬ ತರಬೇತುದಾರನನ್ನು ಕೇಳಿ, ಇದು ನಿಮ್ಮ ಮತ್ತು ನಿಮ್ಮ ದೇಹಕ್ಕ್ಕೆ, ಉಪಯುಕ್ತವಾಗುತ್ತದೆ, ಮತ್ತು ಗರ್ಭಾವಸ್ಥೆಯ ಹಂತದ ಮೇಲೆ ನಿರ್ಧಾರವಾಗಿದೆ.

೫.ಸೌನವನ್ನು ತಪ್ಪಿಸಿ

ನಿಮಗೆ ನೋವು ಕೊಡುತ್ತಿರುವ ಮೂಳೆ ಮತ್ತು ಸ್ನಾಯುನಿಂದ ಆರಾಮ ಹೊಂದಲು ಮತ್ತು ಅದನ್ನು ನಿರ್ವಿಶೀಕರಣಗೊಳಿಸಲು, ಸೌನವನ್ನು ಮಾಡಿಸಿಕೊಳ್ಳಲು ಇಚ್ಚಿಸಬಹುದು, ಆದರೆ ನಾವು ಇದಕ್ಕೆ ಪರ್ಯಾಯವಾಗಿ ಬೇರೆಯ ಮಾರ್ಗವನ್ನು ಉಪಯೋಗಿಸಲು ಸಲಹಿಸುತ್ತೇವೆ. ಸೌನಾಗಳು ಮತ್ತು ಉಗಿ(ಹಬೆ/ಸ್ಟೀಮ್) ಕೊಠಡಿಗಳ ಅಧಿಕ ತಾಪಮಾನವು ನಿಮ್ಮ ಮಗುವಿಗೆ ಅಪಾಯಕಾರಿ. ಅದರಲ್ಲೂ ಮೊದಲ ತ್ರೈಮಾಸಿಕ, ಇದು ನಿಮಗೆ ಗರ್ಭಪಾತವಾಗುವ ಅವಕಾಶವನ್ನು ಹೆಚ್ಚಿಸುತ್ತದೆ. ಇದರ ಬದಲು ಪೂರ್ತಿ ದೇಹದ ಅಂಗ ಮರ್ಧನ ಮಾಡುವುದು ಉತ್ತಮ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon