Link copied!
Sign in / Sign up
0
Shares

ಗರ್ಭಪಾತವಾಗಲು ೬ ಕಾರಣಗಳು

ಅನೇಕ ಮಹಿಳೆಯರಲ್ಲಿ ಮತ್ತು ಜೋಡಿಗಳಲ್ಲಿ, ಗರ್ಭಪಾತವಾದ ಬಳಿಕ ಕಾಡುವ ಪ್ರಶ್ನೆ, ಏಕೆ? ಗರ್ಭಧರಿಸಿದ ದಿನದಿಂದಲೂ ಮೊದಲಿಗಿಂತ ಹೆಚ್ಚು ಎಚ್ಚರಿಕೆಯಿಂದ, ಜಾಗೃತಳಾಗಿ ಮಗುವಿಗೆ ಯಾವುದೇ ಹಾನಿಯಾಗದಂತೆ ಜೋಪಾನವಾಗಿ ಕಾಪಾಡಿಕೊಂಡು ಬಂದಿದ್ದರೂ ಏಕೆ ಗರ್ಭಪಾತವಾಯಿತು?

ಗರ್ಭಪಾತವು ನಂಬಲಾಗದ ರೀತಿಯಲ್ಲಿ ನಾಶಮಾಡುವ ಘಟನೆಯಾಗಿದ್ದು, ಖಿನ್ನತೆ, ಕೋಪ, ಭಯ, ಮತ್ತು ದುರ್ಬಲ ಮನೋಭಾವ ಸೇರಿದಂತೆ ದೀರ್ಘಕಾಲೀಕ ಭಾವನಾತ್ಮಕ ಪರಿಣಾಮಗಳನ್ನು ಅವರ ಮೇಲೆ ಬೀರುತ್ತದೆ.

ಈ ೭ ಅಂಶಗಳೇ ಮಹಿಳೆಯು ಗರ್ಭಪಾತ ಅನುಭವಿಸಲು ಸಾಮಾನ್ಯ ಕಾರಣಗಳಾಗಿವೆ.

೧.ಕ್ರೋಮೋಜೋಮ್(ವರ್ಣತಂತು) ಅಸಹಜತೆ

ಭ್ರೂಣ ರಚನೆಯಾಗುವಾಗ ಮೊಟ್ಟೆ ಅಥವಾ ವೀರ್ಯ ಕ್ರೋಮೋಜೋಮ್ ಗಳಲ್ಲಿ ಯಾವುದೇ ತರಹದ ಕೆಲವು ತೊಂದರೆಗಳು ಗರ್ಭಪಾತಕ್ಕೆ ಸಾಮಾನ್ಯ ಕಾರಣವಾಗಿದೆ. ಟ್ರೈಸೋಮಿ ೨೧ರಂತಹ ಕೆಲವು ಕ್ರೋಮೋಜೋಮ್ ಗಳು ಜೀವಕ್ಕೆ ಹೊಂದಿಕೊಳ್ಳುತ್ತವೆ, ಮತ್ತೆ ಕೆಲವು ಕ್ರೋಮೋಜೋಮ್ ಗಳು ಜೀವಕ್ಕೆ ಹೊಂದಿಕೊಳ್ಳುವುದಿಲ್ಲ, ಮತ್ತು ಅವು ಬೆಳವಣಿಗೆಯನ್ನು ನಿಲ್ಲುವಂತೆ ಮಾಡುತ್ತವೆ.

೨.ಥೈರಾಯಿಡ್ ಕಾಯಿಲೆ

ಅದು ಕಡಿಮೆ ಅಥವಾ ಹೆಚ್ಚಿನ ಥೈರಾಯಿಡಿಸಮ್ ಆಗಿರಬಹುದು, ಥೈರಾಯಿಡ್ ಕಾಯಿಲೆಯಿಂದ ಬಂಜೆತನ ಅಥವಾ ಪದೇ ಪದೇ ಗರ್ಭಪಾತವಾಗಬಹುದು. ನಿಮಗೆ ಥೈರಾಯಿಡ್ ಇದೆ ಎಂದಾದರೆ ನೀವು ಅದನ್ನು ಸರಿಯಾಗಿ ನೋಡಿಕೊಂಡು ವೈದ್ಯರ ಬಳಿ ಹೇಳಿ ಸರಿಯಾದ ಚಿಕಿತ್ಸೆ ಪಡೆಯುದರಿಂದ ಗರ್ಭಪಾತವನ್ನು ತಡೆಯಬಹುದು.

೩.ಮಧುಮೇಹ

ಮಧುಮೇಹ ಇದ್ದರೆ, ಅದನ್ನು ನಿಯಂತ್ರಣಕ್ಕೆ ತಗೆದುಕೊಳ್ಳುವುದು ಕಷ್ಟವಾದರೆ ಅದರಿಂದ ಗರ್ಭಪಾತ ಸಂಭವಿಸಬಹುದು. ಅವರು ತಮ್ಮ ರಕ್ತದಲ್ಲಿರುವ ಸಕ್ಕರೆ ಕಾಯಿಲೆ ಬಗ್ಗೆ ವೈದ್ಯರ ಬಳಿ ಸರಿಯಾದ ಚಿಕಿತ್ಸೆ ಪಡೆದು ನಿಯಂತ್ರಣದಲ್ಲಿರಿಸಿಕೊಳ್ಳುವುದರಿಂದ ಗರ್ಭಪಾತದ ಬಗ್ಗೆ ಚಿಂತಿಸಬೇಕಿಲ್ಲ.

೪.ಜೀವನ ಶೈಲಿ

ಸ್ವಯಂ-ವಿನಾಶಕಾರಿ ಜೀವನಶೈಲಿ ಅಭ್ಯಾಸಗಳು, ಅಂದರೆ, ಮಾದಕ ವ್ಯಸನಿಯಾಗಿರುವುದು, ಗರ್ಭಾವಸ್ಥೆಯಲ್ಲಿ ಕುಡಿಯುವುದು, ಮತ್ತು ಧೂಮಪಾನ ಮಾಡುವುದು ಆರಂಭಿಕ ಅಥವಾ ನಂತರದ ದಿನಗಳಲ್ಲಿ ಗರ್ಭಪಾತವಾಗಲು ಕಾರಣವಾಗುತ್ತದೆ.

೫.ದೈಹಿಕ ತೊಡಕುಗಳು

ಇದು ತುಂಬಾ ಕಡಿಮೆ, ಆದರೆ, ತಾಯಿಯ ದೇಹದ ಸ್ಥಿತಿಯ ಅಸಹಜತೆ ಕೂಡ ಗರ್ಭಪಾತಕ್ಕೆ ಕಾರಣವಾಗಬಹುದು. ಗರ್ಭಕೋಶ ಸೇರಿದಂತೆ ಗರ್ಭಾಶಯದ ವೈಪರೀತ್ಯಗಳು ಇದಕ್ಕೆ ಕಾರಣ.

೬.ರಕ್ತ ಹೆಪ್ಪುಗಟ್ಟುವ ಕಾಯಿಲೆ

ದೈಹಿಕ ತೊಡಕುಗಳಂತೆ ಇದುವೇ ಕಾಣಿಸಿಕೊಳ್ಳುವುದು ತುಂಬಾ ಅಪರೂಪ, ಆದರೆ ಇದರಿಂದ ಗರ್ಭಪಾತವು ಸಂಭವಿಸುತ್ತದೆ.

ಸಲಹೆ

ನಿಮ್ಮ ದೇಹದ ಅಥವಾ ಮಾನಸಿಕವಾಗಿ ಯಾವುದೇ ತೊಂದರೆ ಅಥವಾ ಅನುಭವಗಳಿದ್ದರೂ ಅದನ್ನು ವೈದ್ಯರ ಬಳಿ ಮುಕ್ತವಾಗಿ ಹಂಚಿಕ್ಕೊಳ್ಳುವುದರಿಂದ ಗರ್ಭಪಾತದ ತೊಂದರೆಯಿಂದ ಮುಕ್ತಿ ಪಡೆಯಬಹುದು. ಥೈರಾಯಿಡ್ ಮಧುಮೇಹದಂತಹ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon