Link copied!
Sign in / Sign up
0
Shares

ಗರ್ಭದಾರಣೆ ಸಂದರ್ಭದಲ್ಲಿ ಮಂಪ್ಸ್ ಪರಿಣಾಮಗಳೇನು..?

ಮಂಪ್ಸ್ ಮೈಕ್ಸೊವೈರಸ್ಸುಗಳಿಂದ ಉಂಟಾಗುವಂತಹ ಒಂದು ಸಾಂಕ್ರಾಮಿಕ ಸೋಂಕಾಗಿದೆ (ಮೈಕ್ಸೊವೈರಸ್- ಏಕೈಕ ಆರ್ಎನ್ಎ ವೈರಸ್ ಆಗಿದ್ದು, ಆರ್ಥೋಮೈಕ್ಸೊವೈರಸ್ ಮತ್ತು ಪ್ಯಾರೈಕ್ಸೊವೈರಸ್ ಕುಟುಂಬಕ್ಕೆ ಸೇರಿದೆ, ಈ ವೈರಸ್ಸು ಇನ್ಫ್ಲುಯೆನ್ಸ, ಮಂಪ್ಸ್ ಮತ್ತು ಇತರ ಸಂಬಂಧಿತ ವೈರಸ್ಸು ಸೋಂಕುಗಳಿಗೆ ಕಾರಣವಾಗಿದೆ). ಈ ವೈರಸ್ಸು ಮುಖ್ಯವಾಗಿ ಲವಣ ಗ್ರಂಥಿಗಳ ಮೇಲೆ ಪ್ರಭಾವ ಬೀರುತ್ತದೆ. (ಲಾಲಾರಸವನ್ನು ಬಿಡುಗಡೆ ಮಾಡುವ ಅತಿದೊಡ್ಡ ಲವಣ ಗ್ರಂಥಿಯಾದ ಪ್ಯಾರೋಟಿಡ್ ಜೊಲ್ಲು ಗ್ರಂಥಿಯ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ).

ಈ ಸೋಂಕು ಸಾಮಾನ್ಯವಾಗಿ ಮಕ್ಕಳಲ್ಲಿ ಕಂಡು ಬರುತ್ತದೆ. ಇದಲ್ಲದೆ ಮಂಪ್ಸ್ ನಿರೋಧಕವನ್ನು ಪಡೆಯದೆ ಇರುವಂತಹ ವಯಸ್ಕರಿಗೂ ಸಹ ಸೋಂಕು ತಗುಲುವ ಸಾಧ್ಯತೆಗಳಿದೆ.

ಸಾಂಕ್ರಾಮಿಕ ಪ್ಯಾರೊಟಿಟಿಸ್ ಎಂದು ಸಹ ಕರೆಯಲ್ಪಡುವ ಈ ಸೋಂಕು ಗರ್ಭಿಣಿ ಮಹಿಳೆಯರಲ್ಲಿಯೂ ಕಂಡುಬರುತ್ತದೆ. ಪ್ರತಿ ೧೦೦೦೦ ಗರ್ಭಿಣಿ ಮಹಿಳೆಯರಲ್ಲಿ ರಿಂದ ೧೦ ಮಂದಿಗೆ ಮಂಪ್ಸ್ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ವರದಿಯಿಂದ ತಿಲಿಯಲ್ಪಟ್ಟಿದೆ.

ಈ ಸೋಂಕು ಹರಡುವುದು ಹೇಗೆ?

ಮಂಪ್ಸ್ ಅಥಾವ ಊತ ವೈರಸ್ಸು  ಸೋಂಕು ಪೀಡಿತರ ಲಾಲಾ ರಸದೊಂದಿಗೆ ಸೇರಿಕೊಳ್ಳಲಿದ್ದು ಗಂಟಲು ಮತ್ತು ಮೂಗಿನ ಮೇಲೆ ಗಂಭೀರವಾದ ಪರಿಣಾಮವನ್ನು ಬೀರಲಿದೆ.

ಈ ವೈರಸ್ಸು ಗಂಟಲು, ಮೂಗು ಮತ್ತು ದುಗ್ಧರಸ ಗ್ರಂಥಿಯೊಳಗೆ ಸೇರಿಕೊಳ್ಳುತ್ತದೆ, ನಂತರ ರಕ್ತದೊಂದಿಗೆ ಸೇರಿಕೊಂಡು ದೇಹದ ಇತರ ಅಂಗಗಳಿಗೆ ಹರಡುವ  ಸಾಧ್ಯತೆಯೂ ಇದೆ. ಗರ್ಭಿಣಿ ಮಹಿಳೆಯರಲ್ಲಿ ಈ ವೈರಸ್ಸು   ಅವರ  ದೇಹವನ್ನು ಸೇರಿ ಜರಾಯು ಅಲ್ಲದೆ  ಭ್ರೂಣದ ಸೋಂಕಿಗೂ ಕಾರಣವಾಗುತ್ತದೆ.

ಈ ವೈರಸ್ ಒಬ್ಬ ವ್ಯಕ್ತಿಯಿಂದ ವ್ಯಕ್ತಿಗೆ ವೇಗವಾಗಿ ಹರಡಲಿದ್ದು ಸೋಂಕಿಗೊಳಗಾದ ವ್ಯಕ್ತಿಯ ಕೆಮ್ಮಿನಿಂದ ಮತ್ತು ಸೀನಿನಿಂದ  ಹೆಚ್ಚಿನ ಪ್ರಮಾಣದಲ್ಲಿ ಹರಡಲಿದೆ.

ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿರುವುದು ಅಲ್ಲದೆ  ಆತ ಬಳಸಿದ ಕರವಸ್ತ್ರ, ಶೌಚಾಲಯ  ಮತ್ತು  ಪಾತ್ರೆಗಳನ್ನು ಬಳಕೆ ಮಾಡುವುದರಿಂದಲೂ ಸೋಂಕು ಹರಡುತ್ತದೆ.

ಸೋಂಕಿತ ವ್ಯಕ್ತಿಯು ಆತನ  ಕಣ್ಣುಗಳನ್ನು, ಮೂಗು ಇಲ್ಲವೇ ಬಾಯಿಯನ್ನು ತೊಳೆದ ಕೈಗಳಿಂದ ಮುಟ್ಟಿದರೂ ಕೂಡ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಉಲ್ಬಣವಾಗುತ್ತದೆ.

ಈ ಸೋಂಕಿನ ರೋಗಲಕ್ಷಣಗಳು:

ಈ ವೈರಸ್ಸು ವ್ಯಕ್ತಿಯ ದೇಹವನ್ನು ಸೇರಿದ ೧೬  ರಿಂದ ೧೮  ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತದೆ.  ಕೆಲವು ಬಾರಿ ೧೨ ರಿಂದ ೨೨  ದಿನಗಳ ಅವಧಿಯಲ್ಲಿಯೂ ಕಾಣಿಸಿಕೊಳ್ಳಲಿದೆ.

ಮಂಪ್ಸ್ ಲಕ್ಷಣಗಳು:

ಪ್ಯಾರೊಟಿಟಿಸ್ ಗ್ರಂಥಿಗಳ ಊತ ಹಾಗೂ ಜ್ವರ

ಸೋಂಕು ಉಲ್ಬಣಿಸುವ ಲಕ್ಷಣಗಳು:
1.ತೀವ್ರ ಆಯಾಸ ಮತ್ತು ದಣಿವು
2.ಶೀತ
3.ತಲೆನೋವು
4.ಸ್ನಾಯುಗಳ ಸೆಳೆತ
5.ಗಂಟಲು ಕೆರೆತ

ಕೆಲವು ಪ್ರಕರಣಗಳಲ್ಲಿ  ಸೋಂಕು ತಗುಲಿದ ರೋಗಿಯಲ್ಲಿ  ಈ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ವಯಸ್ಕ ರೋಗಿಯು  ಈ ಸೋಂಕಿನಿಂದ ಚೇತರಿಸಿಕೊಳ್ಳಲು ೧೬ ರಿಂದ ೧೮  ದಿನಗಳು ಬೇಕಾಗುತ್ತದೆ.

ಗರ್ಭಿಣಿ ಮಹಿಳೆಯರಿಗೆ ಈ ರೋಗ ಹರಡುವ ಸಂಭವ  ಹೆಚ್ಚು. ಈ ಹಿನ್ನಲೆಯಲ್ಲಿ ಆರೋಗ್ಯವಂತ ಮತ್ತು ಸೋಂಕಿತ ವ್ಯಕ್ತಿ ಇಬ್ಬರು ಎಚ್ಚರಿಕೆಯಿಂದ ಇರಬೇಕು. ಇದು ಕಾಣಿಸಿಕೊಳ್ಳುವ ಮೂರು ದಿನಗಳ ಮೊದಲು ಹಾಗೂ ನಂತರದ ಒಂಬತ್ತು  ದಿನಗಳ ಕಾಲ ಎಚ್ಚರಿಕೆಯಿಂದ ಇರಬೇಕು.

ಗರ್ಭಾವಸ್ಥೆಯಲ್ಲಿ ಮಂಪ್ಸ್ ಪರಿಣಾಮ: 

ಗರ್ಭಿಣಿಯ ಮೇಲೆ ಇದು ಹಾನಿಕಾರಕ ಪರಿಣಾಮಗಳನ್ನು ಬೀರಲಿದೆ. ಮಂಪ್ಸ್ (ಊತ) ಕಾಣಿಸಿಕೊಂಡ ನಂತರದಲ್ಲಿ ದಡಾರ ಮತ್ತು ರುಬೆಲ್ಲ ಮುಂತಾದ ವೈರಸ್ಸುಗಳು ದಾಳಿ ಮಾಡುವ ಸಾಧ್ಯತೆ ಕೂಡ ಇದೆ.

ಗರ್ಭಿಣಿ ಮಹಿಳೆಯರಲ್ಲಿ ಈ ವೈರಸ್ಸು ಕಾಣಿಸಿಕೊಂಡರೆ ಗರ್ಭಧಾರಣೆಯ ಸಮಯದಲ್ಲಿ ಅವರ ಮೇಲೆ  ಅಥವಾ ಅವರ  ಭ್ರೂಣದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಅಪರೂಪದ ಪ್ರಕರಣಗಳಲ್ಲಿ ಗರ್ಭಪಾತವು ಕೂಡ  ಸಂಭವವಿದೆ.

ಇದರ ಪರಿಣಾಮಗಳು:
1.ಊಫೊರಿಟಿಸ್ (ಅಂಡಾಶಯದ ಉರಿಯೂತ) ಅಥವಾ ಸ್ತನಗಳ  ಉರಿಯೂತ
2.ಪ್ಯಾಂಕ್ರಿಯಾಟಿಟಿಸ್
3.ಕಿವುಡುತನ
4.ಎನ್ಸೆಫಾಲಿಟಿಸ್ ಅಥವಾ ಮೆನಿಂಜೈಟಿಸ್
ಚಿಕಿತ್ಸೆ:

ಮಂಪ್ಸ್   ವಿರುದ್ಧದ  ಅತ್ಯಂತ ಪರಿಣಾಮಕಾರಿ ಚಿಕಿತ್ಸೆ ಎಂದರೆ MMR (ಮಂಪ್ಸ್, ಮೀಸಲ್ಸ್, ರುಬೆಲ್ಲಾ) ಲಸಿಕೆ. ದುರಾದೃಷ್ಟವಶಾತ್ ಈ ಲಸಿಕೆಯನ್ನು ಗರ್ಭಿಣಿಯರಿಗೆ ಹಾಕಿಸುವುದು ಸೂಕ್ತವಲ್ಲ. ಇದಕ್ಕೆ ಕಾರಣ MMR ಲಸಿಕೆ ಸೋಂಕನ್ನು ಉಂಟುಮಾಡುವ ನೇರ ವೈರಸ್ಸನ್ನು ಒಳಗೊಂಡಿದೆ. ಹಾಗಾಗಿ ಈ ಲಸಿಕೆಯನ್ನು ಪಡೆಯಲು ಮಹಿಳೆಯರು ಕನಿಷ್ಠ ಒಂದು ತಿಂಗಳ ಕಾಲ ತಮ್ಮ ಗರ್ಭಧಾರಣೆಯನ್ನು ಮುಂದೂಡಬೇಕಾಗುತ್ತದೆ.  

ಆದರು  ಕೆಲವು ಜಾಗರೂಕ ಪರಿಹಾರಗಳು ಇಂತಿವೆ : 

ತ್ವರಿತ ಚೇತರಿಕೆಗಾಗಿ ಸರಿಯಾದ ಆರೈಕೆಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಸಾಧ್ಯವಾದಷ್ಟು ವಿಶ್ರಾಂತಿಸಬೇಕು.  

1.ಸಾಕಷ್ಟು ದ್ರವ ರೂಪದ ಆಹಾರಗಳನ್ನು ಸೇವಿಸಬೇಕು.
2.ಊದಿಕೊಂಡ ಜಾಗಕ್ಕೆ  ಬೆಚ್ಚಗಿನ ಶಾಖವನ್ನು ನೀಡಬೇಕು.
3.ನೋವು ನಿವಾರಕಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು. ವಿಶೇಷವಾಗಿ ಗರ್ಭಿಣಿ ಮಹಿಳೆಯರು ವೈದ್ಯಕೀಯ ಸಹಾಯವನ್ನು ಪಡೆಯಬೇಕು.
4.ಮೃದುವಾದ ಆಹಾರವನ್ನು ಸೇವಿಸುವುದಲ್ಲದೇ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು. ಉಪ್ಪು, ಹುಳಿ ಮತ್ತು ಖಾರದ ಪದಾರ್ಥಗಳನ್ನು ಹಾಗೂ ತಂಪು ಪಾನೀಯಗಳನ್ನು ಬಳಸಬಾರದು.

ಮುನ್ನೆಚ್ಚರಿಕೆಯ ಕ್ರಮಗಳು:

1.ಸೋಂಕಿತ ವ್ಯಕ್ತಿಯೊಂದಿಗೆ ಹೆಚ್ಚು ಸಂಪರ್ಕವನ್ನು ಹೊಂದದೆ ಇರುವುದು.
2.ನೀವು ಬಳಸುವ ಶೌಚಾಲಯ, ಬಟ್ಟೆ ಹಾಗೂ ಬಳಸುವ ಪಾತ್ರೆಗಳನ್ನು ಯಾರೊಂದಿಗೂ ಹಂಚಿಕೊಳ್ಳದೆ ಇರುವುದು.
3.ಏನನ್ನಾದರು ತಿನ್ನುವ ಮೊದಲು  ಅಥವ ಕಣ್ಣುಗಳು, ಮೂಗು ಮತ್ತು ಬಾಯಿಯನ್ನು ಮುಟ್ಟಿಕೊಳ್ಳುವ ಮುಂಚೆ ಸ್ಪಚ್ಛವಾಗಿ ಕೈಗಳನ್ನು ತೊಳೆಯುವುದು.
4.ನೀವು ಇರುವ ಜಾಗವನ್ನು ಅದಷ್ಟು ಶುಚಿಯಾಗಿಟ್ಟುಕೊಳ್ಳುವುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon