Link copied!
Sign in / Sign up
10
Shares

ನೀವು ಮಗು ಹೀಗೆ ಗರ್ಭಕವಚದ ಜೊತೆ ಜನಿಸಿರುವುದು ಬಹುಶಃ ನೋಡಿರುವುದಿಲ್ಲ!

ಒಂದು ಮಗು ಜನಿಸಿದಾಗ, ಅದನ್ನ “ಸೃಷ್ಟಿಯ ಪವಾಡ” ಎನ್ನುತ್ತಾರೆ. ಆದರೆ ಕೆಲವೊಂದು ಜನನಗಳು ನಿಜವಾಗಿಯೂ ಉಳಿದೆಲ್ಲವುದಕ್ಕಿಂತ ದೊಡ್ಡ ಪವಾಡ ಆಗಿರುತ್ತವೆ. ಛಾಯಗ್ರಾಹಕಿ ಆದ ಲೀಲಾನಿ ರಾಜರ್ಸ್ ಅಂತದ್ದೊಂದು ಪವಾಡವನ್ನ ಸೆರೆ ಹಿಡಿದಿದ್ದಾರೆ. ಇದು ಆಕೆಯು ಒಂದು ಅವಳಿ ಜವಳಿ ಮಕ್ಕಳನ್ನು ಹೊತ್ತಿದ್ದ ಗರ್ಭಿಣಿ ಹೆಂಗಸಿನ ಮನೆಯಲ್ಲೇ ಹೆರಿಗೆ ಆಗುವುದನ್ನ ಸೆರೆಹಿಡಿಯಲು ಹೋಗಿದ್ದಾಗ ಆಕೆಯ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದು. ಅವಳು ಫೋಟೊಗಳನ್ನ ಕ್ಲಿಕ್ಕಿಸುತ್ತಾ, ಒಂದು ಮಗುವು ತನ್ನ ಅಮ್ನಿಯೋಟಿಕ್ ಚೀಲದಲ್ಲೇ (ಗರ್ಭದ ಒಳಕವಚ) ಸಂಪೂರ್ಣವಾಗಿ ಜನ್ಮತಾಳಿದ್ದನ್ನು ಗಮನಿಸಲೇ ಇಲ್ಲ. “ಕೋಣೆಯು ಕತ್ತಲಿನಿಂದ ಕೂಡಿತ್ತು ಹಾಗು ಚಿಕ್ಕದಾಗಿತ್ತು. ಆದರೆ ನಾನು ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ ಮತ್ತು ಹೆಚ್ಚು ಸಮಯ ವ್ಯರ್ಥ ಮಾಡಲಿಲ್ಲ. ನನ್ನ ಕೆಲಸ ಶುರು ಮಾಡಿಕೊಂಡೆ….ಆದರೆ ನಾನು ಏನು ಸೆರೆ ಹಿಡಿಯುತ್ತಿದ್ದೆ ಎಂಬುದು ಹೆರಿಗೆ ಮುಗಿಯುವವರೆಗೆ ನನಗೆ ಗೊತ್ತಾಗಿರಲಿಲ್ಲ!” ಎನ್ನುತ್ತಾರೆ ಲೀಲಾನಿ.

ಲೀಲಾನಿ ಹೇಳುವ ಹಾಗೆ ಇದು ಅತ್ಯಂತ ಅಪರೂಪದ ದೃಶ್ಯ ಆಗಿದ್ದು, ಇದನ್ನ ನೋಡುವ ಅದೃಷ್ಟ ಎಲ್ಲರಿಗು ಸಿಗುವುದಿಲ್ಲ. “ಆ ಗರ್ಭಕವಚವನ್ನ ನಾನು ಕಣ್ಣು ತುಂಬಿಸಿಕೊಳ್ಳಲು ನನಗೆ ಸಮಯವೇ ಇರಲಿಲ್ಲ” ಎನ್ನುತ್ತಾಳೆ ಲೀಲಾನಿ. ಆದರೂ ಕೂಡ ಅಷ್ಟೇ ಸಮಯದಲ್ಲಿ ಎರಡನೇ ಮಗುವು ಇನ್ನೂ ಚೀಲದಲ್ಲೇ ಹೊರಬರುತ್ತಿರುವುದನ್ನ ಮನಮೋಹಕವಾಗಿ ಸೆರೆಹಿಡಿದಿದ್ದಾಳೆ. “ಈ ಚೀಲವನ್ನ ಮಗುವು ಹೊರಬರುವಾಗ ಬಿಡಿಸಲಾಗುತ್ತದೆ. ಆದರೆ ಇಲ್ಲಿ ಆ ಚೀಲವು ಎಷ್ಟು ಗಟ್ಟಿ ಇತ್ತು ಎಂದರೆ ಅದನ್ನ ಕೈಯ್ಯಿಂದ ಹರಿದು ಕತ್ತರಿಸಬೇಕಾಯಿತು!” ಎನ್ನುತ್ತಾಳೆ ಲೀಲಾನಿ.

ಇದನ್ನ ನೀವು ಬಹುಶಃ ಮುಂಚೆ ನೋಡಿದ್ದರೂ ನೋಡಿರಬಹುದು, ಏಕೆಂದರೆ ೮೦೦೦೦ ಹೆರಿಗೆಗಳಲ್ಲಿ ಒಮ್ಮೆ ಸಂಭವಿಸುತ್ತದೆ. ಇದು ಸಾಮಾನ್ಯವಾಗಿ ಅಕಾಲಿಕ ಹೆರಿಗೆಗಳಲ್ಲಿ ಆಗುವುದು ಮತ್ತು ಇದರಿಂದ ಯಾವುದೇ ತೊಂದರೆ ಆಗುವುದಿಲ್ಲ. ತಲತಲಾಂತರದಿಂದ ಇದು ಅದೃಷ್ಟ ತರುವಂತದ್ದು ಮತ್ತು ಶುಭ ಸೂಚಿಸುವಂತದ್ದು ಎನ್ನುತ್ತಾರೆ.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon