Link copied!
Sign in / Sign up
16
Shares

ಗರ್ಭಾವಸ್ಥೆಯಲ್ಲಿ ಮೆಟ್ಟಿಲುಗಳ್ಳನ್ನು ಹತ್ತುವುದರಿಂದ ಏನೆಲ್ಲಾ ಆಗುತ್ತದೆ ಗೊತ್ತೇ?

ಹೆಣ್ಣು ತಾನು ಗರ್ಭಿಣಿಯಾಗಿದ್ದೇನೆ ಎಂದು ಒಂದು ಕಡೆ ಸಂತೋಷ ಪಟ್ಟರೆ, ಮತ್ತೊಂದು ಕಡೆ ಗರ್ಭಾವಸ್ಥೆಯಲ್ಲಾಗುವ ಹಲವಾರು ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದೇ, ಅವಳಿಗೊಂದು ದೊಡ್ಡ ಸವಾಲಾಗಿರುತ್ತದೆ.  ಗರ್ಭಿಣಿಯರೇ, ಇದು ನಿಮ್ಮ ಜೀವನದ ಅತ್ಯದ್ಭುತ ಕ್ಷಣಗಳ್ಳಲ್ಲಿ ಒಂದಾಗಿದೆ.

ಇಂತಹ ಸಮಯದ್ದಲ್ಲಿ, ನೀವು ಸರಿಯಾದ ಸಮಯಕ್ಕೆ ಆಹರ ಸೇವಿಸುವುದು ಹಾಗು ವಿಶ್ರಾಂತಿ ಪಡೆದುಕೊಳ್ಳುವುದ್ದನ್ನು ಮರೆಯದಿರಿ. ಹಾಗೆಂದ ಮಾತ್ರಕ್ಕೆ ಕುಳಿತಲ್ಲೇ ಕುಲಿತಿಕೊಳ್ಳಿ ಎಂದಲ್ಲ. ತುಂಬಾ ಸುಲಭದ ವ್ಯಾಯಾಮಗಳು, ಯೋಗಾಸನಗಳು ಹಾಗು ಪ್ರಾಣಾಯಾಮವನ್ನು ಪ್ರತಿನಿತ್ಯ ಅಭ್ಯಸಿಸಿ.  ಆದರೆ, ಕಷ್ಟಕರ ಕೆಲಸಗಳಾದ ಭಾರ ಎತ್ತುವುದು, ರಭಸವಾಗಿ ಓಡಾಡುವುದು, ಮೆಟ್ಟಿಲುಗಳ್ಳನ್ನು ಹತ್ತುವುದ್ದನ್ನು ನೀವು ಮಾಡಲೇಬಾರದು. ಯಾಕೆ ಮೆಟ್ಟಿಲು ಹತ್ತ ಬಾರದೆಂದು ನೀವು ಯೋಚಿಸುತ್ತಿದ್ದೀರ? ಬನ್ನಿ, ಹಾಗಾದರೆ ಗರ್ಭಾವಸ್ಥೆಯಲ್ಲಿ ಮೆಟ್ಟಿಲುಗಳ್ಳನ್ನು ಹತ್ತುವುದರಿಂದಾಗುವ ಸಮಸ್ಯೆಗಳೇನು, ಇದಕ್ಕೆ ವೈದ್ಯರ ಅಭಿಪ್ರಾಯವೇನೆಂದು ತಿಳಿದುಕೊಳ್ಳೋಣ.

ಮೆಟ್ಟಿಲುಗಳ್ಳನ್ನು ಹತ್ತುವುದು ಒಂದು ರೀತಿಯ ಒಳ್ಳೆಯ ವ್ಯಾಯಾಮ. ಆದರೆ ಗರ್ಭಾವಸ್ಥೆಯಲ್ಲಿ, ಹೊಟ್ಟೆಯು ಉಬ್ಬಿರುವುದರಿಂದ ನಿಮ್ಮ ಕಾಲುಗಳ್ಳನ್ನು ನೀವೇ ನೋಡಲು ತುಂಬಾ ಕಷ್ಟ. ಅಂದರೆ ಮೆಟ್ಟಿಲುಗಳ್ಳನ್ನು ಇಳಿಯುವಾಗ ಅಥವ ಹತ್ತುವಾಗ, ಸಾಮಾನ್ಯವಾಗಿ ಜನರು, ಅವರ ಕಾಲುಗಳ ಮೇಲೆ ಗಮನ ವಹಿಸಿ ಇಳಿಯುತ್ತಾರೆ/ಹತ್ತುತ್ತಾರೆ. ಗರ್ಭಿಣಿಯರಿಗೆ ಹೀಗೆ ತಮ್ಮ ಪಾದಗಳ್ಳನ್ನು ನೋಡಿ ಹತ್ತಲು ಸಾಧ್ಯವಾಗದೆ ಇರುವುದರಿಂದ, ಕಾಲು ಜಾರಿ ಬೀಳುವ ಸಂಭವವಿರುತ್ತದೆ. ಇದಲ್ಲದೆ, ಗರ್ಭಪಾತಗಳಾಗುವುದು ಅಥವಾ  ಪೂರ್ವ-ಪ್ರಸವವಾಗಿರುವ ಸಾವಿರಾರು ಉದಾಹರಣೆಗಳಿವೆ. ಪ್ರಸವದ ದಿನಗಳು ಹತ್ತಿರ ಬರುತ್ತಿದ್ದಂತೆ ಹೊಟ್ಟೆಯು ಮತ್ತಷ್ಟು ದೊಡ್ದದಾಗುವುದರಿಂದ, ೩ನೇ ತ್ರೈಮಾಸಿಕದಿಂದ ಗರ್ಭಿಣಿಯು ಮೆಟ್ಟಿಲುಗಳ್ಳನ್ನು ಹತ್ತಲೇ ಬಾರದು ಎಂದು ವೈದ್ಯರು ಹೇಳುತ್ತಾರೆ.  ಜೊತೆಗೆ, ಗರ್ಭಾವಸ್ಥೆಯಲ್ಲಿ ಹಾರ್ಮೋನ್ ಗಳ ಏರು ಪೇರಿನಿಂದ, ಶರೀರದ ತೂಕವು ಮತ್ತಷ್ಟು ಹೆಚ್ಚಾಗಿರುತ್ತದೆ. ಹಾಗು, ನೀವು ನಡೆದಾಡುವ ಭಂಗಿಯಲ್ಲಿ ವ್ಯತಾಸವಾಗುವುದರಿಂದ ಕಾಲು ಜಾರಿ ಬೀಳುವ ಸಂಭವವಿರುತ್ತದೆ.

ಹಾಗಾದರೆ ಗರ್ಭಿಣಿಯು ಮೆಟ್ಟಿಲುಗಳ್ಳನ್ನು ಯಾವ ಸಂದರ್ಭದಲ್ಲಿ ಹತ್ತಬಾರದೆಂದು ತಿಳಿಯುವ ಕಾತುರದಲ್ಲಿದ್ದೀರ? ಮುಂದೆ ಓದಿ.

೧. ಮೊದಲೆನೇ ತ್ರೈಮಾಸಿಕದ್ದಲ್ಲಿ ರಕ್ತಸ್ರಾವ ಕಂಡುಬಂದರೆ ಮೆಟ್ಟಿಲುಗಳ್ಳನ್ನು ಹತ್ತದಿರಿ.

೨. ಸೊಂಟ ನೋವು, ಯೋನಿಯ ಸಂಕೋಚನದ ಅನುಭವವಾದರೆ.

೩. ನೀವು ಮಧುಮೇಹಿಗಳಾಗಿದ್ದರೆ.

೪. ಸಾಮಾನ್ಯ ಶಾರೀರಿಕ ಸಮಸ್ಯೆಗಳಿದ್ದರೆ.

ನೀವು ಮೆಟ್ಟಿಲುಗಳ್ಳನ್ನು ಹತಲೇ ಬೇಕಾದ ಸಂದರ್ಭದ್ದಲ್ಲಿ, ಏನು ಮಾಡಬೇಕು?

೧. ಮೆಟ್ಟಿಲುಗಳ್ಳನ್ನು ಹತ್ತುವಾಗ ಅಥವಾ ಇಳಿಯುವಾಗ ಪಕ್ಕದಲ್ಲಿರುವ ಕಂಬಿ(handrail)ಗಳ್ಳನ್ನು ಉಪಯೋಗಿಸಿ. ಎರಡು ಕೈಯಲ್ಲಿ ಹಿಡಿದುಕೊಳ್ಳಲು ಸಾಧ್ಯವಾಗದೆ ಹೋದರು, ಒಂದು ಕೈಯಲ್ಲಿಯಾದರು ಹಿಡಿದುಕೊಳ್ಳಿ.

೨. ಮೆಟ್ಟಿಲುಗಳ್ಳನ್ನು ಹತ್ತುವ ಜಾಗದಲ್ಲಿ, ಸರಿಯಾಗಿ ಬೆಳಕಿದೆಯೇ ಎಂದು ಪರೀಕ್ಷಿಸಿ, ನಂತರ ಮೆಟ್ಟಿಲುಗಳ್ಳನ್ನು ಹತ್ತಿ.

೩. ಒಂದೊಂದೇ ಮೆಟ್ಟಿಲುಗಳ್ಳನ್ನು ತುಂಬಾ ನಿಧಾನವಾಗಿ ಹತ್ತಿ.

೪. ಸ್ವಲ್ಪ ಕಾಲು ಜಾರಿದ ಅನುಭವವಾದ ಕೂಡಲೇ ಹತ್ತಿರದ ಪ್ರಸೂತಿ ತಜ್ಞರನ್ನು ಭೇಟಿ ಮಾಡಿ. ಏನು ಆಗಿಲ್ಲ ಎಂದು ನಿಮಗೆ ಅನಿಸಿದರೂ, ಗರ್ಭಪಾತಗಾಳಗುವ ಸಂಭವ ಹೆಚ್ಚಿರುತ್ತದೆ.

ಆದ್ದರಿಂದ ಗರ್ಭಿಣಿಯರೇ! ಮೇಲೆ ಹೇಳಿರುವ ಎಲ್ಲಾ ಮಾಹಿತಿಯನ್ನು ಮನಸ್ಸಿನ್ನಲ್ಲಿ ಇರಿಸಿಕೊಂಡು ಚಾಚೂತಪ್ಪದೆ ಪಾಲಿಸಿ. ಒತ್ತಡ ರಹಿತ ಹಾಗು ಆರೋಗ್ಯಕರ ಗರ್ಭಾವಸ್ಥೆ ನಿಮ್ಮದಾಗಲಿ ಎಂದು ನಾವೆಲ್ಲರು ಹಾರೈಸುತ್ತೇವೆ.

ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon