Link copied!
Sign in / Sign up
4
Shares

ಗರ್ಭಾವಸ್ಥೆಯಲ್ಲಿ ವಾಂತಿ ಮತ್ತು ವಾಕರಿಕೆ ನಿವಾರಣೆ!

ಗರ್ಭಧರಿಸುವುದು ಪ್ರತಿ ಮಹಿಳೆಯ ಕನಸು ಮತ್ತು ಆ ಕನಸು ನನಸಾದಾಗ ಅವರ ಖುಷಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅಧ್ಯಯನಗಳ ಪ್ರಕಾರ ಪ್ರತಿ ೧೦ ಮಹಿಳೆಯರಲ್ಲಿ ೮ ಮಹಿಳೆಯರು ಈ ಸಮಸ್ಯೆಯನ್ನು ಅನುಭವಿಸುವರಂತೆ.

ಇದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ ಮತ್ತು ಗುಣಪಡಿಸಲು ಬಾರದು ಏಕೆಂದರೆ ಇದು ಗರ್ಭಾವಸ್ಥೆಯ ಒಂದು ಭಾಗವಾಗಿದ್ದು ಇದನ್ನು ಕಡಿಮೆ ಮಾಡಿಕೊಳ್ಳುವುದು ಚತುರತೆಯಾಗಿದೆ.

೧.ಶುಂಠಿ

ಶುಂಠಿ ವಾಂತಿ ಮತ್ತು ವಾಕರಿಗೆ ಜೊತೆಗೆ ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುವುದರಿಂದ ನೀವು ಕುಡಿಯುವ ನೀರು ಚಹಾಗಳಲ್ಲಿ ಶುಂಠಿಯನ್ನು ಸೇರಿಸಿ ಕುಡಿಯುವುದು ಉತ್ತಮ ಉಪಾಯವಾಗಿದೆ.

೨.ಅರಿಶಿಣ

ಅರಿಶಿಣವನ್ನು ಹಾಲಿನ ಜೊತೆಗೆ ಸೇರಿಸಿ ಕುಡಿಯುವುದರಿಂದ ಹಲವು ಲಾಭಗಳನ್ನು ಪಡೆಯಬಹುದು ಮತ್ತು ನಮ್ಮ ಪೂರ್ವಜರು ಹೇಳುವ ಪ್ರಕಾರ ಹಾಲಿನ ಜೊತೆ ಅರಿಶಿಣ ಸೇರಿಸಿ ಕುಡಿಯುವುದು ಮಗುವು ಹೊಳಪಿನ ತ್ವಚೆಯನ್ನು ಪಡೆಯಲು ಸಹಾಯ ಆಗುತ್ತದೆ ಎಂಬ ವಾಡಿಕೆ ಇದೆ.

೩.ನಿಂಬೆಹಣ್ಣು

ಇದು ನಿಮಗೆ ಸಾಮಾನ್ಯವಾಗಿ ತಿಳಿದಿರುವ ವಿಷಯವೇ, ವಾಂತಿ ಬರುವಾಗ ನಿಂಬೆಹಣ್ಣಿನ ವಾಸನೆಯನ್ನು ತೆಗೆದುಕೊಂಡು ವಾಂತಿಯನ್ನು ನಿವಾರಿಸಿಕೊಳ್ಳುವುದು ನಿಮಗೆ ತಿಳಿದೇ ಇದೆ. ನೀವು ಪ್ರಯಾಣ ಮಾಡುವ ಮುನ್ನ ೨೦ ನಿಮಿಷಗಳ ಮುಂಚೆ ನಿಂಬೆರಸವನ್ನು ಕುಡಿದು ಪ್ರಯಾಣ ಮಾಡಿದರೆ ನಿಮಗೆ ವಾಂತಿ ಬರುವುದಿಲ್ಲ.

೪.ಜೀರಿಗೆ

ಜೀರಿಗೆಯು ವಾಂತಿ ಮತ್ತು ನಾಸಿಯಾಗೆ ಒಂದು ಅದ್ಭುತವಾದ ಮನೆ ಔಷಧಿಯಾಗಿರುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಜೀರ್ಣಾಂಗ ವ್ಯೂಹಕ್ಕೆ ಅಗತ್ಯ ವಿಶ್ರಾಂತಿಯನ್ನು ನೀಡುತ್ತದೆ. ಇದರ ಜೊತೆಗೆ ಜೀರಿಗೆಯ ಸುವಾಸನೆಯು ಜಠರವನ್ನು ಶಾಂತಗೊಳಿಸುತ್ತದೆ. ಅದಕ್ಕಾಗಿ ನಿಮ್ಮ ಹಾಸಿಗೆಯ ಪಕ್ಕದಲ್ಲಿ ಯಾವಾಗಲು ಸ್ವಲ್ಪ ಜೀರಿಗೆಯನ್ನು ಇರಿಸಿಕೊಳ್ಳಿ. ಯಾವಾಗ ನಿಮಗೆ ಹೊಟ್ಟೆ ತೊಳೆಸಿದ ಅನುಭವವಾಗುತ್ತದೆಯೋ, ಆಗ ಜೀರಿಗೆಯನ್ನು ಬಾಯಿಗೆ ಹಾಕಿಕೊಂಡು ತಿನ್ನಿ. ನಿಮಗೆ ಬೇಕಾದಲ್ಲಿ ಒಂದು ಟೀ.ಚಮಚ ಜೀರಿಗೆ ಕಾಳುಗಳನ್ನು ಒಂದು ಲೋಟ ಬಿಸಿ ನೀರಿಗೆ ಹಾಕಿ, ಅದನ್ನು 10 ನಿಮಿಷಗಳ ಕಾಲ ಮುಚ್ಚಿ. ಆನಂತರ ಇದನ್ನು ಶೋಧಿಸಿ, ಅದಕ್ಕೆ ಸ್ವಲ್ಪ ಲಿಂಬೆರಸ ಮತ್ತು ಜೇನು ತುಪ್ಪವನ್ನು ಹಾಕಿಕೊಂಡು ಸೇವಿಸಬಹುದು.

೫.ಹೆಚ್ಚು ನೀರು ಕುಡಿಯಿರಿ

ನೀರು ದೇಹಕ್ಕೆ ತುಂಬಾ ಅವಶ್ಯ ಮತ್ತು ಅದರಿಂದ ಹಾಗುವ ಲಾಭಗಳು ಹಲವು. ಅದರಲ್ಲೂ ಗರ್ಭಿಣಿ ಮಹಿಳೆಯರು ಹೆಚ್ಚು ನೀರು ಅಥವಾ ನೀರಿನ ಅಂಶ ಇರುವ ಆಹಾರ ಅಥವಾ ಪದಾರ್ಥಗಳನ್ನು ಸೇವಿಸುವುದರಿಂದ ಬೆಳಗ್ಗಿನ ಕಾಯಿಲೆಯನ್ನು ಸಮರ್ಥವಾಗಿ ಎದುರಿಸಬಹುದು.

Click here for the best in baby advice
What do you think?
0%
Wow!
0%
Like
0%
Not bad
0%
What?
scroll up icon