Link copied!
Sign in / Sign up
2
Shares

ಗರ್ಭವಾಸ್ಥೆಯಲ್ಲಿ ಜಂಕ್ ಫುಡ್ : ಇವುಗಳನ್ನ ಎದುರಿಸಲು ಸಿದ್ದರಾಗಿ.

ಜುಂಕ್ ಫುಡ್ ಸೇವಿಸಲು ರುಚಿಕರವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ಬಯಕೆಗಳು ಉಂಟಾಗುವುದು ಸಹಜ ಮತ್ತು ಇದು ಸ್ವಲ್ಪ ಹೆಚ್ಚಿನ ಮಟ್ಟದಲ್ಲಿ ಆಗುವುದು ಗರ್ಭಾವಸ್ಥೆಯಲ್ಲಿ ಸಾಮಾನ್ಯ. ಮತ್ತು ಈ ಸಮಯದಲ್ಲಿ ನೀವು ತೂಕದ ಬಗ್ಗೆ ಯೋಚಿಸುವ ಅಗತ್ಯವಿಲ್ಲ. ಆದರೆ ನೀವು ನಿಮ್ಮ ದೇಹದ ಮೇಲೆ ಗಮನವಿಡಬೇಕು, ನಿಜವೆಂದರೆ ಗರ್ಭಾವಸ್ಥೆಯಲ್ಲಿ ನೀವು ಎಚ್ಚರಿಕೆವಹಿಸುವುದು ತುಂಬಾ ಅವಶ್ಯಕ. ಸಾಮಾನ್ಯವಾಗಿ ಜುಂಕ್ ಫುಡ್ ಆರೋಗ್ಯಕ್ಕೆ ಹಾನಿಕರ ಎಂಬುದು ನಿಮಗೆ ತಿಳಿದಿದೆ ಆದರೆ ಇದನ್ನು ಅಪರೂಪಕ್ಕೆ ಸೇವಿಸಬಹುದು, ಆದರೆ ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸುವುದರಿಂದ ನಿಮ್ಮ ಜೊತೆಗೆ ಮಗುವಿಗೆ ಕೂಡ ಹಾನಿಯಾಗುವುದರಿಂದ ಇದನ್ನು ನೀವು ಸೇವಿಸದೇ ಇರುವುದು ಒಳ್ಳೆಯದು, ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯುವ ಬನ್ನಿ.


ಗರ್ಭಾವಸ್ಥೆಯಲ್ಲಿ ಜುಂಕ್ ಫುಡ್ ಸೇವನೆಯಿಂದ ಆಗುವ ಹಾನಿಕಾರಕ ಪರಿಣಾಮಗಳು

ನಿಮಗೆ ಮತ್ತು ನಿಮ್ಮ ಮಗುವಿಗೆ ಈಗ ಉತ್ತಮ ಪೌಷ್ಟಿಕಾಂಶದ ಅಗತ್ಯವಿದೆ, ಇದರಿಂದ ನೀವು ಸರಿಯಾದ ಆರೋಗ್ಯಕರ ತೂಕ ಹೆಚ್ಚಿಸಿಕೊಳ್ಳುವಿರಿ ಮತ್ತು ಮಗುವಿನ ಮೂಳೆ, ರಕ್ಷಣಾ ವ್ಯವಸ್ಥೆ, ಮೆದುಳು, ಮತ್ತು ಅಂಗಗಳು ಬೆಳವಣಿಗೆಗೆ ಇದರ ಅವಶ್ಯಕತೆ ಇದೆ. ಜುಂಕ್ ಫುಡ್ ನಿಮಗೆ ಈ ಪೌಷ್ಟಿಕಗಳನ್ನು ಒದಗಿಸುವುದಿಲ್ಲ, ಇದನ್ನು ಸೇವಿಸುವುದರಿಂದ ನಿಮಗೆ ಹೊಟ್ಟೆ ತುಂಬಿದ ಭಾವನೆ ಬರುತ್ತದೆ ಹೊರತು ಯಾವುದೇ ಪೌಷ್ಟಿಕಾಂಶಗಳು ಸಿಗುವುದಿಲ್ಲ. ಜುಂಕ್ ಫುಡ್ ಸೇವನೆಯಿಂದ ನಿಮಗೆ ಮತ್ತು ಮಗುವಿಗೆ ಆಗಬಹುದಾದ ಆರೋಗ್ಯ ಸಮಸ್ಯೆಗಳು

 

೧.ಮಗುವು ಫ್ಯಾಟಿ ಆಹಾರವನ್ನು ಇಷ್ಟಪಡುವ ಗುಣ ಪಡೆಯುತ್ತದೆ

ಒಂದು ಅಧ್ಯಯನದ ಪ್ರಕಾರ, ತಾಯಿಯ ಆಹಾರ ಕ್ರಮ ಮಗುವಿನ ಆಹಾರ ಅಧ್ಯತೆಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಸಿದೆ.

ಈ ಅಧ್ಯಯನದ ಪ್ರಕಾರ, ತಾಯಿಯ ಆಹಾರ ಸೇವನೆ ಗರ್ಭದಲ್ಲಿ ಮಗುವಿನ ಮೆದುಳಿನ ಮೇಲೆ ಪ್ರಭಾವ ಬೀರಿ, ಅಂತಹ ಆಹಾರಗಳಿಗೆ ಮಗುವಿನ ಮೆದುಳು ದುರ್ಬಲವಾಗಿ ಮಗುವಿನ ಪ್ರೌಢವಸ್ಥೆಯಲ್ಲಿ ಈ ತರಹ ಆಹಾರಗಳ ಬಗ್ಗೆ ಒಲವನ್ನು ತೋರಿಸುತ್ತದೆ. ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಆಹಾರ ಸೇವನೆ ಮಕ್ಕಳ ಆಹಾರದಲ್ಲಿ ಬಯಕೆಗಳು ಕಡಿಮೆ ಮಾಡಿ ಆರೋಗ್ಯವಾಗಿರಲು ಸಹಾಯವಾಗುತ್ತದೆ.


೨.ಅಲರ್ಜಿಯ ಅಪಾಯ ಹೆಚ್ಚಾಗುತ್ತದೆ

ಸಕ್ಕರೆ ಅಂಶ ಹೆಚ್ಚಿರುವ ಆಹಾರ ಸೇವನೆ ಇಂದ ಮಗುವಿನಲ್ಲಿ ಅಲರ್ಜಿ ಮತ್ತು ಅಸ್ತಮಾ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿನ ಸಕ್ಕರೆ ಸೇವನೆ ಮಕ್ಕಳಲ್ಲಿ ಅಲರ್ಜಿ ಮತ್ತು ಅಸ್ತಮಾ ಅಪಾಯವನ್ನು ಹೆಚ್ಚು ಮಾಡುತ್ತದೆ, ಅದರಲ್ಲೂ 7-9 ವಯಸ್ಸಿನ ಮಕ್ಕಳಲ್ಲಿ ಇದು ಸಾಮಾನ್ಯವಾಗಿ ಕಾಣಿಸುವ ಸಾಧ್ಯತೆ ಇದೆ.


೩.ಅನುವಂಶಿಕ ಅಸಹಜತೆಗಳು ಜಾಸ್ತಿ ಆಗುವ ಸಾಧ್ಯತೆ ಇದೆ

ಹೆಚ್ಚಿನ ಸಕ್ಕರೆ ಮತ್ತು ಫ್ಯಾಟಿ ಆಹಾರ ಮಕ್ಕಳಲ್ಲಿ ಮೈಟೊಕೊಂಡರಿಯಲ್ ಡಿಸ್ ಫ್ಯಾಂಕ್ಸನ್ ಮತ್ತು ಮುಂತಾದ ತೊಂದರೆಗಳನ್ನು ಮಕ್ಕಳಲ್ಲಿ ಅದು ಮುಂದಿನ 3 ಪೀಳಿಗೆಗೆ ಅಪಾಯವಾಗುವ ಸಾಧ್ಯತೆಗಳಿವೆ.


೪.ತೂಕ ಹೆಚ್ಚಾಗುತ್ತದೆ

ಗರ್ಭಾವಸ್ಥೆಯಲ್ಲಿ ಹೆಚ್ಚು ಜಂಕ್ ಫುಡ್ ಸೇವನೆ ಹೆಚ್ಚು ತೂಕ ಪಡೆಯುವಂತೆ ಮಾಡುತ್ತದೆ. Preeclampsia, ಅತಿ ತೂಕದ ಮಗುವಿಗೆ ಜನನ, ಅಕಾಲಿಕ ಹೆರಿಗೆ, ಗರ್ಭಾವಸ್ಥೆಯಲ್ಲಿ ಮಧುಮೇಹ, ನಿದ್ರಾ ಹೀನತೆ, ಜನ್ಮ ದೋಷಗಳು, ಗರ್ಭಪಾತ, ಮುಂತಾದ ವಿವಿಧ ತೊಡಕುಗಳನ್ನು ಎದುರಿಸಬೇಕಾಗುತ್ತದೆ.


೫.ಜೀರ್ಣಕ್ರಿಯೆ ಸಮಸ್ಯೆ

ಜಂಕ್ ಫುಡ್ ಸೇವನೆಯಿಂದ ಜಠರ ಸಮಸ್ಯೆಯನ್ನು ಎದುರಿಸುತ್ತದೆ. ಇದರಿಂದ ಗ್ಯಾಸ್, ಅಜೀರ್ಣ ಮತ್ತು ಎದೆಯುರಿ ಸಮಸ್ಯೆ ಶುರುವಾಗುತ್ತದೆ. ಜಠರದ ಚಲನವಲನಗಳನ್ನು ಇವು ಕಡಿಮೆ ಮಾಡುತ್ತದೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon