Link copied!
Sign in / Sign up
4
Shares

ಗರ್ಭಧಾರಣೆ ವೇಳೆ ನೀವು ಚಹಾ ಅಥವಾ ಕಾಫಿ ಸೇವಿಸಬಹುದೆ?

ಸ್ಟ್ರಾಂಗ್, ಕೆನೆಭರಿತ, ಸುಗಂದಭರಿತ ಕಾಫಿ - ಇದು ಎಲ್ಲಾ ಕಾಫಿ ವ್ಯಸನಿಗಳಿಗೆ ಪಂಚಪ್ರಾಣ. ದುರದೃಷ್ಟವಶಾತ್, ತಮ್ಮ ಕಾರ್ಯಗಳನ್ನು ಕೈಗೊಳ್ಳಲು ಇಂತಹ ಪಾನೀಯಗಳ ಮೇಲೆ ಅವಲಂಬಿತಾವಗಿರುವ ಭಾವೀ ತಾಯಂದಿರಿಗೆ ಒಂದು ಕೆಟ್ಟ ಸುದ್ದಿ ಇದೆ.

ಇಂತಹ ಪಾನೀಯಗಳಲ್ಲಿ ಇರುವ ಕೆಫೈನ್ (caffeine) ಗರ್ಭಧಾರಣೆ ವೇಳೆ ಕೇವಲ ನಿಮ್ಮ ಆರೋಗ್ಯದ ಮೇಲೆ ಅಷ್ಟೇ ಅಲ್ಲದೆ ನಿಮ್ಮ ಮಗುವಿನ ಆರೋಗ್ಯದ ಮೇಲೆಯೂ ದುಷ್ಪರಿಣಾಮಗಳನ್ನ ಬೀರಬಹುದು.

ಇವಾಗ ಇಲ್ಲಿ ನಾವು ನಿಮಗೆ ತಿಳಿಸುತ್ತೇವೆ ಗರ್ಬಧಾರಣೆ ವೇಳೆ ಈ ಪಾನೀಯಗಳು ನಿಮಗೆ ಹೇಗೆ ಹಾನಿಕಾರಕ ಎಂದು ಹಾಗು ನೀವು ಸೇವಿಸಲೇ ಬೇಕು ಎನುವಂತಿದ್ದರೆ, ಎಷ್ಟು ಸೇವಿಸಬೇಕು ಎಂದು.

ಕಾಫಿ ಮತ್ತು ಚಹಾ ನಿಮಗೆ ಮಾರಕ ಏಕೆ?

ನಿಮ್ಮ ಗರ್ಭಕೋಶದಲ್ಲಿ ನಿಮ್ಮ ಮಗುವನ್ನು ರಕ್ಷಿಸುವ ನಿಮ್ಮ ಜರಾಯುವಿನ ತಡೆಗೋಡೆಯು ಒಂದು ಅರೆ-ವ್ಯಾಪ್ಯ (semi permeable) ಪದರ ಆಗಿರುತ್ತದೆ. ಇದು ನಿಮ್ಮ ಮಗುವನ್ನು ವಿಷಕಾರಿ ಪದಾರ್ಥಗಳಿಂದ ರಕ್ಷಿಸಿದರೂ, ಕೆಫೈನ್ ಅದು ಹೇಗೋ ಇದರ ಒಳಗೆ ನುಗ್ಗುತ್ತದೆ.

ಇದು ನಿಮ್ಮ ಮಗು ಕೆಫೈನ್ ನ ಪರಿಣಾಮಗಳಿಗೆ ತುತ್ತಾಗುವಂತೆ ಮಾಡುತ್ತದೆ ಅಲ್ಲದೆ ಅದು ಒಂದು ಸಂಕೀರ್ಣತೆಯಿಂದ ಕೂಡಿದ ಅಂಶವಾದ ಕಾರಣ ನಿಮ್ಮ ಮಗುವಿಗೆ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಗಬಹುದು. ಇದು ಸಮಯಕ್ಕೆ ಮುಂಚೆಯೇ ಹೆರಿಗೆಗೆ ಕಾರಣವಾಗಬಹುದು ಹಾಗು ಶಿಶುವಿನ ಜನನದ ತೂಕ ಕುಗ್ಗುವಂತೆ ಮಾಡುತ್ತದೆ.

ತಾಯಂದಿರು ಕೂಡ ಕೆಫೈನ್ ನ ದುಷ್ಪರಿಣಾಮಗಳನ್ನ ಎದುರಿಸಬೇಕಾಗುತ್ತದೆ. ಏಕೆಂದರೆ ಇದು ಒಂದು ಮೂತ್ರವರ್ಧಕ ಆಗಿದ್ದು, ಇದು ನಿಮ್ಮ ಶೌಚ ಅಭ್ಯಾಸಗಳಿಗೂ ತೊಡಕನ್ನು ಉಂಟು ಮಾಡುತ್ತದೆ. ಇದು ನಿಮಗೆ ಮೂತ್ರ ವಿಸರ್ಜನೆ ಮಾಡುವುದನ್ನು ತಲೆ ನೋವು ಮಾಡುತ್ತದೆ. ಈಗಾಗಲೇ ಇರುವ ಗರ್ಭಧಾರಣೆಯ ತೊಡಕುಗಳಿಗೆ ಇದೊಂದು ಯಾಕೆ ಬೇಕು ಜೊತೆಗೆ? ಆಲ್ವಾ ?

ಕಫೈನ್ ನ ಸುರಕ್ಷಿತ ಮಿತಿ ಎಷ್ಟು?

ಕಫೈನ್ ಕೇವಲ ಕಾಫಿ ಅಲ್ಲಿ ಮಾತ್ರವಲ್ಲದೆ, ಚಹಾ, ಚಾಕಲೇಟ್ ಹಾಗು ಅಂಗಡಿಯಲ್ಲಿ ಸುಲಭವಾಗಿ ಲಭಿಸುವ ಸಾಮಾನ್ಯ ಶೀತ ಹಾಗು ತಲೆನೋವು ಔಷಧಿಗಳಲ್ಲಿಯೂ ಇರುತ್ತದೆ. ಇವುಗಳನ್ನು ಸೇವಿಸಬೇಕಾದರೆ ಎಚ್ಚರವಹಿಸುವುದು ತುಂಬಾನೇ ಉಪಯುಕ್ತ. ನೀವು ಖರೀದಿಸುವ ಪ್ರತಿಯೊಂದು ವಸ್ತುವಿನ ಲೇಬಲ್ ಮೇಲೆ ಬರೆದ ಎಲ್ಲಾ ಚಿಕ್ಕ ಪದಗಳನ್ನು ಸರಿಯಾಗಿ ಓದಿ.

ಸಂಶೋಧನೆಗಳ ಪ್ರಕಾರ ತಿಳಿದು ಬಂದಿರುವುದು ಏನೆಂದರೆ, ಒಂದು ದಿನದಲ್ಲಿ ಸೇವಿಸಬಹುದಾದ ಕೆಫೈನ್ ಎಷ್ಟು ಅಂದರೆ ಅದು ೨೦೦ ಮಿಲಿಗ್ರಾಂ. ಅಂದರೆ, ಒಂದು ಮುಗ್ ಇನ್ಸ್ಟಂಟ್ ಕಾಫಿ ಅಥವಾ ಕುದಿಸಿ ಮಾಡಿದ ೨ ಮುಗ್ ಕಾಫಿ ಅಲ್ಲೇ ನೀವು ದಿನ ಕಳೆದರೆ ನಿಮ್ಮ ಗರ್ಭಧಾರಣೆ ಸಮಯದಲ್ಲಿ ಏನು ತೊಂದರೆಯಾಗುವುದಿಲ್ಲ. ಕಾಫಿ ಬಾರ್ ಅಲ್ಲಿ ಅಥವಾ ಹೋಟೆಲ್ ಅಲ್ಲಿ ಕಾಫಿ ಕುಡಿಯುವುದು ತುಂಬಾನೇ ಅಪಾಯಕಾರಿ. ಏಕೆಂದರೆ, ಅಲ್ಲಿ ಬಹುತೇಕ ಸಮಯ ನಿಮಗೆ ೨೦೦ಮಿಲಿಗ್ರಾಂ ಗಿಂತ ಜಾಸ್ತಿ ಕೆಫೈನ್ ಒಂದು ಮುಗ್ ಅಲ್ಲಿ ಸಿಗುತ್ತೆ.

ನಿಮಗೆ ತುಂಬಾ ಆಯಾಸವಾಗಿದ್ದರೆ ಅಥವಾ ಜಡ ಹಿಡಿದಂತೆ ಅನಿಸಿದರೆ, ಮಾಡಬಹುದಾದ ಅತ್ಯುತ್ತಮ ಕೆಲಸ ಎಂದರೆ ಅದು ಸ್ವಲ್ಪವೇ ಚಹಾ, ಹೆಚ್ಚು ಹಾಲು ಇರುವಂತದ್ದು ಕುಡಿಯುವುದು.

ನೀವು ಚಹಾ ಅಥವಾ ಕಾಫಿ ಪ್ರಿಯರು ಆಗಿದ್ದರೆ, ನಾವು ಹೇಳುತ್ತಿರುವುದು ನಿಮಗೆ ಹಿಡಿಸುತ್ತಿಲ್ಲ ಎಂಬುದು ಅರ್ಥವಾಗುತ್ತದೆ. ಆದರೆ, ಇದು ನಿಮ್ಮ ಸುರಕ್ಷತೆಗಾಗಿ. ಈ ತಂಪು ಪಾನೀಯಗಳಿಗೆ ಪರ್ಯಾಯವಾಗಿ ಹಣ್ಣಿನ ರಸದಂತಹ ಪದಾರ್ಥಗಳಿವೆ. ಇವುಗಳು ಕೂಡ ಕುಡಿಯಲಿಕ್ಕೆ ಅಷ್ಟೇ ಚೇತೋಹಾರಿಯಾಗಿದ್ದು ಅಲ್ಲದೆ ನಿಮಗೆ ಹಾಗು ನಿಮ್ಮ ಮಗುವಿಗೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ಕೂಡ ಪೂರೈಸುತ್ತವೆ.

ಹಾಗಾಗಿ, ಸ್ವಲ್ಪ ಸಮಯದವರೆಗೆ, ನಿಮ್ಮ ಹಾಗು ನಿಮ್ಮ ಮಗುವಿನ ಒಳಿತಿಗಾಗಿ ಇವುಗಳ ಮೇಲೆ ಹಿಡಿತ ಇರಲಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon