Link copied!
Sign in / Sign up
3
Shares

ನೀವು ಗರ್ಭಧರಿಸಿದ ತಕ್ಷಣ ನಿಮ್ಮ ದೇಹದಲ್ಲಿ ಆಗಬಹುದಾದ 7 ವಿಚಿತ್ರ ಬದಲಾವಣೆಗಳು

ಕೆಲವು ಹೆಂಗಸರು ತಮ್ಮ ಗರ್ಭಧಾರಣೆಯನ್ನು ಇಷ್ಟಪಟ್ಟರೆ ಇನ್ನು ಕೆಲವರು ಕಷ್ಟಪಟ್ಟು ಸಾಗಿಸುತ್ತಾರೆ. ಹಾಗೆಯೆ, ಗರ್ಭಧಾರಣೆಯ ಕೆಲವೊಂದು ಲಕ್ಷಣಗಳು ಮತ್ತು ದೈಹಿಕ ಬದಲಾವಣೆಗಳು ತುಂಬಾ ಚೆನ್ನಾಗಿರುತ್ತವೆ, ಆದರೆ ಅವುಗಳೊಂದಿಗೆ ಕೆಲವೊಂದು ಅಹಿತಕರ ಲಕ್ಷಣಗಳು, ಬದಲಾವಣೆಗಳನ್ನೂ ನಾವು ಕಾಣುತ್ತೇವೆ. ಕೆಲವೊಂದು ನಿಮ್ಮ ಗರ್ಭಧಾರಣೆಯ ಕೊನೆಯ ಹಂತಗಳಲ್ಲಿ ಕಾಣಿಸಿಕೊಳ್ಳುತ್ತವೆ, ಕೆಲವೊಂದು ಬದಲಾವಣೆಗಳು ವಿಚಿತ್ರವಾಗಿರುತ್ತವೆ. ಇಂತಹ ವಿಚಿತ್ರ ಬದಲಾವಣೆಗಳ ಬಗ್ಗೆ ನೀವು ತಿಳಿದಷ್ಟು ಹೆಚ್ಚು ತಯಾರಿ ಹೊಂದಬಹುದು. ಹಾಗಿದ್ದರೆ ಅಂತಹ ವಿಚಿತ್ರ ಬದಲಾವಣೆಗಳು ಯಾವು?

೧. ಮೂತ್ರವು ವಿಚಿತ್ರ ವಾಸನೆ ಬೀರುತ್ತದೆ

ಹೌದು..ನಿಮಗೆ ನೀವು ಗರ್ಭಿಣಿ ಆಗಿದ್ದೀರಾ ಎಂದು ತಿಳಿಯುವ ಮುನ್ನವೇ ನಿಮ್ಮ ಮೂತ್ರವು ವಿಚಿತ್ರ ವಾಸನೆ ಬೀರಲು ಶುರು ಮಾಡುತ್ತದೆ. ಇದಕ್ಕೆ ಕಾರಣ ದೇಹದಲ್ಲಿ hCG ಪ್ರಮಾಣ ಹೆಚ್ಚಾಗುವುದು. ನೀವು ಪ್ರೆಗ್ನನ್ಸಿ ಪರೀಕ್ಷೆಗೆ ಬಳಸುವ ಪ್ರೆಗ್ನನ್ಸಿ ಟೆಸ್ಟ್ ಕಿಟ್ ಕೂಡ ಇದರ ಪ್ರಮಾಣ ನೋಡಿಯೇ ನೀವು ಗರ್ಭ ಧರಿಸಿದ್ದೀರಾ ಎಂದು ಹೇಳುವುದು. ಆದರೆ ಇದು ಹೆಚ್ಚು ದಿನಗಳವರೆಗೆ ಕಾಟ ಕೊಡುವುದಿಲ್ಲ.


೨. ನಿಮ್ಮ ರಕ್ತದ ಪ್ರಮಾಣ ಹೆಚ್ಚುತ್ತದೆ

ನೀವು ಗರ್ಭತಾಳಿದೊಡನೆ ನಿಮ್ಮ ನರಗಳಲ್ಲಿ ಮತ್ತು ಅಪಧಮನಿಗಳಲ್ಲಿ ಹರಿಯುವ ರಕ್ತದ ಪ್ರಮಾಣವು ದ್ವಿಗುಣವಾಗುತ್ತದೆ. ಅಂದರೆ ನಿಮಗೆ ನೀವು ತಾಯಿ ಆಗುತ್ತಿದ್ದಿರಿ ಎಂದು ತಿಳಿಯುವ ಮುನ್ನವೇ ಈ ಬದಲಾವಣೆ ಕಾಣುತ್ತದೆ. ಕೆಲವು ತಜ್ಞರು ರಕ್ತದ ಪ್ರಮಾಣದಲ್ಲಿನ ಈ ಏರಿಕೆಯು ಹೆರಿಗೆ ಸಮಯದಲ್ಲಿ ರಕ್ತಸ್ರಾವ ಉಂಟಾದರೆ ರಕ್ಷಣೆ ನೀಡುತ್ತದೆ ಎನ್ನುವರು.


೩. ನಿಮ್ಮ ವಾಸನೆ ಗ್ರಹಿಕೆ ಶಕ್ತಿ ಹೆಚ್ಚುತ್ತದೆ

ಇದು ಗರ್ಭಧಾರಣೆ ಸಮಯದಲ್ಲಿ ನಿಮಗೆ ಸಿಗುವ ಒಂದು ರೀತಿಯ ವಿಶಿಷ್ಟ ಶಕ್ತಿ. ಇದು ಕೂಡ ನಿಮಗೆ ನೀವು ಗರ್ಭಧರಿಸುವ ವಿಷಯ ಗೊತ್ತಾಗುವ ಮುನ್ನವೇ ಕಾಣಿಸುವಂತದ್ದು. ಕೆಲವರು ಇದಕ್ಕೆ ಕಾರಣ ನಾಳಗಳಲ್ಲಿ ರಕ್ತದ ಪ್ರಮಾಣ ಹೆಚ್ಚುವುದು ಎಂದರೆ ಇನ್ನು ಕೆಲವರು ಇದು ನಿಮ್ಮ ಮಗುವಿಗೆ ಹಾನಿ ಉಂಟುಮಾಡುವಂತಹ ವಸ್ತುಗಳನ್ನ ನೀವು ಒಳಗೆ ಸೇವಿಸದಂತೆ ಸಹಾಯ ಮಾಡಲು ಇರುವಂತದ್ದು ಎನ್ನುತ್ತಾರೆ. ಇದು ಕೆಲವೊಮ್ಮೆ ನಿಮ್ಮನ್ನು ಕೆರಳಿಸಬಹುದು ಕೂಡ, ಆದರೆ ಇದು ಬಹಳ ದಿನಗಳವರೆಗೆ ಇರುವುದಿಲ್ಲ ಎನ್ನುವುದೇ ಖುಷಿ.


೪. ನಿಮ್ಮ ದೇಹದ ತಾಪಮಾನ ಹೆಚ್ಚುತ್ತದೆ

ನಿಮಗೆ ಇತ್ತೀಚಿಗೆ ಎಂದಿಗಿಂತ ಜಾಸ್ತಿ ಸೆಕೆ ಆಗುತ್ತಿದೆಯೇ? ಹಾಗಾದರೆ ನೀವು ಗರ್ಭಿಣಿ ಆಗಿದ್ದರು ಆಗಿರಬಹುದು, ಅದೂ ನಿಮಗೆ ತಿಳಿಯುವ ಮುನ್ನವೇ. ಪ್ರತಿ ತಿಂಗಳು ಅಂಡೋತ್ಪತ್ತಿಯ ನಂತರ ದೇಹದ ತಾಪಮಾನ ಹೆಚ್ಚುತ್ತದೆ ಮತ್ತು ಪಿರಿಯಡ್ಸ್ ನಂತರ ಅದು ಕಡಿಮೆ ಆಗುತ್ತದೆ. ಒಂದು ವೇಳೆ ನಿಮ್ಮ ದೇಹವು ಹೆಚ್ಚಿನ ತಾಪಮಾನವನ್ನು ಹಾಗೆಯೇ ಉಳಿಸಿಕೊಂಡಿದ್ದರೆ, ಅದು ಒಂದು ಸಿಹಿ ವಿಷಯದ ಸೂಚನೆ ಆಗಿರಬಹುದು.


೫. ನೀವು ಹೆಚ್ಚು ಜೊಲ್ಲು ಉತ್ಪತ್ತಿ ಮಾಡಬಹುದು

ನಿಮಗೆ ಇದು ಗೊತ್ತಾಗುವುದಿಲ್ಲ, ಆದರೆ ನೀವು ಗರ್ಭಧರಿಸಿದಾಗ ನೀವು ಎಂದಿಗಿಂತ ಸುಮಾರು 3-4 ಲೀಟರ್ ಅಷ್ಟು ಹೆಚ್ಚು ಜೊಲ್ಲು ಉತ್ಪತ್ತಿ ಮಾಡುತ್ತೀರಾ. ಹೌದು ನಿಮ್ಮ ಲಾಲಾರಸದ ಗ್ರಂಥಿಗಳು ಈ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡುತ್ತವೆ.


೬. ನಿಮ್ಮ ಯೋನಿಯು ನೀಲಿ ಬಣ್ಣಕ್ಕೆ ತಿರುಗಬಹುದು

ನೀವು ಈಗಾಗಲೇ ಛಾದ್ವೀಕ್ಸ್ ಸೂಚನೆ ಬಗ್ಗೆ ಕೇಳಿರುತ್ತಿರೋ ಇಲ್ಲವೋ, ಆದರೆ ಈಗ ನೀವು ಇದರ ಬಗ್ಗೆ ತಿಳಿಯಲಿದ್ದು, ಇದು ಕಂಡ ತಕ್ಷಣ ಗಾಬರಿ ಆಗುವಂತಿಲ್ಲ. ನೀವು ಗರ್ಭಧಾರಣೆಯ ಕೇವಲ ಆರನೇ ತಿಂಗಳಷ್ಟರಲ್ಲಿ ನಿಮ್ಮ ಯೋನಿ, ಲಾಬಿಯ ಮತ್ತು ಗರ್ಭಕಂಠವು ನೀಲಿ ಅಥವಾ ನೇರಳೆ ಬಣ್ಣ ತಾಳಬಹುದು. ಇದಕ್ಕೆ ಕಾರಣ ರಕ್ತದ ಹರಿವಿನಲ್ಲಿ ಆಗುವ ಏರಿಕೆ.


೭. ನಿಮ್ಮ ಕನಸುಗಳು ಇನ್ನಷ್ಟು ಸಜೀವವಾಗುತ್ತವೆ

ಸಾಮಾನ್ಯವಾಗಿ ನಿಮಗೆ ನೀವು ಕಂಡ ಕನಸುಗಳ ಪ್ರತಿಯೊಂದು ಮಾಹಿತಿಯು ನೆನಪಿರುವುದಿಲ್ಲ. ಆದರೆ ನೀವು ಗರ್ಭಿಣಿ ಆದಮೇಲೆ, ಆ ಕನಸುಗಳು ಮತ್ತಷ್ಟು ಸಜೀವಗೊಳ್ಳುತ್ತವೆ. ನಿಮ್ಮ ಗರ್ಭಧಾರಣೆಯ ಹೊಸತಲ್ಲಿ ನೀವು ಸಹಜವಾಗಿ ಕಾಣುವುದಕ್ಕಿಂತ ಹೆಚ್ಚು ನೀರು ಮತ್ತು ಫಲವತ್ತತೆ ಬಗ್ಗೆ ಕನಸು ಕಾಣುವುದನ್ನು ಗಮನಿಸಬಹುದು. ಆದರೆ ಇದು ಕೂಡ ಉಳಿದ ಬದಲಾವಣೆಗಳಂತೆ ಕೇವಲ ಗರ್ಭಧಾರಣೆಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತವೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon