Link copied!
Sign in / Sign up
176
Shares

ಗರ್ಭಧಾರಣೆ: ಶಿಶುವು ನಿಮ್ಮ ಗರ್ಭದೊಳಗಡೆ ಮಾಡುವ ೧೨ ಅದ್ಭುತ ಸಂಗತಿಗಳು

ಗರ್ಭಧಾರಣೆ ಕಷ್ಟದಿಂದ ಕೂಡಿರುತ್ತದೆ, ಅದರ ಬಗ್ಗೆ ಅನುಮಾನವಿಲ್ಲ. ಇದು ಒಂಬತ್ತು ತಿಂಗಳುಗಳ ಅಸ್ವಸ್ತತೆ, ಕಾಲು ಸೆಳೆತ, ನಿಮ್ಮನ್ನು ನೀವು ಸಮತೋಲನದಲ್ಲಿಟ್ಟುಕೊಳ್ಳಲು ಪಡುವ ಶ್ರಮಗಳಿಂದ ಕೂಡಿದೆ. ಎಲ್ಲವೂ ಈ ಸಂದರ್ಭದಲ್ಲಿ ಸವಾಲಾಗಿ ಕಾಣುತ್ತದೆ. ಎಷ್ಟೇ ಕಷ್ಟವಿದ್ದರೂ ನಿಮಗೆ ನಿಮ್ಮ ಮಗುವಿನ ಆರೋಗ್ಯ ಚೆನ್ನಾಗಿರಬೇಕು ಎಂಬುದೇ ಕನಸು. ನಿಮ್ಮ ದಿನವನ್ನು ಖುಷಿಯನ್ನಾಗಿ ಮಾಡುವ ಕೆಲವು ಸತ್ಯ ಸಂಗತಿಗಳು ಇಲ್ಲಿವೆ!, ಅದು ನಿಮ್ಮ ಮಗು ನಿಮ್ಮ ಗರ್ಭದೊಳಗಡೆ ಮಾಡುವುದು.

೧. ಸೀನುವುದು ನಿಮ್ಮ ಮಗುವನ್ನು ಚಕಿತಗೊಳಿಸಬಹುದು

ನೀವು ಸಿನುವ ಶಬ್ದದ ಮೂಲಕ ನಿಮ್ಮ ಮಗುವನ್ನು ಹೆದರಿಸುತ್ತಿರಾ? ಇಲ್ಲ ಅಲ್ಲವ. ಆದರೆ, ನಿಮಗೆ ಗೊತ್ತೇ?, ನೀವು ಸೀನುವುದು, ಅಥವಾ ನಾಯಿ ಬೊಗಳುವಂತಹ ಗಟ್ಟಿಯಾದ(ಜೋರಾದ) ಶಬ್ದದಿಂದ ನಿಮ್ಮ ಮಗುವು ಹೆದರಿಕೊಳ್ಳುತ್ತದೆ. ನೀವು ಸಹ ಅದನ್ನು ಅನುಭವಿಸಿರಬಹುದು.

೨. ತನ್ನ ಹೆಬ್ಬೆರೆಳನ್ನು ಚೀಪುವುದು

ನಿಮ್ಮ ಮಗು ಹೊರ ಜಗತ್ತಿಗೆ ಕಾಲಿಡುವ ಮುನ್ನ ತನ್ನ ಬೆರೆಳನ್ನು ಚೀಪಲು ಪ್ರಾರಂಭಿಸುವುದು. ಕಲ್ಪಿಸಿಕೊಳ್ಳಿ ನಿಮ್ಮ ಮಗುವು ತನ್ನ ಹೆಬ್ಬೆರಳನ್ನು ಹೇಗೆ ಚೀಪುತ್ತಿರಬಹುದೆಂದು. ಇದು ನಿಮ್ಮ ಅನುಭವಕ್ಕೆ ಬಾರದಿದ್ದರೂ ಈ ವಿಷಯ ತಿಳಿದರೆ ನಿಮ್ಮಲ್ಲಿ ಖುಷಿಯನ್ನು ಹೆಚ್ಚಿಸುತ್ತದೆ. ಮತ್ತು ಇದು ನಿಮಗೆ ನಿಮ್ಮ ಆಪ್ತರೊಡನೆ ಮಾತಾಡಲು ಒಳ್ಳೆಯ ವಿಷಯವಾಗುತ್ತದೆ.

೩. ನಿಮ್ಮ ಮಗುವಿಗೆ ಬಿಕ್ಕಳಿಕೆ ಬರಬಹುದು

ಪ್ರತಿ ಗರ್ಭಿಣಿ ಮಹಿಳೆ ತನ್ನ ಹೊಟ್ಟೆ ಜಿಗಿತವನ್ನು ಅನುಭವಿಸಿರಬಹುದು. ನಿಮ್ಮ ಮಗುವಿಗೆ ಬಿಕ್ಕಳಿಕೆ ಬಂದಾಗ ಇದು ಸಂಭವಿಸುತ್ತದೆ. ಇದು ಆದಾಗ ನಿಮಗೆ ಕಿರಿಕಿರಿಯಾಗಿರಬಹುದು, ಆದರೆ ಈಗ ಅದು ನಿಮ್ಮ ಮಗುವಿನ ಬಿಕ್ಕಳಿಕೆಯಿಂದ ಎಂದು ತಿಳಿದು ಅದಕ್ಕೆ ಬೇಕಾದ ಉತ್ತಮ ಕೆಲಸಗಳನ್ನು ಮಾಡಿಕೊಳ್ಳಿ. ನಿಮ್ಮ ಶಿಶುವು ಬಿಕ್ಕಳಿಸುತ್ತಿರುವ ಹಾಗೆ ಅನುಭವವಾದರೆ, ನಿಮ್ಮ ಹೊಟ್ಟೆಯನ್ನು ನಿಧಾನವಾಗಿ ಮೇಲಿನಿಂದ ಕೆಳಕ್ಕೆ ಉಜ್ಜಿ(ಸವರಿ) ಮಗುವಿನ ಬಿಕ್ಕಳಿಕೆ ಕಡಿಮೆಯಾಗುತ್ತದೆ.

೪. ದುರ್ವಾಸನೆಯಿಂದ ದೂರವಿರಿ

ಮಗುವಿನ ಇಂದ್ರಿಯಗಳು ತಾನು ಗರ್ಭದಿಂದ ಹೊರ ಬರುವ ಮುಂಚೆಯೇ ಕೆಲಸ ಮಾಡಲು ಪ್ರಾರಂಭಿಸುತ್ತವೆ. ಗರ್ಭಿಣಿ ಮಹಿಳೆಯ ಮೊದಲನೇ ತ್ರೈಮಾಸಿಕದ ಅವಧಿಯ ಕೊನೆಯಲ್ಲಿ, ಶಿಶುವು ತನ್ನ ತಾಯಿ ಸೇವಿಸುವ ಆಹಾರ ಪದಾರ್ಥಗಳ ವಾಸನೆಯನ್ನು ಅನುಭವಿಸುತ್ತದೆ. ಇದು ನಿಜಕ್ಕೂ ಅದ್ಭುತ ಸಂಗತಿ.

೫. ಆಕಳಿಸುತ್ತದೆ, ಗರ್ಭದಲ್ಲಿ ಮಗುವಿಗೆ ಬೇಜಾರುಗುತ್ತಿರಬಹುದು

ಮಗು ಆಕಳಿಸುವುದು ಮುದ್ದಾದ ವಿಷಯ. ಗರ್ಭದೊಳಗಡೆ ಮಗುವು ನಿಮ್ಮ ಚಟುವಟಿಕೆಗಳನ್ನು ಗಮನಿಸುತ್ತದೆ. ಬಹುಶಃ ನೀವು ನಿದ್ರಿಸುತ್ತಿರುವ ಸಮಯದಲ್ಲಿ ಮಗುವಿಗೆ ಬೇಜಾರಾಗಿರಬಹುದು. ನಿಮ್ಮ ಮಗುವು ಬೇರೇನನ್ನು ಮಾಡಬಹುದು?

೬. ಕನಸು ಕಾಣುತ್ತದೆ.

ಹಲವು ಸಂಶೋದನೆಗಳು ಸ್ಪಷ್ಟಪಡಿಸಿವೆ ತ್ವರಿತ ಕಣ್ಣಿನ ಚಲನೆ ಕನಸು ಬಿಳಲು ಸಹಕರಿಸಬಹುದು. ಮಗುವು ಗರ್ಭದಲ್ಲಿ ಕೆಲ ತಿಂಗಳು ಕಳೆದಂತೆ, ನಿಮ್ಮ ಶಿಶುವು ಕೂಡ ಕನಸುಕಾಣಬಹುದು. ಆದರೆ ನಿಮ್ಮ ಮಗು ಯಾವುದರ ಬಗ್ಗೆ ಕನಸು ಕಾಣಬಹುದು?

೭. ತಿನ್ನುತ್ತದೆ, ಯಾವುದು ರುಚಿ ಮತ್ತು ಯಾವುದು ರುಚಿ ಇಲ್ಲ

ಬೆಳ್ಳುಳ್ಳಿ, ಶುಂಠಿ ಮೊದಲಾದ ಕೆಲವು ಆಹಾರಗಳು ಆಮ್ನಿಯೋಟಿಕ್ ದ್ರವದ ಪರಿಮಳವನ್ನು ಬದಲಿಸುತ್ತವೆ. ಶಿಶುವು ಬೇಗನೆ ತನ್ನ ೧೫ ವಾರಗಳನ್ನು ತುಂಬಿದ ನಂತರ, ಸಿಹಿ ಸುವಾಸನೆಯುಳ್ಳದನ್ನು ಸೇವೆಸಲು ಹೆಚ್ಚು ಆಧ್ಯತೆ ನೀಡುತ್ತದೆ. ಅದರಂತೆ ತನಗೆ ಸಿಹಿ ಸುವಾಸನೆ ಬಂದರೆ ಹೆಚ್ಚು ಆಮ್ನಿಯೋಟಿಕ್ ದ್ರವವನ್ನು ಸೇವಿಸುತ್ತದೆ, ಮತ್ತು ಕಹಿ ಎಂದು ಅನಿಸಿದರೆ ಕಡಿಮೆ ಸೇವನೆ ಮಾಡುತ್ತದೆ. ಆದ್ದರಿಂದ ನಿಮ್ಮ ಮಗುವಿಗೆ ಇಷ್ಟವಾಗುವ ಆರೋಗ್ಯಕರ ಆಹಾರವನ್ನು ಸೇವಿಸಿ.

೮. ಕಣ್ಣು ತೆರೆಯುತ್ತವೆ(ಮಿಟುಕಿಸುತ್ತವೆ)

೨೮ ವಾರಗಳು ತುಂಬಿದ ನಂತರ ಶಿಶುವು ಕಣ್ಣು ಮಿಟುಕಿಸಲು ಪ್ರಾರಂಭಿಸುತ್ತದೆ. ನಿಮ್ಮ ಉದರದ ಮೂಲಕ ಬೆಳಕು ಹಾದುಹೋದಾಗ ಅದು ತನ್ನ ಚಲನೆಯನ್ನು ಮಾಡುತ್ತದೆ, ಇದು ಮಗು ಉತ್ತಮವಾಗಿ ಬೆಳೆವಣಿಗೆಯಾಗುತ್ತಿರುವ ಸೂಚನೆ.

೯. ಮೂತ್ರ ಮಾಡಿಕೊಳ್ಳುತ್ತದೆ

ಮೊದಲ ತ್ರೈಮಾಸಿಕದ ಕೊನೆಯಲ್ಲಿ, ನಿಮ್ಮ ಮಗುವು ಮೂತ್ರವನ್ನು ಮಾಡಲು  ಪ್ರಾರಂಭಿಸುತ್ತದೆ. ಆಮ್ನಿಯೋಟಿಕ್ ದ್ರವವನ್ನು ನುಂಗುತ್ತದೆ, ಅದು, ಮೂತ್ರಪಿಂಡಗಳಿಂದ ಜೀರ್ಣವಾಗುತ್ತದೆ, ಮತ್ತು ಶುದ್ದಿಕರಣಗೊಳ್ಳುತ್ತದೆ, ನಂತರ ಗರ್ಭಾಶಯದೊಳಕ್ಕೆ ಪುನಃ ಅದನ್ನು ಮೂತ್ರದ ರೂಪದಲ್ಲಿ ಕಳಿಹಿಸುತ್ತದೆ, ಮತ್ತು ಈ ಪ್ರಕ್ರಿಯೆಯು ಪುನರಾವರ್ತನೆಯಾಗುತ್ತದೆ.

೧೦. ನಗುತ್ತದೆ

ನೀವು ನಿಮ್ಮ ಮಗುವು ಒತ್ತಡದಿಂದ ದೂರವಿದ್ದು, ಬಟ್ಟೆ ಬದಲಿಸುವಾಗ, ಜಳಕ ಮಾಡಿಸುವಾಗ ನಗಬೇಕೆಂದು ನಿರೀಕ್ಷೆಯಿಂದ ಕಾಯುತ್ತಿರುವಿರಿ. ನಿಮ್ಮ ಮಗುವಿನ ನಗುವಿನಿಂದ ನಿಮ್ಮ ಒತ್ತಡವು ದೂರವಾಗುವುದು, ಚಿಂತಿಸದಿರಿ, ನಿಮ್ಮ ಮಗುವು ನಗುವುದನ್ನು ನಿಮ್ಮ ಗರ್ಭದಿಂದಲೇ ಅಭ್ಯಾಸ ಮಾಡಿಕೊಂಡು ಬರುತ್ತಿದೆ. ಮತ್ತು ಆ ಸುಂದರವಾದ ನಗುವನ್ನು ಶೀಘ್ರದಲ್ಲೇ ನಿಮಗೆ ತೋರಿಸುತ್ತದೆ.

೧೧. ನಿಮ್ಮ ಧ್ವನಿಯನ್ನು ಆಲಿಸುತ್ತದೆ

ನಿಮ್ಮ ಗರ್ಭಧಾರಣೆಯ ಕೊನೆಯ ೧೦ ವಾರಗಳು ಇರುವಂತೆ, ಶಿಶುಗಳು ಬಹಳ ಚಟುವಟಿಕೆಯಿಂದ ತಮ್ಮ ತಾಯಿಯ ಮಾತನ್ನು/ ಧ್ವನಿಯನ್ನು ಆಲಿಸುತ್ತವೆ. ಶಿಶುವಿಗೆ ನಿಮ್ಮ ಮಾತು ಸ್ಪಷ್ಟವಾಗಿ ಅರ್ಥವಾಗದಿದ್ದರೂ, ನಿಮ್ಮ ಮಾತನ್ನು ತುಂಬಾ ಏಕಾಗ್ರತೆಯಿಂದ ಕೇಳಿಸಿಕೊಳ್ಳುತ್ತದೆ.

೧೨. ಕೊನೆಯದಾಗಿ ಕಣ್ಣಿರು ಕೂಡ ಇರುತ್ತದೆ

ಇದರಿಂದ ನಿಮಗೆ ತುಂಬಾ ನೋವಾಗಬಹುದು, ಆದರೆ ನಿಮ್ಮ ಮಗು ತಾನು ಗರ್ಭದಿಂದ ಹೊರ ಬರುವ ಮುನ್ನವೇ ಅಳಲು ಪ್ರಾರಂಭಿಸುತ್ತದೆ. ಮಗುವು ತನ್ನ ಭಾವನೆಯನ್ನು ಅಳುವುದರ ಮುಖಾಂತರ ನಿಮ್ಮಲ್ಲಿ ವ್ಯಕ್ತ ಪಡಿಸುವುದನ್ನು ನಿಮ್ಮ ಗರ್ಭದಲ್ಲೇ ಅಭ್ಯಾಸ ಮಾಡಿಕೊಂಡು ಬರುತ್ತದೆ. ಶಿಶುವು ನಾನು ಹೇಗೆ ಅಳಬೇಕೆಂಬುದನ್ನು ನಿಮ್ಮ ಉದರದಲ್ಲೇ ಕಲಿತುಕೊಂಡು ಬರುತ್ತದೆ.

Click here for the best in baby advice
What do you think?
100%
Wow!
0%
Like
0%
Not bad
0%
What?
scroll up icon