Link copied!
Sign in / Sign up
11
Shares

ಗರ್ಭದಲ್ಲಿ ನಿಮ್ಮ ಮಗು ಯಾವ ಭಂಗಿಯಲ್ಲಿದೆ ಎಂದು ನೀವೇ ತಿಳಿದುಕೊಳ್ಳಲು 8 ದಾರಿಗಳು

ನಿಮ್ಮ ಮಗು ಯಾವ ಸ್ಥಿತಿಯಲ್ಲಿ, ನಿಮ್ಮ ಗರ್ಭದೊಳಗೆ ಇದೆ ಎಂಬುದನ್ನು ವೈದ್ಯರು ನಿಮಗೆ ನಿಖರವಾಗಿ ತಿಳಿಸುತ್ತಾರೆ/ ಹೇಳಬಲ್ಲರು. ಹೇಗಾದರೂ, ಯಾವುದೇ ಸಮಯದಲ್ಲಿ ತನ್ನ ಮಗುವು ಯಾವ ಸ್ಥಾನದಲ್ಲಿದೆ ಎಂದು ಹೇಳಲು ತಾಯಿಗೆ ಯಾವಾಗಲು ಕಷ್ಟವಾಗಬಹುದು. ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಮುಂದುವರೆದಂತೆ, ಗರ್ಭಾಶಯದೊಳಗೆ ನಿಮ್ಮ ಮಗುವಿನ ಸ್ಥಾನವನ್ನು ನಿರ್ಧರಿಸಲು ಸುಲಭವಾಗುತ್ತದೆ. ನೀವು ಕೆಲವು ಸುಳಿವುಗಳನ್ನು ಗಮನಿಸಲು ಪ್ರಾರಂಭಿಸಿರಬಹುದು.

ನಿಮ್ಮ ಗರ್ಭದೊಳಗಿನ ಮಗುವಿನ ಸ್ಥಿತಿಯನ್ನು ನೀವಾಗಿಯೇ ತಿಳಿಯಲು ಕೆಲವು ಸಲಹೆಗಳು

೧.ನಿಮ್ಮ ಹೊಟ್ಟೆ ಮತ್ತು ಹೊಕ್ಕುಳಲ್ಲಿ ಹೊರ ಚಿಮ್ಮುವಂತೆ ಮತ್ತು / ಅಥವಾ ನಿಮ್ಮ ಪಕ್ಕೆಲುಬುಗಳ ಅಡಿಯಲ್ಲಿ ಒದೆತವನ್ನು ನೀವು ಭಾವಿಸಿದರೆ, ಮಗುವು ಅವನ/ಅವಳ ಬೆನ್ನನ್ನು ನಿಮ್ಮ ಮುಂಭಾಗದಲ್ಲಿರುವಂತೆ, ಮುಂಭಾಗದ ಸ್ಥಾನದಲ್ಲಿರುವ ಸಾಧ್ಯತೆ ಇದೆ.

೨.ನಿಮ್ಮ ಹೊಟ್ಟೆ ಸ್ವಲ್ಪ ಸಮತಟ್ಟಾದಂತೆ ಕಾಣಿಸಿ, ಮತ್ತು/ಅಥವಾ ನಿಮ್ಮ ಹೊಟ್ಟೆಯ ಮುಂಭಾಗದಲ್ಲಿ ಮಗುವಿನ ಒದೆತವನ್ನು ನೀವು ಅನುಭವಿಸಿದರೆ, ಮಗುವು, ನಿಮ್ಮ ಬೆನ್ನಿನ ಬಳಿ ಅವನ/ಅವಳ ಬೆನ್ನು ಇರುವಂತೆ ಹಿಂಭಾಗದ ಸ್ಥಾನದಲ್ಲಿರಬಹುದು.

೩.ನಿಮ್ಮ ಹೊಟ್ಟೆಯ ಮೇಲ್ಭಾಗದ ಬಳಿ ಇರುವಂತೆ ಭಾಸವಾದರೆ(ಸಾಮಾನ್ಯವಾಗಿ ಒಂದು ಕಡೆ ಅಥವಾ ಬಲ ಭಾಗದಲ್ಲಿ) ಅದರ ಮೇಲೆ ಲಘುವಾಗಿ ತಳ್ಳಿ, ನಂತರ,

ಅ)ಇಡೀ ಮಗು ಚಲಿಸಿದಂತೆ ಭಾವಿಸಿದರೆ, ಮಗುವು ತಲೆಕೆಳಗೆ ಮಾಡಿ ಇದೆ, ನೀವು ಮಗುವಿನ ಹಿಂಭಾಗವನ್ನು ತಳ್ಳಿರುವಿರಿ ಎಂದರ್ಥ.

ಆ)ಒಂದು ಭಾಗ ಮಾತ್ರ ಚಲಿಸಿದಂತೆ ಭಾವಿಸಿದರೆ, ನೀವು ಮಗುವಿನ ತಲೆಯನ್ನು ತಳ್ಳಿರುವಿರಿ.

೪.ನಿಮ್ಮ ಹೊಟ್ಟೆಯ ಕೆಳಭಾಗದಲ್ಲಿ ಮಗುವಿನ ಬಿಕ್ಕಳಿಕೆಯನ್ನು ನೀವು ಭಾವಿಸಿದರೆ, ಮಗುವಿನ ತಲೆ ಕೆಳಗೆ ಇದೆ ಕಾಲು ಮೇಲೆ ಇದೆ ಎಂದು ಹೇಳಬಹುದು.

೫.ಮಗುವಿನ ಬಿಕ್ಕಳಿಕೆ ನಿಮ್ಮ ಹೊಟ್ಟೆಯ ಮೇಲ್ಭಾಗದಲ್ಲಿ ಬಂದಂತೆ ಭಾವಿಸಿದರೆ, ಅಥವಾ ನಿಮ್ಮ ಹೊಕ್ಕುಳ ಮೇಲೆ ಎಂದು ನೀವು ಭಾವಿಸಿದರೆ, ನಿಮ್ಮ ಎದೆಯ ಕಡೆ ಮಗುವಿನ ತಲೆಯಿದೆ ಎಂದು ಭಾವಿಸಬಹುದು.

೬.ನಿಮ್ಮ ಹೊಕ್ಕುಳಿನ ಮೇಲ್ಭಾಗದಲ್ಲಿ ಮಗುವಿನ ಒದೆತವನ್ನು ನೀವು ಅನುಭವಿಸಿದರೆ, ಮಗುವು ತನ್ನ ತಲೆಯನ್ನು ನಮ್ಮ ಯೋನಿಯ ಕಡೆ ತಿರುಗಿಸಿದ್ದು, ಜನ್ಮ ತಾಳಲು ಅಥವಾ ಗರ್ಭದಿಂದ ಹೊರ ಬರಲು ಸಿದ್ಧವಿದೆ ಎಂದು ಅರ್ಥ.

೭.ನೀವು ಅತಿಯಾಗಿ ಹೊಟ್ಟೆ ಮತ್ತು ಬೆನ್ನು ಅಥವಾ ಪೆಕ್ಕೆಲುಬು ನೋವನ್ನು ಅನುಭವಿಸಿದರೆ, ಮತ್ತು ನೀವು ಗರ್ಭಾವಸ್ಥೆಯ ಕೊನೆಯ ಹಂತಗಳಲ್ಲಿದ್ದರೆ, ಮಗುವಿನ ತಲೆಯು ಮೇಲ್ಭಾಗದಲ್ಲಿದ್ದು, ಅವನ/ಅವಳ ತಲೆಯು ನಿಮ್ಮ ಬೆನ್ನೆಲುಬು ಹತ್ತಿರ ಅಥವಾ ಕೆಳಗೆ ಇದ್ದು, ಸಾಮಾನ್ಯ ಹೆರಿಗೆಗೆ ಕಷ್ಟವಾಗುವ ಸ್ಥಿತಿಯಲ್ಲಿರುತ್ತದೆ. ಇದನ್ನು ನೀವು ಭಾವಿಸಿದರೆ ಕೂಡಲೇ ವೈದ್ಯರನ್ನು ಭೇಟಿ ಮಾಡಿ. ಒಂದು ವೇಳೆ ಈ ನೋವು ಇಲ್ಲವಾದರೆ, ಮಗುವು ತಲೆಯನ್ನು ನಿಮ್ಮ ಯೋನಿಯ ಕಡೆ  ಮಾಡಿದ್ದು. ನೀವು ಹೆರಿಗೆಗೆ ತಯಾರಾಗುವುದು ಒಳ್ಳೆಯದು.

೮.ಭ್ರೂಣದ ಸ್ಟೆತೊಸ್ಕೋಪ್ (ಅಥವಾ ಟಾಯ್ಲೆಟ್ ಪೇಪರ್ ರೋಲ್) ಬಳಸಿ, ನಿಮ್ಮ ಪಾಲುದಾರನು ನಿಮ್ಮ ಮಗುವಿನ ಹೃದಯ ಬಡಿತವನ್ನು ಕೇಳಬಹುದು: ನಂತರ:

ಅ)ಮಗುವಿನ ಹೃದಯ ಬಡಿತ ಹೊಟ್ಟೆಯ ಕೆಳಭಾಗದಲ್ಲಿ ಕೇಳಿಸಿದರೆ ಮಗುವಿನ ಕಾಲು ನಿಮ್ಮ ಎದೆಕಡೆಗೆ ಇದೆ. ತಲೆಯು ನಿಮ್ಮ ಯೋನಿಯ ಕಡೆ ಇದೆ ಎಂದು.

ಆ)ಮಗುವಿನ ಹೃದಯ ಬಡಿತ ಹೊಕ್ಕುಳು ಹತ್ತಿರ ಅಥವಾ ಹೊಕ್ಕುಳ ಮೇಲ್ಭಾಗದಲ್ಲಿ ಕೇಳಿಸಿದರೆ ಮಗುವಿನ ತಲೆಯು ನಿಮ್ಮ ಹೊಕ್ಕುಳ ಮೇಲಿದೆ ಎಂದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon