Link copied!
Sign in / Sign up
4
Shares

ಗರ್ಭಧಾರಣೆ ಮೇಲೆ ಚಂದ್ರಗ್ರಹಣದ ಪರಿಣಾಮ

ಜಗತ್ತಿನಾದ್ಯಂತ ಚಂದ್ರಗ್ರಹಣವನ್ನ ಅಪಶಕುನ ಎಂದು ಪರಿಗಣಿಸುತ್ತಾರೆ. ಆದರೆ ಚಂದ್ರಗ್ರಹಣ ಮತ್ತು ಗರ್ಭಧಾರಣೆ ನಡುವಿನ ಸಂಬಂಧವನ್ನ ದೃಢಪಡಿಸಲು ಯಾವುದೇ ನಿಖರವಾದ ಪುರಾವೆಗಳು ಇಲ್ಲ. ಆದರೆ ಈ ನಂಬಿಕೆಯು ಹಲವು ತಲೆಮಾರುಗಳಿಂದ ನಮ್ಮಲ್ಲಿ ಜೀವಂತವಾಗಿ ಉಳಿದುಕೊಂಡಿದೆ. ಹಾಗಾದರೆ ಇದೆಷ್ಟು ಸತ್ಯ ? ಚಂದ್ರಗ್ರಹಣದ ವೇಳೆ ಮನೆಯಿಂದ ಹೊರಬಂದರೆ ಮಗುವು ವಿಕಾರವಾಗಿ ಹುಟ್ಟುತದೆಯೇ? ಅಥವಾ ಚಂದ್ರಗ್ರಹಣದ ವೇಳೆ ನಿಮ್ಮ ಹೊಟ್ಟೆಯನ್ನ ಮುಟ್ಟಿಕೊಂಡರೆ ನಿಮ್ಮ ಮಗುವಿಗೆ ಜನ್ಮಗುರುತು ಉಂಟಾಗುತ್ತದೆಯೇ?

ಇವುಗಳನ್ನ ನಂಬುವುದು ಬಿಡುವುದು ನಿಮಗೆ ಬಿಟ್ಟದ್ದು. ಆದರೆ ನಿಮ್ಮ ಮನೆಯವರ ಸಮಾಧಾನಕ್ಕಾದರು ನೀವು ಕೆಲವು ಘಂಟೆಗಳ ಕಾಲ ಹೊರಬರದಂತೆ ಇದ್ದರೆ ಒಳ್ಳೆಯದು. ಒಂದು ವೇಳೆ ನೀವು ಹೊರಗಡೆ ಹೋಗಬೇಕೆಂದು ನೀವು ತೀರ್ಮಾನಿಸಿದರು, ನಿಮಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಅಲ್ಲದೆ ಚಂದ್ರಗ್ರಹಣದ ವೇಳೆ ನೀವು ಹೊರಗಡೆ ಹೋದರೆ ನೀವು ವಿಕಾರವಾದ ಮಗುವನ್ನು ಪಡೆಯುತ್ತೀರಿ ಎಂಬುದಕ್ಕೆ ವೈಜ್ಞಾನಿಕವಾಗಿ ಯಾವುದೇ ಸಾಕ್ಷಿಗಳು ಇಲ್ಲ.

ಮನೆಯಲ್ಲಿನ ನಂಬಿಕೆಗಳು ಹಾಗು ನೀವು ತೆಗೆದುಕೊಳ್ಳಬೇಕಾದ ಮುಂಜಾಗ್ರತ ಕ್ರಮಗಳು

ನಿಮ್ಮಲ್ಲಿ ಬಹುತೇಕ ಮನೆಗಳಲ್ಲಿ ಗರ್ಭಿಣಿಯರಿಗೆ ಚಂದ್ರಗ್ರಹಣದ ಸಮಯದಲ್ಲಿ ಏನನ್ನು ತಿನ್ನಲು ಹಾಗು ಕುಡಿಯಲು ಇರದಂತೆ ಹೇಳುತ್ತಾರೆ. ಇದು ನಿಮ್ಮ ದೇಹದಲ್ಲಿ ನಿರ್ಜಲೀಕರಣ(dehydration) ಆಗುವ ಸಾಧ್ಯತೆ ಇದ್ದು, ಇದು ನಿಮ್ಮ ಮಗುವಿಗೆ ತೊಂದರೆ ಉಂಟು ಮಾಡುತ್ತದೆ. ಇದಲ್ಲದೇ ನಿಮ್ಮ ಮನೆಯಲ್ಲಿ ದೊಡ್ಡವರು ಹೇಳುವುದನ್ನು ಕೇಳಿ ನೀವು ಗಾಬರಿಗೂ ಒಳಗಾಗಬಹುದು. ಇದು ನಿಮ್ಮ ರಕ್ತದೊತ್ತಡ ಹೆಚ್ಚು ಮಾಡಿ ನಿಮ್ಮ ಮಗುವಿಗೆ ತೊಂದರೆ ಮಾಡಬಹುದು. ಹಾಗಾಗಿ ನೀವು ಅವರ ನಂಬಿಕೆಗಳನ್ನ ನಂಬುತ್ತೀರೋ ಇಲ್ಲವೋ, ಆದರೆ ನಿಮ್ಮ ದೇಹವನ್ನ ಜಲೀಕರಿಸುವುದು ಹಾಗು ರಕ್ತದೊತ್ತಡ ಹಿಡಿತದಲ್ಲಿ ಇಟ್ಟುಕೊಳ್ಳುವುದು ನಿಮ್ಮ ಜವಾಬ್ದಾರಿ. ನೀವು ಗ್ರಹಣದ ವೇಳೆ ಯಾವುದೇ ಆಹಾರ ಅಥವಾ ನೀರು ಸೇವಿಸದೆ ಇದ್ದರೆ, ಈ ಲಕ್ಷಣಗಳು ಕಾಣಿಸದ ಹಾಗೆ ಗಮನವಹಿಸಬೇಕು :

೧. ತೀವ್ರ ತಲೆನೋವು

೨. ತಲೆಸುತ್ತುವುದು

೩. ಅಸಿಡಿಟಿ

೪. ಮೂರ್ಛೆ ಹೋಗುವ ಹಾಗೆ ಅನಿಸುವುದು

ನಿಮಗೆ ಇವುಗಳಲ್ಲಿ ಯಾವುದಾದರು ಸ್ವಲ್ಪವೇ ಕಾಣಿಸಿಕೊಂಡರು ಸಹ ಕೂಡಲೇ ವೈದ್ಯರನ್ನ ಸಂಪರ್ಕಿಸಿ. ಚಂದ್ರಗ್ರಹಣವು ಒಂದು ನೈಸರ್ಗಿಕ ವಿದ್ಯಮಾನ ಆಗಿದ್ದು, ಅದು ಕೆಲವು ನಿಮಿಷಗಳಲ್ಲಿ ಮುಗಿದು ಹೋಗುತ್ತದೆ. ಹಾಗಾಗಿ ನೀವು ಇದರ ಬಗ್ಗೆ ಜಾಸ್ತಿ ಚಿಂತಿಸಬೇಡಿ!

Tinystep Baby-Safe Natural Toxin-Free Floor Cleaner

Dear Mommy,

We hope you enjoyed reading our article. Thank you for your continued love, support and trust in Tinystep. If you are new here, welcome to Tinystep!

We have a great opportunity for you. You can EARN up to Rs 10,000/- every month right in the comfort of your own HOME. Sounds interesting? Fill in this form and we will call you.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon