Link copied!
Sign in / Sign up
0
Shares

ಗರ್ಭಪಾತದ ನಂತರ ಮತ್ತೊಮ್ಮೆ ಗರ್ಭಧಾರಣೆ : ನೀವು ತಿಳಿಯಬೇಕಾದದ್ದು

ಗರ್ಭಪಾತ ಅಥವಾ ಮಿಸ್ ಕ್ಯಾರಿಏಜ್ ನಂತರದ ಮತ್ತೊಂದು ಗರ್ಭಧಾರಣೆಯ ಹಲವು ಒತ್ತಡಗಳು ಹಾಗು ಗೊಂದಲಗಳಿಂದ ಕೂಡಿರುತ್ತದೆ. ಮತ್ತೆ ಗರ್ಭಧರಿಸಲು ಸೂಕ್ತ ಸಮಯ ಯಾವುದು? ಮತ್ತೊಮ್ಮೆ ಗರ್ಭಪಾತ ಆಗುವ ಸಾಧ್ಯತೆಗಳು ಎಷ್ಟು? ಗರ್ಭಪಾತದ ನಂತರದ ಗರ್ಭಧಾರಣೆಯ ಬಗೆಗಿನ ಎಲ್ಲಾ ಸಂಗತಿಗಳನ್ನು ಇಲ್ಲಿ ಓದಿ ತಿಳಿದುಕೊಳ್ಳಿ

ಗರ್ಭಪಾತ ಆಗುವುದಕ್ಕೆ ಕಾರಣವೇನು?

ಗರ್ಭಪಾತ ಎಂದರೆ ನಿಮ್ಮ ಗರ್ಭಧಾರಣೆಯ ೨೦ ವಾರಗಳ ಮುಂಚೆ ತನ್ನತಾನೆಯಾಗಿ ಗರ್ಭಧಾರಣೆ ಕಳೆದುಕೊಳ್ಳುವುದು. ಹಲವಾರು ಬಾರಿ ಗರ್ಭಪಾತವು ಭ್ರೂಣದ ಬೆಳವಣಿಗೆ ಸಹಜವಾಗಿ ಆಗದ ಕಾರಣದಿಂದ ಸಂಭವಿಸುತ್ತದೆ. ಮಗುವಿನ ಕ್ರೋಮೋಸೋಮ್ ಅಲ್ಲಿನ ತೊಂದರೆಗಳೇ ಶೇಕಡಾ ೫೦ ರಷ್ಟು ಶೀಘ್ರ ಗರ್ಭಪಾತಗಳಿಗೆ ಕಾರಣ. ಬಹುತೇಕ ಕ್ರೋಮೋಸೋಮ್ ತೊಂದರೆಗಳು ಭ್ರೂಣಾಂಕುರ(embryo) ಬೇರ್ಪಡುತ್ತಾ ಬೆಳೆಯುತ್ತಾ ಹೋದಂತೆ ಕಾಕತಾಳೀಯವಾಗಿ ಕಾಣಿಸಿಕೊಳ್ಳುತ್ತವೆ ಹೊರತು ತಂದೆ ತಾಯಿಯಿಂದ ಪಾರಂಪರ್ಯವಾಗಿ ಬರುವಂತದ್ದಲ್ಲ. ಕೆಲವೊಂದು ಬಾರಿ ಮಿತಿಯಲ್ಲಿ ಇರಿಸಿದ ಮಧುಮೇಹ(ಡಯಾಬಿಟಿಸ್) ಅಥವ ಗರ್ಭಾಶಯ(uterine)ದ ಸಮಸ್ಯೆ ಅಂತಹ ಅನಾರೋಗ್ಯಕರ ಪರಿಸ್ಥಿತಿಗಳಿಂದ ಗರ್ಭಪಾತ ಉಂಟಾಗಬಹುದು. ಆದರೆ, ಬಹಳಷ್ಟು ಪ್ರಕರಣಗಳಲ್ಲಿ ಗರ್ಭಪಾತದ ಹಿಂದಿನ ಕಾರಣ ತಿಳಿದು ಬರುವುದೇ ಇಲ್ಲ.

10% ಇಂದ 20% ವರೆಗಿನ ಗರ್ಭಧಾರಣೆಗಳು ಗರ್ಭಪಾತದಲ್ಲಿ ಕೊನೆಗಾಣುತ್ತವೆ. ಈ ಪ್ರಮಾಣವೇ ಜಾಸ್ತಿ ಅನಿಸಿದರೂ, ಸರಿಯಾದ ಅಂಕಿಗಳು ಇನ್ನೂ ದೊಡ್ಡದಿವೆ. ಏಕೆಂದರೆ, ಬಹಳಷ್ಟು ಹೆಣ್ಣು ಮಕ್ಕಳಿಗೆ ತಾವು ಗರ್ಭವತಿ ಆಗಿದ್ದೇವೆಂದು ತಿಳಿಯುವ ಮುನ್ನವೇ ಗರ್ಭಪಾತ ಆಗಿ ಹೋಗಿರುತ್ತದೆ.

ಇನ್ನೊಂದು ಗರ್ಭಪಾತ ಆಗುವ ಸಾಧ್ಯತೆಗಳು ಎಷ್ಟು?

ಗರ್ಭಪಾತ ಎನ್ನುವುದು ಸಹಜವಾಗಿ ಒಮ್ಮೆ ಮಾತ್ರ ಎದುರಾಗುವಂತದ್ದು. ಗರ್ಹಪಾತ ಅನುಭವಿಸಿದ ಬಹಳಷ್ಟು ಮಹಿಳೆಯರು ಎರಡನೇ ಬಾರಿ ಯಶಸ್ವಿ ಗರ್ಭಧಾರಣೆ ಹೊಂದಿದ್ದಾರೆ. ತುಂಬಾ ಕಡಿಮೆ ಪ್ರಮಾಣದಷ್ಟು, ಅಂದರೆ 1% ಗಿಂತ ಕಮ್ಮಿ ಹೆಣ್ಣು ಮಕ್ಕಳು ಎರಡಕ್ಕಿಂತ ಹೆಚ್ಚು ಬಾರಿ ಗರ್ಭಪಾತ ಅನುಭವಿಸಿದ್ದಾರೆ.

ಒಂದು ಗರ್ಭಪಾತದ ನಂತರ ಮತ್ತೊಂದು ಗರ್ಭಪಾತದ ಪ್ರವಾಧಿಸಿದ ಸಾಧ್ಯತೆ ಅಂದರೆ 14%. ಎರಡು ಗರ್ಭಪಾತದ ನಂತರ ಮೂರನೆಯ ಗರ್ಭಪಾತ 26% ಆಗುವ ಸಾಧ್ಯತೆ ಇರುತ್ತದೆ. ಹಾಗು ಮೂರು ಬಾರಿ ಗರ್ಭಪಾತ ಆಗಿದ್ದರೆ, ಇನ್ನೊಮ್ಮೆ ಆಗುವ ಸಾಧ್ಯತೆ 28% ಇರುತ್ತದೆ.

ಗರ್ಭಪಾತದ ನಂತರ ಮತ್ತೊಮ್ಮೆ ಗರ್ಭತಾಳುವ ಮುನ್ನ ಯಾವುದಾದರು ವಿಶೇಷ ಪರೀಕ್ಷೆಗಳು ಮಾಡಿಸಬೇಕೆ?

ನೀವೇನಾದರೂ ಎರಡಕ್ಕಿಂತ ಹೆಚ್ಚು ಬಾರಿ ಗರ್ಭಪಾತ ಅನುಭವಿಸಿದರೆ, ನಿಮ್ಮ ಅರೋಗ್ಯ ತಜ್ಞರನ್ನ ಭೇಟಿ ಮಾಡಿ ಅದರ ಹಿಂದಿರುವ ಕಾರಣಗಳನ್ನ ತಿಳಿಯಲು ಯಾವುದಾದರು ವಿಶೇಷ ಪರೀಕ್ಷೆಗಳನ್ನ ಮಾಡಿಸಬೇಕ ಎಂದು ಕೇಳಿಕೊಳ್ಳಿ. ಉದಾಹರಣೆಗೆ :

೧. ರಕ್ತ ಪರೀಕ್ಷೆ

ನಿಮ್ಮ ರಕ್ತದ ಸ್ಯಾಂಪಲ್ ಅನ್ನು ಪರೀಕ್ಷಿಸಿ ನಿಮ್ಮಲ್ಲಿ ಯಾವುದಾದರು ಹಾರ್ಮೋನ್ ತೊಂದರೆಗಳು ಅಥವಾ ನಿಮ್ಮ ಪ್ರತಿರಕ್ಷಣಾ ವ್ಯವಸ್ತೆಯಲ್ಲಿನ ತೊಡಕುಗಳನ್ನು ತಿಳಿಸಲಾಗುತ್ತದೆ.

೨. ಕ್ರೋಮೋಸೋಮ್ ಪರೀಕ್ಷೆ

ನಿಮ್ಮ ಹಾಗು ನಿಮ್ಮ ಸಂಗಾತಿಯ ಇಬ್ಬರ ರಕ್ತದ ಪರೀಕ್ಷೆ ನಡೆಸಿ ಗರ್ಭಪಾತದ ಹಿಂದಿನ ಕಾರಣ ದೋಷಯುಕ್ತ ಕ್ರೋಮೋಸೋಮ್ ಗಳ ಎಂದು ತಿಳಿಸುತ್ತದೆ.

ಕೊನೆಯಲ್ಲಿ ಹೇಳಲು ಇಚ್ಚಿಸುವುದು ಇಷ್ಟೇ, ಒಂದು ಗರ್ಭಪಾತ ಆದೊಡನೆ ಅದರ ಬಗ್ಗೆಯೇ ಯೋಚನೆ ಮಾಡುತ್ತಾ ಕೊರಗಬೇಡಿ ಅಥವಾ ಮುಂದೆ ನೀವು ಇನ್ನೊಂದು ಬಾರಿ ಗರ್ಭ ತಾಳಲು ಸಾಧ್ಯವಿದೆಯೋ ಇಲ್ಲವೋ ಎಂದು ಆತಂಕಕ್ಕೆ ಒಳಗಾಗಬೇಡಿ.  ಶೀಘ್ರಮೇವ ತಾಯ್ತನ ಪ್ರಾಪ್ತಿರಸ್ತು!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon