Link copied!
Sign in / Sign up
8
Shares

ಗರ್ಭಧಾರಣೆ ವೇಳೆ ಸಂಭೋಗ : ೫ ತಾಯಂದಿರು ಬಿಚ್ಚಿಟ್ಟ ಗುಟ್ಟು

ಗರ್ಭಧಾರಣೆ ವೇಳೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದರ ಬಗ್ಗೆ ಜನರಲ್ಲಿ ಹಲವಾರು ಅಭಿಪ್ರಾಯಗಳು ಹಾಗು ಗೊಂದಲಗಳು ಇವೆ. ಇದರ ಬಗ್ಗೆ ತಿಳಿಯಲು ಇದನ್ನು ಮಾಡಿದವರ ಅನುಭವವನ್ನು ಕೇಳುವುದಕ್ಕಿಂತ ಅತ್ಯುತ್ತಮ ವಿಧಾನ ಬೇರೆ ಇಲ್ಲ. ಇಂತಹ ಸಾಹಸಮಯ, ರಸಮಯ ಕ್ಷಣಗಳನ್ನ ಅನುಭವಿಸಿದ ಕೆಲವು ತಾಯಂದಿರ ಅನುಭವ ಏನು ಎಂದು ಅವರೇ ನಮಗೆ ತಿಳಿಸಿದ್ದಾರೆ. ಅವರ ಅನುಭವ ಏನೆಂದು ಅರಿಯಲು ಮುಂದೆ ಓದಿ :

ಸಿಕ್ಕಾಪಟ್ಟೆ ತೀವ್ರ

ಮೊದಲು ನಮಗೆ ಸ್ವಲ್ಪ ಭಯವಿತ್ತು ಮಗುವಿಗೆ ಏನಾದರು ತೊಂದರೆ ಆಗಬಹುದು ಎಂದು. ಆದರೆ ಮಗುವಿಗೆ ಏನು ಅಪಾಯವಿಲ್ಲ ಎಂದು ನಾವು ದೃಢಪಡಿಸಿಕೊಂಡ ಮೇಲೆ ನಾವು ನಮ್ಮ ಜೀವನದ ಅತ್ಯದ್ಭುತ ರಸಮಯ ಕ್ಷಣಗಳನ್ನ ಹೊಂದಿದೆವು. ಗರ್ಭಧಾರಣೆಯ ಕಾರಣ ನನ್ನ ಅಂಗಗಳು ಮತ್ತಷ್ಟು ಸೂಕ್ಷ್ಮ ಹಾಗು ತೀಕ್ಷ್ಣ ಆದ ಕಾರಣದಿಂದ ಈಗ ನನಗೆ ಲೈಂಗಿಕ ಕ್ರಿಯೆಯು ಹಿಂದೆ ಎಂದೂ ನೀಡಿದ ಸುಖ ನೀಡಿತು. ಇದರಿಂದ ಈ ಕ್ರಿಯೆಯಲ್ಲಿ ನನ್ನ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿತು. ನನ್ನ ಸೂಕ್ಷ್ಮತೆ ಹೆಚ್ಚಾದ ಕಾರಣ ಸಂಭೋಗವು ಮತ್ತಷ್ಟು ಹಿತಕರವೆನಿಸಿತು.

  • ಆಕರ್ಶ, 24
ಸುಸ್ತಾಗಿ ಮಲಗಿದೆ

ನಾನು ನನ್ನ ಗರ್ಭಧಾರಣೆಯ ಸಮಯವನ್ನು ಆಯಾಸಗೊಂಡು ಕಳೆಯುತ್ತಿದ್ದರಿಂದ ಲೈಂಗಿಕ ಕ್ರಿಯೆಯಲ್ಲಿ ಹೆಚ್ಚಾಗಿ ತೊಡಗಿಕೊಳ್ಳಲು ಸಧ್ಯವಾಗಲೇ ಇಲ್ಲ. ನನಗೆ ಗರ್ಭಧಾರಣೆ ವೇಳೆ ಇಷ್ಟೊಂದು ಸುಸ್ತಾಗುತ್ತದೆ ಎಂದು ತಿಳಿದಿರಲಿಲ್ಲ. ಅದರಿಂದ ನಾವು ಮಾಡಬಹುದಾಗಿದ್ದ ಒಂದು ಸಾಹಸ ಹಾಗು ಕಳೆಯಬಹುದಾಗಿದ್ದ ರಸಮಯ ಕ್ಷಣಗಳನ್ನ ಕಳೆದುಕೊಂಡೆವು.

  • ಸನಿಹ, 21
ಬೆಳ್ಳಂಬೆಳಗ್ಗೆ ಪ್ರೀತಿ

ಗರ್ಭಧಾರಣೆ ವೇಳೆ ನನಗೆ ರಾತ್ರಿ ರಮಣೀಯ ಕನಸುಗಳು ಬೀಳುತ್ತಿದ್ದವು - ಈ ಕಾರಣಕ್ಕೆ ನಾನು ಬೆಳ್ಳಂಬೆಳಗ್ಗೆಯೇ ಪ್ರಚೋದಿತಳಾಗುತ್ತಿದೆ. ನನ್ನ ಪತಿಯು ಆ ಕಾರ್ಯಕ್ಕೆ ಯಾವಾಗಲು ಸಿದ್ದರಾಗಿರುತ್ತಾರೆ! ನಾನು ಗರ್ಭ ತಾಳುವ ಸ್ವಲ್ಪ ದಿನದ ಮುಂಚೆ ನನ್ನ ಲೈಂಗಿಕ ಆಸಕ್ತಿಯು ಅಷ್ಟೇನೂ ಇರಲಿಲ್ಲ, ಆದರೆ ಇನ್ನೇನು ಮಗು ಆಗಲಿದೆ ಅನ್ನೋವಾಗ ನನಗೆ ನನ್ನನ್ನು ತಡೆದುಕೊಳ್ಳಲು ಆಗುತ್ತಿಲ್ಲ !

  • ಬಿಂದು, 28
ಭಯಗೊಂಡಿದ್ದ ನೂತನ ಅಪ್ಪ

ನನ್ನ ಪತಿಯು ನನ್ನ ಗರ್ಭಧಾರಣೆ ಸಮಯದಲ್ಲಿ ನನ್ನ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಬಹಳ ಹೆದರುತ್ತಿದ್ದರು. ಪ್ರತಿ ಬಾರಿ ನಾನೇ ಮುಂದಾಳತ್ವ ವಹಿಸಿದರು, ನನ್ನ ಪತಿ ಮುಂದುವರೆಯುತ್ತಿರಲಿಲ್ಲ. ಅವರಿಗೆ ಅದು ಏಕೋ ಆ ಯೋಚನೆಗೆ ಹೊಂದಿಕೊಳ್ಳಲು ಆಗಲೇ ಇಲ್ಲ. ಇದು ನನ್ನ ಮನಸ್ಸಿಗೆ ತುಂಬಾನೇ ಬೇಜಾರು ಮಾಡಿಸಿತು. ನನ್ನ ಗರ್ಭಧಾರಣೆ, ತಾಯ್ತನ ಇವೆಲ್ಲವುಗಳ ಬಗ್ಗೆ ನನಗೆ ತುಂಬಾನೇ ಖುಷಿ ಇತ್ತು ಆದರೆ ಒಂದು ವರ್ಷದ ವರೆಗೆ ನನ್ನ ಲೈಂಗಿಕ ಜೀವನ ಸತ್ತು ಹೋಗಿತ್ತು.

  • ನಗ್ಮಾ, 22
ಬಿಸಿ ಬಿಸಿ !

ನನಗೆ ನನ್ನ ಗರ್ಭಧಾರಣೆ ವೇಳೆ ತುಂಬಾ ಹೆಣ್ಣು ಭಾವನೆಗಳು ಆವರಿಸಿತ್ತು ಹಾಗು ನನಗೆ ನಾನೇ ತುಂಬಾ ಮಾದಕ ಅನಿಸುತಿತ್ತು! ನನ್ನ ಗಂಡನ ಮೇಲಿಂದ ನನ್ನ ಕೈ ಇಳಿಸುತ್ತಲೇ ಇರಲಿಲ್ಲ, ಅದರಲ್ಲೂ ಹೆರಿಗೆಯ ಮುಂಚಿನ ಕೆಲವು ದಿನಗಳಂತೂ ಅವರನ್ನ ಬಿಡುತ್ತಲೇ ಇರಲಿಲ್ಲ. ಮಗುವಾದ ಮೇಲೆ ಲೈಂಗಿಕ ಕ್ರಿಯೆಗೆ ಸ್ವಲ್ಪ ಬ್ರೇಕ್ ಹಾಕಿದೆವು. ಆದರೆ ಹತ್ತು ತಿಂಗಳುಗಳ ನಂತರ ಎಲ್ಲವೂ ಮುಂಚಿನಂತೆಯೇ ಸೂಪರ್ ಆಗಿದೆ!  

  • ಪ್ರಿಯಾಂಕ, 27
Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon