Link copied!
Sign in / Sign up
10
Shares

ನಿಮಗೆ ಗರ್ಭತಾಳಲು ಎಷ್ಟು ಸಮಯ ಬೇಕೆಂದು ಇವುಗಳು ನಿರ್ಧರಿಸುತ್ತವೆ!

ಗರ್ಭತಾಳಲು ಬೇಕಾಗಿರುವ ಸಮಯವು ಒಬ್ಬರಿಂದ ಒಬ್ಬರಿಗೆ ಬೇರೇ ಬೇರೆಯಾಗಿರುತ್ತದೆ. ಅಲ್ಲದೆ ಬಹಳಷ್ಟು ವ್ಯತ್ಯಾಸ ಹೊಂದಿರುತ್ತದೆ. ಬಹಳಷ್ಟು ಬಾರಿ ಇದು ಅದೃಷ್ಟದ ಮಾತಾಗಿದ್ದು, ಕೆಲವು ಅಂಶಗಳನ್ನ ನಾವು ಪರಿಗಣನೆಗೆ ತೆಗೆದುಕೊಳ್ಳಲೇ ಬೇಕು. ಅಂತಹ ಅಂಶಗಳು ಯಾವುಗಳೆಂದು ತಿಳಿಯಿರಿ :

೧. ನಿಮ್ಮ ವಯಸ್ಸು

ಇದರ ಬಗ್ಗೆ ನೀವು ಏನು ಹೆಚ್ಚು ಮಾಡಲು ಸಾಧ್ಯವಿಲ್ಲ. ಆದರೆ ನಿಮ್ಮ ವಯಸ್ಸು ನೀವು ಎಷ್ಟು ಬೇಗ ಗರ್ಭತಾಳುವಿರಿ ಎಂಬುದರ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ವಯಸ್ಸು ಆಗುತ್ತಾ ಹೋದಹಾಗೆ ನಿಮ್ಮ ಅಂಡಾಣುಗಳ ಸಂಖ್ಯೆ ಮತ್ತು ಅವುಗಳ ಗುಣಮಟ್ಟ ಕುಸಿಯುತ್ತಾ ಹೋಗುತ್ತದೆ. ಕೆಲವು ಹೆಂಗಸರು ತಮ್ಮ ಋತುಬಂಧ ಸಮೀಪಿಸುತ್ತಿದ್ದಂತೆ ಅನಿಯಮಿತ ಋತುಚಕ್ರ ಅನುಭವಿಸುತ್ತಾರೆ.

ಒಂದು ಹೆಣ್ಣಿನ ಜೀವನದ ಅತ್ಯಂತ ಫಲವತ್ತಾದ ಸಮಯ ಎಂದರೆ ಅದು ಆಕೆಯ 20ರ ಹರೆಯದಲ್ಲಿ. 30 ವರ್ಷ ದಾಟಿದ ಮೇಲೆ ಫಲವತ್ತತೆಯಲ್ಲಿ ಇಳಿಕೆ ಆಗಲು ಶುರು ಆಗುತ್ತದೆ ಹಾಗು 35 ವರ್ಷ ದಾಟಿದ ಮೇಲೆ ಫಲವತ್ತತೆ ಗಣನೀಯವಾಗಿ ಇಳಿಯಲು ಶುರು ಆಗುತ್ತದೆ.

೨. ನೀವು ಎಷ್ಟು ಬಾರಿ ಸಂಭೋಗ ನಡೆಸುವಿರಿ

ಇದನ್ನ ನೀವು ಯಾವಾಗಲು ಕೇಳುತ್ತಿರಬಹುದು, ಆದರೆ ಗರ್ಭತಾಳಲು ನೀವು ನಿಯಮಿತವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳ ಬೇಕು. ನಿಮ್ಮ ಋತುಚಕ್ರದ ಪೂರ ಅವಧಿಯಲ್ಲಿ, ವಾರಕ್ಕೆ ಎರಡು ಅಥವಾ ಮೂರು ಬಾರಿ ಆದರೂ ಕನಿಷ್ಟಪಕ್ಷ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಿ. ಇನ್ನೂ ಸರಿಯಾಗಿ ಹೇಳಬೇಕೆಂದರೆ ದಿನ ಬಿಟ್ಟು ದಿನ ನೀವು ಇದನ್ನ ಮಾಡಿದರೆ ನಿಮಗೇ ಒಳ್ಳೆಯದು, ಆದರೆ ನೀವು ಯಾವ ದಿನ ಅಂಡೋತ್ಪತ್ತಿ ಮಾಡುತ್ತೀರ ಎಂದು ತಿಳಿದು ಆ ದಿನ ಎಲ್ಲವನ್ನು ಸರಿಯಾಗಿ ಮಾಡಿದರೆ, ನಿಮ್ಮ ಅವಕಾಶಗಳನ್ನ ಹೆಚ್ಚಿಸಿಕೊಳ್ಳುವಿರಿ.

೩. ಆರೋಗ್ಯ ಮತ್ತು ಜೀವನಶೈಲಿ

ಅತಿ ಹೆಚ್ಚು ತೂಕ ಅಥವಾ ಅತಿ ಕಡಿಮೆ ತೂಕ ಹೊಂದುವುದು ನಿಮ್ಮ ಫಲವತ್ತತೆಯ ಮೇಲೆ ಪರಿಣಾಮ ಬೀರುತ್ತದೆ. ಇವೆರೆಡು ನಿಮ್ಮ ಹಾರ್ಮೋನ್ ಗಳ ಗತಿಯ ಮೇಲೆ ಪರಿಣಾಮ ಬೀರುತ್ತವೆ, ಹಾಗಾಗಿ ನಿಮ್ಮ ಅಂಡೋತ್ಪತ್ತಿಯ ಮೇಲೆಯೂ ಪ್ರಭಾವ ಬೀರುತ್ತವೆ. ಆರೋಗ್ಯಕರ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ನಿಮ್ಮ ಫಲವತ್ತತೆ ಹೆಚ್ಚಿಸಿಕೊಳ್ಳಬಹುದು.

ಧೂಮಪಾನವನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಏಕೆಂದರೆ ನೀವು ಹೆಚ್ಚು ಧೂಮಪಾನ ಮಾಡಿದಷ್ಟು ನಿಮ್ಮ ಅಂಡಾಣುಗಳು ಹೆಚ್ಚು ಬದುಕುವ ಶಕ್ತಿ ಕಳೆದುಕೊಳ್ಳುತ್ತವೆ. ಮದ್ಯಪಾನದ ವಿಷಯದಲ್ಲೂ ಇದು ಸತ್ಯ. ಇದು ಕೇವಲ ಹೆಂಗಸರಿಗೆ ಮಾತ್ರ ಸೀಮಿತವಲ್ಲ, ಗಂಡಸರು ಕೂಡ ಇವುಗಳನ್ನ ತ್ಯಜಿಸಿದರೆ ಮಾತ್ರ ನೀವು ಗರ್ಭತಾಳುವ ಸಾಧ್ಯತೆಗಳು ಹೆಚ್ಚುತ್ತವೆ.

೪. ಫಲವತ್ತತೆಯ ತೊಂದರೆಗಳು

ಕೆಲವು ದಂಪತಿಗಳಿಗೆ ಬಹಳ ದಿನಗಳಾದರೂ ಗರ್ಭತಾಳಲು ಸಾಧ್ಯ ಆಗುತ್ತಿಲ್ಲವೆಂದರೆ, ಅದಕ್ಕೆ ಕಾರಣ ಫಲವತ್ತತೆಯ ಕೊರತೆ ಆಗಿರುತ್ತದೆ. ಇದು PCOS ಇಂದ ಹಿಡಿದು ವೀರ್ಯಗಳ ಕೊರತೆ ಅಥವ ಅಂಡಾಷಯದ ವಿಫಲತೆ ವರೆಗೂ ಕಾರಣ ಯಾವುದಾದರೂ ಆಗಿರಬಹುದು.

ನಿಮಗೆ 35 ವರ್ಷಗಳು ದಾಟಿದ್ದು ನೀವು ಆರು ತಿಂಗಳುಗಳು ಪ್ರಯತ್ನ ಪಟ್ಟರು ಗರ್ಭತಾಳಲು ಸಾಧ್ಯ ಆಗಲಿಲ್ಲ ಎಂದರೆ, ಕೂಡಲೇ ವೈದ್ಯರಿಗೆ ಭೇಟಿ ನೀಡಿ. ಒಮ್ಮೆ ಕೆಳಗಿರುವ ಕಾರಣ ಅರಿತರೆ, ಅದನ್ನ ಸರಿಪಡಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon