ಗರ್ಭದಲ್ಲಿ ಮಗುವಿನ ತೂಕ - ವಾರದಿಂದ ವಾರಕ್ಕೆ ಮಗುವಿನ ತೂಕ ಎಷ್ಟಿರಬೇಕು ಎಂಬ ಚಾರ್ಟ್
ನಿಮ್ಮ ಮಗುವನ್ನು ಆರೈಕೆ ಮಾಡಲು ಅವನು/ಳು ಜನಿಸುವ ತನಕ ಕಾಯಬೇಕಿಲ್ಲ. ಏಕೆಂದರೆ ನಿಮ್ಮ ಮಗುವು ಗರ್ಭದಲ್ಲಿರುವಾಗಲೇ ನೀವು ಅವನ/ಳ ಆರೈಕೆ ಮಾಡಲು ಪ್ರಾರಂಭಿಸಿರುವಿರಿ. ಅದು ನಿಮಗೆ ಸ್ಪಷ್ಟವಾಗಿ ತಿಳಿದಿರುವುದಿಲ್ಲ. ನಿಮ್ಮ ಆಹಾರ ಕ್ರಮ, ಹವ್ಯಾಸಗಳು, ನಡವಳಿಕೆಗಳು ನೇರವಾಗಿ ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತವೆ. ಆದ್ದರಿಂದ ನೀವು ಆರೋಗ್ಯಕರ ಜೀವನ ಶೈಲಿಯನ್ನು ರೂಢಿಸಿಕೊಳ್ಳುವುದು ತುಂಬಾ ಮುಖ್ಯ. ಮಗು ಬೆಳವಣಿಗೆಯ ಒಂದು ಪ್ರಮುಖ ಅಂಶ ಎಂದರೆ ಮಗುವಿನ ತೂಕ. ಅಲ್ಟ್ರಾಸೌಂಡ್ ಸ್ಕ್ಯಾನ್ ಆದ ಬಳಿಕ ನಿಮ್ಮ ಮಗುವು ಹೆಚ್ಚು ತೂಕ ಹೊಂದಿದೆ ಅಥವಾ ಕಡಿಮೆ ತೂಕ ಹೊಂದಿದೆ ಎಂದು ವೈದ್ಯರು ನಿಮಗೆ ಹೇಳಬಹುದು. ಗರ್ಭದಲ್ಲಿನ ಮಗುವಿನ ತೂಕದ ಬಗ್ಗೆ ನೀವು ತಿಳಿದುಕೊಂಡಿರಬೇಕಾದ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ.
ಭ್ರೂಣದ ತೂಕವನ್ನು ಹೇಗೆ ಅಳೆಯುತ್ತಾರೆ?
ನಿಮಗೆ ರೇಡಿಯೊಲೊಜಿಸ್ಟ್ ಅಲ್ಟ್ರಾಸೌಂಡ್ ಸ್ಕ್ಯಾನ್ ಮಾಡುವಾಗ ನಿಮ್ಮ ಗರ್ಭದಲ್ಲಿರುವ ಮಗುವಿನ ತೂಕವನ್ನು ಈ ವಿಧಾನಗಳಿಂದ ಅಳೆಯುತ್ತಾರೆ.
೧.ಬೈಪಾರಿಯಲ್ ವ್ಯಾಸ (ಬಿಪಿಡಿ)
೨.ಫೆಮೂರ್ ಉದ್ದ (FL)
೩.ತಲೆ ಸುತ್ತಳತೆ (HC)
೪.ಒಕಿಪಿಟೊಫ್ರಂಟಲ್ ವ್ಯಾಸ (OFD)
೫.ಹೊಟ್ಟೆಯ ಸುತ್ತಳತೆ (AC)
೬.ಹೆಗಲ ಮೂಳೆಯ ಉದ್ದ (HL)
ಈ ಮೇಲಿನ ಎಲ್ಲಾ ಅಂಕಿಗಳನ್ನು ಗಮನಿಸಿ ಬರೆದುಕೊಂಡ ನಂತರ ಒಂದು ಸಂಕೀರ್ಣ ಸೂತ್ರಕ್ಕೆ ಇದನ್ನು ಅನ್ವಯಿಸಿ ಮಗುವಿನ ತೂಕವನ್ನು ಕಂಡುಹಿಡಿಯುತ್ತಾರೆ. ಈ ತೂಕವು ನಿಖರವಾಗಿರದಿದ್ದರು ಸ್ವಲ್ಪ ಸಮನಾಗಿರುತ್ತದೆ.
ಭ್ರೂಣದ ನಿರ್ದಿಷ್ಟ ಮಾದರಿ ತೂಕ ಎಂದರೇನು?
ಮಾದರಿ ಭ್ರೂಣದ ತೂಕ ಎಂದರೆ, ಗರ್ಭದಲ್ಲಿ ಮಗುವು ಪಡೆಯುವ ಸರಾಸರಿ ತೂಕವಾಗಿದ್ದು, ಇದನ್ನು ಹಲವು ಆರೋಗ್ಯಕರ ಶಿಶುಗಳ ತೂಕವನ್ನು ಪರಿಗಣಿಸಿ ಸರಾಸರಿ ಎಂದು ಪರಿಗಣಿಸಲಾಗಿದ್ದು, ಮಗುವಿನ ತೂಕವು ಇಲ್ಲಿ ಇರುವುದಕ್ಕಿಂತ ಭಿನ್ನವಾಗಿರಬಹುದು. ಇಲ್ಲಿರುವ ತೂಕವನ್ನು ಸಾಮಾನ್ಯವಾಗಿ ಶಿಶುಗಳು ಹೊಂದಿದ್ದರೆ ಅರೋಗ್ಯ ತೂಕವನ್ನು ಪಡೆಯುತ್ತಿದ್ದಾರೆ ಎಂದು ಪರಿಗಣಿಸಬಹುದು.
ಗರ್ಭಾವಸ್ಥೆಯಲ್ಲಿ ಭ್ರೂಣದ ಸರಾಸರಿ ತೂಕ (ವಾರಗಳಲ್ಲಿ)
ಗರ್ಭಾವಸ್ಥೆಯ ವಾರ |
ತೂಕ (ಗ್ರಾಂ. ಗಳಲ್ಲಿ) |
8 |
1 |
10 |
4 |
12 |
14 |
14 |
43 |
15 |
70 |
16 |
100 |
18 |
190 |
20 |
300 |
22 |
430 |
23 |
501 |
24 |
600 |
25 |
660 |
28 |
1005 |
30 |
1319 (ಅಥವಾ 1 kg) |
33 |
1918 |
35 |
2383 (ಅಥವಾ 2kg 200ಗ್ರಾಂ) |
36 |
2622 |
37 |
2859 |
38 |
3083 |
39 |
3288 |
40 |
3462 |
41 |
3597 |
42 |
3650 (ಅಥವಾ 3kg 400ಗ್ರಾಂ) |
ಈ ಮೇಲಿನ ಕೋಷ್ಟಕವನ್ನು ಗಮನಿಸಿ ನಿಮ್ಮ ಮೂರನೇ ತ್ರೈಮಾಸಿಕದಿಂದ ಮಗುವು ಗಮನಾರ್ಹವಾಗಿ ಬೆಳೆಯಲು ಶುರು ಮಾಡುತ್ತದೆ. ೩೫ನೇ ವಾರದ ನಂತರ ಮಗುವು ಪ್ರತಿ ವಾರಕ್ಕೆ ೨೦೦ಗ್ರಾಂ ನಷ್ಟು ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ.
ಇದು ಸರಾಸರಿ ಚಾರ್ಟ್ ಆಗಿದ್ದು, ಸಾಮಾನ್ಯವಾಗಿ ಗರ್ಭದಲ್ಲಿ ಶಿಶುಗಳು ಈ ತೂಕವನ್ನು ಹೊಂದಿರುತ್ತವೆ.
ಮಗುವು ಜನಿಸುವಾಗ 2.8kg - 3.6kg ತೂಕವನ್ನು ಹೊಂದಿರುವುದು ಸಾಮಾನ್ಯ ತೂಕ ಎಂದು ಪರಿಗಣಿಸುತ್ತೇವೆ. ಮಗುವು 2.5kg ಗಿಂತ ಕಡಿಮೆ ತೂಕವನ್ನು ಹೊಂದಿದ್ದರೆ ಕಡಿಮೆ ಜನ್ಮ ತೂಕ ಎಂದು ಪರಿಗಣಿಸಬಹುದು ಮತ್ತು ತೂಕಕ್ಕಿಂತ ಮಗುವಿನ ಅರೋಗ್ಯ ತುಂಬಾ ಮುಖ್ಯ ಆಗುತ್ತದೆ.