Link copied!
Sign in / Sign up
8
Shares

ಸಂಭೋಗ ನಡೆಸಿದ ನಂತರ ಗರ್ಭದಾರಣೆ ಟೆಸ್ಟ್ ಯಾವಾಗ ತೆಗೆದುಕೊಳ್ಳಬೇಕು?

ನಿಮಗೆ ಒಂದು ಮಗು ಮಾಡಿಕೊಳ್ಳಬೇಕಿದೆ. ನೀವು ನಿಮ್ಮ ಅಂಡೋತ್ಪತ್ತಿಯ ದಿನ (ಒವುಲೇಷನ್ ಡೇ) ಲೆಕ್ಕ ಹಾಕಿ, ಗರ್ಭತಾಳಲು ಸುಲಭವಾಗುವ ದಿನಗಳಂದು ಪೂರ್ತಿ “ಬ್ಯುಸಿ” ಆಗಿರುತ್ತೀರಿ. ಈಗ ನೀವು ಇನ್ನು ಒಂಬತ್ತು ತಿಂಗಳಲ್ಲಿ ನಿಮ್ಮ ಹೊಟ್ಟೆಯಿಂದ ಒಂದು ಪುಟ್ಟ ಜೀವ ಹೊರಬರುತ್ತದೆ ಎಂಬ ಸುದ್ದಿ ಕೇಳಲು ಕಾತುರದಿಂದ ಕಾಯುತ್ತಿರುತ್ತೀರ. ಆದರೆ ನಿಮ್ಮ ತಲೆಯಲ್ಲಿ ಒಂದು ಯೋಚನೆ ಓದುತ್ತಿರಬಹುದು, “ಸಂಭೋಗದ ನಂತರ ಯಾವ ಸಮಯದಲ್ಲಿ ನಾನು ಪ್ರೆಗ್ನನ್ಸಿ ಟೆಸ್ಟ್ ತೆಗೆದುಕೊಳ್ಳಬೇಕು” ಎಂದು ಅಲ್ಲವೇ? ಈ ಪರೀಕ್ಷೆ ತೆಗೆದುಕೊಳ್ಳುವ ಸಮಯದ ಬಗೆಗಿನ ಮಹತ್ವ ಎಲ್ಲರಿಗೂ ತಿಳಿದಿದೆ, ಆದರೆ ಸರಿಯಾದ ಸಮಯ ಎಂದರೆ ಯಾವುದು?

ತಜ್ಞರು ಹೇಳುವ ಪ್ರಕಾರ ನೀವು ಅಂಡೋತ್ಪತ್ತಿಯ ದಿನದಂದು ಸಂಭೋಗ ನಡೆಸಿದ್ದರೆ, ಪ್ರೆಗ್ನನ್ಸಿ ಟೆಸ್ಟ್ ತೆಗೆದುಕೊಳ್ಳಲು ಸೂಕ್ತ ಸಮಯ ಎಂದರೆ ಅದು ಸಂಭೋಗ ನಡೆಸಿದ ದಿನದಿಂದ 10-14 ದಿನಗಳ ನಂತರ. ಅಂಡೋತ್ಪತ್ತಿಯ ದಿನದಂದು ಸಂಭೋಗ ನಡೆಸಿ, ಆ ದಿನದಿಂದ ಸರಿಯಾದಿ 14ನೇ ದಿನದಂದು ಸ್ಟ್ಯಾಂಡರ್ಡ್ ಯೂರಿನ್ ಟೆಸ್ಟ್ ಅಂದರೆ ಮೂತ್ರ ಪರೀಕ್ಷೆಯನ್ನ ತೆಗೆದುಕೊಂಡರೆ ನಿಮಗೆ ನಿಖರವಾದ ಉತ್ತರ ಸಿಗಲಿದೆ. ಕೆಲವೊಂದು ಪ್ರೆಗ್ನನ್ಸಿ ಟೆಸ್ಟ್ ಸಾಧನಗಳು ತುಂಬಾನೇ ಸೂಕ್ಷ್ಮವಾಗಿದ್ದು, ನೀವು 10ನೇ ದಿನದಂದೇ ಪರೀಕ್ಷೆ ಮಾಡಬಹುದು.

ಕೊಲೊರಾಡೊ ಸೆಂಟರ್ ಆಫ್ ರಿಪ್ರೊಡುಕ್ಟಿವ್ ಮೆಡಿಸಿನ್ ನ ಡಾ ।। ಆರನ್ ಸ್ಟೇಯೆರ್ ಅವರು ಹೇಳುವ ಪ್ರಕಾರ ಅಂಡೋತ್ಪತ್ತಿ ಆದ ನಂತರದ 24ಘಂಟೆಗಳಲ್ಲಿ ವೀರ್ಯವು ಅಂಡಾಣು ಜೊತೆ ಫಲೀಕರಣ ಹೊಂದುತ್ತದೆ ಎನ್ನುತ್ತಾರೆ. ಈ ಫಲೀಕರಣಗೊಂಡ ಅಂಡಾ ಅಂಡೋತ್ಪತ್ತಿಯ ದಿನದ 10 ದಿನಗಳ ನಂತರ ಗರ್ಭಕೋಶಕ್ಕೆ ಅಂಟಿಕೊಂಡು ಬೆಳೆಯಲು ಶುರು ಮಾಡುತ್ತದೆ. ಈ ಸಮಯದಲ್ಲಿ ಇದು ಗರ್ಭಧಾರಣೆ ಸೂಚಿಸುವ ಹಾರ್ಮೋನ್ ಆದ ಹೆಚ್.ಸಿ.ಜಿ (hCG) ಅನ್ನು ಬಿಡುಗಡೆ ಮಾಡುತ್ತದೆ. ಇದನ್ನು ನೀವು ರಕ್ತ ಪರೀಕ್ಷೆ ಅಥವಾ ಮೂತ್ರ ಪರೀಕ್ಷೆ ಮಾಡಿಕೊಳ್ಳುವುದರಿಂದ ತಿಳಿದುಕೊಳ್ಳಬಹುದು.

ಮನೆಯಲ್ಲೇ ಬಳಸಬಹುದಾದ ಹೋಂ ಬ್ಲಡ್ ಟೆಸ್ಟ್ ಕಿಟ್ (ರಕ್ತ ಪರೀಕ್ಷೆಯ ಸಾಧನ) ತುಂಬಾನೇ ಸೂಕ್ಷ್ಮವಾಗಿದ್ದು, ಇದರಿಂದ ನೀವು ಅಂಡೋತ್ಪತ್ತಿಯ ದಿನದಿಂದ ಸುಮಾರು 10-12ನೇ ದಿನದಂದು ಪರೀಕ್ಷೆ ಮಾಡಿಕೊಂಡು ನೀವು ಗರ್ಭ ತಾಳಿದಿರೋ ಅಥವಾ ಇಲ್ಲವೋ ಎಂದು ತಿಳಿದುಕೊಳ್ಳಬಹುದು. ಈ ಸಾಧನವು ತುಂಬಾ ಸೂಕ್ಷ್ಮವಾಗಿರುವುದರಿಂದ ಇದು ತುಂಬಾ ಕಡಿಮೆ ಪ್ರಮಾಣದ hCG ಅನ್ನು ಕೂಡ ಗುರುತಿಸುತ್ತದೆ.

ಆದರೆ ಮನೆಯಲ್ಲೇ ಬಳಸಬಹುದಾದ ಹೋಂ ಯೂರಿನ್ ಟೆಸ್ಟ್  ಕಿಟ್ (ಮೂತ್ರ ಪರೀಕ್ಷೆ ಸಾಧನ) ಉಪಯೋಗಿಸಿದರೆ, ನೀವು ಅಂಡೋತ್ಪತ್ತಿಯ ದಿನದಿಂದ 12-14 ನೇ ದಿನಗಳಂದು ಪರೀಕ್ಷೆ ಸ್ವೀಕರಿಸಬಹುದು. ಏಕೆಂದರೆ ಮೂತ್ರ ಪರೀಕ್ಷೆಯ ಸಾಧನಗಳು ಅಷ್ಟೊಂದು ಸೂಕ್ಷ್ಮವಿರುವುದಿಲ್ಲ, ನಿಮ್ಮ ದೇಹದಲ್ಲಿ hCG ಪ್ರಮಾಣ ಸ್ವಲ್ಪ ಜಾಸ್ತಿ ಇದ್ದರೆ ಮಾತ್ರ ಇವುಗಳು ಗುರುತಿಸುತ್ತವೆ. ಹೀಗಾಗಿ ನೀವು ಒಂದೆರೆಡು ದಿನಗಳು ಹೆಚ್ಚು ಸಮಯ ನೀಡಿದರೆ, hCG ಪ್ರಮಾಣ ಸ್ವಲ್ಪ ಜಾಸ್ತಿ ಆಗುತ್ತದೆ. ಆಗ ಸರಿಯಾದ ಫಲಿತಾಂಶ ಸಿಗುತ್ತದೆ.    

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon