Link copied!
Sign in / Sign up
41
Shares

ಸೆಕ್ಸ್ ಬೇಡ ಎಂದು ಗರ್ಭಧಾರಣೆಯಲ್ಲಿ ಯಾವಾಗ ಹೇಳಬೇಕು?

ನೀವು ಗರ್ಭಿಣಿ ಆಗುವವರೆಗೆ ಎಲ್ಲವು ಮಜಾ, ಉಲ್ಲಾಸ ಹಾಗು ಆಟವಾಗಿರುತ್ತದೆ. ಏಕೆಂದರೆ ಗರ್ಭಿಣಿ ಆದಮೇಲೆ ನಿಮಗೆ ನಿಜವಾದ ಜವಾಬ್ದಾರಿಗಳು ಹಾಗು ಪರಿಸ್ತಿತಿಯ ಗಾಂಭೀರ್ಯತೆ ಗೊತ್ತಾಗುವುದು. ಈ ಸಮಯದಲ್ಲೇ ದಂಪತಿಗಳು ಕೇವಲ ದಂಪತಿಗಳಾಗಿ ಉಳಿಯದೆ ಪೋಷಕರಾಗುವುದು. ಇದು ಯಾವುದೇ ಮಾನವನ ಜೀವನದಲ್ಲಿ ಅತ್ಯಂತ ಮುಖ್ಯವಾದ ಮೈಲಿಗಲ್ಲು.

ನೀವು ಗರ್ಭತಾಳಿದ ಮೇಲೆಯೂ ಲೈಂಗಿಕ ಕ್ರಿಯೆಯನ್ನು ಅನುಭವಿಸಬಹುದು. ನಿಮ್ಮ ನೀರು ಒಡೆಯುವವರೆಗೂ ನೀವು ನಿಮ್ಮ ಲೈಂಗಿಕ ಕ್ರಿಯೆಗಳಲ್ಲಿ ಹಾಯಾಗಿ ತೊಡಗಿಕೊಳ್ಳಬಹುದು. ಏಕೆಂದರೆ ಅಲ್ಲಿಯವರೆಗೆ ನಿಮ್ಮ ಮಗು ಆಮ್ನಿಯೋಟಿಕ್ ದ್ರವ್ಯದ ಪದರದೊಳಗೆ ಆರಾಮಾಗಿ ಸುರಕ್ಷಿತವಾಗಿ ಇರುತ್ತದೆ. ನಿಮ್ಮ ಗರ್ಭಕಂಠದ ಸುತ್ತ ಸುತ್ತುವರಿದಿರುವ ಲೋಳೆಯ ಪದರ ನಿಮ್ಮ ಮಗುವನ್ನು ಎಲ್ಲಾ ಸೋಂಕಿನಿಂದ ಕಾಪಾಡುತ್ತದೆ. ಹಾಗಾಗಿ ನೀವು ಚಿಂತಿಸಬೇಕಾದದ್ದು ಏನು ಇಲ್ಲ.

ಈಗ, ನೀವು ಅನೇಕ ಹೆಣ್ಣುಮಕ್ಕಳಿಗೆ ಗರ್ಭಪಾತ ಆಗಿರುವುದನ್ನ ಕೇಳಿರುತ್ತೀರ. ಗಾಬರಿ ಆಗಬೇಡಿ, ಅದಕ್ಕೂ ಸೆಕ್ಸ್ ಗು ಏನು ಸಂಬಂಧವಿಲ್ಲ. ಆದರೆ, ನಿಮ್ಮ ವೈದ್ಯರು ನಿಮಗೆ ಸಂಭೋಗ ಕ್ರಿಯೆಯಲ್ಲಿ ತೊಡಗಿಕೊಳ್ಳಬೇಡಿ ಎಂದು ಹೇಳಿದರೆ ನೀವು ಖಂಡಿತವಾಗಿ ಅದನ್ನು ಪಾಲಿಸಬೇಕು. ಏಕೆಂದರೆ ನಿಮ್ಮ ಹಿಡಿತದಲ್ಲಿರದ ಆಸೆಗಳಿಂದ ನಿಮ್ಮ ಮಗುವಿನ ಜೀವಕ್ಕೆ ಕುತ್ತು ಬರಬಾರದು. ನೀವು ತುಂಬಾ ಒತ್ತಡ ಹಾಗು ಹತಾಶೆಯನ್ನು ಹೊಂದುವ ಕಾರಣ, ಇದು ಒಂದು ದೊಡ್ಡ ಸಮಸ್ಯೆಯಾಗಿ ಕಾಡಬಹುದು.

ಗರ್ಭಧಾರಣೆ ವೇಳೆ ಲೈಂಗಿಕ ಕ್ರಿಯೆಯಿಂದ ದೂರವಿರಬೇಕಾದ ಕೆಲವು ಸಂದರ್ಭಗಳು ಯಾವು ಎಂದರೆ :

೧. ಗರ್ಭಚೀಲ ಪ್ರೆವಿಯ

ನಿಮ್ಮ ಮಗುವು ಅಮ್ನಿಯೋಟಿಕ್ ದ್ರವ್ಯದ ಒಂದು ಚೀಲದೊಳಗೆ ಸುರಕ್ಷಿತವಾಗಿರುತ್ತದೆ. ಆ ಚೀಲದ ಮೇಲೆ ಗರ್ಭಚೀಲ ರಕ್ಷಣೆ ನೀಡುತ್ತದೆ. ಕೆಲವೊಂದು ಬಾರಿ ನಿಮ್ಮ ಗರ್ಭಚೀಲವು ಸರಿಯಾದ ಜಾಗದಲ್ಲಿ ಕೂರುವುದಿಲ್ಲ. ಅದು ಬೆಳವಣಿಗೆ ಹೊಂದಬೇಕಿದ್ದ ಜಾಗಕ್ಕಿಂತ ಇನ್ನೂ ಕೆಳಗಡೆ ಬೆಳಯಬಹುದು. ಇಂತಹ ಸಮಯದಲ್ಲಿ, ನಿಮ್ಮ ಹಾಗು ನಿಮ್ಮ ಮಗುವಿನ ಒಳಿತಿಗೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳದೆ ಇದ್ದಾರೆ ಒಳ್ಳೆಯದು.

ಇದನ್ನು ಕೇವಲ ಗರ್ಭಧಾರಣೆಯ 16-20ನೇ ವಾರಗಳಲ್ಲಿ ಗುರುತಿಸಬಹುದು. ಇದು ತಾಯಿಗೆ ತುಂಬಾ ದೈಹಿಕ ನೋವು ಉಂಟುಮಾಡಬಹುದು ಹಾಗು ಮಗುವಿನ ಜೀವಕ್ಕೆ ಕುತ್ತು ತರಬಹುದು.

೨. ಅಕಾಲಿಕ ಹೆರಿಗೆ ನೋವು

ಇದು ನಿಮ್ಮ ಮಗುವು ನಿಗದಿತ ದಿನಾಂಕಕ್ಕು ಮುನ್ನವೇ ಜನಿಸುವುದು ಎಂದು. ನೀವು ನಿಯತವಾಗಿ ಸಂಕೋಚನ(contraction)ಗಳನ್ನ ಅನುಭವಿಸುತ್ತಲೇ ಇದ್ದರೆ, ನಿಮ್ಮ ಕೇವಲ 37ವಾರಗಳಿಗೆ ಗರ್ಭಕಂಠವು ಒತ್ತಾಯಪೂರ್ವಕವಾಗಿ ತೆರೆದುಕೊಳ್ಳುವಂತೆ ಮಾಡುತ್ತವೆ. ಈ ಸ್ತಿಥಿಯಲ್ಲಿ ನಿಮಗೆ ಅಕಾಲಿಕ ಹೆರಿಗೆ ನೋವು ಉಂಟಾಗುವ ಸಾಧ್ಯತೆಗಳು ಇರುತ್ತದೆ. ಪ್ರಸವಪೂರ್ವ ಹೆರಿಗೆ ನೋವು ಉದ್ಭವಿಸುವ ಸಾಧ್ಯತೆಗಳಿರುವ ಗರ್ಭಿಣಿಯರಿಗೆ ವದಿಯರು ಲೈಂಗಿಕ ಕ್ರಿಯೆಯಿಂದ ದೂರವಿರಲು ಹೇಳುತ್ತಾರೆ. ಏಕೆಂದರೆ ಸಂಭೋಗೋದ್ರೇಕ ಪರಾಕಾಷ್ಟೆ(orgasm) ಸಂಕೋಚನಗಳನ್ನು ಹುಟ್ಟು ಹಾಕುತ್ತದೆ.

೩. ಯೋನಿಯಿಂದ ರಕ್ತಸ್ರಾವ

ನೀವು ಧಿಡೀರನೆ ಯೋನಿಯಿಂದ ರಕ್ತಸ್ರಾವ ಅನುಭವಿಸಿದರೆ, ಕೂಡಲೇ ಲೈಂಗಿಕ ಕ್ರಿಯೆಯನ್ನು ನಿಲ್ಲಿಸಿ. ಇದು ತುಂಬಾ ಆಳವಾಗಿ ಶಿಶ್ನ ನುಗ್ಗಿಸಿದ ಕಾರಣ ಆಂತರಿಕ ರಕ್ತಸ್ರಾವ ಆಗಿರಬಹುದು. ರಕ್ತಸ್ರಾವದ ತೊಂದರೆ ಇದ್ದಾರೆ ಲೈಂಗಿಕ ಕ್ರಿಯೆ ಮುಂದುವರೆಸುವುದು ಒಳ್ಳೆಯ ಉಪಾಯವಲ್ಲ.

ಈ ಸಮಯದಲ್ಲಿ ಯೋನಿಯಿಂದ ಅಸಹಜ ದ್ರವವು ಹೊರಬರುತ್ತದೆ. ಹಾಗಾಗಿ ಯಾವುದಾದರು ಅಸಹಜ ಎನಿಸುವ ಪದಾರ್ಥವು ಹೊರಸೂಸಿಸುತ್ತಿದ್ದಲ್ಲಿ ನೀವು ಕೂಡಲೇ ವೈದ್ಯರನ್ನು ಭೇಟಿ ಮಾಡಬೇಕು ಹಾಗು ಮಗು ಆಗುವವರೆಗೂ ಲೈಂಗಿಕ ಕ್ರಿಯೆಗೆ ವಿದಾಯ ಹೇಳಬೇಕು.

೪. ಪದರ ಬಿರುಕು ಬಿಡುವುದು

ಸುಲಭವಾಗಿ ಹೇಳಬೇಕೆಂದರೆ ನಿಮ್ಮ ನೀರು ಒಡೆದಾಗ ನಿಮ್ಮ ಮಗುವು ಇನ್ನೇನು ಹೊರಗೆ ಬರುವುದೆಂದು. ನಿಮ್ಮ ಮಗುವು ಹೊರಗೆ ಬರಲು ಯತ್ನಿಸುತ್ತಿದೆ ಎಂದು ನಿಮಗೆ ತಿಳಿದೊಡನೆ ನಿಮ್ಮ ಗರ್ಭಕಂಠವು ವಿಸ್ತರಿಸುತ್ತದೆ ಹಾಗು ಮಗುವನ್ನು ಹೊರತಳ್ಳಲು ಸಹಾಯ ಮಾಡುತ್ತದೆ. ಹೀಗಾಗಿ ನಿಮ್ಮ ಹೆರಿಗೆಯ ದಿನಾಂಕ ಹತ್ತಿರ ಇರುವಾಗ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಬಾರದು.

೫. ಗರ್ಭಕಂಠದ ಅಸಮರ್ಪಕತೆ

ಇದರ ಅರ್ಥ ಗರ್ಭಕಂಠವು ಅಸಮರ್ಥವಾಗಿದೆ ಎಂದು ಹಾಗು ನಿಮ್ಮ ಮಗುವಿಗೆ ತಂಗಲು ಅದು ಯೋಗ್ಯ ಸ್ಥಳ ಅಲ್ಲವೆಂದು. ಇದನ್ನು ನಿಮ್ಮ ಗರ್ಭಕಂಠವು ತುಂಬಾ ಮುಂಚೆಯೇ ವಿಸ್ತರಿಸುತ್ತಿದೆ ಎಂದು ಕೂಡ ಹೇಳಬಹುದು. ಹೀಗಾಗಿ ನಿಮ್ಮ ಮಗುವು ತಾನು ಜನಿಸಬೇಕಾದ ಸಮಯಕ್ಕಿಂತ ಮುಂಚೆಯೇ ಜನಿಸಬಹುದು. ಇದನ್ನು ಅಕಾಲಿಕ ಹೆರಿಗೆ ಎನ್ನುವರು.

ಇಲ್ಲಿ ನಿಮ್ಮ ಮಗುವು ಅಕಾಲಿಕ ಜನನ ಹೊಂದಬಹುದು ಅಥವ ನಿಮಗೆ ಗರ್ಭಪಾತ ಉಂಟಾಗಬಹುದು.

ಈ ಎಲ್ಲಾ ಕಾರಣಗಳಿಂದಲೇ ನೀವು ಗರ್ಭಧಾರಣೆ ವೇಳೆ ತುಂಬಾ ಎಚ್ಚರಿಕೆ ವಹಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon