Link copied!
Sign in / Sign up
4
Shares

ಜನನ ನಿಯಂತ್ರಣ ವಿಧಾನಗಳು ಮತ್ತು ಅವುಗಳ ಅಡ್ಡಪರಿಣಾಮಗಳು

ಜನನ ನಿಯಂತ್ರಣ ವಿಧಾನ ಎಂದರೆ ಗರ್ಭಧಾರಣೆಯನ್ನು ತಡೆಯುವ ವಿಧಾನ. ಜನನ ನಿಯಂತ್ರಣ ಮಾಡಲು ಈಗ ಹಲವು ವಿಧಾನಗಳಿದ್ದು, ಅವುಗಳನ್ನು ಉಪಯೋಗಿಸುವುದರಿಂದ ನಮಗೆ ಆಗುವ ಅಡ್ಡ ಪರಿಣಾಮಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳುವ ಬನ್ನಿ.

ಜನನ ನಿಯಂತ್ರಣದ ಬಗ್ಗೆ ಒಂದು ಮುನ್ನೋಟ
ಜನನ ನಿಯಂತ್ರಣ ಹಲವು ವಿಧಾನಗಳಿಂದ ಗರ್ಭ ನಿಲ್ಲುವುದನ್ನು ತಡೆಯುತ್ತದೆ,

೧.ಹಾರ್ಮೋನಲ್ ಜನನ ನಿಯಂತ್ರಣ - ಇದು ಮಹಿಳೆಯರಲ್ಲಿ ಅಂಡೋತ್ಪತ್ತಿ ಆಗುವುದನ್ನು ತಾತ್ಕಾಲಿಕವಾಗಿ ತಡೆಯುತ್ತದೆ, ಇದರಿಂದ ತಾತ್ಕಾಲಿಕವಾಗಿ ಕೆಲವು ದಿನಗಳವರೆಗೆ ಮಹಿಳೆ ಫಲವತ್ತತೆಯನ್ನು ಅನುಭವಿಸುವುದಿಲ್ಲ ಅಥವಾ ಬಂಜರುತನವನ್ನು ಅನುಭವಿಸುವಳು.

೨.ಬ್ಯಾರಿಯರ್ ಜನನ ನಿಯಂತ್ರಣ - ಇದು ಪುರುಷನ ವೀರ್ಯವು ಮಹಿಳೆಯ ಮೊಟ್ಟೆಯನ್ನು ತಲುಪದಂತೆ ತಡೆಯುತ್ತದೆ. ಈ ವಿಧಾನದಲ್ಲಿ ಬರುವ ವಿವಿಧ ಬಗೆಯ ನಿಯಂತ್ರಣ ವಿಧಾನಗಳೆಂದರೆ,

ಡೈಫಾರ್ಮ್(Diaphragms), ಕಾಂಡೋಮ್ಸ್, ಮತ್ತು ಗರ್ಭಕಂಠದ ಟೋಪಿ(cervical caps).

೩.ಸ್ಪೆರ್ಮಿಸಿಡ್ - ಇದು ಒಂದು ರಾಸಾಯನಿಕವಾಗಿದ್ದು, ಇದು ವೀರ್ಯವನ್ನು ನಾಶ ಮಾಡಿ ಮಹಿಳೆಯ ಮೊಟ್ಟೆಯನ್ನು ತಲುಪದಂತೆ ಮಾಡುತ್ತದೆ.

ಜನನ ನಿಯಂತ್ರಣ ವಿಧಾನಗಳು ಎಷ್ಟು ದಿನಗಳವರೆಗೆ ಕೆಲಸ ಮಾಡುತ್ತವೆ? ಅಥವಾ ಅದನ್ನು ತೆಗೆದುಕೊಂಡು ಎಷ್ಟು ದಿನದ ನಂತರ ನಾವು ಗರ್ಭಧರಿಸುವ ಸಾಧ್ಯತೆಗಳಿರುತ್ತವೆ?

೧.ಬ್ಯಾರಿಯರ್ ವಿಧಾನವಾದರೆ ನೀವು ಅದನ್ನು ಬಳಸಿದ ತಕ್ಷಣವೇ ಕೆಲಸ ಮಾಡಲು ಪ್ರಾರಂಭಿಸುತ್ತದೆ.

೨.ಹಾರ್ಮೋನಲ್ ವಿಧಾನಗಳಾದ, ಜನನ ನಿಯಂತ್ರಣ ಮಾತ್ರೆ, ಇಂಪ್ಲಾಂಟ್ಸ್, ಇದನ್ನು ಸೇವಿಸಿದ ಕೆಲವು ದಿನಗಳ ನಂತರ ಇದು ಕೆಲಸ ಮಾಡಲು ಪ್ರಾರಂಭಿಸುತ್ತದೆ.

ಜನನ ನಿಯಂತ್ರಣ ವಿಧಾನ ಅನುಸರಿಸಿದರು ನಾನು ಗರ್ಭಿಣಿ ಆಗಬಹುದೇ?

ಶೇಕಡಾ ೧೦೦ ರಷ್ಟು ಪರಿಣಾಮಕಾರಿಯಾಗಿ ಯಾವುದೇ ಜನನ ನಿಯಂತ್ರಣ ವಿಧಾನ ಕಾರ್ಯನಿರ್ವಹಿಸುವುದಿಲ್ಲ. ಆದ್ದರಿಂದ ನೀವು ಈ ವಿಧಾನಗಳನ್ನು ಅನುಸರಿಸಿದ ನಂತರವೂ ಗರ್ಭಧರಿಸುವ ಸಾಧ್ಯತೆಗಳು ಇವೆ. ಆದಾಗ್ಯೂ ಜನನ ನಿಯಂತ್ರಣ ಮಾತ್ರೆಗಳು ಶೇಕಡಾ ೯೯ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ ಎಂದು ಕೆಲವು ತಜ್ಞರ ಅಭಿಪ್ರಾಯ. ನೀವು ಇವುಗಳನ್ನು ಉಪಯೋಗಿಸುವ ಮೊದಲು ಅದು ಹೇಗೆ ಕೆಲಸ ಮಾಡುತ್ತದೆ ಮತ್ತು ಸರಿಯಾಗಿ ಉಪಯೋಗಿಸುವುದನ್ನು ತಿಳಿದುಕೊಂಡು ನಂತರ ಅದರ ಬಳಕೆ ಮಾಡುವುದು ಉತ್ತಮ.

ಜನನ ನಿಯಂತ್ರಣದ ವಿಧಾನಗಳು
೧.ಹಾರ್ಮೋನಲ್ ವಿಧಾನ

- ಜನನ ನಿಯಂತ್ರಣ ಮಾತ್ರೆಗಳು

- ಪ್ಯಾಚಸ್

- ಇಂಪ್ಲಾಂಟ್ಸ್

- ಯೋನಿ ಬಳೆ(vaginal ring)

೨.ಬ್ಯಾರಿಯರ್ ವಿಧಾನ

- ಡೈಫಾರ್ಮ್(Diaphragms)

- ಕಾಂಡೋಮ್ಸ್

- ಗರ್ಭಕಂಠದ ಟೋಪಿ(cervical caps)

- ಸ್ಪೆರ್ಮಿಸಿಡ್ಸ್(Spermicides)

೩.ನೈಸರ್ಗಿಕ ವಿಧಾನ

- ಅಂಡೋತ್ಪತ್ತಿ ಪರೀಕ್ಷಾ ಬುಟ್ಟಿ

- ಸರ್ವಿಕಲ್ ಮ್ಯೂಕಸ್ ಪರೀಕ್ಷೆ

- ಋತುಚಕ್ರವನ್ನು ಗಮನಿಸುವುದು

- ಅಂತರ್ಗರ್ಭಾಶಯದ ಸಾಧನಗಳು

೪.ಶಸ್ತ್ರಚಿಕಿತ್ಸಾ ವಿಧಾನ

ಕೊಳವೆ ಬಂಧನ

ಸಂತಾನಹರಣ ಶಸ್ತ್ರಚಿಕಿತ್ಸೆ

ಹಾರ್ಮೋನಲ್ ವಿಧಾನದ ಅಡ್ಡಪರಿಣಾಮಗಳು

- ವಾಕರಿಕೆ, ಅಸ್ವಸ್ಥತೆ

- ವಾಂತಿ

- ತೂಕ ಜಾಸ್ತಿ ಆಗುವುದು

- ಚರ್ಮದ ಬಣ್ಣ ಬದಲಾಗುವುದು

- ಮೊಡವೆ

- ರಕ್ತಸ್ರಾವ

- ಮನಸ್ಥಿತಿಯಲ್ಲಿ ಬದಲಾವಣೆ

- ಋತುಚಕ್ರದಲ್ಲಿ ಬದಲಾವಣೆ

- ಸ್ತನ ಊದಿಕೊಳ್ಳುವುದು ಅಥವಾ ಮೃದುವಾಗುವುದು

ಮೌಖಿಕವಾಗಿ ತೆಗೆದುಕೊಳ್ಳುವ ಗರ್ಭನಿರೋಧಕಗಳು ಹೃದಯಾಘಾತ, ರಕ್ತ ಹೆಪ್ಪುಗಟ್ಟುವುದು ಮತ್ತು ಲಕ್ವ ಒಡೆಯುವುದು, ಇಂತಹ ಗಂಭೀರ ಸಮಸ್ಯೆಯನ್ನು ಎದುರಿಸಬೇಕಾದ ಸಾಧ್ಯತೆಗಳಿವೆ.

ಧೂಮಪಾನ ಸೇವನೆ ಈ ಅವಕಾಶಗಳನ್ನು ಹೆಚ್ಚಿಸುತ್ತದೆ.

ಬ್ಯಾರಿಯರ್ ವಿಧಾನದ ಅಡ್ಡಪರಿಣಾಮಗಳು

ಮೂತ್ರನಾಳದ ಸೋಂಕು ಬೆಳವಣಿಗೆಗೆ ಅವಕಾಶಗಳು ಹೆಚ್ಚಾಗುತ್ತದೆ.

ಸರ್ವಿಕಲ್ ಕ್ಯಾಪ್ಸ್ ಅಥವಾ Diaphragms ಅನ್ನು ೨೪ತಾಸುಗಳಿಗಿಂತ ಹೆಚ್ಚಿನ ಕಾಲ ಅಲ್ಲಿಯೇ ಬಿಟ್ಟರೆ ಗಂಭೀರ ಆಘಾತ ಲಕ್ಷಣಗಳನ್ನು ಎದುರಿಸಬೇಕಾಗುತ್ತದೆ.

ಕೆಲವು ಮಹಿಳೆಯರು ಅಲರ್ಜಿಯನ್ನು ಅನುಭವಿಸುವರು.

ಖಾಸಗಿ ಜಾಗದಲ್ಲಿ ಕಿರಿಕಿರಿ ಅಥವಾ ನವೆ ಕಾಣಿಸಿಕೊಳ್ಳುವುದು.

ಇದರ ಒಂದು ಅನುಕೂಲ ಅಥವಾ ಪ್ರಯೋಜನವೆಂದರೆ, ಇದನ್ನು ಉಪಯೋಗಿಸುವುದರಿಂದ ಲೈಂಗಿಕವಾಗಿ ಹರಡುವ ರೋಗ ಅಥವಾ ಸೋಂಕುಗಳು ಹರಡುವುದಿಲ್ಲ(ಅದರಲ್ಲೂ ವಿಶೇಷವಾಗಿ ಕಾಂಡೋಮ್ಸ್ ಬಳಸುವುದು).

ಶಸ್ತ್ರಚಿಕಿತ್ಸೆ ವಿಧಾನದ ಅಪಾಯಗಳು

ಇದನ್ನು ಮಾಡಿಸಿಕೊಳ್ಳುವುದರಿಂದ ಯಾವುದೇ ಅಡ್ಡಪರಿಣಾಮ ಇಲ್ಲದಿದ್ದರೂ, ಇದು ಶಾಶ್ವತ ವಿಧಾನವಾಗಿದೆ ಮತ್ತು ಇದರಿಂದ ಕೆಲವು ಅಪಾಯಗಳನ್ನು ಎದುರಿಸಬೇಕಾಗಬಹುದು. ಈ ಅಪಾಯಗಳೆಂದರೆ, ಸೋಂಕು ತಗುಲಬಹುದು, ಸ್ರಾವ ಆಗುವುದು ಮತ್ತು ಅರಿವಳಿಕೆಯ ತೊಂದರೆಗಳನ್ನು ಎದುರಿಸಬೇಕಾಗುವುದು.

ತುರ್ತು ಗರ್ಭನಿರೋಧಕ ವಿಧಾನ ಮತ್ತು ಅದರ ಅಡ್ಡಪರಿಣಾಮಗಳು

ತುರ್ತು ಗರ್ಭನಿರೋಧಕ ವಿಧಾನವೆಂದರೆ, ಸಂಭೋಗದ ನಂತರ ಗರ್ಭ ನಿಲ್ಲುವ ಸಾಧ್ಯತೆಗಳನ್ನು ತಪ್ಪಿಸಲು ಮಾತ್ರೆ ಅಥವಾ ವೈದ್ಯಕೀಯ ಉಪಯೋಗ ಪಡೆಯುವುದು. ಈ ಮಾತ್ರೆಗಳು ಸಂಭೋಗ ಮಾಡಿದ ೭೨ಗಂಟೆಯೊಳಗೆ ಸೇವಿಸದರೆ ಮಾತ್ರ ಗರ್ಭ ನಿಲ್ಲುವುದನ್ನು ತಡೆಯಬಹುದು.

ಇದರ ಅಡ್ಡ ಪರಿಣಾಮಗಳು

ವಾಕರಿಕೆ

ವಾಂತಿ

ತಲೆನೋವು

ಆಯಾಸ, ದಣಿವು, ಬೇಗನೆ ಸುಸ್ತಾಗುವುದು

ತಲೆತಿರುಗುವಿಕೆ

ಸ್ತನ ಮೃದುವಾಗುವುದು ಮತ್ತು

ಕೆಳಹೊಟ್ಟೆ ನೋವು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon