Link copied!
Sign in / Sign up
5
Shares

ಗರ್ಭದಲ್ಲಿ ಮಗುವು ಇವುಗಳನ್ನು ಕಲಿಯುತ್ತದೆ ಭಾಗ - 2

ಮಹಿಳೆಯು ತನ್ನ ಗರ್ಭಾವಸ್ಥೆಯಲ್ಲಿ ತನ್ನ ಮಗುವಿನೊಂದಿಗೆ ಎಲ್ಲಾ ಕ್ಷಣಗಳನ್ನು ಖುಷಿಯಿಂದ ಅನುಭವಿಸುತ್ತಾಳೆ. ಆದರೆ ಅವಳ ಕುತೂಹಲ ಮಗುವು ಉದರದಲ್ಲಿ ಏನೆಲ್ಲಾ ಮಾಡಬಹುದು ಮಗು ಉದರದಲ್ಲೇ ಪಾಠ ಕಲಿಯಲು ಶುರು ಮಾಡುವುದೇ ಎಂಬುದು, ಇದರ ಮೊದಲ ಭಾಗದಲ್ಲಿ ನೀವು ಮಗುವು ಉದರದೊಳಗಡೆ ಕಲಿಯುವ ಕೆಲವು ವಿಷಯಗಳ ಬಗ್ಗೆ ಓದಿರುವಿರಿ, ಅದರ ಜೊತೆಗೆ ಮಗುವು ಇವುಗಳನ್ನು ನಿಮ್ಮ ಗರ್ಭದೊಳಗೆ ಕಲಿಯುತ್ತದೆ.

೧.ರುಚಿ ನೋಡುವುದನ್ನು

ನಂಬಲು ಅಸಾಧ್ಯವೆಂಬಂತೆ, ಬೇಗನೆ ನಿಮ್ಮ ೧೩ನೇ ವಾರದ ಗರ್ಭಾವಸ್ಥೆಯಲ್ಲಿ, ನಿಮ್ಮ ಮಗುವು ರುಚಿ ಅನುಭವಿಸುವ ಗ್ರಂಥಿ ಮೊಗ್ಗುಗಳನ್ನು ಮೆದುಳು ಬೆಳೆವಣಿಗೆಯಾದಂತೆ, ಬೆಳೆಸಿಕೊಂಡಿರುತ್ತದೆ, ಮತ್ತು ಘಾಟು ಪದಾರ್ಥಗಳ ರುಚಿಯನ್ನು ನಿರ್ಧರಿಸಬಹುದು. ಮಗುವು ಆಹಾರದ ರುಚಿಯಲ್ಲಿ ಆಧ್ಯತೆಯನ್ನು ಕೂಡ ಹೊಂದಿರಬಹುದು, ಮತ್ತು ಅವರು ಸಿಹಿ, ಉಳಿ, ಉಪ್ಪು ಮತ್ತು ಕಾರಗಳ ವ್ಯತ್ಯಾಸವನ್ನು ಗುರುತಿಸಬಲ್ಲರು.

ಮಗುವು ಆಮ್ನಿಯೋಟಿಕ್ ದ್ರವದ ಮೂಲಕ ಸೇವಿಸುವ ಸಿಹಿ ರುಚಿಯುಳ್ಳ ಆಹಾರಗಳ ಸೇವನೆಗೆ ಒಲವನ್ನು ತೋರಿಸುತ್ತವೆ. ಅಧ್ಯಯನಗಳ ಪ್ರಕಾರ ಶಿಶುಗಳು ಸಿಹಿ ರುಚಿ ಇರುವ ಪದಾರ್ಥಗಳನ್ನು ಹೆಚ್ಚು ನುಂಗುತ್ತವೆ ಅಥವಾ ಹೆಚ್ಚು ಸೇವಿಸುತ್ತವೆ. ಶಿಶುವು ತಾಯಿಯ ಗರ್ಭಾವಸ್ಥೆಯ ಕೊನೆಯ ತ್ರೈಮಾಸಿಕದಲ್ಲಿ, ದಿನಕ್ಕೆ ಒಂದು ಲೀಟರ್ ನಷ್ಟು ಆಮ್ನಿಯೋಟಿಕ್ ದ್ರವವನ್ನು ಸೇವಿಸುತ್ತದೆ ಮತ್ತು ಇದು ತಾಯಿ ಎದೆಹಾಲುಣಿಸಲು ತಯಾರಿಗೆ ಸಹಾಯವಾಗುತ್ತದೆ.

೨.ಸ್ಪರ್ಶಜ್ಞಾನ ಮತ್ತು ಚಲನವಲನದ ಇಂದ್ರಿಯ ಶಕ್ತಿಯನ್ನು ಹೊಂದುತ್ತದೆ

ಶಿಶುವು ಗರ್ಭದೊಳಗೆ ಸ್ಪರ್ಶಜ್ಞಾನವನ್ನು ಬೇಗನೆ ಅಭಿವೃದ್ಧಿಪಡಿಸಿಕೊಳ್ಳುತ್ತದೆ ಮತ್ತು ಅದನ್ನು ಅನುಭವಿಸುತ್ತದೆ. ನಿಮ್ಮ ೮ನೇ ವಾರದ ಗರ್ಭಾವಸ್ಥೆಯಲ್ಲಿ, ಶಿಶುವು ತನ್ನ ಬಾಯಿ ಅಥವಾ ಮುಖದ ಸುತ್ತ ಆಗುವ ಸ್ಪರ್ಶವನ್ನು ಅನುಭವಿಸುತ್ತದೆ, ಮತ್ತು ನಂಬಲಾರದ ರೀತಿಯಲ್ಲಿ ಗರ್ಭಾವಸ್ಥೆಯ ೧೧ ನೇ ವಾರದಲ್ಲಿ, ಶಿಶುವು ತನ್ನ ಕೈ ಕಾಲುಗಳನ್ನು ಆಡಿಸಲು ಪ್ರಾರಂಭಿಸುತ್ತದೆ. ನಿಮ್ಮ ಶಿಶುವು ಉದರದೊಳಗೆ ಬೆಳೆಯುತ್ತಿದ್ದಂತೆ, ಮತ್ತು ಅದು ತನ್ನ ಕೈ ಕಾಲುಗಳನ್ನು ಆಡಿಸುವುದನ್ನು, ನೀವು ಅನುಭವಿಸಬಹುದು.

ನೀವು ನಿಮ್ಮ ಉದರವನ್ನು ಸ್ಪರ್ಶಿಸಿದಾಗ ಅಥವಾ ಸ್ವಲ್ಪ ಚಲನವಲನ ಮಾಡಿದಾಗ ನಿಮ್ಮ ಮಗುವು ಅದಕ್ಕೆ ಪ್ರತಿಕ್ರಿಯಿಸುವುದನ್ನು ನೀವು ಗಮನಿಸಬಹುದು. ನಿಮ್ಮ ಪ್ರತಿಯೊಂದು ಚಲನವಲನಕ್ಕೂ ನಿಮ್ಮ ಮಗು ಪ್ರತಿಕ್ರಿಯೆ ನೀಡುತ್ತದೆ.

೩.ಕನಸು ಕಾಣುತ್ತದೆ

ನಿಮಗೆ ಆಶ್ಚರ್ಯವಾಗಬಹುದು, ಗರ್ಭದೊಳಗಡೆ ಮಗುವು ಕನಸು ಕಾಣುತ್ತದೆಯೇ? ನಿಮ್ಮಲ್ಲಿ ಪ್ರಶ್ನೆಯು ಮೂಡಬಹುದು. ನಮಗೆ ಗೊತ್ತು ಬೆಳೆಯುತ್ತಿರುವ ಶಿಶುಗಳು ಹೆಚ್ಚು ನಿದ್ರೆಯನ್ನು ಮಾಡುತ್ತವೆ ಎಂದು, ಮತ್ತು ಶಿಶುಗಳು ತ್ವರಿತ ಕಣ್ಣಿನ ಚಲನೆಯನ್ನು ಮಾಡುತ್ತವೆ(RMI - Rapid Eye Movement). ತನ್ನ ಹೆಚ್ಚು ಸಮಯವನ್ನು ಬೆಳೆಯುತ್ತಿರುವ ಮಗುವು ನಿದ್ರೆಯಲ್ಲಿ ಕಳೆಯುತ್ತದೆ.

ಇತ್ತೀಚಿನ ಅಧ್ಯನಗಳ ಪ್ರಕಾರ, ೨೩ವಾರಗಳನ್ನು ತುಂಬಿರುವ ಶಿಶುವು, RMI ಯನ್ನು ಹೆಚ್ಚು ಅನುಭವಿಸುತ್ತವೆ ಮತ್ತು ಇದರಿಂದ ಶಿಶುವು ಗಾಢ ನಿದ್ರೆಮಾಡಲು ಸಹಾಯ ಮಾಡುವ ಜೊತೆಗೆ ಕನಸು ಬೀಳುವಂತೆ ಮಾಡುತ್ತದೆ.

೪.ನಗುತ್ತದೆ

ನಿಮ್ಮ ಮಗುವು ಗರ್ಭದೊಳಗೆ, ಕಲಿಯುತ್ತಿರುತ್ತದೆ ಮತ್ತು ಅದರ ಪ್ರತಿಬಿಂಬವನ್ನು ವ್ಯಕ್ತಪಡಿಸುತ್ತದೆ ಅದು ಕೈ, ಕಾಲು, ಬೆರಳುಗಳು ಅಥವಾ ಅಂಗಗಳ ಚಲನವಲನ ಆಗಿರಬಹುದು. ಕಣ್ಣನ್ನು ಮುಚ್ಚುತ್ತದೆ ಮತ್ತು ತೆಗೆಯುತ್ತದೆ ಮತ್ತು ನಗುತ್ತದೆ ಮತ್ತು ಯಾವಾಗ ನಗಬೇಕು ಮತ್ತು ಯಾವಾಗ ನಗಬಾರದು ಎಂಬುದನ್ನು ಕಲಿಯುತ್ತದೆ. ಹೊಸ ತಂತ್ರಜ್ಞಾನದ ಮೂಲಕ ಮಗುವು ಉದರದೊಳಗೆ ಏನು ಮಾಡುತ್ತಿದೆ ಎಂಬುದನ್ನು ನೋಡಬಹುದು ಅಂತಹ ಅನೇಕ ಸಂದರ್ಭಗಳಲ್ಲಿ ಸ್ಕ್ಯಾನ್ ಮಾಡುವಾಗ ಗರ್ಭದೊಳಗೆ ಮಗು ನಗುತ್ತಿರುವುದು ಮತ್ತು ತಾಯಿಯ ಚಲನೆಗೆ ಪ್ರತಿಕ್ರಿಯಿಸುತ್ತಿರುವುದು ಕಾಣಿಸಿದೆ.

೫.ಬೆಳಕಿಗೆ ಪ್ರತಿಕ್ರಿಯಿಸುತ್ತದೆ

ನೈಸರ್ಗಿಕವಾಗಿ, ಗರ್ಭಾಶಯವು ಕತ್ತಲಿನಿಂದ ಕೂಡಿರುತ್ತದೆ, ಇದು ಮಗುವು ಪ್ರಕಾಶಮಾನವಾದ ಬೆಳಕಿರುವ ಹೊರಜಗತ್ತಿಗೆ ಬಂದಾಗ(ಜನಿಸಿದಾಗ), ಕಣ್ಣು ಮುಚ್ಚಿಕೊಂಡಿರುವುದಕ್ಕೆ ಒಂದು ಕಾರಣವಾಗಿದೆ. ಗರ್ಭದೊಳಗೆ ಹೆಚ್ಚು ಕತ್ತಲು ಇರುವುದರಿಂದ ತನ್ನ ಸುತ್ತ ಇರುವುದನ್ನು ಸ್ಪಷ್ಟವಾಗಿ ನೋಡಲು ಸಾಧ್ಯವಿಲ್ಲ ಆದ್ದರಿಂದ ಹೆಚ್ಚು ಸಮಯ ಮಗು ನಿದ್ದೆಯಲ್ಲಿ ಕಳೆಯುತ್ತದೆ.

ಆದಾಗ್ಯೂ, ನಿಮ್ಮ ಉದರದ ಮೇಲೆ ಯಾವುದೇ ಬೆಳಕು ನೇರವಾಗಿ ಬಿದ್ದರೆ ಅದಕ್ಕೆ ನಗುವು ಪ್ರತಿಕ್ರಿಯಿಸುತ್ತದೆ ಮತ್ತು ಮಗುವಿನ ಭಂಗಿಯನ್ನು ಅಸ್ಪಷ್ಟವಾಗಿ ಕಾಣಬಹದು, ಆದರೆ, ಉದರದ ಮೇಲೆ ನೇರವಾಗಿ ಬೆಳಕನ್ನು ಬಿಡುವುದರಿಂದ ನಿಮಗೆ ಮತ್ತು ಮಗುವಿಗೆ ಹೆಚ್ಚು ಅಪಾಯವಿರುವುದರಿಂದ, ವೈದ್ಯರು ಇದನ್ನು ಖಡ್ಡಾಯವಾಗಿ ನಿಷೇಧಿಸಲು ಸೂಚಿಸುತ್ತಾರೆ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon