Link copied!
Sign in / Sign up
3
Shares

ಗರ್ಭಧಾರಣೆಯ ನಂತರ ಕೂದಲು ಉದುರುವಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ೫ ವಿಷಯಗಳು

ಮಗುವನ್ನು ಪಡೆಯುವುದು ಹಲವಾರು ಜವಾಬ್ದಾರಿಗಳ ಜೊತೆ ಬರುತ್ತದೆ ಮತ್ತು ನಿಮ್ಮ ಜೀವನವನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಇದರ ಅರ್ಥ ನಿಮ್ಮ ಮಗುವಿಗಾಗಿ, ನಿಮ್ಮನ್ನು ನೀವು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಬೇಕು. ಹಾರ್ಮೋನುಗಳಲ್ಲಿ ಬದಲಾವಣೆಯಾಗುವುದರಿಂದ, ಬಹಳಷ್ಟು ಒತ್ತಡಕ್ಕೆ ಇದು ದಾರಿಯಾಗುತ್ತದೆ, ಯಾವುದೇ ಮಹಿಳೆ ಹೊಂದಲು ಇದು ಒಂದು ಅತ್ಯಂತ ಸುಂದರವಾದ ಅನುಭವವಾಗಿದೆ!.

ಹಾರ್ಮೋನುಗಳ ಬಗ್ಗೆ ಹೇಳುವುದಾದರೆ, ಪ್ರಸವಕ್ಕೂ ಮುನ್ನ ಸುಂದರ ಕೇಶರಾಶಿಯ ಆನಂದವನ್ನು ಅನುಭವಿಸುತ್ತಿರುತ್ತೀರಿ ಆದರೆ ಪ್ರಸವದ ನಂತರ ತೀವ್ರವಾದ ಕೂದಲು ಉದುರುವಿಕೆಯನ್ನು ಕಾಣುವಿರಿ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ, ಏಕೆಂದರೆ ಪ್ರಸವ ನಂತರ ಇದು ಸಾಮಾನ್ಯ.

ನೀವು ಗರ್ಭಿಣಿಯಾಗಿದ್ದಾಗ, ಸುಂದರ ಉದ್ದನೆಯ ಮಂದವಾದ ಕೂದಲನ್ನು ಹೊಂದಿದ್ದೀರಿ. ಏಕೆಂದರೆ, ನಿಮ್ಮ ದೇಹದಲ್ಲಿ ಈಸ್ಟ್ರೊಜೆನ್ನ ಉನ್ನತ ಮಟ್ಟದ ಕಾರಣದಿಂದಾಗಿ.

ಆದರೆ ನಿಮ್ಮ ಕೂದಲು ಈಗ(ಪ್ರಸವದ ನಂತರ) ಬೆಳೆಯುದನ್ನು ನಿಲ್ಲಿಸುವ ಹಂತಕ್ಕೆ ಬಂದಿದೆ. ನಿಮ್ಮ ಕೂದಲಿನ ಎಳೆಗಳು ಬೆಳೆಯುದನ್ನು ನಿಲ್ಲಿಸಿರುವುದಕ್ಕೆ ಹಾರ್ಮೋನಿನ ಬದಲಾವಣೆ ಕಾರಣವಲ್ಲ.

ಒಂದು ವೇಳೆ ನೀವು ಕೂದಲು ಉದುರುವಿಕೆಯ ಬಗ್ಗೆ ತಲೆ ಕೆಡಿಸಿಕೊಂಡಿದ್ದರೆ, ನೀವು ಏನು ಮಾಡಬಹುದು ಎಂಬುದನ್ನು ಕೆಳಗೆ ನೀಡಲಾಗಿದೆ

೧.ನೀವು ಸೇವಿಸುವ ಆಹಾರದಲ್ಲಿ ಖನಿಜಾಂಶಗಳು(ಮಿನರಲ್ಸ್) ಸಮೃದ್ದವಾಗಿರಲಿ

ವಿಟಮಿನ್ಸ್, ಕಬ್ಬಿಣಾಂಶ ಮತ್ತು ಸತುವಿನಂತಹ ಪೌಷ್ಟಿಕಾಂಶಗಳ ಕೊರತೆಯ ಕಾರಣದಿಂದ ಕೂದಲು ಉದುರುವುದು ಹೆಚ್ಚಾಗಿ ಕಂಡುಬರುತ್ತದೆ. ನೀವು ಏನನ್ನು ತಿನ್ನುತ್ತಿದ್ದೀರಾ ಎಂಬುದನ್ನು ನೀವು ಗಮನಿಸಬೇಕು. ಕೂದಲು ಉದುರುವುದನ್ನು ಕಡಿಮೆ ಮಾಡಬಲ್ಲ, ವಿಟಮಿನ್ ಸಿ(C) ಮತ್ತು ವಿಟಮಿನ್ ಬಿ(B) ಸಂಯುಕ್ತಯುಳ್ಳ ಆಹಾರಗಳನ್ನು ಸೇವಿಸಿ. ನೀವು ಸೋಯಾ, ಧಾನ್ಯಗಳು, ಕಿತ್ತಳೆಹಣ್ಣು, ಮೊಳಕೆಕಾಳುಗಳು, ದ್ವಿಧಳ ಧಾನ್ಯಗಳು, ಬೀಜಗಳು ಮತ್ತು ಹಸಿರು ಬಟಾಣಿಗಳಂತಹ ಆಹಾರ ಉತ್ಪನ್ನಗಳನ್ನು ಸೇವಿಸಬೇಕು.

ಸಲಹೆ: ನೀವು ನಿಯಮಿತವಾಗಿ ಮಜ್ಜಿಗೆ ಕುಡಿಯುವುದು ಅದ್ಭುತವಾಗಿ ಪರಿಣಾಮಬೀರುತ್ತದೆ.

೨.ನಿಮ್ಮ ಕೂದಲಿಗೆ ಕರುಣಾಮಯಿಯಾಗಿರಿ

ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಕೂದಲಿಗೆ ಮಾಡುವ ಶೈಲಿಯನ್ನು ತಪ್ಪಿಸಿ. ನಿಮ್ಮ ಕೂದಲನ್ನು ಹಾಳು ಮಾಡುತ್ತಿದ್ದೀರಿ! ಇದರಿಂದ ನಿಮ್ಮ ಕೂದಲು ಸಂಪೂರ್ಣವಾಗಿ ನಾಶವಾಗುವಂತೆ ನೀವು ಭಾವಿಸಬೇಕಾಗುತ್ತದೆ. ಆದ್ದರಿಂದ, ಕರ್ಲಿಂಗ್ ಐರನ್(curling irons) ಮತ್ತು ನೇರಕೂದಲು(straighteners) ಕೂದಲಿನ ಶೈಲಿ(ಸ್ಟೈಲಿಂಗ್) ಉತ್ಪನ್ನಗಳನ್ನು ಬಳಸುವುದು ಕೆಟ್ಟ ಆಲೋಚನೆಯಾಗಿದೆ, ಏಕೆಂದರೆ ನಿಮ್ಮ ಕೂದಲಿನ ಬೇರುಗಳು ಹಾನಿಗೊಳಗಾಗುತ್ತವೆ ಮತ್ತು ಹೆಚ್ಚು ಕೂದಲು ಉದುರುವುದನ್ನು ಉಂಟುಮಾಡಬಹುದು.

ಕೂದಲಿನ ಬಣ್ಣಗಳು? ಕೆಲ ದಿನಗಳವರೆಗೆ ಅದನ್ನು ಮರೆತುಬಿಡಿ! ಇಲ್ಲವಾದರೆ ವಿಷಾದಿಸಬೇಕಾಗುತ್ತದೆ.

೩.ಅಂಗ ಮರ್ಧನಕ್ಕೆ(ಮಸಾಜ್) ಹೌದು ಎಂದು ಹೇಳಿ

ಮಾಲೀಸು ಮಾಡುವುದರಿಂದ ಸಾಮಾನ್ಯವಾಗಿ ರಕ್ತ ಪರಿಚಲನೆಯು ಸರಾಗವಾಗಿ ಆಗಲು ಸಹಾಯವಾಗುತ್ತದೆ. ಎಣ್ಣೆಯನ್ನು ಉಗುರು ಬೆಚ್ಚಗಾಗುವವರೆಗೆ ಬಿಸಿ ಮಾಡಿ, ಬೆರಳುಗಳಿಂದ ತಲೆಯ ನೆತ್ತಿಯ ಭಾಗವನ್ನು ಚೆನ್ನಾಗಿ ಮಾಲೀಸು ಮಾಡಿ. ಇದು ರಕ್ತಪರಿಚಲನೆಯನ್ನು ಸುಲಭವಾಗಿಸುವುದರ ಜೊತೆಗೆ, ನಿಮ್ಮ ಒತ್ತಡವನ್ನು ಕಡಿಮೆಮಾಡಿ ಶಾಂತಿಯಿಂದ ಇರುವಂತೆ ಮಾಡುತ್ತದೆ.

೪.ಗಿಡಮೂಲಿಕೆ ಉತ್ಪನ್ನಗಳು ನಿಮ್ಮ ಅತ್ಯುತ್ತಮ ಸ್ನೇಹಿತರು

ಭೃಂಗರಾಜ್ ತನ್ನ ಅತ್ಯದ್ಭುತವಾದ ಕೂದಲು ದುರಸ್ತಿ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಇದು ನಿಮ್ಮ ಹಾನಿಗೊಳಗಾದ ಕೂದಲನ್ನು ಬೇರಿನಿಂದ ತುದಿಯವರೆಗೆ ಪೋಷಿಸುತ್ತದೆ. ನೀವು ಇದರ ಎಲೆಯನ್ನು ಪೇಸ್ಟ್ ತರ ಮಾಡಿಕೊಂಡು ನಿಮ್ಮ ತಲೆಗೆ ಹಚ್ಚಬಹುದು, ಅಥವಾ ಒಣಗಿದ ಎಲೆಗಳನ್ನು ಪುಡಿಮಾಡಿಕೊಂಡು, ಜೇನುತುಪ್ಪ ಮತ್ತು ಹಾಲಿನ ಜೊತೆ ಮಿಶ್ರಿಸಿ ತೆಗೆದುಕೊಳ್ಳಬಹುದು.

೫.ಸರಿಯಾದ ನವಿರುಗೆ(ಶಾಂಪ್ಯೂ)ಯನ್ನು ಬಳಸಿ

ಉತ್ತಮ ಪ್ರಮಾಣದ ಕೆರಾಟಿನ್ ಮತ್ತು ಬಯೋಟಿನ್ ಅನ್ನು ಹೊಂದಿರುವ ಶ್ಯಾಂಪೂಗಳನ್ನು ಬಳಸುವುದು ಚತುರ ಆಯ್ಕೆಯಾಗಿದೆ. ಕೂದಲು ಬೆಳವಣಿಗೆಗೆ ಉತ್ತೇಜಿಸುವ ಗುಣಗಳಿಗೆ ಅವು ಹೆಸರುವಾಸಿಯಾಗಿರುವುದರಿಂದ, ನೀವು ಕಳೆದುಕೊಂಡಿರುವ ನಿಮ್ಮ ಕೂದಲನ್ನು ಮರಳಿ ಪಡೆಯಲು ಇದು ಉತ್ತಮ ಮಾರ್ಗ.

ಮೇಲಿನ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ, ಮತ್ತು ನಿಮ್ಮ ಕೂದಲು ದಿನನಿತ್ಯ ತನ್ನ ಬೆಳವಣಿಗೆಯನ್ನು ಹೆಚ್ಚಿಸಿಕೊಳ್ಳುವಲ್ಲಿ ಯಾವುದೇ ಅನುಮಾನವಿಲ್ಲ.

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

Recently, we launched a baby-safe, natural and toxin-free floor cleaner. Recommended by moms and doctors all over India, this floor-cleaner liquid gets rid of germs and stains without adding harmful toxins to the floor. Click here to buy it and let us know if you liked it.

Stay tuned for our future product launches - we plan to launch a range of homecare products that will keep your little explorer healthy, safe and happy!

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon