Link copied!
Sign in / Sign up
128
Shares

ಗರ್ಭದಲ್ಲಿ ಇರುವ ಮಗು ಗಂಡೋ ಅಥವಾ ಹೆಣ್ಣೋ? ಮನೆಯಲ್ಲೇ ಪರೀಕ್ಷಿಸಿ ಊಹಿಸುತ್ತಾರೆ!

ನೀವು ನಿಮ್ಮ ಹೊಟ್ಟೆಯಲ್ಲಿನ ಮಗುವು ಗಂಡೋ ಅಥವ ಹೆಣ್ಣೋ ಎಂದು ತಿಳಿಯಲು ಮನೆಯಲ್ಲೇ ಈ ಪರೀಕ್ಷೆಗಳನ್ನ ಮಾಡಿಕೊಳ್ಳಬಹುದು. ಆದರೆ, ಇವುಗಳು ಯಾವುದೇ ವೈಜ್ಞಾನಿಕ ಸಂಶೋಧನೆಯ ಮೂಲಕ ದೃಢಪಟ್ಟಿಲ್ಲ. ಇವಗಳು ೧೦೦% ನಿಖರತೆ ಉಳ್ಳವು ಎಂದು ನಾವು ಗ್ಯಾರಂಟಿ ಕೊಡಲೂ ಆಗುವುದಿಲ್ಲ. ಆದರೆ ಕಾಲ ಕಾಲಗಳಿಂದಲೂ ಭಾರತೀಯ ಮನೆಗಳಲ್ಲಿ ಲಿಂಗವನ್ನು ಊಹೆ ಮಾಡಲು ತಾಯಂದಿರು ಕೆಲವು ಆಚರಿಸಿಕೊಂಡು ಬಂದಿರುವ ಕೆಲವೊಂದು ರೂಢಿಗಳು ಅವರ ಪ್ರಕಾರ ತುಂಬಾನೇ ನಿಖರವಾಗಿ ತಿಳಿಸುತ್ತದೆ.

ಎಲೆಕೋಸಿನ ಪರೀಕ್ಷೆ

ಇದು ಮೇಲ್ನೋಟಕ್ಕೆ ಕೆಲಸ ಮಾಡುತ್ತದೆ ಏಕೆಂದರೆ ಎಲೆಕೋಸು ನಿಮ್ಮ ಮೂತ್ರದ pH ಗತಿಗೆ ಅನುಗುಣವಾಗಿ ಪ್ರತಿಕ್ರಿಯೆ ನೀಡುತ್ತದೆ. ಜಾಸ್ತಿ pH = ಗಂಡು ಮಗು ಹಾಗು ಕಮ್ಮಿ pH = ಹೆಣ್ಣು. ನೀವು ಮಾಡಬೇಕಾಗಿರುವುದು ಏನೆಂದರೆ :

೧. ಒಂದು ನೇರಳೆ ಬಣ್ಣದ ಎಲೆಕೋಸನ್ನ ಖರೀದಿಸಿ.

೨. ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ, ಕುದಿಯುತ್ತಿರುವ ನೀರಿನಲ್ಲಿ ಹಾಕಿ.

೩. ಕೋಸನ್ನ ಹತ್ತು ನಿಮಿಷಗಳ ಕಾಲ ಬೇಯಿಸಿ ನಂತರ ಆ ತುಂಡುಗಳನ್ನ ಹೊರಗೆ ತೆಗೆಯಿರಿ.

೪. ನಿಮ್ಮ ಮೂತ್ರವನ್ನ ಒಂದು ಶುಚಿಯಾಗಿರುವ ಬಟ್ಟಲು ಅಥವಾ ಲೋಟದಲ್ಲಿ ತೆಗೆದಿಡಿ.

೫. ಕುದಿಸಿದ ನೀರನ್ನು (ತುಂಡುಗಳು ಇರಬಾರದು) ಹಾಗು ಮೂತ್ರವನ್ನ ಸಮಾನ ಪ್ರಮಾಣದಲ್ಲಿ ಬೆರೆಸಿ.

ಮಿಶ್ರಣವು ಕೆಂಪು ಅಥವ ಪಿಂಕ್ ಬಣ್ಣಕ್ಕೆ ತಿರುಗಿದರೆ ಮಗು ಗಂಡು ಎಂದು. ಅದು ನೇರಳೆ ಬಣ್ಣಕ್ಕೆ ತಿರುಗಿದರೆ ಮಗು ಹೆಣ್ಣು ಎಂದು.

ಅಡುಗೆ ಸೋಡಾ ಪರೀಕ್ಷೆ

ಎಲೆಕೋಸಿನ ಪರೀಕ್ಷೆ ರೀತಿಯಲ್ಲೇ ಇದು ಕೂಡ ನಿಮ್ಮ pH ಗತಿಯ ಆಧಾರದ ಮೇಲೆ ಕೆಲಸ ಮಾಡುತ್ತದೆ. ನೀವು ಇಲ್ಲಿ ಮಾಡಬೇಕಾಗಿರುವುದು ಒಂದೇ ಕೆಲಸ. ನಿಮ್ಮ ಮೂತ್ರದ ಸ್ಯಾಂಪಲ್ ಗೆ ಒಂದು ಚಮಚದಷ್ಟು ಅಡುಗೆ ಸೋಡಾ ಹಾಕಿ. ಆಗ ಅದು ನೊರೆಯಿಂದ ಕೂಡಿ ಉಕ್ಕುವಂತೆ ಆದರೆ, ಮಗು ಗಂಡು ಎಂದರ್ಥ. ಏನು ಆಗದೆ ಇದ್ದರೆ, ಮಗು ಹೆಣ್ಣು ಎಂದರ್ಥ.

ಉಂಗುರ ಪರೀಕ್ಷೆ

ಇದು ಹಳೇ ಕಾಲದ ಅಮ್ಮಂದಿರ ರೂಢಿ, ಎಲ್ಲಾರು ಮನೆಯಲ್ಲಿ ಕೂಡಿದಾಗ ಈ ಪರೀಕ್ಷೆ ಮಾಡಲು ಮಜವಾಗಿಯೂ ಇರುತ್ತದೆ! ನಿಮ್ಮ ಯಾವುದಾದರು ಒಂದು ಉಂಗುರವನ್ನು ನಿಮ್ಮ ಒಂದು ಕೂದಲಿಗೆ ಕೂದಲಿಗೆ ಕಟ್ಟಿ. ನಿಮ್ಮ ಬೆನ್ನಿನ ಮೇಲೆ ವರಗಿಕೊಂಡು ಉಂಗುರವನ್ನು ನಿಮ್ಮ ಹೊಟ್ಟೆಯ ಮೇಲೆ ನೇರವಾಗಿ ನೇತು ಬಿಡಿ. ಅಥವಾ ನೀವು ಇನ್ನೊಬ್ಬರು ಯಾರಿಗಾದರು ಆ ಉಂಗುರವನ್ನು ನಿಮ್ಮ ಹೊಟ್ಟೆ ತಾಗುವಂತೆ ಮೇಲಿಂದ ಹಿಡಿಯಲು ಕೇಳಬಹುದು. ಸ್ವಲ್ಪ ತಾಳ್ಮೆ ವಹಿಸಿ ಆ ಉಂಗುರವು ಅಲುಗಾಡಲು ಕಾಯಿರಿ. ನೇತಾಡುತ್ತಿರುವ ಉಂಗುರವು ವೃತ್ತಾಕಾರದಲ್ಲಿ ಅಲುಗಾಡಿದರೆ, ಮಗು ಹೆಣ್ಣು ಎಂದು. ಅಕಸ್ಮಾತ್ ಉಂಗುರವು ಅಡ್ಡಡ್ಡ ಅಲುಗಾಡಿದರೆ ಮಗು ಗಂಡು ಎಂದರ್ಥ. ಆದರೆ ಇದು ಎಷ್ಟು ನಿಖರವೆಂದು ತಿಳಿದವರಿಗೆ ಮಾತ್ರ ಗೊತ್ತು !

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon