Link copied!
Sign in / Sign up
0
Shares

ಗರ್ಭಾವಸ್ಥೆಯ ಈ ಸಮಯದಲ್ಲಿ ನೀವು ವೈದ್ಯರನ್ನ ಭೇಟಿ ಮಾಡಲೇ ಬೇಕು

ಗರ್ಭಾವಸ್ಥೆ ಎಂಬುದು ಮಹಿಳೆಯ ಜೀವನದ ಅತ್ಯಂತ ಖುಷಿಯ ಮರೆಯಲಾಗದ, ತನ್ನ ದೈಹಿಕ ಸ್ಥಿತಿಯನ್ನೇ ಬದಲಿಸಿಕೊಳ್ಳುವ, ಹಲವಾರು ಬದಲಾವಣೆಗಳನ್ನು ತನ್ನಲ್ಲಿ ಕಂಡುಕೊಳ್ಳುವ ಸಮಯ. ತನ್ನ ಈ ಪ್ರಯಾಣದಲ್ಲಿ ಮಹಿಳೆಯು ಹಲವಾರು ಕಷ್ಟಗಳನ್ನು ಎದುರಿಸುತ್ತಾಳೆ, ಮತ್ತು ಎಲ್ಲರಲ್ಲೂ ಹೇಳಿಕೊಳ್ಳಲಾಗದ ವೇದನೆಯನ್ನು ಅನುಭವಿಸುತ್ತಾಳೆ. ಆದರೆ ಈ ಸಮಯದಲ್ಲಿ ಅವರು ತುಂಬಾ ಎಚ್ಚರಿಕೆಯಿಂದ ತಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಕಾಳಜಿವಹಿಸುವುದು ತುಂಬಾ ಮುಖ್ಯ. ಅವರು ಈ ಕೆಳಗಿನ ಕಾರಣಗಳನ್ನು ಅಥವಾ ಕೆಳಗಿನ ಸಂಗತಿಗಳು ಅವರಲ್ಲಿ ಕಂಡರೆ ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

೧.ನಿಮ್ಮ ಯೋನಿಯಿಂದ ರಕ್ತ ಅಥವಾ ದ್ರವ್ಯ ಬಂದರೆ

ನಿಮ್ಮ ಯೋನಿಯಿಂದ ರಕ್ತ ಅಥವಾ ಯಾವುದೇ ತರಹದ ದ್ರವ್ಯವು ಹೊರ ಬರುತ್ತಿದ್ದರೆ, ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಸೂಕ್ತ. ಇದು ನಿಮ್ಮ ದೇಹದೊಳಗೆ ಏನಾದರು ನಾಳಗಳಲ್ಲಿ ಅಥವಾ ಸ್ನಾಯುಗಳಿಗೆ ತೊಂದರೆ ಆಗಿರುವುದರ ಸಂಕೇತ ಆಗಿರಬಹುದು. ಅಥವಾ ಮಗುವಿಗೆ ಏನೋ ತೊಂದರೆಯಾಗಿರುವುದರ ಸೂಚನೆಯನ್ನು ಅದು ನೀಡುತ್ತಿರಬಹುದು.

೨.ನಿಮ್ಮ ಮುಖ ಅಥವಾ ಬೆರಳುಗಳಲ್ಲಿ ಹಠಾತ್ ಊತ

ಗರ್ಭಾವಸ್ಥೆಯಲ್ಲಿ ಕೈ ಕಾಲುಗಳು ಊದಿಕೊಳ್ಳುವುದು ಸಾಮಾನ್ಯ ಆದರೆ, ಇದ್ದಕ್ಕಿದಂತೆ ಹಠಾತ್ ನೇ ನಿಮ್ಮ ಮುಖ ಅಥವಾ ಬೆರಳುಗಳು ಊದಿಕೊಂಡರೆ ಅದು ನಿಮ್ಮ ದೇಹದಲ್ಲಿ ನಿಮ್ಮ ದೇಹಕ್ಕೆ ಬೇಡವಾದ ಅಥವಾ ತೊಂದರೆ ಉಂಟುಮಾಡುವ ಅಂಶ ಸೇರಿಕೊಂಡಿರಬಹುದು. ಆದ್ದರಿಂದ ಕೂಡಲೇ ವೈದ್ಯರನ್ನು ಭೇಟಿ ಮಾಡುವುದು ಒಳಿತು.

೩.ಕಣ್ಣು ಮಂಜಾಗಿ ಅಥವಾ ಅಸ್ಪಷ್ಟವಾಗಿ ಕಾಣಿಸಿದಾಗ

ನಿಮಗೆ ತಿಳಿದಿದೆಯೋ ಇಲ್ಲವೋ, ನಿಮ್ಮ ದೇಹದ ಪ್ರತಿಯೊಂದು ಭಾಗವು ಕೂಡ ನಿಮ್ಮ ಗರ್ಭಾವಸ್ಥೆಯಲ್ಲಿ ಪರೋಕ್ಷವಾಗಿ ಅಥವಾ ನೇರವಾಗಿ ಪರಿಣಾಮ ಬೀರಬಲ್ಲದು. ನಿಮ್ಮ ದೃಷ್ಟಿಯಲ್ಲಿ ದೋಷವಾಗಿದೆ ಎಂದರೆ ನಿಮ್ಮ ದೇಹದೊಳಗೆ ಏನೋ ತೊಂದರೆಯಾಗಿದೆ ಅಥವಾ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ತೊಂದರೆ ಆಗಿದೆ ಎಂದು ಭಾವಿಸಬಹುದು.

೪.ಕೆಳ ಹೊಟ್ಟೆಯಲ್ಲಿ ನೋವು ಅಥವಾ ಸೆಳೆತ

ನಿಮ್ಮ ಮಗುವು ಉದರದೊಳಗೆ ಆಡುತ್ತಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ, ಆದರೆ ನಿಮ್ಮ ಮಗು ಉದರದೊಳಗೆ ಮಾಡುವ ಪ್ರತಿಯೊಂದು ವಿಷಯವು ನಿಮಗೆ ತಿಳಿಯುದಿಲ್ಲ. ನಿಮಗೆ ಕೆಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ ಎಂದರೆ ನಿಮ್ಮ ಮಗು ತಿರುಗಿಕೊಳ್ಳಲು ಅಥವಾ ಅದರ ಚಲನೆಗೆ ತೊಂದರೆ ಆಗುತ್ತಿದೆ ಎಂದು ತಿಳಿಯದೆ ವೈದ್ಯರನ್ನು ಭೇಟಿ ಮಾಡಿ ಅದಕ್ಕೆ ಸರಿಯಾದ ಕಾರಣ ತಿಳಿದುಕೊಳ್ಳುವುದು ಉತ್ತಮ.

ಇದರ ಜೊತೆಗೆ ಈ ಸಮಯಗಳಲ್ಲೂ ನೀವು ಖಂಡಿತವಾಗಿ ವೈದ್ಯರನ್ನು ಭೇಟಿಮಾಡಬೇಕು, ಜ್ವರ, ನಿಮ್ಮ ಮಗು ಆಡುತ್ತಿರುವುದು ನಿಮ್ಮ ಅನುಭವಕ್ಕೆ ಬಾರದೆ ಇದ್ದರೆ, ಕಡಿಮೆ ಮೂತ್ರ ಮಾಡುವುದು, ಅಥವಾ ಮೂತ್ರ ಮಾಡುವಾಗ ಉರಿಯುವುದು, ಸೋಂಕು ತಗುಲಿದರೆ ನೀವು ನಿರ್ಲಕ್ಷಿಸದೆ ವೈದ್ಯರನ್ನು ಭೇಟಿ ಮಾಡಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon