Link copied!
Sign in / Sign up
1
Shares

ಗರ್ಭಪಾತದ ೫ ಲಕ್ಷಣಗಳು

ಗರ್ಭಾವಸ್ಥೆ ಎಂಬುದು ಮಹಿಳೆಯ ಜೀವನದಲ್ಲಿ ಅತ್ಯಂತ ಸಂತೋಷ ತರುವ ಸಮಯ. ನೀನು ಗರ್ಭಧರಿಸಿರುವೆ ಎಂಬ ಮಾತನ್ನು ಕೇಳಲು ಅವಳು ಚಡಪಡಿಸುತ್ತಿರುತ್ತಾಳೆ. ಆದರೆ, ಆಕೆಯ ಈ ಸಂತೋಷವನ್ನು ಗರ್ಭಪಾತ ಎಂಬ ಒಂದು ಪದ ಆಳುಮಾಡಿ ಆಕೆಯ ಜೀವನವನ್ನೇ ದುಃಖದಲ್ಲಿ ಮುಳುಗುವಂತೆ ಮಾಡಬಹುದು. ಗರ್ಭಪಾತದ ಈ ಲಕ್ಷಣಗಳನ್ನು ಗಮನಿಸಿ, ಇವು ನಿಮ್ಮಲ್ಲಿ ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಗರ್ಭಪಾತವಾಗುವುದನ್ನು ತಡೆಯಿರಿ.

೧.ಸೆಳೆತ

ನಿಮ್ಮ ಕೆಳಹೊಟ್ಟೆಯ ಭಾಗದಲ್ಲಿ ಬಲವಾದ ಸೆಳೆತ ಕಾಣಿಸಿಕೊಳ್ಳುವುದು ಅಥವಾ ಪೆಲ್ವಿಕ್ ಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಇದು ಗರ್ಭಪಾತದ ಆರಂಭಿಕ ಚಿಹ್ನೆಯಾಗಿದೆ. ಗರ್ಭಾವಸ್ಥೆಯಲ್ಲಿ ಹೊಟ್ಟೆಯಲ್ಲಿನ ಸೆಳೆತಗಳು ಸಾಮಾನ್ಯವಾಗಿ ಸಮಸ್ಯೆಯ ಒಂದು ಚಿಹ್ನೆ ಮತ್ತು ವೈದ್ಯರ ಜೊತೆ ಇದರ ಬಗ್ಗೆ ಆಗಾಗ್ಗೆ ಪರೀಕ್ಷೆನಡೆಸಿರಿ. ಸಣ್ಣ ಸೆಳೆತ ಸಾಮಾನ್ಯ, ಏಕೆಂದರೆ ಮಗುವು ಉದರದೊಳಗೆ ಬೆಳೆಯುತ್ತಿದೆ. ಉಸಿರು ಬಿಗಿಹಿಡಿಯುವಂತಹ ಸೆಳೆತ ಮತ್ತು ರಕ್ತಸ್ರಾವ ಕಂಡು ಬಂದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ.

೨.ರಕ್ತಸ್ರಾವ(ಬ್ಲೀಡಿಂಗ್)

ಅನೇಕ ಮಹಿಳೆಯರು ಗರ್ಭಧಾರಣೆಯ ಉದ್ದಕ್ಕೂ ಎಲ್ಲವನ್ನೂ ಪತ್ತೆಹಚ್ಚುವಲ್ಲಿ ತೊಡಗಿಸಿಕೊಂಡರೂ, ಭಾರಿ ರಕ್ತಸ್ರಾವವು ಗರ್ಭಪಾತದ ಲಕ್ಷಣಗಳನ್ನು ಸೂಚಿಸುತ್ತದೆ. ಇದನ್ನು ಹಠಾತ್/ ತತ್ಕ್ಷಣವೇ ವೈದ್ಯರನ್ನು ಭೇಟಿ ಮಾಡಿ ತಿಳಿಸುವುದು ಗರ್ಭಪಾತವನ್ನು ತಡೆಯುವಂತೆ ಮಾಡಬಹುದು.

ರಕ್ತಸ್ರಾವವಾಗುವುದು ಗರ್ಭಪಾತದ ಒಂದೇ ಕಾರಣಕ್ಕೆ ಅಲ್ಲವಾದರೂ ರಕ್ತಸ್ರಾವವಾದ ಕೂಡಲೇ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದು ಸರಿಯಾದ ಕಾರಣ ತಿಳಿದು ಚಿಕಿತ್ಸೆ ಪಡೆಯುವುದು ಒಳ್ಳೆಯದು.

೩.ನೋವು

ಹೊಟ್ಟೆಯ ತೀವ್ರ/ತೀಕ್ಷ್ಣವಾದ ನೋವು ಗರ್ಭಾವಸ್ಥೆಯ ಆರಂಭಿಕ ದಿನಗಳಲ್ಲಿ ಗರ್ಭಪಾತದ ಸಂಕೇತವಾಗಿದೆ. ನೋವು ಅತಿಯಾಗಿ ಬೆನ್ನಿನ ಕೆಳಭಾಗ ಮತ್ತು ಪೆಲ್ವಿಕ್ ಭಾಗದಲ್ಲೂ ನೋವು ಹರಡಬಹುದು/ನೋವು ಕಾಣಿಸಿಕೊಳ್ಳಬಹುದು. ನಿಮ್ಮ ವೈದ್ಯರನ್ನು ಭೇಟಿ ಮಾಡಿ ನಿಮಗೆ ಆಗುತ್ತಿರುವ ಎಲ್ಲಾ ಲಕ್ಷಣಗಳನ್ನು ಅವರ ಬಳಿ ಹೇಳಿ ಸರಿಯಾದ ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ. ಪೆಲ್ವಿಕ್ ಭಾಗದಲ್ಲಿ ಮತ್ತು ಹೊಟ್ಟೆಯ ನೋವು ಗರ್ಭಾವಸ್ಥೆಯಲ್ಲಿ ತೊಂದರೆಯ ಮುನ್ಸೂಚನೆಯಾಗಿರಬಹುದು.

೪.ರಕ್ತ ಹೆಪ್ಪುಗಟ್ಟುವಿಕೆ

ಗರ್ಭಾವಸ್ಥೆಯ ದಿನಗಳಲ್ಲಿ, ಹೆಪ್ಪುಗಟ್ಟಿದ ರಕ್ತ ಯೋನಿಯ ಮೂಲಕ ಹೊರಬರುತ್ತಿದ್ದರೆ, ಅದು ಖಂಡಿತವಾಗಿಯೂ ಗರ್ಭಪಾತದ ಲಕ್ಷಣವಾಗಿರುತ್ತದೆ. ಇದನ್ನು ನೀವು ಗಮನಿಸುತ್ತಿರುವುದು ಒಳ್ಳೆಯದು, ಮತ್ತು ಕೂಡಲೇ ವೈದ್ಯರನ್ನು ಭೇಟಿ ಮಾಡಿ ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿ.

೫.ಭ್ರೂಣದ ಚಲನವಲನ

ಸಾಮಾನ್ಯವಾಗಿ ಶಿಶುವು ಗರ್ಭಾವಸ್ಥೆಯ ೪ನೇ ತಿಂಗಳಿನಲ್ಲಿ ತನ್ನ ಚಲನವಲನಗಳನ್ನು ಮಾಡಲು ಶುರುಮಾಡುತ್ತದೆ, ಮತ್ತು ಇದರ ಅನುಭವವನ್ನು ತಾಯಿಯು ಅನುಭವಿಸಬಹುದು. ಇದು ಮಗು ಆರೋಗ್ಯವಾಗಿ ಬೆಳೆಯುತ್ತಿರುವುದರ ಸಂಕೇತ. ಮತ್ತು ಈ ಚಲನವಲನಗಳನ್ನು ತಾಯಿಯು ಅನುಭವಿಸದಿದ್ದರೆ, ಮಗುವು ಆಡುವುದನ್ನು ನಿಲ್ಲಿಸಿದ್ದರೆ ಅದು ಗರ್ಭಪಾತದ ಚಿಹ್ನೆಯಾಗಿರುತ್ತದೆ. ಕೂಡಲೇ ವೈದ್ಯರನ್ನು ಭೇಟಿ ಮಾಡಿ ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಗರ್ಭಪಾತದ ರೋಗಲಕ್ಷಣಗಳ ಬಗ್ಗೆ ಸಕಾಲಿಕ ಕಾಳಜಿ ಮತ್ತು ಅರಿವು ಭ್ರೂಣವನ್ನು ಉಳಿಸಬಹುದು ಮತ್ತು ಇದು ಆರೋಗ್ಯಕರವಾಗಿ ಮಗುವು ಬೆಳೆಯಲು ಸಹಾಯವಾಗುತ್ತದೆ. ಅಲವು ಮಹಿಳೆಯರು ಈ ಗುಣಲಕ್ಷಣಗಳನ್ನು ತಿಳಿದು ಸರಿಯಾದ ಸಮಯದಲ್ಲಿ ವೈದ್ಯರನ್ನು ಭೇಟಿ ಮಾಡಿ, ತಮ್ಮ ಮಗುವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲು ಗರ್ಭಪಾತವಾಗಿರುವ ಮಹಿಳೆಯರು ತಮ್ಮ ಮುಂದಿನ ಗರ್ಭವಾಸ್ಥೆಯನ್ನು ಸುರಕ್ಷಿತವಾಗಿ ಸಂಪೂರ್ಣಗೊಳಿಸಿದ್ದಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon